ಕೊನೆಗೂ ಗ್ರಾಹಕರ ಬೇಡಿಕೆಗೆ ಮಣಿದ ಜಾವಾ ಸಂಸ್ಥೆ
90ರ ದಶಕದಲ್ಲಿ ಮೋಟಾರ್‌ಸೈಕಲ್ ಪ್ರೇಮಿಗಳ ಹಾಟ್ ಫೆವರಿಟ್ ಆಗಿದ್ದ ಜಾವಾ ಸಂಸ್ಥೆಯು ಇದೀಗ ಮಹತ್ವದ ಬದಲಾಣೆಯೊಂದಿಗೆ ಮರಳಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಮಾರ್ಡನ್ ರೆಟ್ರೋ ಸ್ಟೈಲ್‌ನಲ್ಲಿ ತನ್ನ ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಆದ್ರೆ ಹೊಸ ಬೈಕ್‌ನಲ್ಲಿ ಕೆಲವು ತಾಂತ್ರಿಕ ಅಂಶಗಳ ಕೊರತೆಯಿಂದಾಗಿ ಜಾವಾ ಪ್ರಿಯರ ಅಸಮಾಧಾನಕ್ಕೆ ಕಾರಣವಾಗಿತ್ತು.

ಜಾವಾ ಸಂಸ್ಥೆಯು ಗತಕಾಲದ ವೈಭವವನ್ನು ಕಾಪಾಡಲು ತನ್ನ ನೂತನ ಬೈಕುಗಳ ವಿನ್ಯಾಸದಲ್ಲಿ ಸುಧಾರಿತ ಮಾದರಿಯ ಬೈಕಿನ ಸ್ಪೀಡೋ ಮೀಟರ್, ಡ್ಯೂಮ್ ನ ಕ್ಲಾಸಿಕ್ ಲುಕ್ ಅನ್ನು ಹಾಗೇ ಉಳಿಸಿ, ಹೊಸದಾಗಿ ಟೂಲ್ ಬಾಕ್ಸ್ ಅನ್ನು ಸೇರಿಸುವ ಮೂಲಕ ಬೈಕಿನ ಅಂದವನ್ನು ಹೆಚ್ಚುವಂತೆ ಮಾಡಿದೆ. ಅಲ್ಲದೇ ಈ ಮೂರು ಬೈಕುಗಳು ಬಿಎಸ್ 6 ಮಾದರಿಯನ್ನು ಒಳಗೊಂಡಿದೆ.

ಆದ್ರೆ ಹೊಸ ಜಾವಾ ಬೈಕಿನಲ್ಲಿ ಒದಗಿಸಲಾಗಿರುವ ಫ್ರಂಟ್ ಡಿಸ್ಕ್ ಬ್ರೇಕ್, ಸಿಂಗಲ್ ಚಾನೆಲ್ ಎಬಿಎಸ್ ಗಮನಸೆಳೆಯುವ ಅಂಶಗಳಾಗಿದ್ದರೂ ಬೈಕಿನ ಹಿಂಭಾಗದ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್ ಇಲ್ಲದಿರುವ ಬಗ್ಗೆ ಜಾವಾ ಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಹೊಸ ಬೈಕ್ ಅನ್ನು ಮಾರ್ಡನ್ ರೆಟ್ರೋ ಲುಕ್ ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದರೂ ಬೈಕಿನ ಸುರಕ್ಷತೆಯ ವಿಚಾರದಲ್ಲಿ ಅಸಡ್ಡೆ ಮಾಡಲಾಗಿದೆ ಎಂದು ದೂರಿದ್ದ ಕೆಲವು ಜಾವಾ ಪ್ರಿಯರು ಹೊಸ ಬೈಕ್‌ಗಳಲ್ಲಿ ರಿಯರ್(ಹಿಂಬದಿ ಚಕ್ರ) ಡಿಸ್ಕ್ ಬ್ರೇಕ್ ಸೌಲಭ್ಯವನ್ನು ನೀಡಿ ಅಂತಾ ಪಟ್ಟುಹಿಡಿದ್ದರು.

ಸದ್ಯ ಬಿಡುಗಡೆ ಮಾಡಲಾಗಿರುವ ಹೊಸ ಜಾವಾ ಮತ್ತು ಜಾವಾ 42 ಬೈಕ್‌ಗಳ ಹಿಂಭಾಗದ ಚಕ್ರಗಳಲ್ಲಿ ಡ್ರಮ್ ಬ್ರೇಕ್ ಸೌಲಭ್ಯ ನೀಡಲಾಗಿದ್ದು, ಮತ್ತೊಂದು ಬೈಕ್ ಮಾದರಿಯಾದ ಪೆರಾಕ್ ಬೈಕಿನಲ್ಲಿ ಮಾತ್ರವೇ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಮತ್ತು ಡ್ಯುಯಲ್ ಚಾನಲ್ ಎಬಿಎಸ್ ಕಲ್ಪಿಸಲಾಗಿದೆ.

ಹೀಗಾಗಿ ಜಾವಾ ಮತ್ತು ಜಾವಾ 42 ಬೈಕಿನಲ್ಲೂ ಹಿಂದಿಯ ಚಕ್ರಗಳಿಗೂ ಡಿಸ್ಕ್ ಬ್ರೇಕ್ ಸೌಲಭ್ಯ ನೀಡುವಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಪಟ್ಟುಹಿಡಿದ್ದ ಜಾವಾ ಅಭಿಮಾನಿಗಳು, ಡಿಸ್ಕ್ ಬ್ರೇಕ್ ಸೌಲಭ್ಯ ನೀಡದೆ ಹೊದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಹಿಂದಿಕ್ಕಲು ಸಾಧ್ಯವಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು.

ಇದಕ್ಕೆ ಪ್ರಕ್ರಿಯಿಸಿದ್ದ ಕ್ಲಾಸಿಕ್ ಲೆಜೆಂಡ್ ಸಂಸ್ಥೆಯ ಅಧ್ಯಕ್ಷ ಅಶಿಸ್ ಜೋಶಿಯವರು, 1980-90ರ ಅವಧಿಯಲ್ಲಿನ ಕ್ಲಾಸಿಕ್ ಬೈಕ್‌ಗಳ ವಿನ್ಯಾಸವನ್ನೇ ಉಳಿಸಿಕೊಳ್ಳುವ ಉದ್ದೇಶದಿಂದ ಬೈಕಿನ ಹಿಂಬದಿಯ ಚಕ್ರದಲ್ಲಿ ಡಿಸ್ಕ್ ಬ್ರೇಕ್ ಬದಲಾಗಿ ಡ್ರಮ್ ಬ್ರೇಕ್ ಬಳಕೆ ಮಾಡಲಾಗಿದೆ ಎಂದಿದ್ದರು.

ಹಾಗಂತ, ಇದೀಗ ನೀಡಲಾಗಿರುವ ಡ್ರಮ್ ಬ್ರೇಕ್ ಸೌಲಭ್ಯವು ಕಳಪೆ ಬ್ರೇಕಿಂಗ್ ಸಿಸ್ಟಂ ಎಂದು ಬಿಂಬಿಸುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದ ಅಶಿಸ್ ಜೋಶಿಯವರು, ಗ್ರಾಹಕರ ಆದ್ಯತೆಗೆ ಜಾವಾ ಸಂಸ್ಥೆಯು ಮನ್ನಣೆ ನೀಡುತ್ತೆ ಎನ್ನುವ ಭರವಸೆ ನೀಡಿದ್ದರು.

ಇದಾದ 15 ದಿನಗಳ ಬಳಿಕ ರಿಯರ್ ಡಿಸ್ಕ್ ಬ್ರೇಕ್ ವಿಚಾರಕ್ಕೆ ಇದೀಗ ಮತ್ತೆ ಪ್ರಕ್ರಿಯಿಸಿರುವ ಜೋಶಿಯವರು, ಗ್ರಾಹಕರ ಬೇಡಿಕೆಯೆಂತೆ ಪೆರಾಕ್ ಬೈಕ್ ಮಾದರಿಯಲ್ಲೇ ಜಾವಾ ಮತ್ತು ಜಾವಾ 42 ಬೈಕಿನಲ್ಲೂ ಸಹ ರಿಯರ್ ಡಿಸ್ಕ್ ಬ್ರೇಕ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್ ಒದಗಿಸುವುದಾಗಿ ಖಚಿತಪಡಿಸಿದ್ದಾರೆ.

ಆದ್ರೆ ಹೊಸ ಸೌಲಭ್ಯಕ್ಕಾಗಿ ಹೆಚ್ಚುವರಿ ನಿಗದಿಗೊಳಿಸುವ ಬಗ್ಗೆ ಯಾವುದೇ ಬಿಟ್ಟುಕೊಡದ ಜಾವಾ ಸಂಸ್ಥೆಯು ಈ ಹಿಂದೆ ನಿಗದಿಪಡಿಸಿ ಬೆಲೆಗಳಲ್ಲೇ ರಿಯರ್ ಡಿಸ್ಕ್ ಬ್ರೇಕ್ ಒದಗಿಸುತ್ತಾ ಅಥವಾ ಹೊಸ ಸೌಲಭ್ಯಕ್ಕಾಗಿ ದರ ಹೆಚ್ಚಳ ಮಾಡುತ್ತಾ ಎನ್ನುವುದು ಮುಂದಿನ ವಾರವಷ್ಟೇ ಸ್ಪಷ್ಟವಾಗಲಿದೆ.
MOST READ: ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

ಇನ್ನು ಜಾವಾ ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಜಾವಾ ಮತ್ತು ಜಾವಾ 42 ಬೈಕ್‍ಗಳು ರೆಟ್ರೋ ವಿನ್ಯಾಸವನ್ನು ಪಡೆದುಕೊಂಡಿದ್ದು, ಈ ಹಿಂದೆ ಮಾರಾಟಗೊಳ್ಳುತ್ತಿದ್ದ ಬೈಕ್‍ಗಳಂತೆಯೇ ಕಾಣುತ್ತಿದ್ದರೂ ಸಹ ಹೊಸ ಎಂಜಿನ್ ಮತ್ತು ಸುರಕ್ಷಾ ಸೌಲಭ್ಯಗಳು ಪ್ರಮುಖ ಆಕರ್ಷಣೆಯಾಗಿವೆ.
MOST READ: ಬೆಂಗಳೂರಿನಲ್ಲಿ ಎಲ್ಲೆಲ್ಲಿ ಜಾವಾ ಬೈಕ್ ಖರೀದಿಸಬಹುದು? ಇಲ್ಲಿದೆ ನೋಡಿ ಡೀಲರ್ಸ್ ಪಟ್ಟಿ..!

ಎಂಜಿನ್ ಸಾಮರ್ಥ್ಯ
ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮತ್ತೊಂದು ಕಡೆ ಬಾಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ 334ಸಿಸಿ ಎಂಜಿನ್ ಅನ್ನು ಪಡೆದುಕೊಳ್ಳಲಿದೆ.

ಹಾಗೆಯೇ ಜಾವಾ 42 ಬೈಕ್ ಮುಂಭಾಗದಲ್ಲಿ 90/90 ಆರ್18 ಟೈರ್ ಮತ್ತು ಹಿಂಭಾಗದಲ್ಲಿ 120/80 ಆರ್17 ಯೂನಿಟ್ ಟೈರ್‍ಗಳನ್ನು ಪಡೆದುಕೊಂಡಿದೆ. ಇನ್ನು ರೈಡರ್‍ಗಳ ಸುರಕ್ಷತೆಗಾಗಿ ಈ ಬೈಕಿನ ಮುಂಭಾಗದಲ್ಲಿ 280ಎಂಎಂ ಡಿಸ್ಕ್ ಬ್ರೇಕ್ ಹಾಗು ಹಿಂಭಾಗದಲ್ಲಿ 153ಎಂಎಂ ಡ್ರಮ್ ಬೆಕ್ ಅನ್ನು ಅಳವಡಿಸಲಾಗಿದ್ದು, ಜೊತೆಗೆ ಸಿಂಗಲ್ ಚಾನಲ್ ಎಬಿಎಸ್ ಅನ್ನು ಸಹ ನೀಡಲಾಗಿದೆ.


Click it and Unblock the Notifications








