YouTube

ಗ್ರಾಹಕರ ಕೈ ಸೇರಿದ ಹೀರೋ ಹೊಚ್ಚ ಹೊಸ ಬೈಕ್ ಎಕ್ಸ್‌ಟ್ರಿಮ್ 200ಆರ್

ಗ್ರಾಹಕರ ಕೈ ಸೇರಿದ ಹೀರೋ ಹೊಚ್ಚ ಹೊಸ ಬೈಕ್ ಎಕ್ಸ್‌ಟ್ರಿಮ್ 200ಆರ್

By Praveen Sannamani

ಹೀರೋ ಮೋಟೋಕಾರ್ಪ್ ಸಂಸ್ಥೆಯು ಕಳೆದ ಜನವರಿಯಲ್ಲಿ ಅನಾವರಣಗೊಳಿಸಿದ್ದ ತನ್ನ ಹೊಚ್ಚ ಹೊಸ ಎಕ್ಸ್‌ಟ್ರಿಮ್ 200ಆರ್ ಬೈಕ್‌ನ್ನು ಸದ್ಯದಲ್ಲೇ ದೇಶಾದ್ಯಂತ ಬಿಡುಗಡೆ ಮಾಡುತ್ತಿದ್ದು, ಅದಕ್ಕೂ ಮುನ್ನಈಶಾನ್ಯ ರಾಜ್ಯಗಳಲ್ಲಿ ಎಕ್ಸ್‌ಟ್ರಿಮ್ 200ಆರ್ ಬೈಕ್ ಬಿಡುಗಡೆ ಮಾಡಿದಲ್ಲದೇ ವಿತರಣಾ ಪ್ರಕ್ರಿಯೆಯನ್ನು ಆರಂಭಗೊಳಿಸಿದೆ.

ಗ್ರಾಹಕರ ಕೈ ಸೇರಿದ ಹೀರೋ ಹೊಚ್ಚ ಹೊಸ ಬೈಕ್ ಎಕ್ಸ್‌ಟ್ರಿಮ್ 200ಆರ್

ಹೀರೋ ಸಂಸ್ಥೆಯು ಕಮ್ಯೂಟರ್ ಬೈಕ್ ಪ್ರೇಮಿಗಳನ್ನು ಸೆಳೆಯುವ ಉದ್ದೇಶದೊಂದಿಗೆ ಎಕ್ಸ್‌ಟ್ರಿಮ್ 200ಆರ್ ಬೈಕ್ ಮಾದರಿಯನ್ನು ಸಿದ್ದಗೊಳಿಸಿದ್ದು, ಹೀರೋ ಸಿಬಿಝೆಡ್ ಎಕ್ಸ್‌ಟ್ರಿಮ್ ಬೈಕಿನ ಮುಂದುವರೆದ ಮಾದರಿಯಾಗಿರಲಿದೆ. ಹೀಗಾಗಿ ಹೊಸ ಬೈಕಿನ ಮೇಲೆ ಭಾರೀ ನೀರಿಕ್ಷೆಗಳಿದ್ದು, ಮಧ್ಯಮ ಗಾತ್ರದ ಸೂಪರ್ ಬೈಕ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿದೆ.

ಗ್ರಾಹಕರ ಕೈ ಸೇರಿದ ಹೀರೋ ಹೊಚ್ಚ ಹೊಸ ಬೈಕ್ ಎಕ್ಸ್‌ಟ್ರಿಮ್ 200ಆರ್

ಈಶಾನ್ಯ ರಾಜ್ಯಗಳಲ್ಲಿ ಬಿಡುಗಡೆಗೊಂಡಿರುವ ಹೊಸ ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳು ಎಕ್ಸ್‌ಶೋರಂ ಪ್ರಕಾರ ರೂ.88,000 ಬೆಲೆ ಹೊಂದಿದ್ದು, 200ಸಿಸಿ ವಿಭಾಗದಲ್ಲೇ ಇದು ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಬೈಕ್ ಮಾದರಿಯಾಗಿದೆ.

ಗ್ರಾಹಕರ ಕೈ ಸೇರಿದ ಹೀರೋ ಹೊಚ್ಚ ಹೊಸ ಬೈಕ್ ಎಕ್ಸ್‌ಟ್ರಿಮ್ 200ಆರ್

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಹೀರೋ ಸಂಸ್ಥೆಯು ಹೀರೋ ಸಂಸ್ಥೆಯು ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳ ಬೆಲೆಗಳ ಪಟ್ಟಿಯು ಸದ್ಯಕ್ಕೆ ಈಶಾನ್ಯ ರಾಜ್ಯಗಳಿಗೆ ಮಾತ್ರ ಅನ್ವಯವಾಗಿ ಇನ್ನುಳಿದ ರಾಜ್ಯಗಳಲ್ಲಿ ಎಷ್ಟು ಬೆಲೆ ಹೊಂದಿರಲಿವೆ ಎನ್ನುವ ಬಗ್ಗೆ ಇನ್ನಷ್ಟೇ ಮಾಹಿತಿ ನೀಡಬೇಕಿದೆ.

ಗ್ರಾಹಕರ ಕೈ ಸೇರಿದ ಹೀರೋ ಹೊಚ್ಚ ಹೊಸ ಬೈಕ್ ಎಕ್ಸ್‌ಟ್ರಿಮ್ 200ಆರ್

ಕೆಲವು ಮೂಲಗಳ ಪ್ರಕಾರ ಈಶಾನ್ಯ ರಾಜ್ಯಗಳಲ್ಲಿ ನಿಗದಿ ಪಡಿಸಲಾಗಿರುವ ಬೆಲೆಗಳಿಂತ ಇನ್ನುಳಿದ ರಾಜ್ಯಗಳಲ್ಲಿ ಎಕ್ಸ್‌ಟ್ರಿಮ್ ಬೆಲೆಯು ರೂ. 90 ಸಾವಿರದಿಂದ ರೂ. 91ಸಾವಿರ ಇರಬಹುದೆಂದು ಹೇಳಲಾಗುತ್ತಿದ್ದು, 200ಸಿಸಿ ವಿಭಾಗದ ಬೈಕ್‌ಗಳ ಬೆಲೆಗೆ ಹೋಲಿಕೆ ಮಾಡಿದಲ್ಲಿ ಇದು ತುಂಬಾ ಕಡಿಮೆ ಎಂದು ಹೇಳಬಹುದು.

ಗ್ರಾಹಕರ ಕೈ ಸೇರಿದ ಹೀರೋ ಹೊಚ್ಚ ಹೊಸ ಬೈಕ್ ಎಕ್ಸ್‌ಟ್ರಿಮ್ 200ಆರ್

ಇದಕ್ಕೆ ಕಾರಣ ಸದ್ಯ ಮಾರುಕಟ್ಟೆಯಲ್ಲಿರುವ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್‌ಗಳು ಎಕ್ಸ್‌ಶೋರಂ ಪ್ರಕಾರ 1.03 ಲಕ್ಷ ಬೆಲೆ ಹೊಂದಿದ್ದರೆ ಮತ್ತೊಂದು ಜನಪ್ರಿಯ ಬೈಕ್ ಬಜಾಜ್ ಪಲ್ಸರ್ ಎನ್ಎಸ್200 ಬೈಕ್‌ಗಳು ಎಕ್ಸ್‌ಶೋರಂ ಪ್ರಕಾರ 1 ಲಕ್ಷ ಬೆಲೆ ಹೊಂದಿವೆ.

ಗ್ರಾಹಕರ ಕೈ ಸೇರಿದ ಹೀರೋ ಹೊಚ್ಚ ಹೊಸ ಬೈಕ್ ಎಕ್ಸ್‌ಟ್ರಿಮ್ 200ಆರ್

ಹೀಗಿರುವಾಗ ಎಕ್ಸ್‌ಶೋರಂ ಪ್ರಕಾರ ರೂ.90 ಸಾವಿರ ಬೆಲೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಎಕ್ಸ್‌ಟ್ರಿಮ್ 200ಆರ್ ಬೈಕ್ ಕೈಗುಟುವ ಬೆಲೆಗಳಲ್ಲಿ ಲಭ್ಯವಾಗುವುದಲ್ಲದೇ ಮೇಲೆ ತಿಳಿಸಲಾದ ಜನಪ್ರಿಯ ಬೈಕ್ ಮಾದರಿಗಳಿಗೆ ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಗ್ರಾಹಕರ ಕೈ ಸೇರಿದ ಹೀರೋ ಹೊಚ್ಚ ಹೊಸ ಬೈಕ್ ಎಕ್ಸ್‌ಟ್ರಿಮ್ 200ಆರ್

ಎಂಜಿನ್ ಸಾಮರ್ಥ್ಯ

200 ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿರುವ ಎಕ್ಸ್‌ಟ್ರಿಮ್ 200ಆರ್ ಬೈಕ್ ಮಾದರಿಗಳು 18.1-ಬಿಎಚ್‌ಪಿ ಮತ್ತು 17.2-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿದೆ.

ಗ್ರಾಹಕರ ಕೈ ಸೇರಿದ ಹೀರೋ ಹೊಚ್ಚ ಹೊಸ ಬೈಕ್ ಎಕ್ಸ್‌ಟ್ರಿಮ್ 200ಆರ್

ಇದಲ್ಲದೇ ಬೈಕ್ ಮುಂಭಾಗ ಮತ್ತು ಹಿಂಭಾಗದಲ್ಲಿ 37-ಎಂಎಂ ಟೆಲಿಸ್ಕೋಪಿಕ್ ಸಸ್ಪೆಷನ್, 276-ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್, 220-ಎಂಎಂ ರಿಯರ್ ಡಿಸ್ಕ್ ಬ್ರೇಕ್ ಹೊಂದಿರುವ ಎಕ್ಸ್‌ಟ್ರಿಮ್ 200ಆರ್ ಬೈಕ್‌ಗಳು ಸುರಕ್ಷತೆಗಾಗಿ ಸಿಂಗಲ್ ಚಾನಲ್ ಎಬಿಎಸ್ ಟೆಕ್ನಾಲಜಿ ಅನ್ನು ಸಹ ಹೊಂದಿದೆ.

ಗ್ರಾಹಕರ ಕೈ ಸೇರಿದ ಹೀರೋ ಹೊಚ್ಚ ಹೊಸ ಬೈಕ್ ಎಕ್ಸ್‌ಟ್ರಿಮ್ 200ಆರ್

ಹೀಗಾಗಿ ಹೀರೋ ಸಂಸ್ಥೆಯು ಪರಿಚಯಿಸುತ್ತಿರುವ ಹೊಸ ಬೈಕ್ ಮಾದರಿಯು 160ಸಿಸಿಯಿಂದ 200ಸಿಸಿ ಸಾಮರ್ಥ್ಯದ ಬೈಕ್ ಖರೀದಿಸುವ ಗ್ರಾಹಕರನ್ನು ಸೆಳೆಯುವ ಎಲ್ಲಾ ಗುಣಲಕ್ಷಣ ಹೊಂದಿರುವ ಈ ಹೊಸ ಬೈಕ್ ಇದೇ ತಿಂಗಳ ಕೊನೆಯಲ್ಲಿ ರಾಜ್ಯದ ಮಾರುಕಟ್ಟೆಯಲ್ಲೂ ಬಿಡುಗಡೆಗೊಳ್ಳುತ್ತಿರುವುದು ಸಂತಸದ ವಿಚಾರ.

Most Read Articles

Kannada
Read more on hero motocorp
English summary
Hero MotoCorp Begins Deliveries Of The Xtreme 200R.
Story first published: Tuesday, July 10, 2018, 11:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X