ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬರಲಿದೆ ಬಜಾಜ್ ಡಾಮಿನಾರ್ 400 ಬೈಕ್

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಬಜಾಜ್ ಆಟೋ 2016ರಲ್ಲಿ ತಮ್ಮ ಡಾಮಿನಾರ್ 400 ಸ್ಪೋರ್ಟ್ಸ್ ಕ್ರೂಸರ್ ಬೈಕ್ ಅನ್ನು ಬಿಡುಗಡೆಗೊಳಿಸಿದ್ದು, ಇದು ಸಂಸ್ಥೆಯಲ್ಲಿನ ಫ್ಯಾಗ್‍ಶಿಪ್ ಆಫರ್ ಮಾಡುವ ಬೈಕ್ ಆಗಿತ್ತು. ಆದರೆ ಡಾಮಿನಾರ್ ಬೈಕ್ ಬಜಾಜ್ ಸಂಸ್ಥೆಯು ನಿರೀಕ್ಷಿಸಿದ ಫಲಿತವನ್ನು ನೀಡಲಿಲ್ಲ, ಆದ್ದರಿಂದ ಬಜಾಜ್ ಆಟೋ ಸಂಸ್ಥೆಯು ಡಾಮಿನಾರ್ ಬೈಕಿನ ಹೊಸ ವೇರಿಯಂಟ್ ಅನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬರಲಿದೆ ಬಜಾಜ್ ಡಾಮಿನಾರ್ 400 ಬೈಕ್

ಹೌದು, ಬಜಾಜ್ ಆಟೋ ಸಂಸ್ಥೆಯು ಡಾಮಿನಾರ್ 400 ಬೈಕಿನ ಸ್ಕ್ರಾಂಬ್ಲರ್ ವೇರಿಯಂತ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದು, ಇದೇ ವರ್ಷದ ಕೊನೆಯಲ್ಲಿ ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ ಎನ್ನಲಾಗಿದೆ.

ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬರಲಿದೆ ಬಜಾಜ್ ಡಾಮಿನಾರ್ 400 ಬೈಕ್

ಬಜಾಜ್ ಡಾಮಿನಾರ್ 400 ಸ್ಕ್ರ್ಯಾಂಬ್ಲರ್ ಬೈಕ್ ಉತ್ತಮ ಆಫ್-ರೋಡಿಂಗ್ ಮತ್ತು ಟೂರಿಂಗ್ ಕೌಶಲ್ಯಗಳನ್ನು ಪಡೆದುಕೊಳ್ಳಬಹುದಾದ ನಿರೀಕ್ಷೆ ಇದ್ದು, ಹೊಸ ವೇರಿಯಂಟ್ ಬೈಕಿನಲ್ಲಿ ಉದ್ದನೆಯ ವಿಂಡ್‍ಸ್ಕ್ರೀನ್, ರೈಸ್ಡ್ ಸಸ್ಪೆಂಷನ್, ಕ್ರ್ಯಾಷ್ ಗಾರ್ಡ್, ಔಕ್ಸಿಲರಿ ಲೈಟ್ಸ್, ಲಗೇಜ್ ರ್‍ಯಾಕ್ ಮತ್ತು ಸ್ಯಾಡಲ್ ಬ್ಯಾಗ್‍ ಎಂಬ ಉಪಕರಣಗಳನ್ನು ಪಡೆದುಕೊಳ್ಳಲಿದೆ.

ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬರಲಿದೆ ಬಜಾಜ್ ಡಾಮಿನಾರ್ 400 ಬೈಕ್

ಎಂಜಿನ್ ಸಾಮರ್ಥ್ಯ

ಮಾರುಕಟ್ಟೆಗೆ ಲಗ್ಗೆಯಿಡಲಿರುವ ಹೊಸ ಬಜಾಜ್ 400 ಸ್ಕ್ರ್ಯಾಂಬ್ಲರ್ ಬೈಕ್ 373ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 34.5 ಬಿಹೆಚ್‍ಪಿ ಮತ್ತು 35ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಏಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬರಲಿದೆ ಬಜಾಜ್ ಡಾಮಿನಾರ್ 400 ಬೈಕ್

ಬಜಾಜ್ ಸಂಸ್ಥೆಯು 2019ರ ಡಾಮಿನಾರ್ 400 ಬೈಕ್ ಅನ್ನು ಹಲವಾರು ಉಪಕರಣಗಳು ಮತು ವೈಶಿಷ್ಟ್ಯತೆಗಳನ್ನು ಅಳವಶಿದಲಿದೆ ಎನ್ನಲಾಗಿದ್ದು, ಈಗಾಗಲೆ ಈ ಬೈಕ್‍ನ ಎಂಜಿ ಕಾರ್ಯಕ್ಷಮೆತೆಯ ಕುರಿತಾಗಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬರಲಿದೆ ಬಜಾಜ್ ಡಾಮಿನಾರ್ 400 ಬೈಕ್

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ 2019ರ ಹೊಸ ಡಾಮಿನಾರ್ 400 ಬೈಕ್ ಈ ಬಾರಿ ಡ್ಯುಯಲ್ ಚಾನಲ್ ಎಬಿಎಸ್, ಅಪ್‍ಸೈಡ್ ಡೌನ್ ಫೋರ್ಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿರಲಿದ್ದು, ಹೊಸ ಬಣ್ಣವನ್ನು ಸಹ ಪಡೆದುಕೊಳ್ಳಲಿದೆ. 2019ರ ಹೊಸ ಬಜಾಜ್ ಡಾಮಿನಾರ್ ಬೈಕ್ ಮರುವಿನ್ಯಾಸಗೊಳಿಸಲಾದ ಫ್ರಂಟ್ ಮಡ್‍‍ಗಾರ್ಡ್, ಅಗಲವಾದ ರೇಡಿಯೇಟರ್ ಮತ್ತು ದೊಡ್ಡ ಗಾತ್ರದ ಎಂಜಿನ್ ಬೆಲ್ಲಿ ಪ್ಯಾನ್ ಅನ್ನು ಒದಗಿಸಲಾಗಿದೆ.

ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬರಲಿದೆ ಬಜಾಜ್ ಡಾಮಿನಾರ್ 400 ಬೈಕ್

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಬಜಾಜ್ ಡಾಮಿನಾರ್ 400 ಒಂದು ಸ್ಪೋರ್ಟ್ಸ್ ಕ್ರೂಸರ್ ಆಗಿದ್ದು, ಮಾರುಕಟ್ಟೆಯಲ್ಲಿ ರಾಯಲ್ ಎನ್‍ಫೀಲ್ಡ್ ಬೈಕ್‍‍ಗಳಿಗೆ ಪೈಪೋಟಿ ನೀಡುತ್ತಿದೆ. ಆದ್ರೆ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಳ್ಳಲಿಲ್ಲವಾದ ಕಾರಣ ಬಜಾಜ್ ಆಟೋ ಸಂಸ್ಥೆಯು ಡಾಮಿನಾರ್ 400 ಬೈಕಿನ ಹೊಸ ವೇರಿಯಂಟ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದ್ದು ಇದು ರಾಯಲ್ ಎನ್‍ಫೀಲ್ಡ್ ಹಿಮಾಲಯ್ನ್ ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on bajaj auto
English summary
Bajaj Dominar Scrambler 400 Launch Details Revealed.
Story first published: Monday, October 15, 2018, 18:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X