ಜಾವಾ ಬೈಕ್ ಖರೀದಿ ಮಾಡುವುದಕ್ಕು ಮುನ್ನ ಟೆಸ್ಟ್ ಡ್ರೈವ್ ಮಾಡ್ಬೇಕಾ?

ಕ್ಲಾಸಿಕ್ ಬೈಕ್‍ಗಳ ತಯಾರಕ ಸಂಸ್ಥೆಯಾದ ಜಾವಾ ಮೋಟಾರ್‍‍ಸೈಕಲ್ಸ್ ಮಹೀಂದ್ರಾ ಸಂಸ್ಥೆಯೊಂದಿಗೆ ಕೈಜೋಡಿಸಿ ದೇಶಿಯ ಮಾರುಕಟ್ಟೆಯಲ್ಲಿ ಕೆಲವು ದಿನಗಳ ಹಿಂದಷ್ಟೆ ತಮ್ಮ ಜಾವಾ ಮತ್ತು ಜಾವಾ 42 ಬೈಕ್‍ಗಳನ್ನು ಬಿಡುಗಡೆಗೊಳಿಸಿದ್ದು, ಮೂರನೆಯ ಬೈಕ್ ಆದ ಪೆರಾಕ್ ಅನ್ನು ಮುಂದಿನ ವರ್ಷ ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿದೆ.

ಜಾವಾ ಬೈಕ್ ಖರೀದಿ ಮಾಡುವುದಕ್ಕು ಮುನ್ನ ಟೆಸ್ಟ್ ಡ್ರೈವ್ ಮಾಡಲು ಬಯಸುತ್ತಿದ್ದೀರ.?

ಬೈಕ್‍ಗಳು ಬಿಡುಗಡೆಯಾದ ಹೊಸತರಲ್ಲಿ ಕೇವಲ ಮಹೀಂದ್ರಾ ಸಂಸ್ಥೆಯಲ್ಲಿ ಹೊಸ ಬೈಕ್ ಖರೀದಿಗಾಗಿ ಬುಕ್ಕಿಂಗ್ ಅನ್ನು ಮಾಡಿಕೊಳ್ಳಲಾಗುತ್ತಿದ್ದು, ಇತ್ತೀಚೆಗೆ ದೇಶದಲ್ಲಿನ ಪ್ರಮುಖ ನಗರಗಳಲ್ಲಿ ಅಧಿಕೃತ ಜಾವಾ ಸಂಸ್ಥೆಯ ಡೀಲರ್‍‍ಶಿಪ್ ಅನ್ನು ತೆಗೆಯುವ ಆಲೋಚನೆಯಲ್ಲಿತ್ತು. ಕೊನೆಗು ಕೆಲವು ನಗರಗಳಲ್ಲಿ ಜಾವಾ ಡೀಲರ್‍‍ಶಿಪ್‍ಗಳು ತೆರೆಯಲಾಗಿದೆ.

ಜಾವಾ ಬೈಕ್ ಖರೀದಿ ಮಾಡುವುದಕ್ಕು ಮುನ್ನ ಟೆಸ್ಟ್ ಡ್ರೈವ್ ಮಾಡಲು ಬಯಸುತ್ತಿದ್ದೀರ.?

ಇಷ್ಟು ದಿನ ಕೇವಲ ಹೊಸ ಜಾವಾ ಬೈಕ್‍ಗಳ ಖರೀದಿಗಾಗಿ ಆನ್‍ಲೈನ್ ಮೂಲಕ ಬುಕ್ಕಿಂಗ್ ಅನ್ನು ಸ್ವೀಕರಿಸಲಾಗುತ್ತಿದ್ದು, ಇದೀಗ ಇದೇ ಡಿಸೆಂಬರ್ 15ರಿಂದ ಆಫ್‍ಲೈನ್ ಬುಕ್ಕಿಂಗ್ ಮತ್ತು ಬೈಕ್ ಖರೀದಿಸಲು ಆಸಕ್ತ ಗ್ರಾಹಕರಿಗೆ ಟೆಸ್ಟ್ ಡ್ರೈವ್ ಮಾಡುವ ಅವಕಾಶವನ್ನು ಸಹ ಕಲ್ಪಿಸಲಾಗುತ್ತಿದೆ ಎನ್ನಲಾಗಿದೆ.

ಜಾವಾ ಬೈಕ್ ಖರೀದಿ ಮಾಡುವುದಕ್ಕು ಮುನ್ನ ಟೆಸ್ಟ್ ಡ್ರೈವ್ ಮಾಡಲು ಬಯಸುತ್ತಿದ್ದೀರ.?

