ಪೋಷಕರೇ ಹುಷಾರ್- ಅಪ್ರಾಪ್ತ ಮಕ್ಕಳ ಕೈಗೆ ಬೈಕ್ ಕೊಡುವ ಮುನ್ನ ಇತ್ತ ಗಮನಹರಿಸಿ...

ಇತ್ತೀಚೆಗೆ ಪೋಷಕರು ತಮ್ಮ ಮಕ್ಕಳ ಕೈಗೆ ದುಬಾರಿ ಬೈಕ್‌ಗಳನ್ನು ನೀಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದರಿಂದ ರಸ್ತೆ ನಿಯಮ ಉಲ್ಲಂಘನೆ ಆಗುವುದಲ್ಲದೇ ಅನೇಕ ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿದೆ.

By Praveen Sannamani

ಇತ್ತೀಚೆಗೆ ಪೋಷಕರು ತಮ್ಮ ಮಕ್ಕಳ ಕೈಗೆ ದುಬಾರಿ ಬೈಕ್‌ಗಳನ್ನು ನೀಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದರಿಂದ ರಸ್ತೆ ನಿಯಮ ಉಲ್ಲಂಘನೆ ಆಗುವುದಲ್ಲದೇ ಅನೇಕ ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಇಂತಹ ಪ್ರವೃತ್ತಿಗಳನ್ನು ತಪ್ಪಿಸಲು ಕೆಲ ರಾಜ್ಯಗಳಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ.

ಪೋಷಕರೇ ಹುಷಾರ್- ಅಪ್ರಾಪ್ತ ಮಕ್ಕಳ ಕೈಗೆ ಬೈಕ್ ಕೊಡುವ ಇತ್ತ ಗಮನಹರಿಸಿ...

ಮೊನ್ನೆಯಷ್ಟೇ ಹೈದ್ರಾಬಾದ್‌ನಲ್ಲೂ ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ಬಿಟ್ಟಿದ್ದ 10 ಪೋಷಕರನ್ನು ಜೈಲಿಗೆ ಹಾಕಲಾಗಿದೆ. ಜೊತೆಗೆ ನಿಯಮ ಬಾಹಿರವಾಗಿ ಬೈಕ್ ಚಾಲನೆ ಮಾಡಿದ ತಪ್ಪಿಗೆ 14ಕ್ಕೂ ಹೆಚ್ಚು ಬಾಲಕರನ್ನು ರಿಮ್ಯಾಂಡ್ ಹೋಮ್‌ಗೆ ಕಳುಹಿಸಿಲಾಗಿದೆ.

Recommended Video

[Kannada] Maruti Swift 2018 - Full Specifications, Features, Price, Mileage, Colours - DriveSpark
ಪೋಷಕರೇ ಹುಷಾರ್- ಅಪ್ರಾಪ್ತ ಮಕ್ಕಳ ಕೈಗೆ ಬೈಕ್ ಕೊಡುವ ಇತ್ತ ಗಮನಹರಿಸಿ...

ಮಕ್ಕಳ ಕೈಗೆ ಬೈಕ್ ಕೊಟ್ಟಿದ್ದ ಪೋಷಕರನ್ನು ಹೈದ್ರಾಬಾದ್ ಟ್ರಾಫಿಕ್ ಪೋಲಿಸರು ಕೋರ್ಟ್‌ಗೆ ಹಾಜರುಪಡಿಸಿದ್ದಾಗ ಪೋಷಕರ ಕ್ರಮಕ್ಕೆ ಛೀಮಾರಿ ಹಾಕಿರುವ ಕೋರ್ಟ್, 1 ದಿನ ಜೈಲು ಶಿಕ್ಷೆ ನೀಡಿದ್ದಲ್ಲದೇ ಮಕ್ಕಳಿಗೆ ರಸ್ತೆ ನಿಯಮದ ತಿಳುವಳಿಕೆ ಹೇಳುವಂತೆ ಸೂಚನೆ ಹೇಳಿದೆ.

ಪೋಷಕರೇ ಹುಷಾರ್- ಅಪ್ರಾಪ್ತ ಮಕ್ಕಳ ಕೈಗೆ ಬೈಕ್ ಕೊಡುವ ಇತ್ತ ಗಮನಹರಿಸಿ...

ಅತ್ತ ಕಾನೂನು ಬಾಹಿರವಾಗಿ ಬೈಕ್ ಸವಾರಿ ಮಾಡುತ್ತಿದ್ದ 14 ಬಾಲಕರನ್ನು 1 ದಿನ ಮಟ್ಟಿಗೆ ರಿಮ್ಯಾಂಡ್ ಹೋಮ್‌ಗೆ ಕಳುಹಿಸಲಾಗಿದ್ದು, ಪದೇ ಪದೇ ನಿಯಮ ಉಲ್ಲಂಘನೆ ಮಾಡಿದ್ದು ಕಂಡುಬಂದಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ಪೋಷಕರೇ ಹುಷಾರ್- ಅಪ್ರಾಪ್ತ ಮಕ್ಕಳ ಕೈಗೆ ಬೈಕ್ ಕೊಡುವ ಇತ್ತ ಗಮನಹರಿಸಿ...

