ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ 2.50 ಲಕ್ಷ ಪ್ರೋತ್ಸಾಹ ಧನ...

Written By:

ವಿಶ್ವಾದ್ಯಂತ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಮಾಲಿನ್ಯ ಪ್ರಮಾಣವು ತೀವ್ರವಾಗುತ್ತಿದ್ದು, ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ತಗ್ಗಿಸುವ ಮೂಲಕ ಎಲೆಕ್ಟ್ರಿಕ್ ಕಾರುಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರವು ಮಹತ್ವದ ಯೋಜನೆಯೊಂದನ್ನು ಜಾರಿಗೆ ತರುತ್ತಿದೆ.

ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ 2.50 ಲಕ್ಷ ಪ್ರೋತ್ಸಾಹ ಧನ...

ಹೊಸ ಯೋಜನೆಯಲ್ಲಿ ಡಿಸೇಲ್ ಮತ್ತು ಪೆಟ್ರೋಲ್‌ ಕಾರುಗಳನ್ನು ಪರಿಮಾಣಕಾರಿಯಾಗಿ ತಗ್ಗಿಸುವುದು ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಪ್ರೋತ್ಸಾಹಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ಗ್ರಾಹಕರನ್ನು ಪ್ರೊತ್ಸಾಹಿಸಲು ಮುಂದಾಗಿರುವ ಕೇಂದ್ರ ಸರ್ಕಾರವು ಪ್ರತಿ ಕಾರಿನ ಖರೀದಿ ಮೇಲೆ ಬರೋಬ್ಬರಿ 2. 50 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಲು ಮುಂದಾಗಿದೆ.

ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ 2.50 ಲಕ್ಷ ಪ್ರೋತ್ಸಾಹ ಧನ...

ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಹೊಸ ಯೋಜನೆಯ ಪ್ರಕಾರ, ಈಗಾಗಲೇ ಡೀಸೆಲ್ ಅಥವಾ ಪೆಟ್ರೋಲ್ ಕಾರುಗಳನ್ನು ಹೊಂದಿರುವ ಮಾಲೀಕರು ತಮ್ಮ ಹಳೆಯ ಬಿಎಸ್ 3 ಕಾರುಗಳನ್ನು ಬದಲಾಯಿಸಿ ಎಲೆಕ್ಟ್ರಿಕ್ ಕಾರನ್ನು ಖರೀದಿಸುವಂತಹ ಗ್ರಾಹಕರಿಗೆ ಮಾತ್ರ ಅನ್ವಯವಾಗಲಿದೆ.

ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ 2.50 ಲಕ್ಷ ಪ್ರೋತ್ಸಾಹ ಧನ...

ಪ್ರೊತ್ಸಾಹ ಧನ ಪಡೆಯಲು ಹೀಗೆ ಮಾಡುವುದು ಕಡ್ಡಾಯ..!!

ಒಂದು ವೇಳೆ ನೀವು ಬಿಎಸ್ 3 ಡೀಸೆಲ್ ಅಥವಾ ಪೆಟ್ರೋಲ್ ಹೊಂದಿದ್ದು, ಎಲೆಕ್ಟ್ರಿಕ್ ಕಾರ್‌ನೊಂದಿಗೆ ಬದಲಾವಣೆ ಮಾಡುವುದಾದರೇ ಮೊದಲು ನಿಮ್ಮ ಹಳೆಯ ಕಾರುಗಳನ್ನು ಅಧಿಕೃತ ಸ್ಕ್ರ್ಯಾಪಿಂಗ್ ಸೆಂಟರ್‌ನಲ್ಲಿ ಸ್ಕ್ರ್ಯಾಪ್ ಮಾಡಿಸುವುದು ಕೂಡಾ ಕಡ್ಡಾಯವಾಗಿರುತ್ತದೆ.

ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ 2.50 ಲಕ್ಷ ಪ್ರೋತ್ಸಾಹ ಧನ...

ಅಂದ್ರೆ ನಿಮ್ಮ ಹಳೆಯ ಪೆಟ್ರೋಲ್ ಅಥವಾ ಡಿಸೇಲ್ ಕಾರುಗಳು ಗುಜುರಿಗೆ ಸೇರಿದ ನಂತರವೇ ಎಲೆಕ್ಟ್ರಿಕ್ ಕಾರಿನ ಎಕ್ಸ್‌ಚೆಂಜ್‌ ಮೇಲೆ ರೂ. 2.50ಲಕ್ಷ ಪ್ರೊತ್ಸಾಹ ಧನ ಸಿಗಲಿದೆ. ಮತ್ತೊಂದು ವಿಚಾರ ಅಂದ್ರೆ ನೀವು ಖರೀದಿಸುವ ಎಲೆಕ್ಟ್ರಿಕ್ ಕಾರುಗಳ ಬೆಲೆ ಆಧಾರ ಮೇಲೆ ಪ್ರೊತ್ಸಾಹ ಧನ ನಿಗದಿಯಾಗುತ್ತೆ.

ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ 2.50 ಲಕ್ಷ ಪ್ರೋತ್ಸಾಹ ಧನ...

ಇದಕ್ಕಾಗಿಯೇ ಬರೋಬ್ಬರಿ 9 ಸಾವಿರ ಕೋಟಿ ವ್ಯಯ ಮಾಡುತ್ತಿರುವ ಕೇಂದ್ರವು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಶೇ.50 ರಷ್ಟು ಎಲೆಕ್ಟ್ರಿಕ್ ಕಾರುಗಳನ್ನು ರಸ್ತೆಗಿಳಿಸುವ ಗುರಿಹೊಂದಿದೆ. ಹೀಗಾಗಿ ಹಳೆಯ ಮಾದರಿಯ ಕಾರುಗಳನ್ನು ಹೊಂದಿರುವ ಕಾರು ಮಾಲೀಕರಿಗೆ ಇಂತದೊಂದು ಆಫರ್ ಘೋಷಣೆ ಮಾಡುತ್ತಿದೆ.

ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ 2.50 ಲಕ್ಷ ಪ್ರೋತ್ಸಾಹ ಧನ...

ಇದರ ಜೊತೆಗೆ ಎಲೆಕ್ಟ್ರಿಕ್ ಬೈಕ್‌ಗಳನ್ನು ಖರೀದಿಸುವ ಗ್ರಾಹಕರಿಗೂ ಸಹ ರೂ.30 ಸಾವಿರ ಪ್ರೊತ್ಸಾಹ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರವು ಇದಕ್ಕಾಗಿ 1.5 ಲಕ್ಷ ಮೇಲ್ಪಟ್ಟ ಎಲೆಕ್ಟಿಕ್ ಬೈಕ್‌ಗಳನ್ನು ಖರೀದಿ ಮಾಡಿರಬೇಕು ಎಂಬ ನಿಯಮವನ್ನು ಕಡ್ಡಾಯ ಮಾಡಿದೆ.

ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ 2.50 ಲಕ್ಷ ಪ್ರೋತ್ಸಾಹ ಧನ...

ಕೇಂದ್ರದ ಜೊತೆಗೆ ದೇಶದ ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಗಳು ಕೈ ಜೋಡಿಸಿದ್ದು, ಇವಿ ಕಾರುಗಳನ್ನು ಖರೀದಿಸುವ ಗ್ರಾಹಕರನ್ನು ಪ್ರೋತ್ಸಾಹಿಸುವುದಲ್ಲದೇ ಅಗತ್ಯ ಪ್ರಮಾಣದ ಚಾರ್ಜಿಂಗ್ ಪಾಯಿಂಟ್‌ಗಳನ್ನು ತೆರೆಯಲು ಯೋಜನೆ ರೂಪಿಸಿದೆ.

ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ 2.50 ಲಕ್ಷ ಪ್ರೋತ್ಸಾಹ ಧನ...

ಮೆಟ್ರೋ ಸಿಟಿಗಳಲ್ಲಿ ಪೆಟ್ರೋಲ್ ಬಂಕ್ ಮಾದರಿಯಲ್ಲಿ ಪ್ರತಿ ಗಲ್ಲಿ ಗಲ್ಲಿಗೂ ಚಾರ್ಜಿಂಗ್ ಪಾಯಿಂಟ್ ತೆರೆಯಲು ಸಿದ್ದತೆ ನಡೆಸಲಾಗುತ್ತಿದ್ದು, ಹೆದ್ದಾರಿಗಳಲ್ಲಿ ಸಂಚರಿಸುವ ಇವಿ ಕಾರುಗಳಿಗಾಗಿ ಪ್ರತಿ 25 ಕಿ.ಮಿ ಒಂದಂತೆ ಚಾರ್ಜಿಂಗ್ ಸ್ಟೆಷನ್‌ಗಳನ್ನು ನಿರ್ಮಾಣ ಮಾಡುವ ಯೋಜನೆ ಇದೆ.

ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ 2.50 ಲಕ್ಷ ಪ್ರೋತ್ಸಾಹ ಧನ...

ಜೊತೆಗೆ ಹೊಸದಾಗಿ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವಂತ ಗ್ರಾಹಕರಿಗೆ ಮತ್ತಷ್ಟು ಹೊಸ ಆಫರ್ ‌ನೀಡಿರುವ ಕೇಂದ್ರ ಸರ್ಕಾರವು, ನಿಗದಿತ ಅವಧಿಗೆ ಇವಿ ಕಾರುಗಳಿಗೆ ಟ್ರೋಲ್ ಫ್ರಿ ಮತ್ತು ಎರಡು ವರ್ಷಗಳ ಇನ್ಸುರೆನ್ಸ್, ಬಿಡಿಭಾಗಗಳ ಖರೀದಿ ಮೇಲೆ ರಿಯಾಯ್ತಿ ದರ ಅನ್ವಯವಾಗುವಂತೆ ನಿಯಮ ರೂಪಿಸುತ್ತಿದೆ.

ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ 2.50 ಲಕ್ಷ ಪ್ರೋತ್ಸಾಹ ಧನ...

ಮೊನ್ನೆಯಷ್ಟೇ ಎಲೆಕ್ಟ್ರಿಕ್ ಕಾರುಗಳ ಬ್ಯಾಟರಿ ಮೇಲಿನ ಜಿಎಸ್‌ಟಿ ಅನ್ನು ಸಹ ತೆಗೆದು ಹಾಕಿರುವ ಕೇಂದ್ರ ಸರ್ಕಾರವು ಇವಿ ಕಾರುಗಳ ಬೆಲೆಯನ್ನು ಪರಿಣಾಮಕಾರಿ ತಗ್ಗಿಸಿದ್ದು, ಒಂದು ವೇಳೆ ಹಳೆಯ ಕಾರು ಬದಲಾಯಿಸಿ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿ ಮಾಡಲು ಇದೊಂದು ಉತ್ತಮ ಸಮಯ ಎನ್ನಬಹುದು.

ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರಿಗೆ ಕೇಂದ್ರದಿಂದ 2.50 ಲಕ್ಷ ಪ್ರೋತ್ಸಾಹ ಧನ...

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಅಪಘಾತದಲ್ಲಿ ಮೃತಪಟ್ಟವರ ಪರಿಹಾರದ ಮೊತ್ತವನ್ನ 10 ಪಟ್ಟು ಹೆಚ್ಚಳ ಮಾಡಿದ ಕೇಂದ್ರ ಸರ್ಕಾರ...

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್....

ಡೀಸೆಲ್ ಕಾರು ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆ ಏನು?

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

English summary
Scrap Old Car For A New Electric Vehicle And Get Rs 2.5 Lakh From The Government.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark