ಶುರುವಾಯ್ತು ದಸರಾ, ದೀಪಾವಳಿ ಹಬ್ಬದ ಸಡಗರ- ಬಜಾಜ್‌ನಿಂದ ಗ್ರಾಹಕರಿಗೆ ಭರ್ಜರಿ ಆಫರ್

ನಾಡಿನಾದ್ಯಂತ ದಸರಾ ಮತ್ತು ದೀಪಾವಳಿ ಹಬ್ಬದ ಸಡಗರಕ್ಕೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ವಿವಿಧ ನಮೂನೆಯ ಆಫರ್‌ಗಳನ್ನು ಘೋಷಣೆ ಮಾಡುತ್ತಿದ್ದು, ಬಜಾಜ್ ಸಂಸ್ಥೆಯು ಕೂಡಾ ಅತ್ಯತ್ತಮ ಆಫರ್‌ಗಳನ್ನು ನೀಡುತ್ತಿದೆ.

ಶುರುವಾಯ್ತು ದಸರಾ, ದೀಪಾವಳಿ ಹಬ್ಬದ ಸಡಗರ- ಬಜಾಜ್‌ನಿಂದ ಗ್ರಾಹಕರಿಗೆ ಭರ್ಜರಿ ಆಫರ್

ಬಜಾಜ್ ಸಂಸ್ಥೆಯು ಸದ್ಯ ದೇಶದಲ್ಲಿ ವಿವಿಧ ಮಾದರಿಯ ಬೈಕ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಅಗ್ಗದ ಬೆಲೆಯ ಪ್ಲಾಟಿನಾದಿಂದ ಹಿಡಿದು ಡೋಮಿನಾರ್ ರೇಂಜ್ ತನಕವು ಆಫರ್ ಘೋಷಿಸುವ ಮೂಲಕ ಪ್ರಮುಖ ಬೈಕ್ ಉತ್ಪಾದನಾ ಸಂಸ್ಥೆಗಳು ತೀವ್ರ ಪೈಪೋಟಿ ನೀಡುವ ತವಕದಲ್ಲಿದೆ.

ಶುರುವಾಯ್ತು ದಸರಾ, ದೀಪಾವಳಿ ಹಬ್ಬದ ಸಡಗರ- ಬಜಾಜ್‌ನಿಂದ ಗ್ರಾಹಕರಿಗೆ ಭರ್ಜರಿ ಆಫರ್

ಬಜಾಜ್‌ನಿಂದ 5-5-5 ಆಫರ್..!

ಅರೇ ಏನಿದು 5-5-5? ಅಂತಾ ತಲೆ ಕೆಡಿಸಿಕೊಳ್ಳಬೇಡಿ. ಬಜಾಜ್ ಸಂಸ್ಥೆಯು ಗ್ರಾಹಕರಿಗೆ ಈ ಬಾರಿಯ ದಸರಾ ಮತ್ತು ದೀಪಾವಳಿ ಹಬ್ಬಕ್ಕಾಗಿ ನೀಡುತ್ತಿರುವ ಹೊಸ ಮಾದರಿಯ ಆಫರ್ ಇದು.

ಶುರುವಾಯ್ತು ದಸರಾ, ದೀಪಾವಳಿ ಹಬ್ಬದ ಸಡಗರ- ಬಜಾಜ್‌ನಿಂದ ಗ್ರಾಹಕರಿಗೆ ಭರ್ಜರಿ ಆಫರ್

ಹೌದು, 5-5-5 ಆಫರ್ ಅಂದ್ರೆ ಹೊಸ ಬೈಕ್ ಖರೀದಿಸುವ ಗ್ರಾಹಕರಿಗೆ 5 ಫ್ರೀ ಸರ್ವಿಸ್, 5 ವರ್ಷದ ಫ್ರೀ ಇನ್ಸುರೆನ್ಸ್ ಮತ್ತು 5 ವರ್ಷಗಳ ವಾರಂಟಿ ನೀಡುತ್ತಿದ್ದು, ಇದು ಬಜಾಜ್ ಸಂಸ್ಥೆಯ ಪ್ರತಿ ಬೈಕ್ ಖರೀದಿ ಮೇಲೂ ಅನ್ವಯವಾಗಲಿದೆ.

ಶುರುವಾಯ್ತು ದಸರಾ, ದೀಪಾವಳಿ ಹಬ್ಬದ ಸಡಗರ- ಬಜಾಜ್‌ನಿಂದ ಗ್ರಾಹಕರಿಗೆ ಭರ್ಜರಿ ಆಫರ್

ಬಜಾಜ್ ಸಂಸ್ಥೆಯ ಪ್ಲಾಟಿನಾ, ಡಿಸ್ಕವರ್, ಪಲ್ಸರ್ ಮತ್ತು ವಿ ರೇಂಜ್ ಬೈಕ್‌ಗಳಿಗೆ ಈ ಆಫರ್ ನೀಡಲಾಗುತ್ತಿದ್ದು, ಪಲ್ಸರ್ ಬೈಕ್ ಸರಣಿ‌ಗಳ ಖರೀದಿ ಮೇಲೆ ರೂ. 9,800 ಉಳಿತಾಯವಾಗಿದ್ದಲ್ಲಿ ವಿ ರೇಂಜ್ ಬೈಕ್‌ಗಳ ಖರೀದಿ ಮೇಲೆ ರೂ. 5,200 ಮತ್ತು ಡಿಸ್ಕವರ್ ಖರೀದಿ ಮೇಲೆ ರೂ. 4,800 ಉಳಿತಾಯ ಮಾಡಬಹುದು.

ಶುರುವಾಯ್ತು ದಸರಾ, ದೀಪಾವಳಿ ಹಬ್ಬದ ಸಡಗರ- ಬಜಾಜ್‌ನಿಂದ ಗ್ರಾಹಕರಿಗೆ ಭರ್ಜರಿ ಆಫರ್

ಹೊಸ ಆಫರ್‌ಗಳು ಎಲ್ಲೆಲ್ಲಿ ಲಭ್ಯ?

ಬಜಾಜ್ ಸಂಸ್ಥೆಯು ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಪಲ್ಸರ್ ಬೈಕ್‌ಗಳನ್ನು ಖರೀದಿಸುವ ಗ್ರಾಹಕರಿಗೆ ಮಾತ್ರವೇ 5 ವರ್ಷದ ಫ್ರೀ ಇನ್ಸುರೆನ್ಸ್ ನೀಡಲು ತೀರ್ಮಾನಿಸಿದ್ದು, ಇನ್ನುಳಿದ ಆಫರ್‌ಗಳು ಪ್ರತಿ ಬೈಕಿನ ಮೇಲೂ ದೇಶಾದ್ಯಂತ ಒಂದೇ ಆಗಿರಲಿವೆ.

ಶುರುವಾಯ್ತು ದಸರಾ, ದೀಪಾವಳಿ ಹಬ್ಬದ ಸಡಗರ- ಬಜಾಜ್‌ನಿಂದ ಗ್ರಾಹಕರಿಗೆ ಭರ್ಜರಿ ಆಫರ್

ಐದು ವರ್ಷದ ಇನ್ಸುರೆನ್ಸ್ ಕಡ್ಡಾಯ!

ಕಳೆದ ಸೆಪ್ಟೆಂಬರ್ 1ರಿಂದ ಸುಪ್ರೀಂಕೋರ್ಟ್ ಆದೇಶದ ಅನ್ವಯ ಹೊಸ ಬೈಕ್ ಖರೀದಿಸುವ ಗ್ರಾಹಕರು ಐದು ವರ್ಷದ ಥರ್ಡ್ ಪಾರ್ಟಿ ಇನ್ಸುರೆನ್ಸ್ ಹೊಂದಿರಬೇಕಾದ ನಿಯಮ ಜಾರಿಯಲ್ಲಿದ್ದು, ಬೈಕ್‌ಗಳ ಬೆಲೆಗೆ ಹೆಚ್ಚಳಕ್ಕೆ ಇದೇ ಮೂಲ ಕಾರಣವಾಗಿದೆ.

MOST READ: ಅಪಘಾತದಲ್ಲಿ ಮೃತಪಟ್ಟವರ ಪರಿಹಾರದ ಮೊತ್ತದಲ್ಲಿ ಭಾರೀ ಹೆಚ್ಚಳ

ಶುರುವಾಯ್ತು ದಸರಾ, ದೀಪಾವಳಿ ಹಬ್ಬದ ಸಡಗರ- ಬಜಾಜ್‌ನಿಂದ ಗ್ರಾಹಕರಿಗೆ ಭರ್ಜರಿ ಆಫರ್

ಹೀಗಾಗಿ ಬೆಲೆ ಏರಿಕೆಯಿಂದ ಬೈಕ್ ಖರೀದಿಗೆ ಹಿಂದೇಟು ಹಾಕುತ್ತಿರುವ ಗ್ರಾಹಕರನ್ನು ಸೆಳೆಯಲು ಯತ್ನಿಸುತ್ತಿರುವ ಬಜಾಜ್ ಸಂಸ್ಥೆಯು ಬೆಲೆ ಏರಿಕೆಯ ಪ್ರಮುಖ ಅಂಶವಾದ ಐದು ವರ್ಷದ ಇನ್ಸುರೆನ್ಸ್ ಅನ್ನು ಉಚಿತವಾಗಿ ನೀಡುತ್ತಿರುವುದು ಗ್ರಾಹಕರ ಪ್ರಮುಖ ಆಕರ್ಷಣೆ ಎನ್ನಬಹುದು.

ಶುರುವಾಯ್ತು ದಸರಾ, ದೀಪಾವಳಿ ಹಬ್ಬದ ಸಡಗರ- ಬಜಾಜ್‌ನಿಂದ ಗ್ರಾಹಕರಿಗೆ ಭರ್ಜರಿ ಆಫರ್

ಪಲ್ಸರ್ ಸರಣಿಯಲ್ಲಿ ಭಾರೀ ಬದಲಾವಣೆ!

ಬಜಾಜ್ ಸಂಸ್ಥೆಯು ಮುಂಬರುವ ಡಿಸೆಂಬರ್ ಅಂತ್ಯಕ್ಕೆ ಪಲ್ಸರ್ ಸರಣಿಯ 150 ಪಲ್ಸರ್ ಮೇಲ್ಪಟ್ಟ ಪ್ರತಿ ಬೈಕ್‌ಗಳನ್ನು ಸಹ ಎಬಿಎಸ್‌‌ನೊಂದಿಗೆ ಬಿಡುಗಡೆಗೊಳಿಸಲು ತೀರ್ಮಾನಿಸಿದ್ದು, ಈ ಹಿನ್ನೆಲೆ ಸದ್ಯ ಉತ್ಪಾದನೆಯಾಗಿರುವ ಸ್ಟಾಕ್ ಕರಗಿಸಲು ಗ್ರಾಹಕರಿಗೆ ಆಫರ್ ನೀಡುತ್ತಿದೆ.

ಶುರುವಾಯ್ತು ದಸರಾ, ದೀಪಾವಳಿ ಹಬ್ಬದ ಸಡಗರ- ಬಜಾಜ್‌ನಿಂದ ಗ್ರಾಹಕರಿಗೆ ಭರ್ಜರಿ ಆಫರ್

ಒಟ್ಟಿನಲ್ಲಿ ಬೈಕ್ ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಇದೊಂದು ಉತ್ತಮ ಅವಕಾಶ ಎನ್ನಬಹುದಾಗಿದ್ದು, ಏರಿಕೆಯಾಗುತ್ತಿರುವ ಬೀಡಿಭಾಗಗಳ ಬೆಲೆ ಬಿಸಿಯ ಮಧ್ಯೆಯು ಬಜಾಜ್ ಸಂಸ್ಥೆಯು ಗರಿಷ್ಠ ಮಟ್ಟದ ರಿಯಾಯಿತಿ ನೀಡಿರುವುದು ಉತ್ತಮ ನಿರ್ಧಾರ.

MOST READ: ಟ್ರಾಫಿಕ್ ಪೊಲೀಸ್‍‍ರಿಂದ ತಪ್ಪಿಸಿಕೊಳ್ಳಬಹುದು ಆದ್ರೆ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.!

ಶುರುವಾಯ್ತು ದಸರಾ, ದೀಪಾವಳಿ ಹಬ್ಬದ ಸಡಗರ- ಬಜಾಜ್‌ನಿಂದ ಗ್ರಾಹಕರಿಗೆ ಭರ್ಜರಿ ಆಫರ್

ವಿ.ಸೂಚನೆ: ಬಜಾಜ್ ಬೈಕ್ ಖರೀದಿ ಯೋಜನೆಯಲ್ಲಿರುವ ಗ್ರಾಹಕರು ಈ ಬಗ್ಗೆ ನಿಮ್ಮ ಹತ್ತಿರದ ಅಧಿಕೃತ ಡೀಲರ್ಸ್ ಬಳಿ ಚರ್ಚಿಸಬಹುದಾಗಿದ್ದು, ಮೇಲೆ ನೀಡಲಾಗಿರುವ ಕೆಲವು ಆಫರ್‌ಗಳು ನಗರದಿಂದ ನಗರಕ್ಕೆ ಬದಲಾಗಬಹುದು ಸಾಧ್ಯತೆಗಳಿರುವುದರಿಂದ ಸಂಪೂರ್ಣ ವಿಚಾರಣೆ ಮಾಡಿಯೇ ಮುಂದಿನ ವ್ಯವಹಾರ ಕೈಗೊಳ್ಳುವುದು ಒಳಿತು.

Most Read Articles

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಸಿಗ್ನಲ್ಸ್ ಬೈಕಿನ ಫೋಟೋ ಗ್ಯಾಲರಿ..!

Kannada
Read more on auto news
English summary
Bajaj Introduces Festive Season Offer — Free Insurance, Extended Warranty And More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more