ಬರೋಬ್ಬರಿ 1 ಕೋಟಿ ಪಲ್ಸರ್ ಬೈಕ್‌ಗಳನ್ನು ಮಾರಾಟ ಮಾಡಿದ ಬಜಾಜ್

By Praveen Sannamani

ಭಾರತದಲ್ಲಿ ಪಲ್ಸರ್ ಬೈಕ್‍ಗಳಿಗೆ ಇರುವಷ್ಟು ಬೇಡಿಕೆಯನ್ನು ಮತ್ತೊಂದು ಬೈಕ್ ಗಿಟ್ಟಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನಬಹುದು. ಇದಕ್ಕೆ ಕಾರಣ 2001ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ಪಲ್ಸರ್ ಬ್ರಾಂಡ್ ಈ ತನಕವೂ ಯುವ ಸಮುದಾಯ ಹಾಟ್ ಫೆವರಿಟ್ ಅನ್ನೊದ್ರಲ್ಲಿ ಯಾವುದೇ ಅನುಮಾನವಿಲ್ಲ.

ಬರೋಬ್ಬರಿ 1 ಕೋಟಿ ಪಲ್ಸರ್ ಬೈಕ್‌ಗಳನ್ನು ಮಾರಾಟ ಮಾಡಿದ ಬಜಾಜ್

ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಹಿರೋ ಜೊತೆಗೆ ತೀವ್ರ ಪೈಪೋಟಿ ನಡೆಸುತ್ತಿರುವ ಬಜಾಜ್ ಆಟೋ ಸಂಸ್ಥೆಯು ಅಗ್ಗದ ಬೆಲೆಯ ಪಲ್ಸರ್ ಸರಣಿಯ ಜೊತೆ ಜೊತೆಗೆ ಕಮ್ಯೂಟರ್ ಪಲ್ಸರ್ ಸರಣಿಗಳನ್ನು ಮಾರಾಟ ಮಾಡುತ್ತಿದ್ದು, ಎಲ್ಲಾ ವರ್ಗದ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹೀಗಾಗಿಯೇ 17 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 1 ಕೋಟಿ ಪಲ್ಸರ್ ಸರಣಿ ಬೈಕ್‌ಗಳನ್ನು ಮಾರಾಟ ಮಾಡಿರುವುದಲ್ಲದೇ ಒಂದೇ ಸರಣಿಯಲ್ಲಿ ಅತಿ ಹೆಚ್ಚು ಮಾರಾಟವಾದ ಬೈಕ್ ಬ್ರಾಂಡ್ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.

ಬರೋಬ್ಬರಿ 1 ಕೋಟಿ ಪಲ್ಸರ್ ಬೈಕ್‌ಗಳನ್ನು ಮಾರಾಟ ಮಾಡಿದ ಬಜಾಜ್

ಬಜಾಜ್ ಆಟೋ ಸಂಸ್ಥೆಯು ಅಗ್ಗದ ಬೆಲೆಯ ಪಲ್ಸರ್ ವಿಜ್ ಸೇರಿದಂತೆ ಮಧ್ಯಮ ಗಾತ್ರದ ಪಲ್ಸರ್ 135 ಎಲ್ಎಸ್ ಮತ್ತು ಪರ್ಫಾಮೆನ್ಸ್ ಮಾದರಿಗಳಾದ ಪಲ್ಸರ್ 150, ಪಲ್ಸರ್ 180, ಪಲ್ಸರ್ 220, ಪಲ್ಸರ್ ಎನ್ಎಸ್ 160, ಎನ್ಎಸ್ 200 ಮತ್ತು ಆರ್‌ಎಸ್ 200 ಬೈಕ್‌‌ಗಳನ್ನು ಮಾರಾಟ ಮಾಡುತ್ತಿದೆ.

ಬರೋಬ್ಬರಿ 1 ಕೋಟಿ ಪಲ್ಸರ್ ಬೈಕ್‌ಗಳನ್ನು ಮಾರಾಟ ಮಾಡಿದ ಬಜಾಜ್

ಇವುಗಳಲ್ಲಿ ಪಲ್ಸರ್ 135 ಮತ್ತು ಪಲ್ಸರ್ 150 ಬೈಕ್‌ಗಳಿಗೆ ಭಾರೀ ಬೇಡಿಕೆಯಿದ್ದು, ಪಲ್ಸರ್ ಎನ್ಎಸ್ 160 ಮತ್ತು ಪಲ್ಸರ್ 180 ಬೈಕ್‌ಗಳು ಸಹ ಮಧ್ಯಮ ವರ್ಗದ ಗ್ರಾಹಕ ನೆಚ್ಚಿನ ಬೈಕ್ ಮಾದರಿಗಳಾಗಿವೆ. ಜೊತೆಗೆ ದುಬಾರಿ ಬೈಕ್ ಮಾದರಿಗಳಾದ ಎನ್ಎಸ್ 200 ಮತ್ತು ಆರ್‌ಎಸ್ 200 ಬೈಕ್‌ಗಳು ಸಹ ಬೇಡಿಕೆಯಲ್ಲಿ ಹಿಂದೆ ಬಿದ್ದಿಲ್ಲ.

ಬರೋಬ್ಬರಿ 1 ಕೋಟಿ ಪಲ್ಸರ್ ಬೈಕ್‌ಗಳನ್ನು ಮಾರಾಟ ಮಾಡಿದ ಬಜಾಜ್

ಇದಕ್ಕೆ ಇನ್ನೊಂದು ಸ್ಪಷ್ಟ ಉದಾಹರಣೆ ಅಂದ್ರೆ, ಕಳೆದ ತಿಂಗಳು ಜೂನ್ ಅವಧಿಯಲ್ಲಿ ಬರೋಬ್ಬರಿ 70 ಸಾವಿರ ಪಲ್ಸರ್‌ ಬೈಕ್‌ಗಳು ಮಾರಾಟವಾಗಿವೆ ಅಂದ್ರೆ ನೀವು ನಂಬಲೇಬೇಕು. ಈ ಮೂಲಕ ಬಜಾಜ್ ಸಂಸ್ಥೆಯು ಪಲ್ಸರ್ ಸರಣಿಗಳ ಮಾರಾಟದಲ್ಲಿ 1 ಕೋಟಿ ಮೈಲಿಗಲ್ಲು ಸಾಧಿಸಿದ್ದು, ಇದು ಮುಂಬರುವ ದಿನಗಳಲ್ಲಿ ಮತ್ತಷ್ಟು ದಾಖಲೆಗಳಿಗೆ ಕಾರಣವಾಗಲಿದೆ.

ಬರೋಬ್ಬರಿ 1 ಕೋಟಿ ಪಲ್ಸರ್ ಬೈಕ್‌ಗಳನ್ನು ಮಾರಾಟ ಮಾಡಿದ ಬಜಾಜ್

ಪಲ್ಸರ್ ಬೈಕ್ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು

ವಿಶಿಷ್ಟ ವಿನ್ಯಾಸ, ಆಕರ್ಷಕ ನೋಟದಿಂದಲೇ ಎಲ್ಲರನ್ನು ಸೆಳೆದುಕೊಂಡಿರುವ ಪಲ್ಸರ್ ಬೈಕ್ ಉತ್ಪನ್ನಗಳು ಗ್ರಾಹಕರಲ್ಲಿ ಕುತೂಹಲ ಹುಟ್ಟುಹಾಕಿರುವುದಲ್ಲದೇ ಬೈಕ್ ಮಾರಾಟದಲ್ಲೂ ಮುಂಚೂಣಿ ಸಾಧಿಸಿರುವುದು ಅವಗಳ ಜನಪ್ರಿಯತೆಗೆ ಹಿಡಿದ ಕೈಗನ್ನಡಿ ಎನ್ನಬಹುದು.

ಬರೋಬ್ಬರಿ 1 ಕೋಟಿ ಪಲ್ಸರ್ ಬೈಕ್‌ಗಳನ್ನು ಮಾರಾಟ ಮಾಡಿದ ಬಜಾಜ್

ಹತ್ತು ಹಲವು ವೈಶಿಷ್ಟ್ಯತೆಯನ್ನು ಹೊಂದಿರುವ ಜನಪ್ರಿಯ ಬ್ರ್ಯಾಂಡ್ ಪಲ್ಸರ್ ಬೈಕ್‌ಗಳು ಟೊಕಿಯೊದ ಆರ್ & ಡಿ ಸಹಯೋಗದೊಂದಿಗೆ ಬಜಾಜ್ ಆಟೊ ಸಂಸ್ಥೆಯ ಎಂಜಿನಿಯರಿಂಗ್ ವಿಭಾಗವು ಈ ದ್ವಿಚಕ್ರ ವಾಹನಗಳನ್ನು ಅಭಿವೃದ್ಧಿಪಡಿಸಿದ್ದು, ಪಲ್ಸರ್ ಮೋಟಾರ್ ಸೈಕಲ್‌ಗಳು ಜನಪ್ರಿಯತೆ ಹಿಂದೆ ಹಲವಾರು ಇಂಟ್ರಸ್ಟಿಂಗ್ ಸ್ಪೋರಿಗಳಿವೆ.

ಬರೋಬ್ಬರಿ 1 ಕೋಟಿ ಪಲ್ಸರ್ ಬೈಕ್‌ಗಳನ್ನು ಮಾರಾಟ ಮಾಡಿದ ಬಜಾಜ್

ತನ್ನ ವ್ಯಾಪಕ ಶ್ರೇಣಿಯನ್ನು ಹೊಂದಿರುವುದೇ ಪಲ್ಸರ್ ಬ್ರ್ಯಾಂಡ್‌ಗೆ ಪ್ಲಸ್ ಪಾಯಿಂಟ್ ಎನ್ನಬಹುದು. ಕಡಿಮೆ ಬಜೆಟ್‌‌ನಿಂದ ಹಿಡಿದು ಬಿಗ್ ಬಜೆಟ್‌ವರೆಗೆ ಪಲ್ಸರ್ ಬೈಕ್‌ಗಳು ಲಭ್ಯವಿದ್ದು, ನಿಮಗೆ ಬೇಕಾದ ರೂಪಾಂತರವನ್ನು ಆಯ್ದುಕೊಳ್ಳಬಹುದಾಗಿದೆ.

ಬರೋಬ್ಬರಿ 1 ಕೋಟಿ ಪಲ್ಸರ್ ಬೈಕ್‌ಗಳನ್ನು ಮಾರಾಟ ಮಾಡಿದ ಬಜಾಜ್

ಪಲ್ಸರ್ 135 ಎಲ್ಎಸ್ ನಿಂದ ಹಿಡಿದು ಪಲ್ಸರ್ ಆರ್‍ಎಸ್ 200ವರೆಗೆ ಪಲ್ಸರ್ ಬೈಕ್ ನಿಮಗೆ ಸೇವೆ ಒದಗಿಸಲಿದೆ. ಕಡಿಮೆ ಬಜೆಟ್‌ನಲ್ಲಿ ಹೆಚ್ಚು ಮೈಲೇಜ್ ನೀಡುವ ಮತ್ತು ವಿಶಿಷ್ಟ ಶೈಲಿಯ ಬೈಕ್ ಬೇಕೆಂದರೆ ಪಲ್ಸರ್ 135 ಎಲ್ಎಸ್ ಬೈಕ್ ಕೊಳ್ಳಲು ಗ್ರಾಹಕರಿಗೆ ಅವಕಾಶವಿದೆ.

ಬರೋಬ್ಬರಿ 1 ಕೋಟಿ ಪಲ್ಸರ್ ಬೈಕ್‌ಗಳನ್ನು ಮಾರಾಟ ಮಾಡಿದ ಬಜಾಜ್

ಅದೇ ರೀತಿ, ಮಧ್ಯಮ ವರ್ಗದ ಗ್ರಾಹಕರು ಪಲ್ಸರ್ 150 ಅಥವಾ 180ರ ಆವೃತಿಯನ್ನು ಆಯ್ಕೆ ಮಾಡುತ್ತಾರೆ ಹಾಗೂ ಬಲಿಷ್ಠ ಎಂಜಿನ್, ಅತ್ಯಾಕರ್ಷಕ ವಿನ್ಯಾಸ ಮತ್ತು ಮೈಲೇಜ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಇರುವವರು ಉನ್ನತ ಆವೃತಿಯ ಬೈಕ್ ಅನ್ನು ಆಯ್ಕೆ ಮಾಡಬಹುದಾಗಿದೆ.

ಬರೋಬ್ಬರಿ 1 ಕೋಟಿ ಪಲ್ಸರ್ ಬೈಕ್‌ಗಳನ್ನು ಮಾರಾಟ ಮಾಡಿದ ಬಜಾಜ್

ಬಜಾಜ್ ಪಲ್ಸರ್ ಶ್ರೇಣಿಯ ವೈಶಿಷ್ಟ್ಯತೆಗಳ ಪಟ್ಟಿ ಬಹಳಷ್ಟಿವೆ ಎನ್ನಬಹುದು. ಎಲ್ಲಾ ಪಲ್ಸರ್ ಮಾದರಿಗಳಲ್ಲೂ ಮುಂಭಾಗದ ಡಿಸ್ಕ್ ಬ್ರೇಕ್, ಟ್ಯೂಬ್‌ಲೆಸ್ ಟೈರುಗಳು, ಎಂಜಿನ್ ಕಿಕ್ ಸ್ವಿಚ್ ಮತ್ತು ಅಲಾಯ್ ಚಕ್ರಗಳನ್ನು ನೋಡಹುದಾಗಿದೆ.

ಬರೋಬ್ಬರಿ 1 ಕೋಟಿ ಪಲ್ಸರ್ ಬೈಕ್‌ಗಳನ್ನು ಮಾರಾಟ ಮಾಡಿದ ಬಜಾಜ್

ಸ್ವಯಂಚಾಲಿತ ತಿರುವಿನ ಸೂಚಕಗಳು, ಪ್ರೊಜೆಕ್ಟರ್ ಹೆಡ್ ಲ್ಯಾಂಪ್‌ಗಳು ಮತ್ತು ಆಯಿಲ್ ಕೂಲರ್ ಹೊಂದಿವೆ. ಹೆಚ್ಚು ವೈಶಿಷ್ಟ್ಯತೆಗಳ ದೀರ್ಘ ಪಟ್ಟಿಯನ್ನು ಪಡೆದುಕೊಂಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಪಲ್ಸರ್ ಬ್ರಾಂಡ್ ಯುವ ರೈಡರ್‍‍ಗಳ ಹಾಟ್ ಫೆವರಿಟ್.

ಬರೋಬ್ಬರಿ 1 ಕೋಟಿ ಪಲ್ಸರ್ ಬೈಕ್‌ಗಳನ್ನು ಮಾರಾಟ ಮಾಡಿದ ಬಜಾಜ್

ಕೊಟ್ಟ ಹಣಕ್ಕೆ ಮೋಸ ಇಲ್ಲ

ಭಾರತವು 'ಬೆಲೆ ಸೂಕ್ಷ್ಮ' ಮಾರುಕಟ್ಟೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಕೈಗೆಟುಕುವ ಬೆಲೆಯ ವಾಹನಗಳ ಬಗ್ಗೆ ಮಾತ್ರ ನಾವು ಹೆಚ್ಚು ಗಮನ ಹರಿಸುತ್ತೇವೆ ಎನ್ನುವುದು ಸತ್ಯ ಸಂಗತಿ.

ಬರೋಬ್ಬರಿ 1 ಕೋಟಿ ಪಲ್ಸರ್ ಬೈಕ್‌ಗಳನ್ನು ಮಾರಾಟ ಮಾಡಿದ ಬಜಾಜ್

ಎಲ್ಲಾ ಪಲ್ಸರ್ ಬ್ರ್ಯಾಂಡಿನ ಮೋಟಾರ್ ಸೈಕಲ್‌ಗಳೂ ಸಹ ಉತ್ತಮ ಶಕ್ತಿ, ಉತ್ತಮ ನೋಟ ಮತ್ತು ವೈಶಿಷ್ಟ್ಯತೆವನ್ನು ಪಡೆದುಕೊಂಡಿದ್ದು, ಕೊಟ್ಟ ಹಣಕ್ಕೆ ಯೋಗ್ಯವಾದ ಸೇವೆ ನೀಡಲಿದೆ ಎನ್ನುವುದು ಪಲ್ಸರ್ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಬರೋಬ್ಬರಿ 1 ಕೋಟಿ ಪಲ್ಸರ್ ಬೈಕ್‌ಗಳನ್ನು ಮಾರಾಟ ಮಾಡಿದ ಬಜಾಜ್

2001ರಲ್ಲಿ ಬಿಡುಗಡೆಯಾದ ನಂತರ ಹೊಸ ತಂತ್ರಜ್ಞಾನ ಮತ್ತು ವಿನ್ಯಾಸವನ್ನು ಪಲ್ಸರ್ ಬೈಕ್‌ನಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆ ತರಲಾಗುತ್ತಿದ್ದು, ಹೊಸ ಬಣ್ಣದ ಯೋಜನೆಗಳೊಂದಿಗೆ ಉತ್ಪನ್ನಗಳನ್ನು ಶ್ರೀಮಂತಗೊಳಿಸುತ್ತಿರುವುದು ಈ ಬೈಕಿನ ಖ್ಯಾತಿಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತಿದೆ.

ಬರೋಬ್ಬರಿ 1 ಕೋಟಿ ಪಲ್ಸರ್ ಬೈಕ್‌ಗಳನ್ನು ಮಾರಾಟ ಮಾಡಿದ ಬಜಾಜ್

ಬಜಾಜ್ ಬಿಡಿ ಭಾಗಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದ್ದು, ಬಿಡಿ ಭಾಗಗಳೂ ಸಹ ಬಹಳ ದುಬಾರಿ ಆಗಿರುವುದಿಲ್ಲ. ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೂ ಸಹ ಸುಲಭವಾಗಿ ಲಭ್ಯವಾಗುವಂತಹ ನಿರ್ವಹಣೆಯನ್ನು ಪಲ್ಸರ್ ಬೈಕ್ ಪಡೆದುಕೊಂಡಿದೆ.

ಬರೋಬ್ಬರಿ 1 ಕೋಟಿ ಪಲ್ಸರ್ ಬೈಕ್‌ಗಳನ್ನು ಮಾರಾಟ ಮಾಡಿದ ಬಜಾಜ್

ಈ ಎಲ್ಲಾ ವಿಶೇಷತೆಗಳಿಂದಾಗಿಯೇ ಭಾರತೀಯ ಮಾರುಕಟ್ಟೆಯಲ್ಲಿ ಈಗಲೂ ಸಹ ಹಾಟ್ ಕೇಕ್‌ನಂತೆ ಮಾರಾಟವಾಗುತ್ತಿರುವ ಪಲ್ಸರ್ ಬೈಕ್‌ಗಳು ಮುಂಬರುವ ದಿನಗಳಲ್ಲಿ ಮತ್ತಷ್ಟು ಬಲಿಷ್ಠತೆ, ವಿನ್ಯಾಸ ಹಾಗು ಗ್ರಾಹಕ ಸ್ನೇಹಿ ವಿಶೇಷತೆಗಳನ್ನು ಪಡೆದುಕೊಳ್ಳಲಿರುವುದಂತೂ ಶತಸಿದ್ಧ.

Article Published On: Monday, July 2, 2018, 14:49 [IST]
English summary
Pulsar bikes reached 10 million homes in india: Bajaj auto ltd released new tvc to celebrate.
Read more on pulsar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+