ಭಾರತಕ್ಕೂ ಬರಲಿದೆ ಬಜಾಜ್ ವಿನೂತನ ಪಲ್ಸರ್ 250 ಬೈಕ್..!!

Written By: Rahul TS

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಬಜಾಜ್ ಆಟೋ ಮುಂದಿನ ತಲೆಮಾರಿನ ಬಿಎಸ್ 5 ಎಮಿಷನ್ ಆಧಾರಿತ ಪಲ್ಸರ್ ಬೈಕ್‍ಗಳನ್ನು ತಯಾರಿಸುತ್ತಿದ್ದು, ಈ ನಿಟ್ಟಿನಲ್ಲಿ ಪಲ್ಸರ್ 250 ಬೈಕ್ ಅನ್ನು ಸಹ ಹೊಸ ವಿನ್ಯಾಸ ಹಾಗೂ ಗುರುತರ ಬದಲಾವಣೆಗಳೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಭಾರತಕ್ಕೂ ಬರಲಿದೆ ಬಜಾಜ್ ವಿನೂತನ ಪಲ್ಸರ್ 250 ಬೈಕ್..!!

ಮಾಹಿತಿಗಳ ಪ್ರಕಾರ ಬಜಾಜ್ ಆಟೋ ಸಂಸ್ಥೆಯು ಹೊಸ ಎಂಜಿನ್ ಪ್ಲಾಟ್‍‍ಫಾರ್ಮ್‍ನ ಕಡೆ ಗಮನಹರಿಸಿದ್ದು, ಯುಜಿ6 ಪಲ್ಸರ್ ಸಿರೀಸ್ ಬೈಕ್‍‍ಗಳನ್ನು 150ಸಿಸಿ ಇಂದ 250ಸಿಸಿ ವರೆಗೂ ಎಂಜಿನ್ ಸಾಮರ್ಥ್ಯವನ್ನು ಪಡೆದುಕೊಳ್ಳಲಿದೆ.

ಭಾರತಕ್ಕೂ ಬರಲಿದೆ ಬಜಾಜ್ ವಿನೂತನ ಪಲ್ಸರ್ 250 ಬೈಕ್..!!

ಈಗಾಗಲೇ ಬಜಾಜ್ ಸಂಸ್ಥೆಯು 220ಸಿಸಿ ಪಲ್ಸರ್ ಬೈಕ್ ಅನ್ನು ರೀಟೆಲ್‌ನಲ್ಲಿ ಮಾರಾಟ ಮಾಡುತ್ತಿದ್ದು, ಪಲ್ಸರ್ 250 ಸೇರ್ಪಡೆಯೊಂದಿಗೆ ಕ್ವಾರ್ಟರ್ ಲೀಟರ್ ಸೆಗ್ಮೆಂಟ್‍ನಲ್ಲಿ ಜನಪ್ರಿಯತೆಯನ್ನು ಪಡೆಯಲಿದೆ ಎನ್ನಲಾಗಿದೆ.

ಭಾರತಕ್ಕೂ ಬರಲಿದೆ ಬಜಾಜ್ ವಿನೂತನ ಪಲ್ಸರ್ 250 ಬೈಕ್..!!

ಪ್ರಸ್ತುತ ಬಜಾಜ್ ಪಲ್ಸರ್ ಸರಣಿಯ ಬೈಕುಗಳಲ್ಲಿ ವಿಭಿನ್ನ ಖರೀದಿದಾರರನ್ನು ಆಕರ್ಷಿಸುವಂತಹ ವಿವಿಧ ರೂಪಾಂತರಗಳನ್ನು ಒದಗಿಸುತ್ತಿದ್ದು, ಬಜಾಜ್ ಪಲ್ಸರ್ 135, 150, 180 ಮತ್ತು 220 ಮತ್ತು ಹೊಸ ಪಲ್ಸರ್ ಆರ್‍ಎಸ್ 200, ಎನ್ಎಸ್ 200 ಮತ್ತು ಎನ್ಎಸ್ 160 ಬಿಡುಗಡೆಗೊಳಿಸಿವೆ.

ಭಾರತಕ್ಕೂ ಬರಲಿದೆ ಬಜಾಜ್ ವಿನೂತನ ಪಲ್ಸರ್ 250 ಬೈಕ್..!!

