ರಿಯಲ್ ಡಿಸ್ಕ್ ಬ್ರೇಕ್ ಪ್ರೇರಿತ ಪಲ್ಸರ್ ಎನ್ಎಸ್ 160 ಬೈಕ್ ಬಿಡುಗಡೆ

By Praveen Sannamani

ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾದ ಬಜಾಜ್ ಆಟೋ ಸಂಸ್ಥೆಯು 2017ರಲ್ಲಿ ತಮ್ಮ ಪಲ್ಸರ್ ಎನ್ಎಸ್ 160 ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಇದೀಗ ಸಂಸ್ಥೆಯು ಈ ಬೈಕ್‍‍ಗೆ ಹೆಚ್ಚಿನ ಸುರಕ್ಷಾ ಸೌಲಭ್ಯಗಳನ್ನ ಒದಗಿಸಿದ್ದು, ಹಿಂಭಾಗದ ಚಕ್ರಗಳಿಗೂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿ ಮಾರಾಟಕ್ಕೆ ಚಾಲನೆ ನೀಡಿದೆ.

ರಿಯಲ್ ಡಿಸ್ಕ್ ಬ್ರೇಕ್ ಪ್ರೇರಿತ ಪಲ್ಸರ್ ಎನ್ಎಸ್ 160 ಬೈಕ್ ಬಿಡುಗಡೆ

ಬಜಾಜ್ ಪಲ್ಸರ್ ಎನ್ಎಸ್ 160 ಬೈಕ್ ಬಿಡುಗಡೆಗೊಂಡಾಗ ಮುಂಭಾಗ ಚಕ್ರಗಳಿಗೆ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರಗಳಿಗೆ ಡ್ರಮ್ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವದಿಸಲಾಗಿತ್ತು. ಆದರೇ ಇದೀಗ ಹೊಸ ಬೈಕ್ ಹಿಂಭಾಗದ ಚಕ್ರಗಳಿಗಳಿಗೂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದ್ದು, ಹೊಸ ಬೈಕಿನ ಬೆಲೆಯನ್ನ ಪುಣೆ ಎಕ್ಸ್‌ಶೋರಂ ಪ್ರಕಾರ ರೂ.82,630 ಬೆಲೆ ಹೊಂದಿದೆ. ಇದು ಸಾಮಾನ್ಯ ಬೈಕ್‌ಗಳಿಂತ 2 ಸಾವಿರ ಹೆಚ್ಚುವರಿ ಬೆಲೆ ಪಡೆದುಕೊಂಡಿದೆ.

ರಿಯಲ್ ಡಿಸ್ಕ್ ಬ್ರೇಕ್ ಪ್ರೇರಿತ ಪಲ್ಸರ್ ಎನ್ಎಸ್ 160 ಬೈಕ್ ಬಿಡುಗಡೆ

ಇನ್ನು ಹೊಸ ಬಜಾಜ್ ಪಲ್ಸರ್ ಎನ್ಎಸ್ 160 ರಿಯರ್ ಡಿಸ್ಕ್ ಬ್ರೇಕ್ ವೇರಿಯಂಟ್‍ ಬೈಕ್‍ಗಳು ಈಗಾಗಲೇ ಡೀಲರ್‍‍ಗಳ ಯಾರ್ಡ್ ಅನ್ನು ತಲುಪಿದ್ದು, ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿರುವ ಸುಜುಕಿ ಜಿಕ್ಸರ್, ಯಮಹಾ ಎಫ್‍ಜೆಡ್ ಮತ್ತು ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್‍‍ಗಳಿಗೆ ಇದು ಪೈಪೋಟಿ ನೀಡಲಿದೆ.

ರಿಯಲ್ ಡಿಸ್ಕ್ ಬ್ರೇಕ್ ಪ್ರೇರಿತ ಪಲ್ಸರ್ ಎನ್ಎಸ್ 160 ಬೈಕ್ ಬಿಡುಗಡೆ

ಬಜಾಜ್ ಪಲ್ಸರ್ ಎನ್ಎಸ್ 160 ಬೈಕ್ ಕಡಿಮೆ ಬೆಲೆಯಲ್ಲಿ ಸ್ಪೋರ್ಟಿ ಬೈಕ್ ಅನ್ನು ಖರೀದಿಸಲು ಇಚ್ಛಿಸುವ ಗ್ರಾಹಕರಿಗಾಗಿಯೇ ವಿನ್ಯಾಸಗೊಳಿಸಲಾಗಿದ್ದು, ಪ್ರಸ್ತುತ ಈ ಬೈಕಿನ ಬೇಸ್ ವೇರಿಯಂಟ್‍‍ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.80,500ಕ್ಕೆ ಮಾರಾಟಗೊಳ್ಳುತ್ತಿವೆ.

ರಿಯಲ್ ಡಿಸ್ಕ್ ಬ್ರೇಕ್ ಪ್ರೇರಿತ ಪಲ್ಸರ್ ಎನ್ಎಸ್ 160 ಬೈಕ್ ಬಿಡುಗಡೆ

ಹೀಗಾಗಿ ಡಿಸ್ಕ್ ಬ್ರೇಕ್ ಪಡೆದ ಪಲ್ಸರ್ ಎನ್ಎಸ್ 160 ಬೈಕ್‍‍ಗಳು ಸಾಧಾರಣ ಬೈಕ್‍ಗಿಂತ ಸುಮಾರು ರೂ. 2,000 ಹೆಚ್ಚುವರಿ ಬೆಲೆ ಹೊಂದಿದ್ದು, ಈ ಬೈಕ್ ತನ್ನ ಇತರೇ ಪಲ್ಸರ್ ಬೈಕ್‍‍ಗಳಂತೆಯೇ ಡ್ಯುಯಲ್ ಟೋನ್ ಬಣ್ಣವನ್ನು ಪಡೆದುಕೊಂಡಿದೆ.

ರಿಯಲ್ ಡಿಸ್ಕ್ ಬ್ರೇಕ್ ಪ್ರೇರಿತ ಪಲ್ಸರ್ ಎನ್ಎಸ್ 160 ಬೈಕ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಪಲ್ಸರ್ ಎಸ್‍ಎಸ್ 160 ಬೈಕ್‍‍ಗಳು ಕೇವಲ ಸುರಕ್ಷಾ ವೈಶಿಷ್ಟ್ಯತೆಯನ್ನು ಹೊರತು ಪಡಿಸಿ ಬೇರೆ ಯಾವುದೇ ಬದಲಾವಣೆಗಳನ್ನು ಪಡೆದಿರುವುದಿಲ್ಲ. ಈ ಬೈಕ್‍ನಲ್ಲಿ 160-ಸಿಸಿ ಆಯಿಲ್ ಕೂಲ್ಡ್ ಎಂಜಿನ್ ಸಹಾಯದಿಂದ 15.5 ಬಿಹೆಚ್‍‍ಪಿ ಮತು 14.6 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ರಿಯಲ್ ಡಿಸ್ಕ್ ಬ್ರೇಕ್ ಪ್ರೇರಿತ ಪಲ್ಸರ್ ಎನ್ಎಸ್ 160 ಬೈಕ್ ಬಿಡುಗಡೆ

ಬಜಾಜ್ ಪಲ್ಸರ್ ಎನ್ಎಸ್ 160 ಬೈಕ್ 2012-ಎಂಎಂ ಉದ್ದ, 804-ಎಂಎಂ ಎತ್ತರ, 1060ಎಂಎಂ ಅಗಲವನ್ನು ಪಡೆದುಕೊಂಡಿದ್ದು, 176ಎಂಎಂ ನಷ್ಟು ಗ್ರೌಂಡ್ ಕ್ಲಿಯರೆನ್ಸ್ ಮತ್ತು 142 ಕಿಲೋ ಗ್ರಾಂನ ತೂಕವನ್ನು ಪಡೆದುಕೊಂಡಿವೆ.

ರಿಯಲ್ ಡಿಸ್ಕ್ ಬ್ರೇಕ್ ಪ್ರೇರಿತ ಪಲ್ಸರ್ ಎನ್ಎಸ್ 160 ಬೈಕ್ ಬಿಡುಗಡೆ

ಇನ್ನು ಬೈಕಿನ ಸಸ್ಷೆಷನ್ ವಿಚಾರಕ್ಕೆ ಬಂದಲ್ಲಿ, ಪಲ್ಸರ್ ಎನ್ಎಸ್ 160 ಬೈಕಿನ ಮುಂಭಾಗದಲ್ಲಿ 130ಎಂಎಂ ಟೆಲಿಸ್ಕೋಪಿಕ್ ಫೋರ್ಕ್ಸ್, ಹಿಂಭಾಗದಲ್ಲಿ 120ಎಂಎಂ ಮೊನೋಶಾರ್ಕ್ ಸಸ್ಫೆಷನ್ ಅನ್ನು ಪಡೆದುಕೊಂಡಿದೆ. ಹಾಗೂ 12 ಲೀಟರ್‍ ಸಾಮರ್ಥ್ಯದ ಫ್ಯುಯಲ್ ಟ್ಯಾಂಕ್ ಮತ್ತು ಪ್ರತೀ ಲೀಟರ್‍‍‍ಗೆ 45 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.

ಬಜಜ್ ಪಲ್ಸರ್ ಎನ್ಎಸ್ 160 ರಿಯರ್ ಡಿಸ್ಕ್ ಬ್ರೇಕ್ ಹೊಂದಿರುವ ಬೈಕ್ ಇಲ್ಲಿದೆ ನೋಡಿ..

More from DriveSpark

Article Published On: Tuesday, August 14, 2018, 20:57 [IST]
English summary
Bajaj Pulsar NS160 Now Available With Rear Disc Brakes; Priced At Rs 82,630.
Read more on pulsar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+