ABS ಇಲ್ಲದ ಡೋಮಿನಾರ್ 400 ಬೈಕ್ ಮಾರಾಟಕ್ಕೆ ಬ್ರೇಕ್ ಹಾಕಿದ ಬಜಾಜ್..!
ಸದ್ಯ ಬೈಕ್ ಖರೀದಿಸುವ ಬಹುತೇಕ ಗ್ರಾಹಕರು ಹೊಸ ಬೈಕಿನ ಸುರಕ್ಷಾ ಸೌಲಭ್ಯಗಳತ್ತ ಹೆಚ್ಚು ಗಮನಹರಿಸುತ್ತಿದ್ದಾರೆ. ಇಷ್ಟು ದಿನ ಮೈಲೇಜ್ ವಿಚಾರ ಮಾತ್ರ ಗಮನಹರಿಸುತ್ತಿದ್ದ ಗ್ರಾಹಕರು ಇದೀಗ ಬೈಕಿನಲ್ಲಿ ಡಿಸ್ಕ್ ಬ್ರೇಕ್ ಇದೆಯಾ? ಎಬಿಎಸ್ ಸಿಗುತ್ತಾ? ಎನ್ನುವ ಪ್ರಶ್ನೆಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣಕ್ಕೆ ಬಜಾಜ್ ಸಂಸ್ಥೆಯು ಮಹತ್ವದ ನಿರ್ಧಾರ ಒಂದನ್ನು ಪ್ರಕಟಿಸಿದೆ.

ಹೌದು, ಮಧ್ಯಮ ಗಾತ್ರದ ಸೂಪರ್ ಬೈಕ್ ಮಾದರಿಯಾಗಿರುವ ಬಜಾಜ್ ಡೋಮಿನಾರ್ 400(ಎಬಿಎಸ್ ಹೊರತಾದ) ಆವೃತ್ತಿಗಳ ಮಾರಾಟ ಬ್ರೇಕ್ ಹಾಕಲಾಗಿದ್ದು, ಸುರಕ್ಷತೆಯ ಬೈಕ್ ಚಾಲನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಎಬಿಎಸ್ ಸೌಲಭ್ಯ ಪ್ರೇರಿತ ಡೋಮಿನಾರ್ 400 ಮಾದರಿಯನ್ನು ಮಾತ್ರವೇ ಮಾರಾಟ ಮಾಡಲು ನಿರ್ಧರಿಸಲಾಗಿದೆ.

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಡೋಮಿನಾರ್ 400 ಬೈಕ್‌ಗಳಿಗೆ ಉತ್ತಮ ಬೇಡಿಕೆಯಿದ್ದು, ಶೇ. 80 ರಷ್ಟು ಗ್ರಾಹಕರು ಎಬಿಎಸ್ ತಂತ್ರಜ್ಞಾನ ಪ್ರೇರಿತ ಡೋಮಿನಾರ್ 400 ಖರೀದಿಗೆ ಮುಂದಾಗುತ್ತಿದ್ದಾರೆ. ಹೀಗಾಗಿ ಎಬಿಎಸ್ ಇಲ್ಲದ ಡೋಮಿನಾರ್ 400 ಬೈಕ್ ಮಾರಾಟವನ್ನು ಬಜಾಜ್ ಇಂದಿನಿಂದಲೇ ಸ್ಥಗಿತಗೊಳಿಸಿದೆ.

ಬಜಾಜ್ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲೂ ಕೂಡಾ ಎಬಿಎಸ್ ಇಲ್ಲದ ಮಾದರಿಯ ಜಾಹೀರಾತು ಪುಟವನ್ನು ತೆಗೆದುಹಾಕಿದ್ದು, ಎಬಿಎಸ್ ಸೌಲಭ್ಯ ಹೊಂದಿರುವ ಡೋಮಿನಾರ್ 400 ಮಾದರಿಯನ್ನು ಮಾರಾಟ ಲಭ್ಯವಿದೆ ಎಂದು ತಿಳಿಸಿದೆ.

ಸುರಕ್ಷತೆಯ ದೃಷ್ಠಿಯಿಂದ ನೋಡುವುದಾದರೇ, ಎಬಿಎಸ್ ಬೈಕ್‌ಗಳ ಆಯ್ಕೆ ಪ್ರಮುಖವಾಗಿದ್ದು, ಹೆಚ್ಚಿನ ಮಟ್ಟದ ಎಂಜಿನ್ ಸಾಮರ್ಥ್ಯ ಹೊಂದಿರುವ ಬೈಕ್‌ಗಳಲ್ಲಿ ಈಗಾಗಲೇ ಈ ಸೌಲಭ್ಯ ಕಡ್ಡಾಯವಾಗುತ್ತಿರುವುದು ಉತ್ತಮ ಬೆಳವಣಿಗೆ.

ಆದರೂ ಕೆಲ ಬೈಕ್ ಖರೀದಿದಾರರು ಬೆಲೆ ಕಡಿಮೆ ಎನ್ನುವ ಕಾರಣಕ್ಕೆ ಎಬಿಎಸ್ ಇಲ್ಲದ ಬೈಕ್‌ಗಳನ್ನು ಸಹ ಖರೀದಿಸುತ್ತಿದ್ದು, ಇದೀಗ ಬಜಾಜ್ ಆ ಆಯ್ಕೆಯನ್ನೇ ತೆಗೆದುಹಾಕಿದ್ದಲ್ಲೇ ಕೇವಲ ಎಬಿಎಸ್ ಪ್ರೇರಿತ ಡೋಮಿನಾರ್ 400 ಮಾರಾಟ ಮಾಡಲು ಮುಂದಾಗಿದೆ.

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಎಬಿಎಸ್ ಮತ್ತು ಎಬಿಎಸ್ ಇಲ್ಲದ ಬೈಕ್ ಮಾದರಿಗಳಿಗೂ ಬೆಲೆಗಳಲ್ಲಿ ಸ್ವಲ್ಪ ಮಟ್ಟಿಗೆ ವ್ಯತ್ಯಾಸ ಹೊಂದಿವೆಯಾದರೂ, ವೇಗದ ಬೈಕ್ ಚಾಲನೆ ವೇಳೆ ಎಬಿಎಸ್ ತಂತ್ರಜ್ಞಾವು ಬೈಕ್ ಸವಾರರಿಗೆ ಸಾಕಷ್ಟು ಸಹಕಾರಿಯಾಗುವುದನ್ನು ನಾವು ಅಲ್ಲಗಳೆಯುವಂತಿಲ್ಲ.

ಇನ್ನು ಎಬಿಎಸ್ ಡೋಮಿನಾರ್ 400 ಮಾದರಿಯನ್ನು ಮಾತ್ರ ಮಾರಾಟ ಮಾಡಲು ನಿರ್ಧರಿಸುವ ಬಜಾಜ್ ಸಂಸ್ಥೆಯು ಈ ಹಿಂದಿನ ತಾಂತ್ರಿಕ ಅಂಶಗಳನ್ನು ಮುಂದುವರಿಸಲಿದ್ದು, ಬೈಕಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ರೂ. 1.63 ಲಕ್ಷಕ್ಕೆ ನಿಗದಿ ಮಾಡಿದೆ.
MOST READ: ಅಚ್ಚರಿಯ ಬೆಲೆಗೆ ಕೆಟಿಎಂ ಡ್ಯೂಕ್ 125 ಬೈಕ್ ಭಾರತದಲ್ಲಿ ಬಿಡುಗಡೆ

ಎಂಜಿನ್ ಸಾಮರ್ಥ್ಯ
ಡೋಮಿನಾರ್ 400 ಬೈಕ್‌ಗಳು 373ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಫ್ಯೂಲ್ ಇಂಜೆಕ್ಷಡ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 35 ಬಿಎಚ್‌ಪಿ ಮತ್ತು 35ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

ಹೀಗಾಗಿ ಸೂಪರ್ ಬೈಕ್‌ಗಳಲ್ಲಿ ಎಬಿಎಸ್ ತಂತ್ರಜ್ಞಾನ ಅವಶ್ಯಕವಾಗಿದ್ದು, ಡೋಮಿನಾರ್ 400 ಮಾರಾಟದಲ್ಲಿ ಬಜಾಜ್ ನಿರ್ಧಾರವು ಒಂದು ರೀತಿ ಉತ್ತಮ ಎಂದು ಹೇಳಬಹುದು. ನೀವು ಕೂಡಾ ಹೊಸ ಬೈಕ್ ಖರೀದಿಯ ಯೋಜನೆಯಲ್ಲಿದ್ದರೇ ಎಬಿಎಸ್ ಪ್ರೇರಿತ ವಾಹನಗಳಿಗೆ ಪ್ರಾಮುಖ್ಯತೆ ನೀಡುವುದು ಸುರಕ್ಷೆಯ ದೃಷ್ಠಿಯಿಂದ ಒಳಿತು.
More from DriveSpark
ಭಾರತದಲ್ಲಿ ಬಿಡುಗಡೆಯಾದ ಅಗ್ಗದ ಬೆಲೆಯ ಕೆಟಿಎಂ ಡ್ಯೂಕ್ 125 ಬೈಕ್ ಫೋಟೋ ಗ್ಯಾಲರಿ..!


Click it and Unblock the Notifications








