ಕೇವಲ 7 ಲಕ್ಷ ವೆಚ್ಚದಲ್ಲಿ ಸಿದ್ದವಾಯ್ತು ಮಾಡಿಫೈ ಲಂಬೋರ್ಗಿನಿ ಸೂಪರ್ ಕಾರು

Written By:

ನಗರ ಪ್ರದೇಶಗಳಲ್ಲಿ ಕಾರು, ಬೈಕ್‌ಗಳನ್ನು ಮಾಡಿಫೈ ಮಾಡಿಸುವುದು ಹೊಸತೆನಲ್ಲ. ಆದರೂ ಕೆಲ ಬಾರಿ ಮಾಡಿಫೈ ವಾಹನ ತಯಾಕರು ಮೂಲ ವಾಹನಗಳಿಂತಲೂ ಅದ್ಭುತ ರೀತಿಯಲ್ಲಿ ಹೊಸ ಹೊಸ ನಮೂನೆಯ ವಾಹನಗಳ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದು, ಜೈಪುರ ಮೂಲದ ಮಾಡಿಫೈ ಕಾರು ನಿರ್ಮಾಣ ಸಂಸ್ಥೆಯೊಂದು ಅಭಿವೃದ್ಧಿ ಮಾಡಿರುವ ಲ್ಯಾಂಬೋರ್ಗಿನಿ ಕಾರು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಕೇವಲ 7 ಲಕ್ಷ ವೆಚ್ಚದಲ್ಲಿ ಸಿದ್ದವಾಯ್ತು ಮಾಡಿಫೈ ಲಂಬೋರ್ಗಿನಿ ಸೂಪರ್ ಕಾರು

ಹೋಂಡಾ ಕಾರ್ಸ್ ನಿರ್ಮಾಣದ ಸಿಟಿ ಸೆಡಾನ್ ಕಾರಿನ ಎಂಜಿನ್ ಬಳಸಿಕೊಂಡು ಸೂಪರ್ ಕಾರು ಮಾದರಿಯಾದ ಲಂಬೋರ್ಗಿನಿ ಅವೆಂಟಡೊರ್ ಮಾಡಿಫೈ ಮಾಡಲಾಗಿದ್ದು, 4 ಕೋಟಿ ಬದಲಾಗಿ ಕೇವಲ 7 ಲಕ್ಷ ಖರ್ಚು ಮಾಡಿದಲ್ಲಿ ಈ ಸೂಪರ್ ಕಾರನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ನಿಮ್ಮ ಬಳಿ ಸಿಟಿ ಸೆಡಾನ್ ಕಾರು ಇರಬೇಕು ಅಷ್ಟೇ.

ಕೇವಲ 7 ಲಕ್ಷ ವೆಚ್ಚದಲ್ಲಿ ಸಿದ್ದವಾಯ್ತು ಮಾಡಿಫೈ ಲಂಬೋರ್ಗಿನಿ ಸೂಪರ್ ಕಾರು

ಜೈಪುರ್ ಮೂಲದ 'ಜೈಪುರ್ ಜೀಪ್ ಲರ್ವರ್ಸ್' ಎನ್ನುವ ಮಾಡಿಫೈ ಸಂಸ್ಥೆಯೇ ಈ ಸೂಪರ್ ಕಾರಿನ ಮಾಡಿಫೈ ಆವೃತ್ತಿಯನ್ನು ನಿರ್ಮಾಣ ಮಾಡಿದ್ದು, ಮೂಲ ಕಾರಿನ ಮಾದರಿಯಲ್ಲೇ ಮಾಡಿಫೈ ಆವೃತ್ತಿಯನ್ನು ಅಭಿವೃದ್ಧಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕೇವಲ 7 ಲಕ್ಷ ವೆಚ್ಚದಲ್ಲಿ ಸಿದ್ದವಾಯ್ತು ಮಾಡಿಫೈ ಲಂಬೋರ್ಗಿನಿ ಸೂಪರ್ ಕಾರು

ದೂರದಿಂದ ನೋಡುವಾಗ ಮಾಡಿಫೈ ಕಾರು ಮೂಲ ಕಾರಿನಂತೆ ಕಾಣುವುದಲ್ಲದೇ ನಿಜವಾದ ಕಾರು ಮಾದರಿಯು ಈ ಮಾಡಿಫೈ ಕಾರಿನ ಮುಂದೆ ಏನು ಅಲ್ಲ ಎನ್ನುವ ರೀತಿ ಸಿದ್ದಗೊಳಿಸಿದ್ದಾರೆ. ಕಾರಿನ ಸ್ಪಾಯ್ಲರ್, ಬಾಡಿ ಕಿಟ್, ಗ್ರಾಫಿಕ್ಸ್ ಮತ್ತು ಅಲಾಯ್ ಚಕ್ರಗಳ ಬಳಕೆಯು ಮಾಡಿಫೈ ಕಾರಿನ ಅಂದವನ್ನು ಹೆಚ್ಚಿಸಿರುವುದು ಮಾತ್ರ ಸುಳ್ಳಲ್ಲ.

ಕೇವಲ 7 ಲಕ್ಷ ವೆಚ್ಚದಲ್ಲಿ ಸಿದ್ದವಾಯ್ತು ಮಾಡಿಫೈ ಲಂಬೋರ್ಗಿನಿ ಸೂಪರ್ ಕಾರು

ಲಂಬೋರ್ಗಿನಿ ಅವೆಂಟಡೊರ್ ಮಾಡಿಫೈಗಾಗಿ ಹೋಂಡಾ ಸಿಟಿ ಸೆಡಾನ್ ಕಾರಿನ ಜೆಡ್ಎಕ್ಸ್ ಮಾದರಿಯನ್ನು ಬಳಕೆ ಮಾಡಲಾಗಿದ್ದು, ಕಾರಿನ ಎಂಜಿನ್ ವಿಭಾಗವನ್ನು ಹೊರತು ಪಡಿಸಿ ಬಹುತೇಕ ವಿನ್ಯಾಸಗಳನ್ನು ಸೂಪರ್ ಕಾರಿನ ಮಾದರಿಯಲ್ಲೇ ಮರುಜೋಡಣೆ ಮಾಡಲಾಗಿದೆ.

ಕೇವಲ 7 ಲಕ್ಷ ವೆಚ್ಚದಲ್ಲಿ ಸಿದ್ದವಾಯ್ತು ಮಾಡಿಫೈ ಲಂಬೋರ್ಗಿನಿ ಸೂಪರ್ ಕಾರು

ಕೇವಲ 7 ಲಕ್ಷ ರೂಪಾಯಿ ಖರ್ಚಿನಲ್ಲಿ ಮಾಡಿಫೈ ಮಾಡಿರುವುದಲ್ಲದೇ ಸೂಪರ್ ಕಾರಿನಲ್ಲಿ ಅಳವಡಿಸಲಾಗುವ ಎಲೆಕ್ಟ್ರಿಕ್ ಸ್ಪಿಚ್ ಪ್ರೇರಿತ ತೆಗೆದು ಹಾಕಿಕೊಳ್ಳಬಹುದಾದ ರೂಫ್‌ಟಾಪ್, ಸ್ಪೋರ್ಟಿ ವಿನ್ಯಾಸಗಳು, ಆರೇಂಜ್ ಶೆಡ್ಸ್ ಇದರಲ್ಲಿ ಬಳಕೆ ಮಾಡಿರುವುದು ಸೂಪರ್ ಕಾರು ಪ್ರೇಮಿಗಳ ಆಕರ್ಷಣೆಗೆ ಕಾರಣವಾಗಿದೆ.

ಕೇವಲ 7 ಲಕ್ಷ ವೆಚ್ಚದಲ್ಲಿ ಸಿದ್ದವಾಯ್ತು ಮಾಡಿಫೈ ಲಂಬೋರ್ಗಿನಿ ಸೂಪರ್ ಕಾರು

ಇನ್ನು ಕಾರಿನ ಎಂಜಿನ್ ಮಾದರಿಯು 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಮಾಡಿಫೈ ಮಾಡಿರುವ ಹಿನ್ನೆಲೆಯಲ್ಲಿ ಮೂಲ ಕಾರಿಗಿಂತ ತುಸು ಎಂಜಿನ್ ಪರ್ಫಾಮೆನ್ಸ್‌ನಲ್ಲಿ ವ್ಯತ್ಯಾಸ ಕಂಡುಬರಲಿದೆ. ಅಷ್ಟು ಹೊರತು ಪಡಿಸಿ ಮಾಡಿಫೈ ಕಾರು ಲಂಬೋರ್ಗಿನಿ ಮೂಲ ಕಾರಿನಷ್ಟೇ ಆಕರ್ಷಕವಾಗಿದೆ.

ಕೇವಲ 7 ಲಕ್ಷ ವೆಚ್ಚದಲ್ಲಿ ಸಿದ್ದವಾಯ್ತು ಮಾಡಿಫೈ ಲಂಬೋರ್ಗಿನಿ ಸೂಪರ್ ಕಾರು

ಆದ್ರೆ ಕಾರಿನ ಗ್ರೌಂಡ್ ಕ್ಲಿಯೆರನ್ಸ್ ವಿಚಾರಕ್ಕೆ ಬಂದಲ್ಲಿ ಮಾಡಿಫೈ ಲಂಬೋರ್ಗಿನಿ ಕಾರು ಕಚ್ಚಾ ರಸ್ತೆಗಳಲ್ಲಿ ಚಾಲನೆ ಕಷ್ಟಕರವಾಗಲಿದ್ದು, ಕೇವಲ ಅಂದ ಚೆಂದ ಅನ್ನಿಸುವ ರಸ್ತೆಗಳನ್ನೇ ಮಾತ್ರ ಓಡಿಸಲು ಸಾಧ್ಯ ಅಂದ್ರೆ ತಪ್ಪಾಗುವುದಿಲ್ಲ. ಹೀಗಾಗಿ ಇದು ಸಿಟಿ ಪ್ರದೇಶಗಳಲ್ಲಿ ಹೊರತು ಪಡಿಸಿ ಆಪ್ ರೋಡ್‌ಗೆ ಬಂದ್ರೆ ಕಾರಿನ ರೂಪವೇ ಮತ್ತಷ್ಟು ಬದಲಾಗಬಹುದು.

ಅದರ ಹೊರತಾಗಿ ಕಡಿಮೆ ವೆಚ್ಚಗಳಲ್ಲಿ ಮಾಡಿಫೈ ಕಾರಿನಲ್ಲಿ ಅಳವಡಿಸಲಾಗಿರುವ ಸೌಲಭ್ಯಗಳು ಉತ್ತಮವಾಗಿದ್ದು, ಸಿಟಿ ಪ್ರದೇಶಗಳಲ್ಲಿ ಮಾತ್ರ ಕಾರು ಚಾಲನೆ ಮಾಡಲು ಆದ್ರೆ ಸಾಕು ಎನ್ನುವವರು ನಿಮ್ಮ ಸಿಟಿ ಕಾರನ್ನು ಇವರಲ್ಲಿ ಮಾಡಿಫೈ ಮಾಡಿಸಿಕೊಳ್ಳಬಹುದು.

Read more on car modification
English summary
Now Modify Your Honda City as a Convertible Lamborghini for Just Rs 7.5 Lakhs.
Story first published: Tuesday, May 15, 2018, 20:10 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark