ಜಾವಾ ಮೊದಲ ಬೈಕ್ ಮಳಿಗೆ ಆರಂಭ- ಬೆಂಗಳೂರಿನಲ್ಲಿ ಎಲ್ಲೆಲ್ಲಿ ಖರೀದಿಗೆ ಲಭ್ಯ?

ಬಿಡುಗಡೆಗೂ ಮುನ್ನವೇ ಬೈಕ್ ಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಜಾವಾ ಹೊಚ್ಚ ಹೊಸ ಬೈಕ್‌ಗಳನ್ನು ಮಹೀಂದ್ರಾ ಅಂಡ್ ಮಹೀಂದ್ರಾ ಸಂಸ್ಥೆಯು ಕಳೆದ ತಿಂಗಳ ಹಿಂದಷ್ಟೇ ಬಿಡುಗಡೆಗೊಳಿಸಿದ್ದು, ಹೊಸ ಬೈಕ್ ಖರೀದಿಗಾಗಿ ಸಾವಿರಾರು ಗ್ರಾಹಕರು ತುದಿಗಾಲಿನ ಮೇಲೆ ನಿಂತಿದ್ದಾರೆ ಅಂದ್ರೆ ತಪ್ಪಾಗುವುದಿಲ್ಲ.

ಜಾವಾ ಮೊದಲ ಬೈಕ್ ಮಳಿಗೆ ಆರಂಭ- ಬೆಂಗಳೂರಿನಲ್ಲಿ ಎಲ್ಲೆಲ್ಲಿ ಖರೀದಿಗೆ ಲಭ್ಯ?

ಜಾವಾ ಬೈಕ್‌ಗಳು ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿ ಮರೆಯಾಗಿದ್ದಲ್ಲದೆ ಇದೀಗ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ನಿರ್ಮಿಸುವಲ್ಲಿ ಮಹೀಂದ್ರಾ ಸಂಸ್ಥೆಯು ಯಶಸ್ವಿಯಾಗಿದೆ.

ಜಾವಾ ಮೊದಲ ಬೈಕ್ ಮಳಿಗೆ ಆರಂಭ- ಬೆಂಗಳೂರಿನಲ್ಲಿ ಎಲ್ಲೆಲ್ಲಿ ಖರೀದಿಗೆ ಲಭ್ಯ?

ಹೀಗಾಗಿ ಹೊಸ ಬೈಕ್ ಖರೀದಿಗಾಗಿ ಈಗಾಗಲೇ ಸಾವಿರಾರು ಗ್ರಾಹಕರು ಮುಂಗಡ ಪಾವತಿಸಿ ಬೈಕ್ ಪಡೆಯಲು ಕಾಯುತ್ತಿದ್ದು, ಪುಣೆಯಲ್ಲಿ ಜಾವಾ ತನ್ನ ಮೊದಲ ಬೈಕ್ ಮಳಿಗೆಗೆ ಚಾಲನೆ ನೀಡಿದ್ದಲ್ಲದೇ ಮುಂದಿನ ಒಂದು ವಾರದೊಳಗೆ ದೇಶಾದ್ಯಂತ 20ಕ್ಕೂ ಹೆಚ್ಚು ಹೊಸ ಡೀಲರ್ಸ್‌ಗೆ ಚಾಲನೆ ನೀಡುವ ಸುಳಿವು ನೀಡಿದೆ.

ಜಾವಾ ಮೊದಲ ಬೈಕ್ ಮಳಿಗೆ ಆರಂಭ- ಬೆಂಗಳೂರಿನಲ್ಲಿ ಎಲ್ಲೆಲ್ಲಿ ಖರೀದಿಗೆ ಲಭ್ಯ?

ಸದ್ಯಕ್ಕೆ ಜಾವಾ ಸಂಸ್ಥೆಯು ಬೈಕ್ ಖರೀದಿಗಾಗಿ ರೂ.5 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಮಾತ್ರ ಸ್ವಿಕರಿಸುತ್ತಿದ್ದು, ಜನವರಿ ಆರಂಭದಲ್ಲಿ ಹೊಸ ಬೈಕ್ ವಿತರಣೆ ಮಾಡುವುದಾಗಿ ಹೇಳಿಕೊಂಡಿತ್ತು. ಅದರಂತೆ ದೇಶದ ವಿವಿಧ ನಗರಗಳಲ್ಲಿ 65ಕ್ಕೂ ಹೆಚ್ಚು ಬೈಕ್ ಡೀಲರ್ಸ್‌ಗಳು ತೆರೆಯಲಾಗುತ್ತಿದ್ದು, ಬೆಂಗಳೂರಿನಲ್ಲೂ ಕೂಡಾ ಇದೀಗ ಮೂರು ಕಡೆ ಜಾವಾ ಖರೀದಿಗೆ ಲಭ್ಯವಿವೆ.

ಜಾವಾ ಮೊದಲ ಬೈಕ್ ಮಳಿಗೆ ಆರಂಭ- ಬೆಂಗಳೂರಿನಲ್ಲಿ ಎಲ್ಲೆಲ್ಲಿ ಖರೀದಿಗೆ ಲಭ್ಯ?

ಬೆಂಗಳೂರಿನಲ್ಲಿ ಎಲ್ಲೆಲ್ಲಿ ಖರೀದಿಗೆ ಲಭ್ಯ..!

ಆಸಕ್ತ ಗ್ರಾಹಕರು ಬಸವನಗುಡಿಯ ನೆಟ್ಟಕಲ್ಲಪ್ಪ ಸರ್ಕಲ್ ಬಳಿಯರುವ ಜಾವಾ ಡೀಲರ್ಸ್, ಇಂದಿರಾನಗರದ ಚಿನ್ಮಯ ಮಿಷನ್ ಹಾಸ್ಪಿಟಲ್ ರಸ್ತೆಯಲ್ಲಿರುವ ಜಾವಾ ಡೀಲರ್ಸ್ ಮತ್ತು ರಾಜಾಜಿನಗರದ ರಾಜಕುಮಾರ ರಸ್ತೆಯಲ್ಲಿ ತೆರೆಯಲಾಗುತ್ತಿರುವ ಹೊಸ ಜಾವಾ ಡೀಲರ್ಸ್‌ಗಳಲ್ಲಿ ಹೊಸ ಬೈಕ್ ಖರೀದಿಗೆ ಲಭ್ಯವಿರಲಿವೆ.

ಜಾವಾ ಮೊದಲ ಬೈಕ್ ಮಳಿಗೆ ಆರಂಭ- ಬೆಂಗಳೂರಿನಲ್ಲಿ ಎಲ್ಲೆಲ್ಲಿ ಖರೀದಿಗೆ ಲಭ್ಯ?

ಮಹೀಂದ್ರಾ ಸಂಸ್ಥೆಯು ಸದ್ಯಕ್ಕೆ ಮೂರು ಹೊಸ ಬೈಕ್‌ಗಳನ್ನು ಹೊರತಂದಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಜಾವಾ ಪೆರಾಕ್ ಎನ್ನುವ ಮಾದರಿಯನ್ನು ಕೇವಲ ಅನಾವರಣಗೊಳಿಸಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ಜಾವಾ ಮೊದಲ ಬೈಕ್ ಮಳಿಗೆ ಆರಂಭ- ಬೆಂಗಳೂರಿನಲ್ಲಿ ಎಲ್ಲೆಲ್ಲಿ ಖರೀದಿಗೆ ಲಭ್ಯ?

ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

ಜಾವಾ ಮೊದಲ ಬೈಕ್ ಮಳಿಗೆ ಆರಂಭ- ಬೆಂಗಳೂರಿನಲ್ಲಿ ಎಲ್ಲೆಲ್ಲಿ ಖರೀದಿಗೆ ಲಭ್ಯ?

ಮಾರುಕಟ್ಟೆಗೆ ಲಗ್ಗೆಯಿಟ್ಟ ಜಾವಾ ಮತ್ತು ಜಾವಾ 42 ಬೈಕ್‍ಗಳು ರೆಟ್ರೋ ವಿನ್ಯಾಸವನ್ನು ಪಡೆದುಕೊಂಡಿದ್ದು, ಈ ಹಿಂದೆ ಮಾರಾಟಗೊಳ್ಳುತ್ತಿದ್ದ ಬೈಕ್‍ಗಳಂತೆಯೇ ಕಾಣಲಿದೆ. ಆದರೆ ಈ ಬಾರಿ ಈ ಬೈಕ್‍ಗಳಲ್ಲಿ ಬಳಸಲಾದ ಎಂಜಿನ್ ಹೈಲೈಟ್ ಎಂದು ಹೇಳಲಾಗಿದೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಜ.1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಜಾವಾ ಮೊದಲ ಬೈಕ್ ಮಳಿಗೆ ಆರಂಭ- ಬೆಂಗಳೂರಿನಲ್ಲಿ ಎಲ್ಲೆಲ್ಲಿ ಖರೀದಿಗೆ ಲಭ್ಯ?

ಜಾವಾ ಸಂಸ್ಥೆಯು ಗತಕಾಲದ ವೈಭವವನ್ನು ಕಾಪಾಡಲು ತನ್ನ ನೂತನ ಬೈಕುಗಳ ವಿನ್ಯಾಸದಲ್ಲಿ ಸುಧಾರಿತ ಮಾದರಿಯ ಬೈಕಿನ ಸ್ಪೀಡೋ ಮೀಟರ್, ಡ್ಯೂಮ್ ನ ಕ್ಲಾಸಿಕ್ ಲುಕ್ ಅನ್ನು ಹಾಗೇ ಉಳಿಸಿ, ಹೊಸದಾಗಿ ಟೂಲ್ ಬಾಕ್ಸ್ ಅನ್ನು ಸೇರಿಸುವ ಮೂಲಕ ಬೈಕಿನ ಅಂದವನ್ನು ಹೆಚ್ಚುವಂತೆ ಮಾಡಿದೆ. ಅಲ್ಲದೇ ಈ ಮೂರು ಬೈಕುಗಳು ಬಿಎಸ್6 ಮಾದರಿಯನ್ನು ಒಳಗೊಂಡಿವೆ.

ಜಾವಾ ಮೊದಲ ಬೈಕ್ ಮಳಿಗೆ ಆರಂಭ- ಬೆಂಗಳೂರಿನಲ್ಲಿ ಎಲ್ಲೆಲ್ಲಿ ಖರೀದಿಗೆ ಲಭ್ಯ?

ಎಂಜಿನ್ ಸಾಮರ್ಥ್ಯ

ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮತ್ತೊಂದು ಕಡೆ ಬಾಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ 334ಸಿಸಿ ಎಂಜಿನ್ ಅನ್ನು ಪಡೆದುಕೊಳ್ಳಲಿದೆ.

MOST READ: 23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

ಜಾವಾ ಮೊದಲ ಬೈಕ್ ಮಳಿಗೆ ಆರಂಭ- ಬೆಂಗಳೂರಿನಲ್ಲಿ ಎಲ್ಲೆಲ್ಲಿ ಖರೀದಿಗೆ ಲಭ್ಯ?

ರಾಯಲ್ ಎನ್‌‌ಫೀಲ್ಡ್‌ಗೆ ತಳಮಳ..!

ಆಕರ್ಷಕ ಬೆಲೆಗಳು ಮತ್ತು ತಾಂತ್ರಿಕವಾಗಿ ಬಲಿಷ್ಠವಾಗಿರುವ ಜಾವಾ ಬೈಕ್‌ಗಳು ರಾಯಲ್ ಎನ್‌ಫೀಲ್ಡ್ ಸಂಸ್ಥೆಯನ್ನೇ ಗುರಿಯಾಗಿಸಿ ಹೊಸ ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸುತ್ತಿದ್ದು, ಜಾವಾ ಮತ್ತು ಜಾವಾ 42 ಬೈಕ್‌ಗಳು ಕ್ಲಾಸಿಕ್ 350 ಬೈಕ್‌ಗಳಿಗೆ ಹೆಚ್ಚಿನ ಪೈಪೋಟಿ ನೀಡುತ್ತಿವೆ.

ಜಾವಾ ಮೊದಲ ಬೈಕ್ ಮಳಿಗೆ ಆರಂಭ- ಬೆಂಗಳೂರಿನಲ್ಲಿ ಎಲ್ಲೆಲ್ಲಿ ಖರೀದಿಗೆ ಲಭ್ಯ?

ಇದಕ್ಕೆ ಉದಾಹರಣೆ ಅಂದ್ರೆ, ಅಕ್ಟೋಬರ್ ಅವಧಿಯಲ್ಲಿನ ಬೈಕ್ ಮಾರಾಟಕ್ಕೂ ಮತ್ತೆ ನವೆಂಬರ್ ಅವಧಿಯಲ್ಲಿನ ಬೈಕ್ ಮಾರಾಟಕ್ಕೂ ಶೇ.10 ರಷ್ಟು ನಷ್ಟ ಅನುಭವಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು, ಜಾವಾ ಅಬ್ಬರದ ಮುಂದೆ ಕಂಗಾಲಾಗಿ ಹೋಗಿದೆ.

ಜಾವಾ ಮೊದಲ ಬೈಕ್ ಮಳಿಗೆ ಆರಂಭ- ಬೆಂಗಳೂರಿನಲ್ಲಿ ಎಲ್ಲೆಲ್ಲಿ ಖರೀದಿಗೆ ಲಭ್ಯ?

ಇದು ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿದ್ದು, ರಾಯಲ್ ಎನ್‌ಫೀಲ್ಡ್‌ ಬೈಕ್ ಮಾರಾಟಕ್ಕೆ ಶೇ.100ರಷ್ಟು ಪೈಪೋಟಿ ನೀಡಬೇಕು ಎನ್ನುವ ಜಾವಾ ಗುರಿಗೆ ಮೊದಲ ಜಯ ಸಿಕ್ಕಿದೆ. ಹೀಗಾಗಿ ಜನವರಿಯಿಂದ ರಸ್ತೆಗಿಳಿಯಲಿರುವ ಜಾವಾ ಬೈಕ್‌ಗಳು ಮತ್ತಷ್ಟು ಹವಾ ಸೃಷ್ಠಿಸುವುದರಲ್ಲಿ ಎರಡು ಮಾತಿಲ್ಲ.

ಜಾವಾ ಮೊದಲ ಬೈಕ್ ಮಳಿಗೆ ಆರಂಭ- ಬೆಂಗಳೂರಿನಲ್ಲಿ ಎಲ್ಲೆಲ್ಲಿ ಖರೀದಿಗೆ ಲಭ್ಯ?

ಜೊತೆಗೆ ರಾಯಲ್ ಎನ್‌ಫೀಲ್ಡ್ ಖರೀದಿಸುವ ಗ್ರಾಹಕರನ್ನ ತನ್ನತ್ತ ಸೆಳೆಯುವ ಉದ್ದೇಶ ಮತ್ತೊಂದು ಯೋಜನೆ ಆರಂಭಿಸಿರುವ ಜಾವಾ ಸಂಸ್ಥೆಯು, ದೇಶದ ವಿವಿಧ ನಗರಗಳಲ್ಲಿ ನೆಲೆಗೊಂಡಿರುವ ರಾಯಲ್ ಎನ್‌ಫೀಲ್ಡ್ ಶೋರೂಂಗಳ ಎದುರಲ್ಲೇ ಹೊಸ ಜಾವಾ ಬೈಕ್ ಡೀಲರ್ಸ್ ತೆರೆಯುವುದಾಗಿ ಹೇಳಿಕೊಂಡಿರುವುದು ಮಾರಾಟದಲ್ಲಿ ಮತ್ತಷ್ಟು ಜಿದ್ದಾಜಿದ್ದಿಗೆ ಕಾರಣವಾಗಿದೆ.

ಜಾವಾ ಮೊದಲ ಬೈಕ್ ಮಳಿಗೆ ಆರಂಭ- ಬೆಂಗಳೂರಿನಲ್ಲಿ ಎಲ್ಲೆಲ್ಲಿ ಖರೀದಿಗೆ ಲಭ್ಯ?

ಒಟ್ಟಿನಲ್ಲಿ ಭಾರತೀಯ ಗ್ರಾಹಕರ ಅಭಿರುಚಿಗಳನ್ನು ಅರಿತು ಜಾವಾ ಬೈಕ್‌ಗಳಲ್ಲಿ ಹೊಸ ಬದಲಾವಣೆ ತಂದಿರುವ ಮಹೀಂದ್ರಾ ಸಂಸ್ಥೆಯು ಮುಂದಿನ ದಿನಗಳಲ್ಲಿ ಮತ್ತಷ್ಟು ಜಾವಾ ಬೈಕ್‌ಗಳನ್ನು ಹೊರತರುವ ಇರಾದೆಯಲ್ಲಿದ್ದು, ಮುಂದಿನ ದಿನಗಳಲ್ಲಿ ಯಾವ ಮಟ್ಟಿಗೆ ಬೇಡಿಕೆ ಗಿಟ್ಟಿಸಿಕೊಳ್ಳಲಿವೆ ಎನ್ನವುದನ್ನು ಕಾಯ್ದುನೋಡಬೇಕಿದೆ.

Most Read Articles

Kannada
English summary
Jawa Showrooms: Location And Booking Details; First One Opens In Pune. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X