ಡುಕಾಟಿ ಮಲ್ಟಿಸ್ಟ್ರಾಡ 950 ಬೈಕ್ ಕೊಳ್ಳುವವರಿಗೆ ವಿಶೇಷ ಆಫರ್..!!
ಡುಕಾಟಿ ಇಂಡಿಯಾ ತಮ್ಮ ಮಲ್ಟಿಸ್ಟ್ರಾಡ 950 ಅಡ್ವೆಂಚರ್ ಬೈಕ್ ಕೊಳ್ಳುವವರಿಗೆ ವಿಶೇಷವಾದ ಆಫರ್ ನೀಡುತಿದ್ದು, ಈ ಆಫರ್ ಸೀಮಿತ ಅವದಿಗೆ ಮಾತ್ರ ಅನ್ವಯವಾಗಲಿದೆ.
ಡುಕಾಟಿ ಇಂಡಿಯಾ ತಮ್ಮ ಮಲ್ಟಿಸ್ಟ್ರಾಡ 950 ಅಡ್ವೆಂಚರ್ ಬೈಕ್ ಕೊಳ್ಳುವವರಿಗೆ ವಿಶೇಷವಾದ ಆಫರ್ ನೀಡುತಿದ್ದು, ಈ ಆಫರ್ ಸೀಮಿತ ಅವದಿಗೆ ಮಾತ್ರ ಅನ್ವಯವಾಗಲಿದೆ. ಮಲ್ಟಿಸ್ಟ್ರಾಡ 950 ಬೈಕ್ ಕೊಳ್ಳಲ್ಲು ಬಯಸುವ ಗ್ರಾಹಕರಿಗೆ ಸಂಸ್ಥೆಯು ಈ ಆಫರ್‍ನಲ್ಲಿ ಖರ್ಚಿಲ್ಲದೆ ಬೈಕ್‍ಗೆ ಟೂರಾಟೆಕ್ ಪ್ಯಾನಿಯರ್ಸ್ ಅನ್ನು ನೀಡುತ್ತಿದೆ.

ಡುಕಾಟಿ ಈ ಆಫರ್ ಅನ್ನು ಭಾರತದಲ್ಲಿ ತಮ್ಮ ಮೂರನೆಯ ವರ್ಷದ ಆಚರಣೆಯ ಅಂಗವಾಗಿ ನೀಡಲಾಗುತಿದ್ದು, ಹೊಸದಾಗಿ ಮಲ್ಟಿಸ್ಟ್ರಾಡ 950 ಬೈಕ್ ಕೊಳ್ಳುವವರಿಗೆ ರೂ 1.95 ಲಕ್ಷಕ್ಕೆ ಬೆಲೆಬಾಳುವ ಬೈಕಿನ ಟೂರಾಟೆಕಲ್ಯೂಮೀನಿಯಂ ಪ್ಯಾನಿಯರ್ಸ್ ಅನ್ನು ನೀಡಲಿದೆ.

ಈ ಆಫರ್ ದೇಶದಲ್ಲಿನ ಎಲ್ಲಾ ಡುಕಾಟಿ ಡೀಲರ್‍ಗಳ ಹತ್ತಿರ ಲಭ್ಯವಿದೆ. ಟೂರಾಟೆಕ್ ಪ್ಯಾನಿಯರ್ಗಳನ್ನು ಅನೋಡೈಸ್ಡ್ ನೈಸರ್ಗಿಕ ಅಲ್ಯೂಮಿನಿಯಂನಿಂದ ಉನ್ನತ-ತೆರೆಯುವ ವಿನ್ಯಾಸದಿಂದ ತಯಾರಿಸಲಾಗುತ್ತದೆ. ಎಡ ಭಾಗದಲ್ಲಿರುವ ಪ್ಯಾನಿಯರ್‍ಗಳಲ್ಲಿ ಸುಮಾರು 85 ಲೀಟರ್‍ನಷ್ಟು ತುಂಬಬಹುದಾದ ಸ್ಥಳವಿರಲಿದ್ದು, ಇನ್ನು ಬಲಭಾಗದಲ್ಲಿನ ಪ್ಯಾನಿಯರ್‍ಗಳು ಬೈಕಿನ ಎಕ್ಸಾಸ್ಟ್ ಕಾರಾಣದಿಂದಾಗಿ ಕಡಿಮೆ ಸ್ಟೋರೇಜ್ ಅನ್ನು ಹೊಂದಿರಲಿದೆ.

ಡುಕಾಟಿ ಮಲ್ಟಿಸ್ಟ್ರಾಡ 950 ಅಡ್ವೆಂಚರ್ ಬೈಕ್‍ಗಳು ಎಲ್ಇಡಿ ಹೆಡ್‍ಲ್ಯಾಂಪ್ಸ್, ಟ್ಯೂಬ್‍ಲೆಸ್ ಸ್ಪೋಕ್ ರಿಮ್ಸ್, ಟೆರ್ಮಿಗ್ನೊನಿ ಎಕ್ಸಾಸ್ಟ್, ಕಾರ್ಬನ್ ಫೈಬರ್ ಪಾರ್ಟ್ಸ್, ಎಂಜಿನ್ ಪ್ರೊಟೆಕ್ಷನ್ ಮತ್ತು ಇನ್ನಿತರೆ ಮಾದರಿಯ ಆಸನಗಳನ್ನು ಪಡೆದಿರಲಿದೆ

ಇದಲಾದೆ ಡುಕಾಟಿ ಮಲ್ಟಿಸ್ಟ್ರಾಡ 950 ಅಡ್ವೆಂಚರ್ ಬೈಕ್‍ಗಳು ಎನ್‍ಡ್ಯೂರೊ, ಅರ್ಬನ್, ಸ್ಪೋರ್ಟ್ ಮತ್ತು ಟೂರಿಂಗ್ ಎಂಬ ವಿವಿದ ಪ್ಯಾಕ್‍ಗಳನ್ನು ಪಡೆದುಕೊಂಡಿವೆ. ಮಲ್ಟಿಸ್ಟ್ರಾಡ 950 ಅಡ್ವೆಂಚರ್ ಬೈಕ್‍ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 12.80 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.

ಎಂಜಿನ್ ಸಾಮರ್ಥ್ಯ
ಡುಕಾಟಿ ಮಲ್ಟಿಸ್ಟ್ರಾಡ 950 ಅಡ್ವೆಂಚರ್ ಬೈಕ್ 937ಸಿಸಿ ಎಲ್-ಟ್ವಿನ್ ಎಂಜಿನ್ ಸಹಾಯದಿಂದ 111ಬಿಹೆಚ್‍ಪಿ ಮತ್ತು 96ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಡುಕಾಟಿ ಡೀಲರ್‍ಶಿಪ್‍ಗಳು ದೆಹಲಿ, ಮುಂಬೈ, ಬೆಂಗಳೂರು, ಪುಣೆ, ಅಹ್ಮದಾಬಾದ್, ಕೊಚಿ, ಕೊಲ್ಕತ್ತಾ ಮತ್ತು ಚೆನ್ನೈ ನಗರಗಳಲ್ಲಿ ಇದ್ದು ಈ ಸೀಮಿತ ಅವಧಿಯ ಅಫರ್ ಪಟ್ಟಿಮಾಡಿರುವ ನಗರಗಳಲ್ಲಿ ದೊರೆಯುತ್ತವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ದೇಶದಲ್ಲಿ ಸಾರ್ವಕಾಲಿಕ ಏರಿಕೆ ಕಂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ...
ಕಾರು ಚಾಲನೆ ವೇಳೆ ಇನ್‌ಸ್ಟಾಗ್ರಾಮ್ ಲೈವ್ ಮಾಡುತ್ತಿದ್ದ ಯುವಕ ಅಪಘಾತದಲ್ಲಿ ದುರ್ಮರಣ
ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ 2.50 ಲಕ್ಷ ಪ್ರೋತ್ಸಾಹ ಧನ...
120 ಕಿ.ಮೀ ವೇಗದಲ್ಲಿದ್ದ ಟಾಟಾ ಹೆಕ್ಸಾ ಕಾರು ಕಸದ ಲಾರಿಗೆ ಡಿಕ್ಕಿ ಹೊಡೆದಾಗ..!!
ಕೇವಲ 7 ಲಕ್ಷ ವೆಚ್ಚದಲ್ಲಿ ಸಿದ್ದವಾಯ್ತು ಮಾಡಿಫೈ ಲಂಬೋರ್ಗಿನಿ ಸೂಪರ್ ಕಾರು


Click it and Unblock the Notifications