ಕಳೆದ ಬಾರಿ ನಾವು ಮಾಹಿತಿ ನೀಡಿದಂತೆ ಕಡಿಮೆ ಮಟ್ಟದ ಮಾರಾಟ ಹೊಂದಿರುವ ಪಲ್ಸರ್ 135 ಬೈಕ್ ಅನ್ನು ಬಜಾಜ್ ಸಂಸ್ಥೆಯು ಸ್ಥಗಿತಗೊಳಿಸಿದ್ದು, 2018ರಲ್ಲಿ ಹೊಸ ವೈಶಿಷ್ಟ್ಯತೆಗಳೊಂದಿಗೆ ಗ್ರಾಹಕರನ್ನು ಸೆಳೆಯಲು ಬರಲಿದೆ ಎಂದು ಹೇಳಲಾಗಿದೆ.

ಭಾರತಕ್ಕೂ ಬರಲಿದೆ ಬಜಾಜ್ ವಿನೂತನ ಪಲ್ಸರ್ 250 ಬೈಕ್..!!

ಹೊಸ ತಲೆಮಾರಿನ ಪಲ್ಸರ್ 250 ಬೈಕ್ ಗ್ರಾಹಕರ ನಿರೀಕ್ಷೆಯಂತೆ ವೈಶಿಷ್ಟ್ಯತೆಗಳನ್ನು ಹೊಂದಿರಲಿದ್ದು, ಎಬಿಎಸ್ ತಂತ್ರಜ್ಞಾನವನ್ನು ಕೂಡಾ ಅಳವಡಿಸಲಾಗುತ್ತಿದೆಯಂತೆ. ಇದಲ್ಲದೆ ಫ್ಯುಯಲ್ ಇಂಜೆಕ್ಟೆಡ್ ಸಿಸ್ಟಂ ಹಾಗು ಲಿಕ್ವಿಡ್ ಕೂಲ್ಡ್ ಅನ್ನು ಹೊಂದಿರಲಿದ್ದು, ಹೊಸ ಆಕ್ರಮಣಕಾರಿ ವಿನ್ಯಾಸವನ್ನು ಪಡೆದಿರಲಿದೆ.

ಭಾರತಕ್ಕೂ ಬರಲಿದೆ ಬಜಾಜ್ ವಿನೂತನ ಪಲ್ಸರ್ 250 ಬೈಕ್..!!

ಹೊಸ ಯುಜಿ6 ಎಂಜಿನ್ ಆಧಾರಿತ ಪಲ್ಸರ್ ಬೈಕ್‍‍ಗಳನ್ನು ಬಜಾಜ್ ಸಂಸ್ಥೆಯು 2019ರ ಅವಧಿಗೆ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದ್ದು, ಪಲ್ಸರ್ 250 ಬೈಕ್ ಅನ್ನು ಕೂಡ ಇದೇ ಅವಧಿಯಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ಭಾರತಕ್ಕೂ ಬರಲಿದೆ ಬಜಾಜ್ ವಿನೂತನ ಪಲ್ಸರ್ 250 ಬೈಕ್..!!

ಮಾರುಕಟ್ಟೆಗೆ ಪಲ್ಸರ್ 250 ಬೈಕ್ ಬಿಡುಗಡೆಯ ನಂತರ ಬಜಾಜ್ ಸಂಸ್ಥೆಯು ಪಲ್ಸರ್ 220 ಬೈಕ್‍‍ಗಳನ್ನು ಸ್ಥಗಿತಗೊಳಿಸುವ ಅವಕಾಶಗಳಿದ್ದು, ಹೊಸದಾಗಿ ಬಿಡಗಡೆಗೊಳ್ಳಲಿರುವ ಪಲ್ಸರ್ 250 ಬೈಕ್‍‍ಗಳು ಕೆಟಿಎಂ ಡ್ಯೂಕ್ 250 ಹಾಗೂ ಯಮಹಾ ಎಫ್‍ಜೆಡ್25 ಬೈಕುಗಳಿಗೆ ತೀವ್ರ ಪೈಪೋಟಿಯನ್ನು ನೀಡಲಿದೆ.

ಭಾರತಕ್ಕೂ ಬರಲಿದೆ ಬಜಾಜ್ ವಿನೂತನ ಪಲ್ಸರ್ 250 ಬೈಕ್..!!

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಅವೆಂಜರ್ 150 ಬೈಕ್ ಮಾರಾಟವನ್ನು ಸ್ಥಗಿತಗೊಳಿಸಿದ ಬಜಾಜ್..

ಇನ್ಮುಂದೆ ಬಜಾಜ್ ಪಲ್ಸರ್ ಎಲ್ಎಸ್135 ಬೈಕ್ ಖರೀದಿಗೆ ಸಿಗೋದಿಲ್ವಂತೆ..!!

ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..

ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

Read more on bajaj pulsar
English summary
Bajaj Pulsar 250 In The Works — Launch Details Revealed.
Story first published: Wednesday, April 11, 2018, 10:17 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark