ಬಜಾಜ್ ಬೈಕ್‌ಗಳ ಖರೀದಿ ಮೇಲೆ ಸಿಗಲಿದೆ ಭರ್ಜರಿ ಆಫರ್
ಬಜಾಜ್ ಮೋಟಾರ್ಸ್ ಸಂಸ್ಥೆಯು ಸದ್ಯ ಬೈಕ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಗ್ರಾಹಕರ ಸೆಳೆಯುವ ಸಲುವಾಗಿ ಹೊಸ ಆಫರ್ ಒಂದನ್ನು ಘೋಷಣೆ ಮಾಡಿದೆ. ಬಜಾಜ್ ನಿರ್ಮಾಣ ಪ್ರತಿ ಬೈಕ್ ಮಾದರಿಯ ಮೇಲೂ ಒಂದೊಂದು ವಿಶೇಷ ಆಫರ್ ನೀಡಲಾಗುತ್ತಿದೆ.
ಬಜಾಜ್ ಮೋಟಾರ್ಸ್ ಸಂಸ್ಥೆಯು ಸದ್ಯ ಬೈಕ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಗ್ರಾಹಕರ ಸೆಳೆಯುವ ಸಲುವಾಗಿ ಹೊಸ ಆಫರ್ ಒಂದನ್ನು ಘೋಷಣೆ ಮಾಡಿದೆ. ಬಜಾಜ್ ನಿರ್ಮಾಣ ಪ್ರತಿ ಬೈಕ್ ಮಾದರಿಯ ಮೇಲೂ ಒಂದೊಂದು ವಿಶೇಷ ಆಫರ್ ನೀಡಲಾಗುತ್ತಿದ್ದು, ಸಿಮಿತ ಅವಧಿಗೆ ಮಾತ್ರ ಈ ಆಫರ್ ಲಭ್ಯವಿರಲಿದೆ.

ಬಜಾಜ್ ಬೈಕ್‌ಗಳನ್ನು ಖರೀದಿಸುವ ಗ್ರಾಹಕರಿಗೆ ವಿವಿಧ ಆವೃತ್ತಿಗಳಿಗೆ ಅನುಗುಣವಾಗಿ ಆಫರ್ ಘೋಷಣೆ ಮಾಡಲಾಗಿದ್ದು, ತ್ರಿ ಇನ್ ಒನ್ ಎನ್ನುವ ಅಡಿಬರಹದೊಂದಿಗೆ ಗ್ರಾಹಕರನ್ನು ಆಕರ್ಷಣೆ ಮಾಡುತ್ತಿದೆ. ಹಾಗಾದ್ರೆ ಯಾವ ಖರೀದಿಗೆ ಯಾವೆಲ್ಲಾ ಆಫರ್‌ಗಳು ಲಭ್ಯವಿವೆ ಎನ್ನುವುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ..

ಒಂದು ವರ್ಷದ ಉಚಿತ ವಿಮೆ
ಬಜಾಜ್ ಸಂಸ್ಥೆಯು ನೀಡುತ್ತಿರುವ ಹೊಸ ಆಫರ್‌ಗಳ ಪ್ರಕಾರ ಪ್ಲಾಟಿನಾ, ಡಿಸ್ಕವರ್, ಪಲ್ಸರ್ 150, ಪಲ್ಸರ್ ಎನ್ಎಸ್ 160 ಮತ್ತು ವಿ ರೇಂಜ್‌ಗಳ ಖರೀದಿ ಮಾಡಿದಲ್ಲಿ ಒಂದು ವರ್ಷದ ಉಚಿತ ವಿಮೆ ಸೌಲಭ್ಯ ದೊರೆಯಲಿದೆ.

ಹಾಗೆಯೇ ನ್ಯೂ ಸಿಟಿ 100 ಪ್ಲ್ಯಾಟಿನಾ, ಡಿಸ್ಕವರ್, ಪಲ್ಸರ್ ಎನ್ಎಸ್, ಪಲ್ಸರ್ ಆರ್‌ಎಸ್ ಮತ್ತು ಡೋಮಿನಾರ್ ಬೈಕ್‌ಗಳನ್ನು ಖರೀದಿಸುವ ಗ್ರಾಹಕರಿಗೆ ಎರಡು ವರ್ಷಗಳ ಉಚಿತ ಸರ್ವೀಸ್ ಸೌಲಭ್ಯ ದೊರೆಯಲಿದ್ದು, ಬೈಕ್ ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದೊಂದು ಅತ್ಯುತ್ತಮ ಅವಕಾಶ ಎನ್ನಬಹುದು.

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಬಜಾಜ್ ಸಂಸ್ಥೆಯು ಘೋಷಣೆ ಮಾಡಿರುವ ಆಫರ್‌ಗಳಲ್ಲಿ ಪ್ರತಿ ಬೈಕ್ ಮಾದರಿಯ ಮೇಲೂ 5 ವರ್ಷಗಳ ವಾರಂಟಿ ನೀಡುತ್ತಿದ್ದು, ಇದಕ್ಕಾಗಿ ಯಾವುದೇ ರೀತಿಯ ವೆಚ್ಚವರಿ ಮೊತ್ತವನ್ನು ಪಾವತಿ ಮಾಡಬೇಕಿಲ್ಲ.

ಸಿಮಿತ ಅವಧಿಯ ಆಫರ್
ಬಜಾಜ್ ಸಂಸ್ಥೆಯು ಘೋಷಣೆ ಮಾಡಿರುವ ಹೊಸ ಆಫರ್‌ಗಳು ಜುಲೈ 1ರಿಂದಲೇ ಲಭ್ಯವಿದ್ದು, ಇದೇ ತಿಂಗಳು 31ಕ್ಕೆ ಹೊಸ ಆಫರ್‌ಗಳು ಕೊನೆಗೊಳ್ಳಲಿವೆ. ಹೀಗಾಗಿ ಬೈಕ್ ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದು ಸುವರ್ಣಾವಕಾಶ.

ಈ ಬಗ್ಗೆ ಮಾತನಾಡಿರುವ ಬಜಾಜ್ ಆಟೋ ಹಿರಿಯ ಅಧಿಕಾರಿ ಏರಿಕ್ ವಾಸ್ ಅವರು ಭಾರತದಲ್ಲಿ ಬಜಾಜ್ ನಿರ್ಮಾಣದ ಬೈಕ್‌ಗಳಿಗೆ ವಿಶೇಷ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಪಲ್ಸರ್ ಸರಣಿಯಲ್ಲಿನ ಮಾರಾಟ ದಾಖಲೆಯು ಬಜಾಜ್ ಸಂಸ್ಥೆಗೆ ಹೊಸ ಬಲ ತುಂಬಿದೆ. ಹೀಗಾಗಿ ಇದರ ಲಾಭವನ್ನು ಗ್ರಾಹಕರಿಗೆ ಆಫರ್ ರೂಪದಲ್ಲಿ ನೀಡಲಾಗುತ್ತಿದೆ ಎಂದಿದ್ದಾರೆ.

ಇನ್ನು ಕಳೆದ ತಿಂಗಳ ಕೊನೆಯಲ್ಲಿ ಪಲ್ಸರ್ ಮಾರಾಟದಲ್ಲಿ 1 ಕೋಟಿ ತಲುಪಿರುವ ಬಜಾಜ್ ಸಂಸ್ಥೆಯು ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಅದರಲ್ಲೂ ಪಲ್ಸರ್ ಸರಣಿ ಬೈಕ್‌ಗಳು ಯುವಸಮುದಾಯ ಹಾಟ್ ಫೆವರಿಟ್ ಬೈಕ್ ಆಗಿ ಹೊರಹೊಮ್ಮಿರುವುದು ಪಲ್ಸರ್ ಜನಪ್ರಿಯತೆಗೆ ಹಿಡಿದ ಕೈಗನ್ನಡಿಯಾಗಿದೆ.

ಹೀಗಿರುವಾಗಲೇ ಬಜಾಜ್ ಸಂಸ್ಥೆಯು ಗ್ರಾಹಕರನ್ನು ಸೆಳೆಯಲು ತ್ರಿ ಇನ್ ಒನ್ ಎನ್ನುವ ಆಫರ್ ಘೋಷಣೆ ಮಾಡಿದ್ದು, ಆಸಕ್ತ ಗ್ರಾಹಕರು ನಿಮ್ಮ ಹತ್ತಿರ ಡೀಲರ್ಸ್‌ಗಳನ್ನ ಭೇಟಿಯಾಗಿ ಹೊಸ ಆಫರ್ ಕುರಿತಾಗಿ ಮತ್ತಷ್ಟು ಮಾಹಿತಿ ಪಡೆದುಕೊಳ್ಳಬಹುದು.


Click it and Unblock the Notifications