ಪ್ರಸ್ತುತ ಮರುಕಟ್ತೆಯಲ್ಲಿ ಕ್ಲಾಸಿಕ್ ಶೈಲಿಯ ಬೈಕ್‍ಗಳ ಮಾರಾಟದಲ್ಲಿ ಮುಂದಿರುವ ರಾಯಲ್ ಎನ್‍ಫೀಲ್ಡ್ ಸಂಸ್ಥೆಯನ್ನು ಹಿಂದಿಕ್ಕಲ್ಲು ಜಾವಾ ಮೋಟಾರ್‍‍ಸೈಕಲ್ಸ್ ಸಂಸ್ಥೆಯು ಹೊಸ ಎರಡು ಬೈಕ್‍ಗಳನ್ನು ಬಿಡುಗಡೆ ಮಾಡಿದ್ದು, ಬಿಡುಗಡೆ ಮಾಡಿರುವ ಎರಡು ಬೈಕ್‍ಗಳ ಬಗ್ಗೆ ಮಾಹಿತಿ ತಿಳಿಯಲು ಮುಂದಕ್ಕೆ ಓದಿರಿ..

ಜಾವಾ ಬೈಕ್ ಖರೀದಿ ಮಾಡುವುದಕ್ಕು ಮುನ್ನ ಟೆಸ್ಟ್ ಡ್ರೈವ್ ಮಾಡಲು ಬಯಸುತ್ತಿದ್ದೀರ.?

ಹೊಸ ಬೈಕಿನ ಬೆಲೆಗಳು

ಜಾವಾ, ಜಾವಾ 42 ಮತ್ತು ಪೆರಾಕ್ ಎಂಬ ಮೂರು ಹೊಸ ಬೈಕ್‍ಗಳನ್ನು ಜಾವಾ ಪರಿಚಯಿಸಿಲಿದ್ದು, ಆಕರ್ಷಕ ಬೆಲೆಯನ್ನು ಪಡೆದುಕೊಂಡಿದೆ. ಎಂಟ್ರಿ ಲೆವೆಲ್ ಜಾವಾ 42 ಬೈಕ್ ಮುಂಬೈ ಎಕ್ಸ್ ಶೋರಂ ಪ್ರಕಾರ ರೂ.1.55 ಲಕ್ಷ ಮತ್ತು ಜಾವಾ ಬೈಕ್ ರೂ. 1.65 ಲಕ್ಷದ ಮಾರಾಟದ ಬೆಲೆಯನ್ನು ಪಡೆದುಕೊಂಡಿದೆ. ಆದರೆ ಮೂರನೆಯ ಬೈಕ್ ಆದ ಬಾಬರ್ ಮಾದರಿಯ ಜಾವಾ ಪೆರಾಕ್ ಬೈಕ್ ಅನ್ನು ಕೇವಲ ಅನಾವರಣಗೊಳಿಸಿದ್ದು, ಶೀಘ್ರವೇ ಈ ಬೈಕ್ ಅನ್ನು ಸಹ ಬಿಡುಗಡೆಗೊಳಿಸುವುದರ ಬಗ್ಗೆ ಹೇಳಿಕೊಂಡಿದೆ.

ಜಾವಾ ಬೈಕ್ ಖರೀದಿ ಮಾಡುವುದಕ್ಕು ಮುನ್ನ ಟೆಸ್ಟ್ ಡ್ರೈವ್ ಮಾಡಲು ಬಯಸುತ್ತಿದ್ದೀರ.?

ಜಾವಾ ಬಿಡುಗಡೆಗೊಳಿಸಿದ ಈ ಎರಡು ಬೈಕ್‍ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್‍ಗಳೊಂದಿಗೆ ನೇರವಾಗಿ ಸ್ಪರ್ಧಿಸಲಿದೆ.

MOST READ: ಆಟೋ ಚಾಲಕರೇ ಇತ್ತ ಗಮನಿಸಿ - ನಿಮಗೊಂದು ಶಾಕಿಂಗ್ ವಿಚಾರ

ಜಾವಾ ಬೈಕ್ ಖರೀದಿ ಮಾಡುವುದಕ್ಕು ಮುನ್ನ ಟೆಸ್ಟ್ ಡ್ರೈವ್ ಮಾಡಲು ಬಯಸುತ್ತಿದ್ದೀರ.?

