ಬಹುನೀರಿಕ್ಷಿತ ಬಜಾಜ್ ಅವೆಂಜರ್ ಸ್ಟ್ರೀಟ್ 180 ಸಿಸಿ ಕ್ರೂಸರ್ ಬೈಕ್ ಬಿಡುಗಡೆ

ಬಜಾಜ್ ಸಂಸ್ಥೆಯು ಅವೆಂಜರ್ 220 ಸ್ಟ್ರೀಟ್ ಮತ್ತು ಅವೆಂಜರ್ 150 ಸ್ಟ್ರೀಟ್ ಬೈಕ್‌ಗಳನ್ನು ಬಿಡುಗಡೆಗೊಳಿಸಿದ್ದು, ಇದೀಗ ತನ್ನ ಹೊಸ ಅವೆಂಜರ್ 180 ಸ್ಟ್ರೀಟ್ ಬೈಕ್‌ನ್ನು ಬಿಡುಗಡೆಗೊಳಿಸುವ ಮೂಲಕ ಬೈಕ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದೆ.

By Praveen

ಬಜಾಜ್ ಆಟೋ ಸಂಸ್ಥೆಯು ಕೆಲ ದಿನಗಳ ಹಿಂದಷ್ಟೆ ಅವೆಂಜರ್ 220 ಸ್ಟ್ರೀಟ್ ಮತ್ತು ಅವೆಂಜರ್ 150 ಸ್ಟ್ರೀಟ್ ಬೈಕ್‌ಗಳನ್ನು ಬಿಡುಗಡೆಗೊಳಿಸಿದ್ದು, ಇದೀಗ ತನ್ನ ಹೊಸ ಅವೆಂಜರ್ 180 ಸ್ಟ್ರೀಟ್ ಬೈಕ್‌ನ್ನು ಬಿಡುಗಡೆಗೊಳಿಸುವ ಮೂಲಕ ಬೈಕ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದೆ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಅವೆಂಜರ್ ಸ್ಟ್ರೀಟ್ 180 ಸಿಸಿ ಕ್ರೂಸರ್

ಈ ಹಿಂದೆ ಹಲವು ಬಾರಿ 180 ಸಿಸಿ ಅವೆಂಜರ್ ಸ್ಟ್ರೀಟ್ ಕ್ರೂಸರ್ ಬಿಡುಗಡೆಗೊಳಿಸುವ ಬಗ್ಗೆ ಹೇಳಿಕೊಂಡಿದ್ದ ಬಜಾಜ್ ಸಂಸ್ಥೆಯು ಇದೀಗ ಹೊಸ ಬೈಕ್‌ನ್ನು ಬಿಡುಗಡೆ ಮಾಡಿದ್ದು, ಮುಂಬೈ ಎಕ್ಸ್‌ಶೋರಂ ಪ್ರಕಾರ ಹೊಸ ಬೈಕಿನ ಬೆಲೆಯನ್ನು ರೂ.83,475ಕ್ಕೆ ನಿಗದಿ ಮಾಡಿದೆ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಅವೆಂಜರ್ ಸ್ಟ್ರೀಟ್ 180 ಸಿಸಿ ಕ್ರೂಸರ್

ಹೊಸ ಬಜಾಜ್ ಅವೆಂಜರ್ 150 ಸ್ಟ್ರೀಟ್ ಎಲ್ಇಡಿ ಹಗಲಿನ ಚಾಲನೆಯಲ್ಲಿರುವ ಬೆಳಕು ಮತ್ತು ಹೆಡ್‌ಲ್ಯಾಂಪ್ ಮೇಲೆ ಸಣ್ಣ ಕೌಲ್ ನೊಂದಿಗೆ ಹೊಸ ರೋಡ್ ಸ್ಟರ್ ವಿನ್ಯಾಸದ ಹೆಡ್‌ಲ್ಯಾಂಪ್ ಹೊಂದಿದ್ದು, ಕಪ್ಪು ಅಲಾಯ್ ಚಕ್ರಗಳೊಂದಿಗೆ ಹೊಸ ಪಿಲ್ಲಿಯನ್ ಗ್ರಾಬ್ ಗ್ರಿಲ್ ಅನ್ನು ಕೂಡ ಹೊಂದಿದೆ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಅವೆಂಜರ್ ಸ್ಟ್ರೀಟ್ 180 ಸಿಸಿ ಕ್ರೂಸರ್

ಹೀಗಾಗಿ ಹೊಸ ಬೈಕ್ ಅವೆಂಜರ್ ಸ್ಟ್ರೀಟ್ 150 ಮಾದರಿಯ ಅಪ್‌ಗ್ರೇಡ್ ವರ್ಷನ್ ಆಗಿರಲಿದ್ದು, ಕ್ಲಾಸಿಕ್ ಬೈಕ್ ವಿಭಾಗದಲ್ಲಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುವುದು ಸಂಸ್ಥೆಯ ಇರಾದೆಯಾಗಿದೆ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಅವೆಂಜರ್ ಸ್ಟ್ರೀಟ್ 180 ಸಿಸಿ ಕ್ರೂಸರ್

ಈ ಮೂಲಕ ನಗರ ಜತೆಗೆ ಅತ್ಯುತ್ತಮ ಹೆದ್ದಾರಿ ಪ್ರಯಾಣವನ್ನು ಖಾತ್ರಿಪಡಿಸಲಿದ್ದು, ಎಲ್ಐಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಹೊಸತಾದ ಗ್ರಾಫಿಕ್ಸ್, ದೊಡ್ಡದಾದ ಲಾಂಛ, ಕೆಳಮಟ್ಟ ಹಾಗೂ ಉದ್ದವಾದ ಫ್ರೊಫೈಲ್ ಹೊಂದಿರುವ ಅವೆಂಜರ್ ಸ್ಟ್ರೀಟ್‌ 180ಗೆ ಹೊಸ ಲುಕ್ ತಂದಿದೆ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಅವೆಂಜರ್ ಸ್ಟ್ರೀಟ್ 180 ಸಿಸಿ ಕ್ರೂಸರ್

ಎಂಜಿನ್ ಸಾಮರ್ಥ್ಯ

ಮೇಲೆ ಹೇಳಿದಂತೆ ಅವೆಂಜರ್ ಸ್ಟ್ರೀಟ್ 180 ಬೈಕ್ 178.6 ಸಿಸಿ ಡಿಟಿಎಸ್-ಐ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 15.3-ಬಿಎಹೆಚ್ ಪಿ ಮತ್ತು 13.7-ಎನ್ಎಂ ಟಾರ್ಕನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿದ್ದು, 5 ಸ್ಪೀಡ್ ಗೇರ್ ಬಾಕ್ಸ್‌ ಜೋಡಿಸಲಾಗಿದೆ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಅವೆಂಜರ್ ಸ್ಟ್ರೀಟ್ 180 ಸಿಸಿ ಕ್ರೂಸರ್

ಬಜಾಜ್ ತನ್ನ ಕ್ರೂಸರ್ ಬೈಕ್‌ಗಳನ್ನು ಒಂದೊಂದಾಗಿ ಮಾರುಕಟ್ಟೆಗೆ ಪರಿಚಯಿಸುವುದರ ಮೂಲಕ ಕ್ರೂಸರ್ ಬೈಕ್‌ಗಳ ವಿಭಾಗದಲ್ಲಿ ಸದ್ದುಮಾಡಲು ಮುಂದಾಗಿರುವ ಬಜಾಜ್ ಸಂಸ್ಥೆಯು ಅವೆಂಜರ್ 180 ಸ್ಟ್ರೀಟ್ ಕ್ರೂಸರ್ ಅನ್ನು ಆರಂಭಿಕ ಆವೃತ್ತಿಯಾಗಿಸಲಿದ್ದು, ಈ ಮೂಲಕ ಸ್ಫೋರ್ಟ್ ಡೀಸೆಂಟ್ ಶಕ್ತಿಯು ಆರಂಭಿಕ ಕ್ರೂಸರ್ ಬೈಕ್ ಕಲಿಕರಿಗೆ ಹೊಸ ಅನುಭವವನ್ನು ನೀಡಲಿದೆ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಅವೆಂಜರ್ ಸ್ಟ್ರೀಟ್ 180 ಸಿಸಿ ಕ್ರೂಸರ್

ಇದರೊಂದಿಗೆ ಭಾರತದಲ್ಲಿ ಬಿಡುಗಡೆಯಾಗಿರುವ ಸುಜುಕಿ ಇಂಟ್ರೂಡರ್ 150, ಯುಎಂ ರೆನೆಗೆಡ್ ಡ್ಯುಟಿ ಎಸ್ ಮತ್ತು ಡ್ಯುಟಿ ಏಸ್ ಬೈಕ್‌ಗಳಿಗೆ ಹೊಸ ಅವೆಂಜರ್ 180 ತೀವ್ರ ಪೈಪೋಟಿಯನ್ನು ನೀಡಲಿದ್ದು, ಕಡಿಮೆ ಬೆಲೆಗಳಲ್ಲಿ ಉತ್ತಮ ಕ್ರೂಸರ್ ಬೈಕ್ ಬಯಸುವ ಯುವಸಮುದಾಯಕ್ಕೆ ಇದೊಂದು ಉತ್ತಮ ಆಯ್ಕೆಯಾಗಲಿದೆ.

Trending On DriveSpark Kannada:

ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

ಫಸ್ಟ್ ರೈಡ್ ರಿವ್ಯೂ- ಬ್ಲೂಟೂತ್‌ನೊಂದಿಗೆ ಸ್ಮಾರ್ಟ್ ಆಗಿ ಬಂದ ಟಿವಿಎಸ್ ಎನ್‌ಟಾರ್ಕ್ 125

ಕಾರು ಶುಚಿಯಾಗಿಡಲು 10 ಸುಲಭ ವಿಧಾನಗಳು

Most Read Articles

Kannada
Read more on ಬಜಾಜ್
English summary
Bajaj Avenger Street 180 Launched At Rs 83,475 - Specifications, Features & Colours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X