ಮಾಡಿಫೈ‌ನಲ್ಲಿ ಅನಾವರಣಗೊಂಡ ಜನಪ್ರಿಯ ಅಂಬಾಸಿಡರ್ ಗತವೈಭವ

By Praveen Sannamani

ನಮಗೆ ಕಾರು ಅಂದಾಕ್ಷಣ ಮನಸ್ಸಲ್ಲಿ ಮೂಡುವುದೇ ಅಂಬಾಸಿಡರ್ ಕಾರಿನ ಕಲ್ಪನೆ. ಅದೊಂದು ಕಾಲವಿತ್ತು, ಅಂಬಾಸಿಡರ್ ಕಾರು ಭಾರತದ ರಸ್ತೆಗಳನ್ನಾಳಿದ ರಾಜ. ಹೌದು. 5 ದಶಕಗಳಿಗೂ ಹೆಚ್ಚು ಕಾಲ ಅಂಬಾಸಿಡರ್ ಕಾರು ರಸ್ತೆಗಳನ್ನಾಳಿದ ರಾಜ ಎಂದರೆ ಖಂಡಿತಾ ತಪ್ಪಾಗಲ್ಲ. ಇದೇ ಕಾರಣಕ್ಕೆ ರಸ್ತೆ ರಾಜನಿಗೆ ಇಲ್ಲೊಂದು ಮಾಡಿಫೈ ಸಂಸ್ಥೆಯು ಹಳೇ ಖದರ್‌ಗೆ ಹೊಸ ಲುಕ್ ನೀಡಿದೆ.

ಮಾಡಿಫೈ‌ನಲ್ಲಿ ಅನಾವರಣಗೊಂಡ ಜನಪ್ರಿಯ ಅಂಬಾಸಿಡರ್ ಗತವೈಭವ

ಕ್ಲಾಸಿಕ್ ಕಾರು ಎಂಬ ಕಲ್ಪನೆಯೊಂದಿಗೆ ಜನರ ಮನದಲ್ಲಿ ಒಂದು ರೀತಿಯ ಭಾವನಾತ್ಮಕ ನಂಟನ್ನು ಹೊಂದಿದ್ದ ಅಂಬಾಸಿಡರ್, ಕಾಲಘಟ್ಟದಲ್ಲಿ ಬೇಡಿಕೆ ಕುಸಿತ, ಹಣಕಾಸಿನ ಮುಗ್ಗಟ್ಟಿನಿಂದಾಗಿ ಉತ್ಪಾದನೆ ಸ್ಥಗಿತಗೊಂಡಿದ್ದು ಬಹುತೇಕರಿಗೆ ಗೊತ್ತಿರುವ ವಿಚಾರ. ಹೀಗಾಗಿ ಹೊಸ ಕಾರುಗಳು ಖರೀದಿಗೆ ಲಭ್ಯವಿಲ್ಲದಿದ್ದರು ಹಳೆಯ ಕಾರುಗಳ ಮಾಡಿಫೈಗೆ ಇದೀಗ ಭಾರೀ ಬೇಡಿಕೆ ಸೃಷ್ಠಿಯಾಗುತ್ತಿದೆ.

Recommended Video - Watch Now!
2018 ನೆಕ್ಸಾನ್ ಎಎಂಟಿ | Tata Nexon AMT Details & Specifications - DriveSpark
ಮಾಡಿಫೈ‌ನಲ್ಲಿ ಅನಾವರಣಗೊಂಡ ಜನಪ್ರಿಯ ಅಂಬಾಸಿಡರ್ ಗತವೈಭವ

ಇನ್ನು ಈ ಹಿಂದೆ ಇಂಗ್ಲೆಂಡ್ ನ ಮೋರಿಸ್ ಆಕ್ಸ್ ಫೋಡ್ 3 ಮಾಡೆಲ್ ಅನ್ನೇ ಸ್ವಲ್ಪ ಬದಲಾವಣೆ ಮಾಡಿ 1958ರಲ್ಲಿ ಅಂಬಾಸಿಡರ್ ಕಾರನ್ನು ಸಿದ್ದಗೊಳಿಸಲಾಗಿತ್ತು. ಸಿ.ಕೆ.ಬಿರ್ಲಾ ಒಡೆತನದಲ್ಲಿದ್ದ ಪಶ್ಚಿಮ ಬಂಗಾಳದ ಉತ್ತರಪಾರಾದಲ್ಲಿ ಅಂಬಾಸಿಡರ್ ಉತ್ಪಾದನಾ ಘಟಕವನ್ನು ಆರಂಭಿಸಲಾಗಿತ್ತು.