ಮಾರುಕಟ್ಟೆಗೆ ಲಗ್ಗೆಯಿಟ್ಟ ಜಾವಾ ಮತ್ತು ಜಾವಾ 42 ಬೈಕ್‍ಗಳು ರೆಟ್ರೋ ವಿನ್ಯಾಸವನ್ನು ಪಡೆದುಕೊಂಡಿದ್ದು, ಈ ಹಿಂದೆ ಮಾರಾಟಗೊಳ್ಳುತ್ತಿದ್ದ ಬೈಕ್‍ಗಳಂತೆಯೆ ಕಾಣಲಿದೆ. ಆದರೆ ಈ ಬಾರಿ ಈ ಬೈಕ್‍ಗಳಲ್ಲಿ ಬಳಸಲಾದ ಎಂಜಿನ್ ಹೈಲೈಟ್ ಎಂದು ಹೇಳಲಾಗಿದೆ.

ಜಾವಾ ಬೈಕ್ ಖರೀದಿ ಮಾಡುವುದಕ್ಕು ಮುನ್ನ ಟೆಸ್ಟ್ ಡ್ರೈವ್ ಮಾಡಲು ಬಯಸುತ್ತಿದ್ದೀರ.?

ಎಂಜಿನ್ ಸಾಮರ್ಥ್ಯ

ಜಾವಾ ಮತ್ತು ಜಾವಾ 42 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮತ್ತೊಂದು ಕಡೆ ಬಾಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ 334ಸಿಸಿ ಎಂಜಿನ್ ಅನ್ನು ಪಡೆದುಕೊಳ್ಳಲಿದೆ.

ಜಾವಾ ಬೈಕ್ ಖರೀದಿ ಮಾಡುವುದಕ್ಕು ಮುನ್ನ ಟೆಸ್ಟ್ ಡ್ರೈವ್ ಮಾಡಲು ಬಯಸುತ್ತಿದ್ದೀರ.?

ಲಭ್ಯವಿರುವ ಬಣ್ಣಗಳು

ಜಾವಾ ಬಿಡುಗಡೆಗೊಳಿಸಿದ ಈ ಎರಡೂ ಬೈಕ್‍ಗಳು ಆಕರ್ಷಕ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ. ಜಾವಾ ಬೈಕ್ - ಜಾವಾ ಬ್ಲಾಕ್, ಜಾವಾ ಮರೂನ್ ಮತ್ತು ಜಾವಾ ಗ್ರೇ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ.

ಜಾವಾ ಬೈಕ್ ಖರೀದಿ ಮಾಡುವುದಕ್ಕು ಮುನ್ನ ಟೆಸ್ಟ್ ಡ್ರೈವ್ ಮಾಡಲು ಬಯಸುತ್ತಿದ್ದೀರ.?

ಇನ್ನು ಜಾವಾ 42 ಬೈಕ್ ಹಾಲಿಸ್ ಟೀಲ್, ಗ್ಲಾಕ್ಟಿಕ್ ಗ್ರೀನ್, ಸ್ಟಾರ್‍‍ಲೈಟ್ ಬ್ಲೂ, ಲುಮೊಸ್ ಲೈಮ್, ನೆಬ್ಯುಲಾ ಬ್ಲೂ ಮತ್ತು ಕೊಮೆಟ್ ರೆಡ್ ಎಂಬ ಆರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

MOST READ: ವಾಹನ ಮಾಲೀಕರೇ ಇತ್ತ ಗಮನಿಸಿ - ನಂಬರ್ ಪ್ಲೇಟ್‍ನಲ್ಲಿ ಸಧ್ಯದಲ್ಲೆ ಭಾರೀ ಬದಲಾವಣೆ?

ಜಾವಾ ಬೈಕ್ ಖರೀದಿ ಮಾಡುವುದಕ್ಕು ಮುನ್ನ ಟೆಸ್ಟ್ ಡ್ರೈವ್ ಮಾಡಲು ಬಯಸುತ್ತಿದ್ದೀರ.?

ಡ್ರೈವ್‍ಸ್ಪಾರ್ಕ್ ಕನ್ನಡ ಅಭಿಪ್ರಾಯ

ಮೇಲೆ ಹೇಳಿರುವ ಹಾಗೆ ಜಾವಾ ಮೋಟಾರ್‍‍ಸೈಕಲ್ಸ್ ಸಂಸ್ಥೆಯು 70 ಮತ್ತು 80ರ ದಶಕದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಸದ್ದು ಮಾಡಿತ್ತು. ಆದರೆ ಇದೀಗ ಮತ್ತೆ ಮಾರುಕಟ್ಟೆಯಲ್ಲಿ ಸದ್ದು ಮಾಡಲು ರೀ-ಎಂಟ್ರಿ ನೀಡಿದ್ದು, ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯಲ್ಲಿರುವ 350ಸಿಸಿ ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Jawa 42 Test Rides Offline Bookings And Test Drive Details. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X