ಮೋಟಾರ್ ವೆಹಿಕಲ್ ಸೆಕ್ಷನ್ 180ರ ಅಡಿ ಪ್ರಕರಣ ದಾಖಲಿಸಿ ಈ ಕ್ರಮ ಕೈಗೊಳ್ಳಲಾಗಿದ್ದು, 1 ದಿನದ ಜೈಲು ವಾಸದ ಜೊತೆಗೆ ರೂ. 500 ದಂಡವನ್ನು ಸಹ ವಸೂಲಿ ಮಾಡಲಾಗುತ್ತಿದೆ.

ಪೋಷಕರೇ ಹುಷಾರ್- ಅಪ್ರಾಪ್ತ ಮಕ್ಕಳ ಕೈಗೆ ಬೈಕ್ ಕೊಡುವ ಇತ್ತ ಗಮನಹರಿಸಿ...

ಇದಷ್ಟೇ ಅಲ್ಲದೇ ಅಪ್ರಾಪ್ತ ಬಾಲಕರು ನಿಯಮ ಉಲ್ಲಂಘಿಸಿ ಚಾಲನೆ ಮಾಡಿದ ಹಿನ್ನೆಲೆ ಇದುವರೆಗೆ ಬರೋಬ್ಬರಿ 1 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಕಳೆದ ತಿಂಗಳು ಫೆಬ್ರುವರಿ ಒಂದರಲ್ಲೇ 50ಕ್ಕೂ ಹೆಚ್ಚು ಪೋಷಕರು ಜೈಲಿನ ಕಂಬಿ ಎಣಿಸಿ ಬಂದಿದ್ದಾರೆ.

ಪೋಷಕರೇ ಹುಷಾರ್- ಅಪ್ರಾಪ್ತ ಮಕ್ಕಳ ಕೈಗೆ ಬೈಕ್ ಕೊಡುವ ಇತ್ತ ಗಮನಹರಿಸಿ...

ಇನ್ನು ರಾಜಧಾನಿ ಬೆಂಗಳೂರಿನಲ್ಲೂ ಇಂತಹ ಕಠಿಣ ನಿಯಮಗಳನ್ನು ಸದ್ಯದಲ್ಲೇ ಜಾರಿ ತರುವ ಸಾಧ್ಯತೆಗಳಿದ್ದು, ಈ ಹಿನ್ನೆಲೆ ಪೋಷಕರು ತಮ್ಮ ಮಕ್ಕಳಿಗೆ ವಾಹನಗಳನ್ನು ನೀಡುವ ಮುನ್ನ ಎಚ್ಚರವಾಗಿರುವುದು ಒಳಿತು.

ಪೋಷಕರೇ ಹುಷಾರ್- ಅಪ್ರಾಪ್ತ ಮಕ್ಕಳ ಕೈಗೆ ಬೈಕ್ ಕೊಡುವ ಇತ್ತ ಗಮನಹರಿಸಿ...

ಜೊತೆಗೆ ಇತ್ತೀಚೆಗೆ ಯುವ ಬೈಕ್ ಸವಾರರು ವೀಲ್ಹಿಂಗ್ ಕ್ರೇಜ್‌ನತ್ತ ವಾಲುತ್ತಿದ್ದು, ಇದರಿಂದಾಗಿ ಸಾರ್ವಜನಿಕವಾಗಿ ತೊಂದರೆಯಾಗುತ್ತಿರುವುದಲ್ಲದೇ ತಮ್ಮ ಪ್ರಾಣಕ್ಕೆ ತಾವೇ ಸಂಚಕಾರ ತಂದುಕೊಳ್ಳುತ್ತಿರುವುದು ಮತ್ತೊಂದು ದುರಂತ.

ಪೋಷಕರೇ ಹುಷಾರ್- ಅಪ್ರಾಪ್ತ ಮಕ್ಕಳ ಕೈಗೆ ಬೈಕ್ ಕೊಡುವ ಇತ್ತ ಗಮನಹರಿಸಿ...

ಇದರಿಂದಾಗಿ ಎಚ್ಚರ ವಹಿಸಬೇಕಿರುವ ಪೋಷಕರು ಮಕ್ಕಳಿಗೆ ಬೈಕ್ ನೀಡುವ ಮುನ್ನ ಹತ್ತಾರು ಬಾರಿ ಯೋಚಿಸಿ ಬೈಕ್ ನೀಡಿ. ಜೊತೆಗೆ ಅಪ್ರಾಪ್ತ ಮಕ್ಕಳು ಬೈಕ್ ಚಾಲನೆ ಮಾಡುವುದರ ಮೇಲೆ ನಿಗಾ ಇರಿಸುವುದಲ್ಲದೇ, ರಸ್ತೆ ನಿಯಮಗಳ ಬಗ್ಗೆ ಅರಿವು ಮೂಡಿಸುವುದು ಉತ್ತಮ.

Trending On DriveSpark Kannada:

ಇನ್ಮುಂದೆ ಅಪಘಾತಗಳಲ್ಲಿ ಸತ್ತವರಿಗೆಲ್ಲಾ ಸರ್ಕಾರದಿಂದಲೇ ಪರಿಹಾರವಂತೆ? ಇದು ನಿಜವೇ?

ಮಾಡಿಫೈ‌ನಲ್ಲಿ ಅನಾವರಣಗೊಂಡ ಜನಪ್ರಿಯ ಅಂಬಾಸಿಡರ್ ಗತವೈಭವ ಹೇಗಿದೆ ಗೊತ್ತಾ?

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

Article Published On: Friday, March 2, 2018, 17:26 [IST]
English summary
parents jailed for letting minors drive in Hyderabad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+