ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಪ್ರತಿಷ್ಠಿತ ಪ್ರಶಸ್ತಿ ಪಡೆದ ಆರ್‌ಇ ಇಂಟರ್‌ಸೆಪ್ಟರ್ 650

ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿದ್ದ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳು ಕಳೆದ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದು, ಇದೀಗ ಬೈಕ್ ವಿನ್ಯಾಸ ಮತ್ತು ಗುಣಮಟ್ಟದ ಆಧಾರದ ಮೇಲೆ ನೀಡಲಾಗುವ 'ಇಂಡಿಯನ್ ಮೋಟಾರ್‌ಸೈಕಲ್ ಆಫ್ ದಿ ಇಯರ್' ಪ್ರಶಸ್ತಿಯನ್ನು ಇಂಟರ್‌ಸೆಪ್ಟರ್ 650 ಬೈಕ್ ತನ್ನದಾಗಿಸಿಕೊಂಡಿದೆ.

ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಪ್ರತಿಷ್ಠಿತ ಪ್ರಶಸ್ತಿ ಪಡೆದ ಆರ್‌ಇ ಇಂಟರ್‌ಸೆಪ್ಟರ್ 650

ಹೌದು, ಭಾರತದಲ್ಲಿ ಈ ವರ್ಷ ಬಿಡುಗಡೆಯಾದ 13 ಹೊಸ ಬೈಕ್‌ಗಳ ಪೈಕಿ ಇಂಟರ್‌ಸೆಪ್ಟರ್ 650 ಬೈಕಿಗೆ 2019ರ ಇಂಡಿಯನ್ ಮೋಟಾರ್‌ಸೈಕಲ್ ಆಫ್ ದಿ ಇಯರ್ ಪ್ರಶಸ್ತಿ ನೀಡಲಾಗಿದ್ದು, ಇದೇ ಪ್ರಶಸ್ತಿಗಾಗಿ ನಾಮಿನೆಟ್‌ಗೊಂಡಿದ್ದ ಟಿವಿಎಸ್ ಅಪಾಚೆ 160 ಆರ್‌ಟಿಆರ್ 4ವಿ, ಹೀರೋ ಎಕ್ಸ್‌ಟ್ರಿಮ್ 200ಆರ್, ಯಮಹಾ ಆರ್15 ವಿ3, ಟಿವಿಎಸ್ ಅಪಾಚೆ ಆರ್‌ಆರ್310, ಬಿಎಂಡಬ್ಲ್ಯು 310 ಟ್ವಿನ್ ಬೈಕ್, ಹೋಂಡಾ ಸಿಬಿಆರ್650ಎಫ್, ಸುಜುಕಿ ವಿ-ಸ್ಪೋರ್ಮ್ ಬೈಕ್‌‌ಗಳನ್ನು ಹಿಂದಿಕ್ಕಿ ಇಂಟರ್‌ಸೆಪ್ಟರ್ 650 ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಪ್ರತಿಷ್ಠಿತ ಪ್ರಶಸ್ತಿ ಪಡೆದ ಆರ್‌ಇ ಇಂಟರ್‌ಸೆಪ್ಟರ್ 650

ಕಳೆದ ವರ್ಷ ಇಂಡಿಯನ್ ಮೋಟಾರ್‌ಸೈಕಲ್ ಆಫ್ ದಿ ಇಯರ್ ಪ್ರಶಸ್ತಿ ಪಡೆದುಕೊಂಡಿದ್ದ ಕೆಟಿಎಂ ಡ್ಯೂಕ್ 390 ಕೂಡಾ ಅಚ್ಚರಿ ಎಂಬಂತೆ ಪ್ರಶಸ್ತಿ ಪಾತ್ರವಾಗಿದ್ದಲ್ಲದೇ ಸೂಪರ್ ಬೈಕ್ ಪ್ರಿಯರ ಆಕರ್ಷಣೆಗೆ ಕಾರಣವಾಗಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಪ್ರತಿಷ್ಠಿತ ಪ್ರಶಸ್ತಿ ಪಡೆದ ಆರ್‌ಇ ಇಂಟರ್‌ಸೆಪ್ಟರ್ 650

ಇನ್ನು ಕ್ಲಾಸಿಕ್ ವಿನ್ಯಾಸದ ಮತ್ತು ಅಧಿಕ ಸಾಮರ್ಥ್ಯದ ಬೈಕ್‍ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‍ ಮೂಲಕ ಮತ್ತೊಂದು ಹಂತದತ್ತ ಹೆಜ್ಜೆಯಿಡುತ್ತಿದೆ.

ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಪ್ರತಿಷ್ಠಿತ ಪ್ರಶಸ್ತಿ ಪಡೆದ ಆರ್‌ಇ ಇಂಟರ್‌ಸೆಪ್ಟರ್ 650

ಇಂಟರ್‍‍ಸೆಪ್ಟರ್ 650 ಬೈಕ್ ಮಾದರಿಯು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 2.50 ಲಕ್ಷ ಮತ್ತು ಕಾಂಟಿನೆಂಟಲ್ ಜಿಟಿ 650 ರೂ. 2.65 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿ ಕವಾಸಕಿ ನಿಂಜಾ 300 ಬೈಕ್‍ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಪ್ರತಿಷ್ಠಿತ ಪ್ರಶಸ್ತಿ ಪಡೆದ ಆರ್‌ಇ ಇಂಟರ್‌ಸೆಪ್ಟರ್ 650

ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕ್ ಆವೃತ್ತಿಯು 60ರ ದಶಕದ ಇಂಟರ್‍‍ಸೆಪ್ಟರ್‍‍ನಿಂದ ಪ್ರೇರಣೆಯನ್ನು ಹೊಂದಿದ್ದು, ಬ್ರಿಟಿಷ್ ರೋಡ್‍ಸ್ಟರ್ ಮಾದರಿಯ ನೋಟವನ್ನು ಪಡೆದುಕೊಂಡಿದೆ. ಇನ್ನು ಇಂಟರ್‍‍‍ಸೆಪ್ಟರ್ 650 ಬೈಕ್ ಕ್ಲೀನ್-ಲೈನ್, ಕ್ಲಾಸಿಕ್ ಟಿಯರ್‍‍ಡ್ರಾಪ್ ಆಕಾರದ ಫ್ಯುಯಲ್ ಟ್ಯಾಂಕ್ ಮತ್ತು ಡೈಮಂಡ್-ಕ್ವಿಲ್ಟ್-ಪ್ಯಾಟರ್ನ್ಡ್ ಟ್ವಿನ್ ಸೀಟ್‍ಗಳನ್ನು ನೀಡಲಾಗಿದೆ.

ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಪ್ರತಿಷ್ಠಿತ ಪ್ರಶಸ್ತಿ ಪಡೆದ ಆರ್‌ಇ ಇಂಟರ್‌ಸೆಪ್ಟರ್ 650

ಕೇಫ್ ರೇಸರ್ ವಿನ್ಯಾಸವನ್ನು ಪಡೆದುಕೊಂಡಿರುವ ರಾಯಲ್ ಎನ್‍ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ 1950ರ ದಶಕದಲ್ಲಿನ ಕೆಫ್‍ ರೇಸರ್ ವಿನ್ಯಾಸವನ್ನು ಆಧರಿಸಿದ್ದು, ಕೆತ್ತಲಾದ ಫ್ಯುಯಲ್ ಟ್ಯಾಂಕ್, ತೂಕದ ನಿಲುವು, ರಿಯರ್-ಫೂಟ್ ಪೆಗ್ಸ್ ಮತ್ತು ಹ್ಯಾಂಡಲ್‍ಬಾರ್‍‍ನ ಮೇಲೆ ಕ್ಲಿಪ್ ಅನ್ನು ಒದಗಿಸಲಾಗಿದೆ.

ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಪ್ರತಿಷ್ಠಿತ ಪ್ರಶಸ್ತಿ ಪಡೆದ ಆರ್‌ಇ ಇಂಟರ್‌ಸೆಪ್ಟರ್ 650

ಎಂಜಿನ್ ವೈಶಿಷ್ಟ್ಯತೆ

ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳು ಹೊಸ 649ಸಿಸಿ ಏರ್ ಕೂಲ್ಡ್, ಪ್ಯಾರಲಲ್ ಟ್ವಿನ್ ಎಂಜಿನ್ ಸಹಾಯದಿಂದ 47-ಬಿಹೆಚ್‍ಪಿ ಮತ್ತು 52-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

MOST READ: ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಪ್ರತಿಷ್ಠಿತ ಪ್ರಶಸ್ತಿ ಪಡೆದ ಆರ್‌ಇ ಇಂಟರ್‌ಸೆಪ್ಟರ್ 650

ಎರಡು ಬೈಕ್‍ಗಳು 41ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 110ಎಂಎಂ ಟ್ವಿನ್ ಕಾಯಿಲ್-ಕವರ್ ಶಾಕ್ ಅಬ್ಸಾರ್ಬರ್ ಅನ್ನು ಒದಗಿಸಲಾಗಿದೆ. 650 ಟ್ವಿನ್ ಬೈಕ್‍ಗಳು 18 ಇಂಚಿನ 360 ಸ್ಪೋಕ್ ಅಲ್ಯುಮಿನಿಯಂ ಅಲಾಯ್ ವ್ಹೀಲ್ ಮತ್ತು ಪಿರೆಲ್ಲಿ ಪ್ಯಾಂಥಂ ಸ್ಪೋರ್ಟ್‍‍ಕಾಂಪ್ ಟೈ‍‍ರ್‍‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಪ್ರತಿಷ್ಠಿತ ಪ್ರಶಸ್ತಿ ಪಡೆದ ಆರ್‌ಇ ಇಂಟರ್‌ಸೆಪ್ಟರ್ 650

ಬೈಕ್ ಸವಾರರ ಸುರಕ್ಷತೆಗಾಗಿ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍‍ಗಳಲ್ಲಿ ಬೈಬ್ರೆ (ಬೈ ಬ್ರೆಂಬೊ) ಸಂಸ್ಥೆಯಿಂದ ಪಡೆದ 320ಎಂಎಂ ಮತ್ತು 240ಎಂಎಂನ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದ್ದು, ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

MOST READ: ವಾಹನ ಸವಾರರೇ ಎಚ್ಚರ- ಪೆಟ್ರೋಲ್ ಬಂಕ್‌ಗಳಲ್ಲಿ ಹೇಗೆ ನಡೆಯುತ್ತೆ ನೋಡಿ ಹಗಲು ದರೋಡೆ..!

ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಪ್ರತಿಷ್ಠಿತ ಪ್ರಶಸ್ತಿ ಪಡೆದ ಆರ್‌ಇ ಇಂಟರ್‌ಸೆಪ್ಟರ್ 650

ಲಭ್ಯವಿರುವ ಬೈಕ್ ಬಣ್ಣಗಳು

650 ಟ್ವಿನ್ ಬೈಕ್‍ಗಳು ವಿವಿಧ ಮತ್ತು ಆಕರ್ಷಕ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಇಂಟರ್‍‍ಸೆಪ್ಟರ್ 650 - ಮಾರ್ಕ್ ತ್ರೀ, ಗ್ಲಿಟ್ಟರ್ & ಡಸ್ಟ್, ಆರೆಂಜ್ ಕ್ರಶ್, ರ್‍ಯಾವಿಶಿಂಗ್ ರೆಡ್, ಸಿಲ್ವರ್ ಸ್ಪೆಕ್ಟ್ರಾ ಮತ್ತು ಬೇಕರ್ ಎಕ್ಸ್ಪ್ರೆಸ್ ಎಂಬ 7 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಪ್ರತಿಷ್ಠಿತ ಪ್ರಶಸ್ತಿ ಪಡೆದ ಆರ್‌ಇ ಇಂಟರ್‌ಸೆಪ್ಟರ್ 650

ಇನ್ನು ರಾಯಲ್ ಎನ್‍ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ - ಬ್ಲಾಕ್ ಮ್ಯಾಜಿಕ್, ವೆಂಚುರ ಬ್ಲೂ, ಮಿಸ್ಟರ್ ಕ್ಲೀನ್, ಡಾ.ಮೈಹೆಂ ಮತ್ತು ಐಸ್ ಕ್ವೀನ್ ಎಂಬ 5 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಪ್ರತಿಷ್ಠಿತ ಪ್ರಶಸ್ತಿ ಪಡೆದ ಆರ್‌ಇ ಇಂಟರ್‌ಸೆಪ್ಟರ್ 650

ಒಟ್ಟಿನಲ್ಲಿ ಬಿಡುಗಡೆಗೊಂಡ ಕೆಲವೇ ದಿನಗಳ ಅವಧಿಯಲ್ಲಿ ಗ್ರಾಹಕರನ್ನು ಸೆಳೆದಿರುವುದಲ್ಲದೇ ಇದೀಗ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವ ಆರ್‍‌ಇ ಇಂಟರ್‌ಸೆಪ್ಟರ್ 650 ಬೈಕ್ ಮಾದರಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಸದ್ದು ಮಾಡುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Royal Enfield Interceptor 650 Wins The Indian Motorcycle Of The Year (IMOTY 2019) Award. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X