ಇಐಸಿಎಂಎ ಬೈಕ್ ಎಕ್ಸ್‌ಪೋ: ಗಮನಸೆಳೆದ ರಾಯಲ್ ಎನ್‌ಫೀಲ್ಡ್ ಕೆಎಕ್ಸ್ ಕಾನ್ಸೆಪ್ಟ್..!

ಮಿಲಾನ್‌ನಲ್ಲಿ ನಡೆದಿರುವ 2018ರ ಇಐಸಿಎಂಎ ಬೈಕ್ ಎಕ್ಸ್‌ಪೋದಲ್ಲಿ ಬ್ರಿಟಿಷ್ ಮೋಟಾರ್‌ಸೈಕಲ್ ಉತ್ಪಾದನಾ ಸಂಸ್ಥೆ ರಾಯಲ್ ಎನ್‌ಫೀಲ್ಡ್ ತನ್ನ ಬಾಬ್ಬರ್ ಸ್ಟೈಲ್ ಕೆಎಕ್ಸ್ ಕಾನ್ಸೆಪ್ಟ್ ಬೈಕ್ ಮಾದರಿಯನ್ನು ಅನಾವರಣ ಮಾಡಿದ್ದು, ರಾಯಲ್ ಎನ್‌ಫೀಲ್ಡ್ ಇದುವರೆಗೆ ನಿರ್ಮಾಣ ಮಾಡಿರುವ ಬೈಕ್ ಮಾದರಿಗಳಿಂತಲೂ ಇದು ಅತಿ ಹೆಚ್ಚು ಸಾಮರ್ಥ್ಯದ ಎಂಜಿನ್ ಸೌಲಭ್ಯ ಹೊಂದಿದೆ.

ಇಐಸಿಎಂಎ ಬೈಕ್ ಎಕ್ಸ್‌ಪೋ: ಗಮನಸೆಳೆದ ರಾಯಲ್ ಎನ್‌ಫೀಲ್ಡ್ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್..!

ಇಟಾಲಿಯ ಮಿಲಾನ್ ನಗರಗಳಲ್ಲಿ ಪ್ರತಿವರ್ಷ ಆಯೋಜನೆ ಮಾಡಲಾಗುವ ಇಐಸಿಎಂಎ ಬೈಕ್ ಎಕ್ಸ್‌ಪೋ ಕಾರ್ಯಕ್ರಮವು ಜಗತ್ತಿನ ಅತಿ ದೊಡ್ಡ ಮೋಟಾರ್‌ಸೈಕಲ್ ಪ್ರದರ್ಶನ ಎಂಬ ಖ್ಯಾತಿ ಪಡೆದಿದ್ದು, ಇದರಲ್ಲಿ ವಿಶ್ವದ ಪ್ರಮುಖ ಬೈಕ್ ಉತ್ಪಾದನಾ ಸಂಸ್ಥೆಗಳು ಭವಿಷ್ಯದಲ್ಲಿ ಬಿಡುಗಡೆಗೊಳಿಸುವ ತಮ್ಮ ಪ್ರಮುಖ ಬೈಕ್ ಮಾದರಿಗಳನ್ನು ಅನಾವರಣಗೊಳಿಸುತ್ತವೆ. ಈ ವೇಳೆ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸಹ ತನ್ನ ಬಹುನೀರಿಕ್ಷಿತ ಬಾಬ್ಬರ್ ಸ್ಟೈಲ್ ಕೆಎಕ್ಸ್ ಕಾನ್ಸೆಪ್ಟ್ ಬೈಕ್ ಅನ್ನು ಪ್ರದರ್ಶನ ಮಾಡಿದೆ.

ಇಐಸಿಎಂಎ ಬೈಕ್ ಎಕ್ಸ್‌ಪೋ: ಗಮನಸೆಳೆದ ರಾಯಲ್ ಎನ್‌ಫೀಲ್ಡ್ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್..!

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಇದುವರೆಗೆ ನಿರ್ಮಾಣ ಮಾಡಿರುವ ಇತರೆ ಬೈಕ್ ಮಾದರಿಗಳಿಂತಲೂ ವಿಭಿನ್ನ ಎನ್ನಿಸುವ ಬಾಬ್ಬರ್ ಸ್ಟೈಲ್ ಕೆಎಕ್ಸ್ ಕಾನ್ಸೆಪ್ಟ್ ಮಾದರಿಯು ವಿ-ಟ್ವಿನ್ ಎಂಜಿನ್ ವೈಶಿಷ್ಟ್ಯತೆಯೊಂದಿಗೆ ಟ್ವಿನ್ ಪೈಪ್ ಎಕ್ಸಾಸ್ಟ್ ಪಡೆದುಕೊಂಡಿರುವುದು ಖಚಿತವಾಗಿದೆ.

ಇಐಸಿಎಂಎ ಬೈಕ್ ಎಕ್ಸ್‌ಪೋ: ಗಮನಸೆಳೆದ ರಾಯಲ್ ಎನ್‌ಫೀಲ್ಡ್ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್..!

ಸದ್ಯ ಜಾಗತಿಕವಾಗಿ ಹಲವು ಬೈಕ್ ಉತ್ಪಾದನಾ ಸಂಸ್ಥೆಗಳು ಬಾಬ್ಬರ್ ಸ್ಟೈಲ್ ಮಾದರಿಯ ಬೈಕ್ ಉತ್ಪನ್ನ ಈಗಾಗಲೇ ಮಾರಾಟ ಮಾಡುತ್ತಿದ್ದರೂ ಸಹ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ತನ್ನದೇ ನಿರ್ಮಾಣದ ಕೆಎಕ್ಸ್(1937 ಮಾಡೆಲ್) ಬೈಕ್ ಪ್ರೇರಣೆಯೊಂದಿಗೆ ಬಾಬ್ಬರ್ ಸ್ಟೈಲ್ ಹೊಸ ಕೆಎಕ್ಸ್ ಬೈಕ್ ಸಿದ್ಧಗೊಳಿಸಿದೆ.

ಇಐಸಿಎಂಎ ಬೈಕ್ ಎಕ್ಸ್‌ಪೋ: ಗಮನಸೆಳೆದ ರಾಯಲ್ ಎನ್‌ಫೀಲ್ಡ್ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್..!

ಇದಕ್ಕಾಗಿ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸದ್ಯ ಹೊಸ ಬೈಕ್ ನಿರ್ಮಾಣಕ್ಕಾಗಿ ಯುಎಸ್ಎ ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸಿರುವ ಇಂಡಿಯನ್ ಮೋಟಾರ್‌ಸೈಕಲ್(ಪೊಲಾಲಿಸ್ ಇಂಡಸ್ಟ್ರೀಸ್) ಸಂಸ್ಥೆಯೊಂದಿಗೆ ಕೈಜೋಡಿಸಿದ್ದು, ಇಂಡಿಯನ್ ಮೋಟಾರ್‌ಸೈಕಲ್ ಸಂಸ್ಥೆಯು ಆರ್‌ಇ ಹೊಸ ಬೈಕಿಗೆ ಬೇಕಾದ ತಾಂತ್ರಿಕ ಸೌಲಭ್ಯಗಳನ್ನು ಸಿದ್ದಪಡಿಸುವ ಹೊಣೆ ಹೊತ್ತುಕೊಂಡಿದೆ.

ಇಐಸಿಎಂಎ ಬೈಕ್ ಎಕ್ಸ್‌ಪೋ: ಗಮನಸೆಳೆದ ರಾಯಲ್ ಎನ್‌ಫೀಲ್ಡ್ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್..!

ಹೀಗಾಗಿ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ನಿರ್ಮಾಣ ಮಾಡುತ್ತಿರುವ ಹೊಸ ಬಾಬ್ಬರ್ ಸ್ಟೈಲ್ ಕೆಎಕ್ಸ್ ಕಾನ್ಸೆಪ್ಟ್ ಬೈಕ್ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಎಂಜಿನ್ ದಕ್ಷತೆ ಮತ್ತು ಇಂಗಾಲ ಹೊರಸೂಸುವಿಕೆಯನ್ನು ತಗ್ಗಿಸಲು ಯುರೋ 6(ಇದು ಭಾರತದಲ್ಲಿ ಬಿಎಸ್ 6) ವೈಶಿಷ್ಟ್ಯತೆಗಳನ್ನು ಹೊತ್ತು ಬರಲಿದೆ.

ಇಐಸಿಎಂಎ ಬೈಕ್ ಎಕ್ಸ್‌ಪೋ: ಗಮನಸೆಳೆದ ರಾಯಲ್ ಎನ್‌ಫೀಲ್ಡ್ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್..!

ಎಂಜಿನ್ ಸಾಮರ್ಥ್ಯ

ಆರ್‌ಇ ಹೊಸ ಬಾಬ್ಬರ್ ಸ್ಟೈಲ್ ಕೆಎಕ್ಸ್ ಕಾನ್ಸೆಪ್ಟ್ ಬೈಕ್‌ ಮಾದರಿಯು 836ಸಿಸಿ ಎಂಜಿನ್ ಸಾಮರ್ಥ್ಯದೊಂದಿಗೆ ಗರಿಷ್ಠ ಮಟ್ಟದ 90-ಬಿಎಚ್‌ಪಿ ಹಾರ್ಸ್ ಪವರ್ ಉತ್ಪಾದನಾ ಗುಣಹೊಂದಿದ್ದು, ಎಲ್‌ಇಡಿ ಹೆಡ್‌ಲೈಟ್, ಫ್ಲ್ಯಾಟ್ ಹ್ಯಾಂಡಲ್‌ಬಾರ್, ಟ್ರಯಂಫ್ ಬೊನೆವಿಲ್ಲೆ ಮಾದರಿಯಲ್ಲಿ ಸಿಂಗಲ್ ಸೀಟು, ಮುಂಭಾಗದ ಚಕ್ರದಲ್ಲಿ ಟ್ವಿನ್ ಡಿಸ್ಕ್ ಬ್ರೇಕ್, ಡ್ಯುಯಲ್ ಚಾನೆಲ್ ಎಬಿಎಸ್ ಸೇರಿದಂತೆ ಹಲವು ವಿಶ್ವದರ್ಜೆ ಸೌಲಭ್ಯಗಳನ್ನು ಪಡೆದುಕೊಂಡಿರಲಿದೆ.

ಇಐಸಿಎಂಎ ಬೈಕ್ ಎಕ್ಸ್‌ಪೋ: ಗಮನಸೆಳೆದ ರಾಯಲ್ ಎನ್‌ಫೀಲ್ಡ್ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್..!

ಹಾಗಾದ್ರೆ ಬಿಡುಗಡೆ ಯಾವಾಗ?

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸದ್ಯ ಬಾಬ್ಬರ್ ಸ್ಟೈಲ್ ಕೆಎಕ್ಸ್ ಕಾನ್ಸೆಪ್ಟ್ ಬೈಕ್ ಅನ್ನು ಕೇವಲ ಅನಾವರಣ ಮಾಡಿದ್ದು, ಅದಕ್ಕೂ ಮುನ್ನ ಭಾರೀ ನೀರಿಕ್ಷೆಯಲ್ಲಿರುವ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

MOST READ: ಬಿಡುಗಡೆಗೆ ಸಿದ್ದವಾದ ಜಾವಾ ಮೊದಲ ಬೈಕ್- ರಾಯಲ್ ಎನ್‌ಫೀಲ್ಡ್‌ಗೆ ತಳಮಳ ಶುರು..!

ಇಐಸಿಎಂಎ ಬೈಕ್ ಎಕ್ಸ್‌ಪೋ: ಗಮನಸೆಳೆದ ರಾಯಲ್ ಎನ್‌ಫೀಲ್ಡ್ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್..!

ಇದರಿಂದ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹೊಸ ಕೆಎಕ್ಸ್ ಕಾನ್ಸೆಪ್ಟ್ ಬೈಕ್ ಅನ್ನು 2020ರ ಮಧ್ಯಂತರದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿದ್ದು, ಹೊಸ ಬೈಕಿನ ಬೆಲೆಯನ್ನು ಭಾರತೀಯ ಮಾರುಕಟ್ಟೆಯ ಎಕ್ಸ್‌ಶೋರೂಂ ಪ್ರಕಾರ ರೂ. 7.50 ಲಕ್ಷದಿಂದ ರೂ. 9 ಲಕ್ಷದ ತನಕ ಇರಬಹುದೆಂದು ಅಂದಾಜಿಸಲಾಗಿದೆ.

ಇಐಸಿಎಂಎ ಬೈಕ್ ಎಕ್ಸ್‌ಪೋ: ಗಮನಸೆಳೆದ ರಾಯಲ್ ಎನ್‌ಫೀಲ್ಡ್ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್..!

ಇನ್ನು ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಇದೇ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುತ್ತಿರುವ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್ ಕೂಡಾ ಆರ್‌ಇ ಪ್ರಿಯರಲ್ಲಿ ಸಾಕಷ್ಟು ಕುತೂಹಲ ಹುಟ್ಟುಹಾಕಿದ್ದು, 648ಸಿಸಿ ಆಯಿಲ್ ಕೂಲ್ಡ್, ಪ್ಯಾರಾಲಲ್-ಟ್ವಿನ್ ಎಂಜಿನ್ ಸಹಾಯದಿಂದ 47-ಬಿಹೆಚ್‍‍ಪಿ ಮತ್ತು 52ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದಿವೆ.

MOST READ: ಅಚ್ಛೇ ದಿನ್ ಬಂತು - ನೀವು ಊಹಿಸಲಾಗದಷ್ಟು ಕಡಿಮೆಯಾಗಲಿವೆ ಇಂಧನ ಬೆಲೆಗಳು..

ಇಐಸಿಎಂಎ ಬೈಕ್ ಎಕ್ಸ್‌ಪೋ: ಗಮನಸೆಳೆದ ರಾಯಲ್ ಎನ್‌ಫೀಲ್ಡ್ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್..!

ಜೊತೆಗೆ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹೊಸ ಬೈಕ್ ನಿರ್ಮಾಣಕ್ಕಾಗಿ ವಿನೂತನ ಬೈಕ್ ಪ್ಲ್ಯಾಟ್‌ಫಾರ್ಮ್ ಸಿದ್ದಗೊಳಿಸಿದ್ದು, ಜೆ, ಪಿ, ಕ್ಯೂ ಎಂದು ವಿಗಂಡಣೆ ಮಾಡಿ ಬೈಕ್ ಸಿದ್ದಗೊಳಿಸುತ್ತಿದೆ. ಇದರಲ್ಲಿ ಜೆ ಪ್ಲ್ಯಾಟ್‌ಫಾರ್ಮ್‌ನಲ್ಲಿ 350ಸಿಸಿಯಿಂದ 500ಸಿಸಿ ಒಳಗಿನ ಬೈಕ್‌ಗಳು ಮತ್ತು ಪಿ ಹಾಗೂ ಕ್ಯೂ ಪ್ಲ್ಯಾಟ್‌ಫಾರ್ಮ್‌ಗಳು 700ಸಿಸಿ ಮೇಲ್ಪಟ್ಟ ಬೈಕ್ ನಿರ್ಮಾಣಕ್ಕೆ ಬಳಕೆಯಾಗಲಿದೆ.

ಇಐಸಿಎಂಎ ಬೈಕ್ ಎಕ್ಸ್‌ಪೋ: ಗಮನಸೆಳೆದ ರಾಯಲ್ ಎನ್‌ಫೀಲ್ಡ್ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್..!

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯು ಈಗಾಗಲೇ ವಿವಿಧ ಮಾದರಿಯ ಬೈಕ್ ಉತ್ಪನ್ನಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಸದ್ದು ಮಾಡಿದ್ದು, ಇದೀಗ ಪ್ರೀಮಿಯಂ ಫೀಚರ್ಸ್ ಹೊಂದಿರುವ ಟ್ವಿನ್ ಸರಣಿ ಬೈಕ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದೆ. ಹೀಗಾಗಿ ಬೆಲೆಯಲ್ಲಿ ದುಬಾರಿ ಎನ್ನಿಸಲಿರುವ ಈ ಬೈಕ್‌ಗಳು ದೇಶಿಯ ಗ್ರಾಹಕರು ಯಾವ ರೀತಿ ಸೆಳೆಯಲಿವೆ ಎನ್ನುವುದೇ ಸದ್ಯ ಆಟೋ ಉದ್ಯಮದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

Article Published On: Wednesday, November 7, 2018, 10:53 [IST]
English summary
EICMA 2018: Royal Enfield Unveils 836cc KX Concept — The Best Throwback Ever?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+