ಮಾಡಿಫೈ‌ನಲ್ಲಿ ಅನಾವರಣಗೊಂಡ ಜನಪ್ರಿಯ ಅಂಬಾಸಿಡರ್ ಗತವೈಭವ

ಸ್ವಾತಂತ್ರ್ಯಕ್ಕೂ ಮೊದಲೇ ಗುಜರಾತ್ ನಲ್ಲಿ ಮೋರಿಸ್ ಕಂಪನಿಯು ಕಾರುಗಳ ಜೋಡಣಾ ಘಟಕವನ್ನು ಹೊಂದಿತ್ತು. ನಂತರದ ದಿನಗಳಲ್ಲಿ ಅದೇ ಉದ್ಯಮವು ಹಿಂದೂಸ್ಥಾನ್ ಮೋಟಾರ್ಸ್ ಹೆಸರಿನಲ್ಲಿ ಅಂಬಾಸಿಡರ್ ಕಾರಿಗೆ ಹೊಸ ರೂಪ ನೀಡಿ ರಸ್ತೆಗಿಳಿಸಲಾಗಿತ್ತು.

ಮಾಡಿಫೈ‌ನಲ್ಲಿ ಅನಾವರಣಗೊಂಡ ಜನಪ್ರಿಯ ಅಂಬಾಸಿಡರ್ ಗತವೈಭವ

ಆರಂಭದಲ್ಲಿ 1,489 ಸಿಸಿ ಎಂಜಿನ್‌ನೊಂದಿಗೆ ರಸ್ತೆಗಿಳಿದಿದ್ದ ಈ ಕಾರು ದಿನ ಕಳೆದಂತೆ 1,700 ಸಿಸಿಯ ಎಂಜಿನ್ ನಲ್ಲಿ ಕೂಡ ಅಂಬಾಸಿಡರ್ ಕಾರು ಬರತೊಡಗಿತ್ತು. ಆಂಬಿ ಎಂದೇ ಜನಪ್ರಿಯವಾಗಿದ್ದ ಅಂಬಾಸಿಡರ್, ಮಾರ್ಕ್ 1, ಮಾರ್ಕ್ 2, ಮಾರ್ಕ್, ಮಾರ್ಕ್ 3, ಮಾರ್ಕ್ 4 ಹೆಸರಲ್ಲಿ ಕಾರುಗಳಲ್ಲಿ ಸುಧಾರಣೆಯಾಗುತ್ತಾ ಹೋಯಿತು. ಆದಾಗ್ಯೂ ಅದರ ಮೂಲ ವಿನ್ಯಾಸ ಮಾತ್ರ ಬದಲಾಗಿರಲಿಲ್ಲ.

ಮಾಡಿಫೈ‌ನಲ್ಲಿ ಅನಾವರಣಗೊಂಡ ಜನಪ್ರಿಯ ಅಂಬಾಸಿಡರ್ ಗತವೈಭವ

ಆದ್ರೆ 1983ರಲ್ಲಿ ಸುಜುಕಿ ಭಾರತಕ್ಕೆ ಕಾಲಿಟ್ಟಿತೋ ಅಂಬಾಸಿಡರ್ ಮಗ್ಗುಲವೇ ಮುರಿದು ಹೊಯ್ತು. ಮಾರುತಿ ಉದ್ಯೋಗ್ ಲಿ. ಮೂಲಕ ಮಾರುತಿ 800 ಕಾರು ಉತ್ಪಾದನೆ ಆರಂಭವಾಗಿದ್ದೆ ತಡ ಹಳೇ ವಿನ್ಯಾಸವನ್ನೇ ಹೊಂದಿದ್ದ ಅಂಬಾಸಿಡರ್ ಕಾರು ಬರಬರುತ್ತಾ ಆಕರ್ಷಣೆ ಕಳೆದುಕೊಂಡಿತ್ತು. ಕೊನೆಗೆ ಹಣಕಾಸಿನ ಕೊರತೆ ಕೂಡ ಅಂಬಾಸಿಡರ್ ಕಾರು ಹಿಂದೆ ಉಳಿಯುವಂತೆ ಮಾಡಿತು.

ಮಾಡಿಫೈ‌ನಲ್ಲಿ ಅನಾವರಣಗೊಂಡ ಜನಪ್ರಿಯ ಅಂಬಾಸಿಡರ್ ಗತವೈಭವ

ಒಂದು ಅಚ್ಚರಿಯ ಸಂಗತಿ ಎಂದರೆ 2013ರಲ್ಲಿ ಬ್ರಿಟನ್ ನಲ್ಲಿ ನಡೆದ ಬಿಬಿಸಿ ಟಾಪ್ ಗಿಯರ್ ಕಾರು ಪ್ರದರ್ಶನದಲ್ಲಿ ಅಂಬಾಸಿಡರ್ ಕಾರು ಪ್ರಶಸ್ತಿ ಬಾಚಿಕೊಂಡಿತ್ತು. ಆಧುನಿಕ ಶೈಲಿಯ ವಿನ್ಯಾಸದ ಕಾರುಗಳು ಸಾಲು ಸಾಲಾಗಿ ನಿಂತಿದ್ದರೂ ವಿಶ್ವದ ಅತಿ ಶ್ರೇಷ್ಠ ಟ್ಯಾಕ್ಸಿ ಎಂಬ ಹೆಗ್ಗಳಿಕೆ ಗಳಿಸಿದ್ದು ಅಂಬಾಸಿಡರ್ ಎಂಬುದನ್ನು ಮರೆಯುವಂತಿಲ್ಲ. ಅದು ಭಾರತದ ಕಾರಿಗೆ ಸಿಕ್ಕ ಮೊದಲ ಹೆಮ್ಮೆ ಕೂಡಾ ಹೌದು.

ಮಾಡಿಫೈ‌ನಲ್ಲಿ ಅನಾವರಣಗೊಂಡ ಜನಪ್ರಿಯ ಅಂಬಾಸಿಡರ್ ಗತವೈಭವ

ಅಂಬಾಸಿಡರ್ ಕಾರಿನ ಇನ್ನೊಂದು ವಿಶೇಷತೆ ಎಂದರೆ ದೇಶಕ್ಕೆ ಮೊದಲ ಡೀಸೆಲ್ ಎಂಜಿನ್ ಕಾರನ್ನು ಪರಿಚಯಿಸಿದ್ದು ಅಂಬಾಸಿಡರ್. ಅಂಬಾಸಿಡರ್ ಮಾರ್ಕ್ 4ನೊಂದಿಗೆ 1489 ಸಿಸಿಯ, 37 ಬಿಹೆಚ್ ಪಿಯ ಎಂಜಿನ್ ಹೊಂದಿದ ಬಿಎಂ ಸಿ ಬಿ ಸೀರಿಸ್ ನ ಕಾರು ತಯಾರಿಸಲಾಯ್ತು.

ಮಾಡಿಫೈ‌ನಲ್ಲಿ ಅನಾವರಣಗೊಂಡ ಜನಪ್ರಿಯ ಅಂಬಾಸಿಡರ್ ಗತವೈಭವ

ಇದು ಭಾರತದ ಮೊದಲ ಡೀಸೆಲ್ ಕಾರು. ಸರ್ಕಾರಿ ಸೇವೆಯಲ್ಲಿಯೂ ಅಧಿಕೃತವಾಗಿ ಸೇವೆಯಲ್ಲಿಯೂ ಅಂಬಾಸಿಡರ್ ಕಾರಿತ್ತು. ಹೀಗೆ ಕಾರು ಎಂದರೆ ಅಂಬಾಸಿಡರ್ ಕಾರು ಎಂಬ ಕಲ್ಪನೆಯೊಂದಿಗೆ ಬೆಸೆದುಕೊಂಡಿದ್ದ ಅಂಬಾಸಿಡರ್ ಕಾರು ಉತ್ಪಾದನೆ ಇದೀಗ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಮಾಡಿಫೈ‌ನಲ್ಲಿ ಅನಾವರಣಗೊಂಡ ಜನಪ್ರಿಯ ಅಂಬಾಸಿಡರ್ ಗತವೈಭವ

ಇದೇ ಕಾರಣಕ್ಕೆ ರಸ್ತೆ ರಾಜನ ಗತವೈಭವವನ್ನು ಮರಳಿಸುವ ಉದ್ದೇಶದಿಂದ ಕೇರಳ ಮೂಲದ ಆಟೋಮೇಟಿವ್ ರಿಸ್ಟೊರೇಷನ್ ಸರ್ವಿಸ್ ಸಂಸ್ಥೆಯು ವಿಭಿನ್ನವಾದ ಮಾಡಿಫೈ ಮಾಡಿದ್ದು, ಕಾರಿನ ಹಳೆಯ ವಿನ್ಯಾಸಗಳಲ್ಲೇ ಹೊಸತನದ ಡಿಸೈನ್‌ಗಳನ್ನು ಸೇರಿಸುವ ಮೂಲಕ ಮತ್ತಷ್ಟು ಆಕರ್ಷಣೆಯಾಗುವಂತೆ ಮಾಡಿದೆ.

ಮಾಡಿಫೈ‌ನಲ್ಲಿ ಅನಾವರಣಗೊಂಡ ಜನಪ್ರಿಯ ಅಂಬಾಸಿಡರ್ ಗತವೈಭವ

ಕಾರಿನ ಕಸ್ಟಮ್ ಮೆಟಾಲಿಕ್ ಪೇಂಟ್, ಇಂಟಿರಿಯರ್ ಡಿಸೈನ್, ಕಾರಿನ ಸೀಟುಗಳು, ಫ್ಲಕ್ಸ್ ವುಡ್, ನ್ಯೂ ಗೇರ್ ಲೆವಲ್, ಹೊಸ ಮನರಂಜನಾ ಸೆಟ್‌ಪ್, ವಿಸ್ತರಿತ ಡ್ಯಾಶ್ ಬೋರ್ಡ್‌ಗಳನ್ನು ವಿಭಿನ್ನವಾಗಿ ಬದಲಾವಣೆ ಮಾಡಲಾಗಿದ್ದು, ಎಂಜಿನ್ ವಿಭಾಗವನ್ನು ಮೊದಲಿನಂತಯೇ ಮುಂದುವರಿಸಲಾಗಿದೆ.

Source:Cartoq

ಮಾಡಿಫೈ‌ನಲ್ಲಿ ಅನಾವರಣಗೊಂಡ ಜನಪ್ರಿಯ ಅಂಬಾಸಿಡರ್ ಗತವೈಭವ

ಹೀಗಾಗಿ ಮಾಡಿಫೈ ಅಂಬಾಸಿಡರ್ ಮಾದರಿಯು ಮೊದಲಿಗಿಂತ ವಿಭಿನ್ನವಾದ ಆಕರ್ಷಣೆ ಹೊಂದಿದ್ದು, ಆಸಕ್ತ ಗ್ರಾಹಕರು ತಮ್ಮ ಬಳಿ ಹಳೆಯ ಅಂಬಾಸಿಡರ್ ಮಾದರಿಗಳನ್ನು ಮಾಡಿಫೈ ಮಾಡಿಸಲು ಈಗಾಗಲೇ ಹಲವರು ಮುಂದೆ ಬಂದಿದ್ದಾರೆ. ಆದರೂ ಅದರ ಹಳೆಯ ವಿನ್ಯಾಸಗಳನ್ನು ಮರೆಯ ಸಾಧ್ಯವೇ ಇಲ್ಲ.

Trending On DriveSpark Kannada:

ಪ್ರಧಾನಿ ನರೇಂದ್ರ ಮೋದಿ ಚಾಲನೆ ಮಾಡಿದ ಈ ಎಲೆಕ್ಟ್ರಿಕ್ ಕಾರಿನ ವಿಶೇಷತೆ ಏನು?

ಹೊಸ ಕೆಟಿಎಂ ಡ್ಯೂಕ್ 390 ಖರೀದಿಸಿದ ತಪ್ಪಿಗೆ ಅಲೆದಾಡುತ್ತಿರುವ ಬೈಕರ್...

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

Kannada
English summary
This Restored Ambassador Proves Old Is Gold.
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more