ದಕ್ಷಿಣ ಭಾರತದಲ್ಲಿ ಯಮಹಾ ಮೊದಲ ಟೆಕ್ನಿಕಲ್ ಟ್ರೈನಿಂಗ್ ಸೆಂಟರ್ ಆರಂಭ

Written By:

ಜಪಾನ್ ಮೂಲದ ಪ್ರತಿಷ್ಠಿತ ಬೈಕ್ ಉತ್ಪಾದನಾ ಸಂಸ್ಥೆಯಾಗಿರುವ ಯಮಹಾ ಭಾರತದಲ್ಲಿ ಮೊದಲ ಟೆಕ್ನಿಕಲ್ ಟ್ರೈನಿಂಗ್ ಸೆಂಟರ್ ಆರಂಭಿಸುತ್ತಿದ್ದು, ವೃತ್ತಿಪರ ನೌಕರರ ಕೌಶಲ್ಯ ಅಭಿವೃದ್ದಿಗೆ ಬೃಹತ್ ಯೋಜನೆ ರೂಪಿಸಿದೆ.

ದಕ್ಷಿಣ ಭಾರತದಲ್ಲಿ ಯಮಹಾ ಮೊದಲ ಟೆಕ್ನಿಕಲ್ ಟ್ರೈನಿಂಗ್ ಸೆಂಟರ್ ಆರಂಭ

ದಕ್ಷಿಣ ಭಾರತದ ಆಟೋ ಮೊಬೈಲ್ ಹಬ್ ಚೆನ್ನೈ‌ನಲ್ಲಿ ಯಮಹಾ ಟೆಕ್ನಿಕಲ್ ಟ್ರೈನಿಂಗ್ ಸೆಂಟರ್ ಆರಂಭವಾಗಲಿದ್ದು, ಇಂಡೋ-ಜಪಾನ್ ಇನ್ಸ್ಟಿಟ್ಯೂಷನ್ ಮ್ಯಾನುಫ್ಯಾಕ್ಚರಿಂಗ್ (ಜಿಐಎಂ) ಸಂಸ್ಥೆ ಅಡಿ ಹೊಸ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ.

ದಕ್ಷಿಣ ಭಾರತದಲ್ಲಿ ಯಮಹಾ ಮೊದಲ ಟೆಕ್ನಿಕಲ್ ಟ್ರೈನಿಂಗ್ ಸೆಂಟರ್ ಆರಂಭ

ಇದಕ್ಕಾಗಿ ಜಪಾನ್ ಸರ್ಕಾರ ಕೂಡಾ ಪ್ರೋತ್ಸಾಹ ನೀಡುತ್ತಿದ್ದು, ಭಾರತದಲ್ಲಿರುವ ಜಪಾನ್ ಮೂಲದ ಕಾರು ಮತ್ತು ಬೈಕ್ ಉತ್ಪಾದನಾ ಸಂಸ್ಥೆಗಳಲ್ಲಿನ ಸ್ಥಳೀಯ ಉದ್ಯೋಗಿಗಳಿಗೆ ಜಾಗತಿಕ ಗುಣಮಟ್ಟದ ಕೌಶಲ್ಯ ತರಬೇತಿ ಒದಗಿಸುವ ಗುರಿ ಹೊಂದಲಾಗಿದೆ.

ದಕ್ಷಿಣ ಭಾರತದಲ್ಲಿ ಯಮಹಾ ಮೊದಲ ಟೆಕ್ನಿಕಲ್ ಟ್ರೈನಿಂಗ್ ಸೆಂಟರ್ ಆರಂಭ

ಈಗಾಗಲೇ ಜಪಾನ್ ಸರ್ಕಾರವು ಕೂಡಾ ಜಿಐಎಂ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದು, ಸದ್ಯದಲ್ಲೇ ನೂರಿತ ತಂತ್ರಜ್ಞರನ್ನು ಒಳಗೊಂಡ ಟೆಕ್ನಿಕಲ್ ಟ್ರೈನಿಂಗ್ ತರಬೇತಿ ಶಿಬಿರಗಳು ಆರಂಭಗೊಳ್ಳಲಿವೆ.

ದಕ್ಷಿಣ ಭಾರತದಲ್ಲಿ ಯಮಹಾ ಮೊದಲ ಟೆಕ್ನಿಕಲ್ ಟ್ರೈನಿಂಗ್ ಸೆಂಟರ್ ಆರಂಭ

ಇದಲ್ಲದೇ ದೇಶದ ಪ್ರಮುಖ ಎಂಜನಿಯರಿಂಗ್ ಕಾಲೇಜುಗಳಲ್ಲಿನ ಮ್ಯಾನಿಕಲ್ ವಿಭಾಗಗಳಲ್ಲೂ ಸರ್ಟಿಫಿಕೆಟ್ ಕೋರ್ಸ್‌ಗಳನ್ನು ತೆರೆಯುವ ಉದ್ದೇಶ ಕೂಡಾ ಇದ್ದು, ಕಲಿಕಾ ಹಂತದಲ್ಲೇ ವಿದ್ಯಾರ್ಥಿಗಳ ಕೌಲಶ್ಯ ಮಟ್ಟವನ್ನು ಹೆಚ್ಚಿಸಲಿದೆ.

ದಕ್ಷಿಣ ಭಾರತದಲ್ಲಿ ಯಮಹಾ ಮೊದಲ ಟೆಕ್ನಿಕಲ್ ಟ್ರೈನಿಂಗ್ ಸೆಂಟರ್ ಆರಂಭ

ಇದು ಎಂಜಿನಿಯರ್ ವಿದ್ಯಾರ್ಥಿಗಳ ಕ್ಯಾಂಪಸ್ ಆಯ್ಕೆಗಳಿಗೆ ಸಹಕಾರಿಯಾಗಲಿದ್ದು, ಮೋಟೋಸೈಕಲ್ ಅಸೆಂಬ್ಲಿ, ಪೇಟಿಂಗ್, ವೆಲ್ಡಿಂಗ್, ಮಷಿನಿಂಗ್, ಪಾರ್ಟ್ ಕಂಟ್ರೋಲ್, ಕ್ಯಾಸ್ಟಿಂಗ್ ಮತ್ತು ಯುಟಿಲಿಟಿ ಟೆಕ್ನಿಕಲ್ ಬಗ್ಗೆ ತರಬೇತಿ ನೀಡಲಾಗುತ್ತದೆ.

ದಕ್ಷಿಣ ಭಾರತದಲ್ಲಿ ಯಮಹಾ ಮೊದಲ ಟೆಕ್ನಿಕಲ್ ಟ್ರೈನಿಂಗ್ ಸೆಂಟರ್ ಆರಂಭ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ವೃತ್ತಿಪರ ನೌಕರರಿಗೆ ಅತ್ಯುತ್ತಮ ಕೌಶಲ್ಯ ತರಬೇತಿ ನೀಡುವ ನಿಟ್ಟಿನಲ್ಲಿ ಯಮಹಾ ಕೈಗೊಂಡಿರುವ ಯೋಜನೆ ಪ್ರಮುಖವಾಗಿದ್ದು, ಇದು ವಿದ್ಯಾರ್ಥಿಗಳಿಗಳಿಗೂ ಕೂಡಾ ಸಹಕಾರಿಯಾಗಲಿದೆ.

Read more on ಯಮಹಾ yamaha
English summary
Read in Kannada about Yamaha Opens First Technical Training Centre In Chennai.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark