120 ಕಿ.ಮೀ ವೇಗದಲ್ಲಿದ್ದ ಟಾಟಾ ಹೆಕ್ಸಾ ಕಾರು ಕಸದ ಲಾರಿಗೆ ಡಿಕ್ಕಿ ಹೊಡೆದಾಗ..!!

Written By:

ದೇಶಾದ್ಯಂತ ದಿನಂಪ್ರತಿ ಹತ್ತಾರು ಅಪಘಾತ ಪ್ರಕರಣಗಳು ಸಂಭವಿಸುತ್ತಲೇ ಇರುತ್ತವೆ. ಆದರೂ ವಾಹನ ಚಾಲನೆ ವೇಳೆ ಕೆಲವರು ಮುಂಜಾಗ್ರತೆ ವಹಿಸುವುದೇ ಇಲ್ಲಾ. ಪರಿಣಾಮ ಸಣ್ಣಪುಟ್ಟ ತಪ್ಪುಗಳೇ ದುರಂತಗಳಿಗೆ ಎಡೆಮಾಡಿಕೊಡುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

120 ಕಿ.ಮೀ ವೇಗದಲ್ಲಿದ್ದ ಟಾಟಾ ಹೆಕ್ಸಾ ಕಾರು ಕಸದ ಲಾರಿಗೆ ಡಿಕ್ಕಿ ಹೊಡೆದಾಗ..!!

ಅತಿಯಾದ ವೇಗ ಜೀವಕ್ಕೆ ಅಪಾಯಕ್ಕೆ ಆಹ್ವಾನ ಅಂತಾ ಗೊತ್ತಿದ್ರು ಜನಕ್ಕೆ ಮಾತ್ರ ಸ್ಪೀಡ್​ನ ಹುಚ್ಚು ಕಡಿಮೆಯಾಗುವುದೇ ಇಲ್ಲ. ಕೆಲವರು ತಮ್ಮ ಶೋಕಿಗಾಗಿ ಹೆಚ್ಚು ಜನ ಸಂದಣಿ ಇರುವ ಪ್ರದೇಶಗಳಲ್ಲೂ ಮಿತಿ ಮೀರಿದ ವೇಗದಲ್ಲಿ ವಾಹನಗಳನ್ನ ಚಾಲನೆ ಮಾಡ್ತಾರೆ. ಅದರ ಪರಿಣಾಮವೇ ಸಾವು-ನೋವು ತಪ್ಪಿದ್ದಲ್ಲ.

120 ಕಿ.ಮೀ ವೇಗದಲ್ಲಿದ್ದ ಟಾಟಾ ಹೆಕ್ಸಾ ಕಾರು ಕಸದ ಲಾರಿಗೆ ಡಿಕ್ಕಿ ಹೊಡೆದಾಗ..!!

ಹೀಗೆ ಅತಿ ವೇಗದಲ್ಲಿದ್ದ ಟಾಟಾ ಹೆಕ್ಸಾ ಎಸ್‌ಯುವಿ ಕಾರೊಂದು ಕಸದ ಲಾರಿಗೆ ಡಿಕ್ಕಿ ಹೊಡೆದಿದ್ದು, ಅತಿ ವೇಗದಲ್ಲಿದ್ದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿಲ್ಲದೇ ಕಾರಿನಲ್ಲಿದ್ದ ಓರ್ವ ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ.

120 ಕಿ.ಮೀ ವೇಗದಲ್ಲಿದ್ದ ಟಾಟಾ ಹೆಕ್ಸಾ ಕಾರು ಕಸದ ಲಾರಿಗೆ ಡಿಕ್ಕಿ ಹೊಡೆದಾಗ..!!

ಮುಂಬೈನ ಲಾಲ್‌ಬಾಗ್ ಫ್ಲೈ ಓವರ್ ಬಳಿ ಈ ಘಟನೆ ನಡೆದಿದ್ದು, ಮುಂಬೈ ಮಾಹಾನಗರ ಪಾಲಿಕೆಗೆ ಸೇರಿದ ಕಸದ ಲಾರಿಗೆ ಟಾಟಾ ಹೆಕ್ಸಾ ಕಾರು ಡಿಕ್ಕಿ ಹೊಡೆದಿದೆ. ಮುಂಜಾನೆ 5 ಗಂಟೆಯ ಹೊತ್ತಿಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ವೇಗದಲ್ಲಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಲಾರಿ ಹಿಂಭಾಗ ಡಿಕ್ಕಿ ಹೊಡೆದಿದೆ.

120 ಕಿ.ಮೀ ವೇಗದಲ್ಲಿದ್ದ ಟಾಟಾ ಹೆಕ್ಸಾ ಕಾರು ಕಸದ ಲಾರಿಗೆ ಡಿಕ್ಕಿ ಹೊಡೆದಾಗ..!!

ನಿಂತಿದ್ದ ಲಾರಿಗೆ ಕಾರು ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದ್ದಲ್ಲದೇ ಕಾರಿನ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಕಾರಿನ ಡೋರ್‌ಗಳು ಲಾಕ್ ಆಗಿದ್ದರಿಂದ ಕಾರಿನ ಒಳಗಡೆ ಸಿಲುಕಿಕೊಂಡಿದ್ದವರನ್ನು ತಕ್ಷಣಕ್ಕೆ ಹೊರಗಡೆ ಎಳೆದುಕೊಳ್ಳಲು ಸಹ ಸಾಧ್ಯವಾಗಿಲ್ಲ.

120 ಕಿ.ಮೀ ವೇಗದಲ್ಲಿದ್ದ ಟಾಟಾ ಹೆಕ್ಸಾ ಕಾರು ಕಸದ ಲಾರಿಗೆ ಡಿಕ್ಕಿ ಹೊಡೆದಾಗ..!!

ಇದೇ ವೇಳೆ ಸ್ಥಳೀಯರು ಸಹ ರಕ್ಷಣೆಗೆ ಧಾವಿಸಿದ್ದಲ್ಲದೇ ಕಾರಿನಲ್ಲಿ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿ ಕಾರಿನಲ್ಲಿದ್ದ ಯುವಕರನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಅಷ್ಟರಾಗಲೇ ಓರ್ವ ಸಾವನ್ನಪ್ಪಿದ್ದಲ್ಲದೇ ಮತ್ತೊಬ್ಬನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

120 ಕಿ.ಮೀ ವೇಗದಲ್ಲಿದ್ದ ಟಾಟಾ ಹೆಕ್ಸಾ ಕಾರು ಕಸದ ಲಾರಿಗೆ ಡಿಕ್ಕಿ ಹೊಡೆದಾಗ..!!

ಕಾರು ಚಾಲನೆ ಮಾಡುತ್ತಿದ್ದ ಸಾಗರ್ ಗುರುನಾಥ್ ಗಾಯ್ಕವಾಡ್(21)ಗೆ ಗಂಭೀರ ಪ್ರಮಾಣದ ಗಾಯಳಾಗಿದ್ದರೂ ಪ್ರಾಣಪಾಯದಿಂದ ಪಾರಾಗಿದ್ದು, ಸಹ ಪ್ರಯಾಣಿಕ ಸಚಿನ್ ಜಗದ್(23) ಕಾರಿನ ಸಿಲುಕಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

120 ಕಿ.ಮೀ ವೇಗದಲ್ಲಿದ್ದ ಟಾಟಾ ಹೆಕ್ಸಾ ಕಾರು ಕಸದ ಲಾರಿಗೆ ಡಿಕ್ಕಿ ಹೊಡೆದಾಗ..!!

ಸೌತ್ ಮುಂಬೈನಿಂದ ಗೋವಾದತ್ತ ಹೊರಟ್ಟಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಕಾರು ಚಾಲನೆ ಮಾಡುತ್ತಿದ್ದ ಸಾಗರ್ ಗುರುನಾಥ್ ಗಾಯ್ಕವಾಡ್ ವಿರುದ್ಧವೇ ಪ್ರಕರಣ ದಾಖಸಿ ತನಿಖೆ ನಡೆಸಿಸುತ್ತಿದ್ದಾರೆ.

120 ಕಿ.ಮೀ ವೇಗದಲ್ಲಿದ್ದ ಟಾಟಾ ಹೆಕ್ಸಾ ಕಾರು ಕಸದ ಲಾರಿಗೆ ಡಿಕ್ಕಿ ಹೊಡೆದಾಗ..!!

ಪ್ರಾಥಮಿಕ ವರದಿಯ ಪ್ರಕಾರ, ಮುಂಜಾನೆ 5 ಗಂಟೆಯ ವೇಳೆ 120 ಕಿ.ಮೀ ವೇಗದಲ್ಲಿದ್ದ ಹೋಗುತ್ತಿದ್ದ ಟಾಟಾ ಹೆಕ್ಸಾ ಕಾರು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಸದ ಲಾರಿಗೆ ಡಿಕ್ಕಿ ಹೊಡೆದಿದ್ದು, ಅತಿಯಾದ ವೇಗವೇ ಈ ದುರಂತಕ್ಕೆ ಪ್ರಮುಖ ಕಾರಣವಾಗಿದೆ ಎಂದಿದ್ದಾರೆ.

120 ಕಿ.ಮೀ ವೇಗದಲ್ಲಿದ್ದ ಟಾಟಾ ಹೆಕ್ಸಾ ಕಾರು ಕಸದ ಲಾರಿಗೆ ಡಿಕ್ಕಿ ಹೊಡೆದಾಗ..!!

ಇನ್ನು ಕಸದ ಲಾರಿಗೆ ಡಿಕ್ಕಿ ಹೊಡೆದಾಗ ಕಾರಿನ ಬ್ಯಾನೆಟ್ ಮತ್ತು ಕಾರಿನ ಸೈಡ್ ಪ್ರೋಫೈಲ್ ಸಂಪೂರ್ಣವಾಗಿ ಕಿತ್ತುಹೊಗಿದ್ದಲ್ಲದೇ ಕಾರಿನ ಡೋರ್ ಸಹ ಲಾಕ್ ಆಗಿದೆ. ಈ ವೇಳೆ ಕಾರಿನಿಂದ ಹೊರಗೆ ಬರಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಆಗ ಕಾರಿನ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಸಾಗರ್ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ.

120 ಕಿ.ಮೀ ವೇಗದಲ್ಲಿದ್ದ ಟಾಟಾ ಹೆಕ್ಸಾ ಕಾರು ಕಸದ ಲಾರಿಗೆ ಡಿಕ್ಕಿ ಹೊಡೆದಾಗ..!!

ಅದಲ್ಲದೇ ಹೈ ಸ್ಪೀಡ್ ಅಪಘಾತವಾಗಿರುವ ಪರಿಣಾಮ ಟಾಟಾ ಹೆಕ್ಸಾ ಕಾರಿನಲ್ಲಿದ್ದ ಸುರಕ್ಷಾ ಸಾಧನಗಳು ಸಹ ಕೈಕೊಟ್ಟಿದ್ದು, ಕಸದ ಲಾರಿಗೆ ಹಿಂಬದಿಯದಲ್ಲಿ ಅಳವಡಿಸಿದ್ದ ಕ್ರಾಶ್ ಗಾರ್ಡ್ ಸಹ ಅಪಘಾತದ ತೀವ್ರಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

120 ಕಿ.ಮೀ ವೇಗದಲ್ಲಿದ್ದ ಟಾಟಾ ಹೆಕ್ಸಾ ಕಾರು ಕಸದ ಲಾರಿಗೆ ಡಿಕ್ಕಿ ಹೊಡೆದಾಗ..!!

ಒಟ್ಟಿನಲ್ಲಿ ಹೈ ಸ್ಪೀಡ್ ಕಾರು ಚಾಲನೆಯೇ ಅಪಘಾತಕ್ಕೆ ಪ್ರಮುಖ ಕಾರಣ ಎನ್ನುವುದು ಈ ಪ್ರಕರಣದಲ್ಲಿ ಸಾಬೀತಾಗಿದ್ದು, ಕಾರು ಚಾಲನೆ ಮಾಡುತ್ತಿದ್ದ ಸಾಗರ್ ವಿರುದ್ಧ ಐಪಿಸಿ ಸೆಕ್ಷನ್ 304(ಎ), 279 ಮತ್ತು 427 ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಮಿನಿ ಫಾರ್ಚೂನರ್ ಖ್ಯಾತಿಯ ಟೊಯೊಟಾ ರಷ್ ಸುರಕ್ಷಾ ರೇಟಿಂಗ್ ಎಷ್ಟು ಗೊತ್ತಾ?

ಅಪಘಾತದಲ್ಲಿ ಮೃತಪಟ್ಟವರ ಪರಿಹಾರದ ಮೊತ್ತವನ್ನ 10 ಪಟ್ಟು ಹೆಚ್ಚಳ ಮಾಡಿದ ಕೇಂದ್ರ ಸರ್ಕಾರ...

ಟ್ಯೂಬ್‌ಲೆಸ್ ಟೈರ್ ಅಂದ್ರೆ ಯಾಕ್ ಎಲ್ಲರಿಗು ಅಷ್ಟೊಂದು ಇಷ್ಟ ಗೊತ್ತಾ?

ವಿಡಿಯೋ- ಟೊಯೊಟಾ ಇನೋವಾ ಗುದ್ದಿದ ರಭಸಕ್ಕೆ 30 ಅಡಿ ದೂರ ಹೋಗಿ ಬಿದ್ದ ಯುವಕ...

ಬಿಡುಗಡೆಯಾಗಲಿರುವ ವಿನೂತನ 7 ಸೀಟರ್ ವ್ಯಾಗನರ್ ಬೆಲೆ ಎಷ್ಟು ಗೊತ್ತಾ?

Read more on accident off beat
English summary
Tata Hexa Involves In A High-Speed Accident In Mumbai.
Story first published: Tuesday, May 15, 2018, 18:19 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark