ಮಾರುಕಟ್ಟೆಗೆ ಹೊಸ 110ಸಿಸಿ ಬೈಕ್ ಅನ್ನು ಪರಿಚಯಿಸಲಿದೆ ಟಿವಿಎಸ್..

2018ರ ಹಬ್ಬದ ಋತುವಿನಲ್ಲಿ ತಮ್ಮ ಉತ್ಪನ್ನಗಳನ್ನು ಬಿಡುಗಡೆಗೊಳಿಸಲು ಎಲ್ಲಾ ವಾಹನ ತಯಾರಕ ಸಂಸ್ಥೆಗಳು ಯೋಜನೆಯಲಿದ್ದು, ಟಿವಿಎಸ್ ಕೂಡಾ ಹೊಸದಾಗಿ 110ಸಿಸಿ ಮತ್ತು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದ ಬೈಕ್ ಅನ್ನು ಆಗಸ್ಟ್ 23ರಂದು ಮಾರುಕಟ್ಟೆಯಲ್

By Rahul Ts

2018ರ ಹಬ್ಬದ ಋತುವಿನಲ್ಲಿ ತಮ್ಮ ಉತ್ಪನ್ನಗಳನ್ನು ಬಿಡುಗಡೆಗೊಳಿಸಲು ಎಲ್ಲಾ ವಾಹನ ತಯಾರಕ ಸಂಸ್ಥೆಗಳು ಯೋಜನೆಯಲಿದ್ದು, ಟಿವಿಎಸ್ ಕೂಡಾ ಹೊಸದಾಗಿ 110ಸಿಸಿ ಮತ್ತು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದ ಬೈಕ್ ಅನ್ನು ಆಗಸ್ಟ್ 23ರಂದು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಮಾರುಕಟ್ಟೆಗೆ ಹೊಸ 110ಸಿಸಿ ಬೈಕ್ ಅನ್ನು ಪರಿಚಯಿಸಲಿದೆ ಟಿವಿಎಸ್..

ಬಿಡುಗಡೆಗೊಳಲಿರುವ ಟಿವಿಎಸ್‍ನ 110ಸಿಸಿ ಬೈಕ್ ರೇಡಿಯನ್ ಎಂದು ಕರೆಯಲಾಗುತ್ತಿದ್ದು, ಈ ಬೈಕಿನ ವಿನ್ಯಾಸವು ದೇಶದಲ್ಲಿ ಯುವ ಸಮುದಾಯವನ್ನು ಸೆಳೆಯಲು ತಯಾರಿಸಲಾಗಿದೆ. ಟಿವಿಎಸ್‍ ಬೈಕ್‍‍ಗಳಲ್ಲಿರುವ ಟಿವಿಎಸ್ ವಿಕ್ಟರ್ ಮತ್ತು ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್‍‍ಗಳ ಜೊತೆಗೆ ಮಾರಾಟವಾಗಲಿವೆ ಎನ್ನಲಾಗಿದೆ.

ಮಾರುಕಟ್ಟೆಗೆ ಹೊಸ 110ಸಿಸಿ ಬೈಕ್ ಅನ್ನು ಪರಿಚಯಿಸಲಿದೆ ಟಿವಿಎಸ್..

ಟಿವಿಎಸ್ ರೇಡಿಯನ್ ವೈಶಿಷ್ಟ್ಯತೆಗಳು

ಹೊಸ ಟಿವಿಎಸ್ ರೇಡಿಯನ್ ಬೈಕ್‍‍ನಲ್ಲಿ ಟಿವಿಎಸ್ ಎನ್‍‍ಟಾರ್ಕ್ ಸ್ಕೂಟರ್‍‍ನಲ್ಲಿ ನೀಡಿರುವ ಹಾಗೆಯೆ ಆಲ್ ಡಿಜಿಟಲ್ ಇನ್ಸ್ಟ್ರೂಮೆಂಟ್ ಪ್ಯಾನೆಲ್, ಸ್ಮಾರ್ಟ್ ಕನೆಕ್ಟೆಡ್, ಸ್ಪೋರ್ಟಿಂಗ್ ಫೀಚರ್ಸ್‍‍ನಂತೆಯೆ ಡೆಡಿಕೇಟೆಡ್ ಆಪ್ಸ್ ಮತ್ತು ಸ್ಯಾಟಿಲೈಟ್ ನ್ಯಾವಿಗೇಶನ್ ಕನೆಕ್ಟಿವಿಟಿಯನ್ನು ಪಡೆದುಕೊಂಡಿರಲಿದೆ.

ಮಾರುಕಟ್ಟೆಗೆ ಹೊಸ 110ಸಿಸಿ ಬೈಕ್ ಅನ್ನು ಪರಿಚಯಿಸಲಿದೆ ಟಿವಿಎಸ್..

ಟಿವಿಎಸ್ ರೇಡಿಯನ್ 110 ಬೈಕ್ ಟಿವಿಎಸ್ ವಿಕ್ಟರ್ ಹಾಗು ಸ್ಟಾರ್ ಸಿಟಿ ಪ್ಲಸ್ ಬೈಕ್‍‍ಗಳಿಗಿಂತ ವಿಭಿನ್ನವಾದ ವಿನ್ಯಾಸವನ್ನು ಹೊಂದಿರಲಿದೆ ಎಂಬ ಬರವಸೆಯಲಿದ್ದು, 2012ರ ಆಟೋ ಎಕ್ಸ್ ಪೋ ಮೇಳದಲ್ಲಿ ಈ ಬೈಕಿನ 125ಸಿಸಿ ಮಾದರಿಯ ಪರಿಕಲ್ಪನೆಯನ್ನು ಪ್ರದರ್ಶಿಸಲಾಗಿತ್ತು.

ಮಾರುಕಟ್ಟೆಗೆ ಹೊಸ 110ಸಿಸಿ ಬೈಕ್ ಅನ್ನು ಪರಿಚಯಿಸಲಿದೆ ಟಿವಿಎಸ್..

ಪ್ರಸ್ಥುತ ಟಿವಿಎಸ್ ಆಟೋ ಎಕ್ಸ್ ಪೋ ಮೇಳದಲ್ಲಿ ರೇಡಿಯನ್ 125ಸಿಸಿ ಬೈಕಿನ ಪರಿಕಲ್ಪನೆಯನ್ನು ಪ್ರದರ್ಶಿಸಿದರೂ, ಸಂಸ್ಥೆಯು ಈಗ ರೇಡಿಯನ್ 110ಸಿಸಿ ಬೈಕ್ ಅನ್ನು ಟಿವಿಎಸ್ ಸಂಸ್ಥೆಯಲ್ಲಿನ ಬೇರಾವ ಬೈಕ್‍‍ಗಳಲ್ಲಿಯು ಕಾಣದಾಂತಹ ಸ್ಟಯ್ಲಿಷ್ ಹಾಗು ಡಿಸೈನ್ ಅನ್ನು ಪಡೆದುಕೊಂಡಿರಲಿದೆ ಎನ್ನಲಾಗಿದೆ.

ಮಾರುಕಟ್ಟೆಗೆ ಹೊಸ 110ಸಿಸಿ ಬೈಕ್ ಅನ್ನು ಪರಿಚಯಿಸಲಿದೆ ಟಿವಿಎಸ್..

ಎಂಜಿನ್ ಸಾಮರ್ಥ್ಯ

ಆಗಸ್ಟ್ 23ರಂದು ಬಿಡುಗಡೆಗೊಳ್ಳಲಿರುವ ಟಿವಿಎಸ್ ರೇಡಿಯನ್ 110 ಬೈಕ್ ಟಿವಿಎಸ್ ವಿಕ್ಟರ್ ಬೈಕ್‍‍ನಲ್ಲಿ ಅಳವಡಿಸಲಾದ ಎಂಜಿನ್ ಅನ್ನು ಪಡೆದುಕೊಂಡಿರಲಿದೆ. ಈ ಎಂಜಿನ್ 109.7ಸಿಸಿ ಸಿಂಗಲ್ ಸಿಲೆಂಡರ್ ಸಹಾಯದಿಂದ 9.5 ಬಿಹೆಚ್‍‍ಪಿ ಮತ್ತು 9.4 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆಯಲಿದೆ.

ಮಾರುಕಟ್ಟೆಗೆ ಹೊಸ 110ಸಿಸಿ ಬೈಕ್ ಅನ್ನು ಪರಿಚಯಿಸಲಿದೆ ಟಿವಿಎಸ್..

ಪ್ರತೀ ಲೀಟರ್‍‍ಗೆ ಸುಮಾರು 72 ಕಿಲೋಮೀಟರ್ ಮೈಲೇಜ್ ನೀಡಬಲ್ಲ ರೇಡಿಯನ್ 110ಸಿಸಿ ಬೈಕ್, ಸಂಸ್ಥೆಯಲ್ಲಿನ ಫೀನಿಕ್ಸ್ ಬೈಕ್ ಅನ್ನು ಸ್ಥಳಾಂತರಿಸಲಿದೆ. ಇನ್ನು ಈ ಬೈಕಿನ ಬೆಲೆಯ ಬಗ್ಗೆ ಸಂಸ್ಥೆಯು ಬೇರಾವ ಮಾಹಿತಿಯನ್ನು ಬಿಡುಗಡೆಗೊಳಿಸಲಿಲ್ಲವಾದುದರಿಂದ, ಬಿಡುಗಡೆಗೊಂಡ ನಂತರ ಹೆಚ್ಚು ಮಾಹಿತಿಗಳು ಲಭ್ಯವಾಗಲಿದೆ. ಅಲ್ಲದೇ ಬಿಡುಗಡೆಗೊಂಡ ನಂತರ ಮಾರುಕಟ್ತೆಯಲ್ಲಿ, ಹೀರೋ ಸ್ಪ್ಲೆಂಡರ್, ಬಜಾಜ್ ಡಿಸ್ಕವರ್ 110, ಹೋಂಡಾ ಡ್ರೀಮ್ ಯುಗ, ಹೋಂಡಾ ಸಿಡಿ 110 ಮತ್ತು ಇನ್ನಿತರೆ 110ಸಿಸಿ ಬೈಕ್‍‍ಗಳಿಗೆ ಪೈಪೋಟಿ ನೀಡಲಿದೆ.

Article Published On: Thursday, August 16, 2018, 12:07 [IST]
English summary
TVS To Launch All-New 110 cc Motorcycle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+