2018ರ ಹೋಂಡಾ ಸಿಬಿ ಶೈನ್ ಎಸ್‌ಪಿ, ಲಿವೊ ಮತ್ತು ಡ್ರೀಮ್ ಯುಗಾ ಬಿಡುಗಡೆ
ಹೋಂಡಾ ಸಂಸ್ಥೆಯು ಭಾರತೀಯ ಗ್ರಾಹಕರಿಗಾಗಿ 2018ರ ಸಿಬಿ ಶೈನ್ ಎಸ್‌ಪಿ, ಲಿವೊ ಮತ್ತು ಡ್ರೀಮ್ ಯುಗಾ ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಿದ್ದು, ಸುಧಾರಿತ ತಂತ್ರಜ್ಞಾನ ಮತ್ತು ವಿನ್ಯಾಸಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿವೆ.
ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ವಿಭಾಗವು ಭಾರತೀಯ ಗ್ರಾಹಕರಿಗಾಗಿ 2018ರ ಸಿಬಿ ಶೈನ್ ಎಸ್‌ಪಿ, ಲಿವೊ ಮತ್ತು ಡ್ರೀಮ್ ಯುಗಾ ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಿದ್ದು, ಸುಧಾರಿತ ತಂತ್ರಜ್ಞಾನ ಮತ್ತು ವಿನ್ಯಾಸಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿವೆ.

ಹೋಂಡಾ ಬಿಡುಗಡೆ ಮಾಡಿರುವ ಸಿಬಿ ಶೈನ್ ಬೈಕ್‌ಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 62,032 ಬೆಲೆ ಪಡೆದುಕೊಂಡಿದ್ದರೇ, ಲಿವೊ ಬೈಕ್‌ಗಳು ರೂ. 56,230 ಮತ್ತು ಡ್ರೀಮ್ ಯುಗಾ ಬೈಕ್‌ಗಳು ರೂ. 52,741ಕ್ಕೆ ಖರೀದಿಗೆ ಲಭ್ಯವಾಗಿವೆ.

2018ರ ಸಿಬಿ ಶೈನ್
ಉನ್ನತ ಮಾದರಿಯಾದ ಸಿಬಿ ಶೈನ್ ಬೈಕ್‌ಗಳು ಟ್ಯಾಂಕ್ ಶೋರ್ಡರ್ಸ್ ವಿನ್ಯಾಸಗಳಲ್ಲಿ ಗುರುತರ ಬದಲಾವಣೆ ಪಡೆದುಕೊಂಡಿದ್ದು, ಸ್ಪೋರ್ಟಿ ಗ್ರಾಫಿಕ್ಸ್, ನ್ಯೂ ಡಿಜಿಟಲ್ ಅನಲಾಗ್ ಇನ್‌ಸ್ಟ್ರೂಮೆಂಟಲ್ ಕ್ಲಸ್ಟರ್, ಸರ್ವಿಸ್ ಡ್ಯೂ ಇಂಡಿಕೇಟರ್ ಸೌಲಭ್ಯಗಳನ್ನು ಕೂಡಾ ಹೊಂದಿದೆ.

ಈ ಹಿಂದಿನಂತೆ ಸಿಬಿ ಶೈನ್ ಬೈಕ್‌ಗಳಲ್ಲಿ 124.73 ಸಿಸಿ ಏರ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ 10.16 ಬಿಎಚ್‌ಪಿ ಮತ್ತು 10.30 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಲಭ್ಯವಿರುವ ಬಣ್ಣಗಳು ಮತ್ತು ಬ್ರೇಕಿಂಗ್ ಸಿಸ್ಟಂ
ಪರ್ಲ್ ಸಿರೆನ್ ಬ್ಲ್ಯೂ , ಗೆನಿ ಗ್ರೇ ಮೆಟಾಲಿಕ್, ಬ್ಲ್ಯಾಕ್, ಅಥೆಟಿಕ್ ಬ್ಲ್ಯೂ ಮೆಟಾಲಿಕ್ ಮತ್ತು ಇಂಪಿರಿಯಲ್ ರೆಡ್ ಮೆಟಾಲಿಕ್ ಬಣ್ಣಗಳಲ್ಲಿ ಲಭ್ಯವಿದ್ದು, ಡ್ರಮ್ ಬ್ರೇಕ್, ಡಿಸ್ಕ್ ಬ್ರೇಕ್ ಮತ್ತು ಸಿಬಿಎಸ್ ಬ್ರೇಕಿಂಗ್ ಸಿಸ್ಟಂ ಹೊಂದಿರುವ ಬೈಕ್‌ಗಳನ್ನು ಬೇಡಿಕೆಗೆ ಅನುಗುಣವಾಗಿ ಆಯ್ಕೆ ಮಾಡಬಹುದು.

2018ರ ಲಿವೊ
ಹೊಸ ಮಾದರಿಯ ಲಿವೊ ಬೈಕ್‌ಗಳು ಸಹ ಗುರುತರ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿದ್ದು, ಸ್ಪೋರ್ಟಿ ಗ್ರಾಫಿಕ್ಸ್, ನ್ಯೂ ಡಿಜಿಟಲ್ ಅನಲಾಗ್ ಇನ್‌ಸ್ಟ್ರೂಮೆಂಟಲ್ ಕ್ಲಸ್ಟರ್, ಸರ್ವಿಸ್ ಡ್ಯೂ ಇಂಡಿಕೇಟರ್ ಸೌಲಭ್ಯಗಳನ್ನು ಹೊಂದಿರುತ್ತದೆ.

ಹೋಂಡಾ ಲಿವೊ ಬೈಕ್‌ಗಳು 109.19 ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 8.31 ಬಿಎಚ್‌ಪಿ ಮತ್ತು 9 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಲಭ್ಯವಿರುವ ಬಣ್ಣಗಳು ಮತ್ತು ಬ್ರೇಕಿಂಗ್ ಸಿಸ್ಟಂ
ಪ್ರಮುಖ 5 ಬಣ್ಣಗಳಲ್ಲಿ ಲಭ್ಯವಿರುವ ಲಿವೊ ಬೈಕ್‌ಗಳು ಬ್ಲ್ಯಾಕ್, ಅಥೇಂಟಿಕ್ ಬ್ಲ್ಯೂ ಮೆಟಾಲಿಕ್, ಸನ್‌ಸೆಟ್ ಬ್ರೌನ್ ಮೆಟಾಲಿಕ್, ಮ್ಯಾಟೆ ಆಕ್ಸಿಸ್ ಗ್ರೇ ಮೆಟಾಲಿಕ್, ಇಂಪಿರಿಯಲ್ ರೆಡ್ ಮೆಟಾಲಿಕ್‌ನಲ್ಲಿ ಖರೀದಿಬಹುದಾಗಿದ್ದು, ಬೇಡಿಕೆಗೆ ಅನುಗುಣವಾಗಿ ಡ್ರಮ್ ಬ್ರೇಕ್, ಡಿಸ್ಕ್ ಬ್ರೇಕ್ ಆಯ್ಕೆ ಮಾಡಬಹುದು.

2018ರ ಡ್ರೀಮ್ ಯುಗಾ
ಮಧ್ಯಮ ವರ್ಗ ನೆಚ್ಚಿನ ಆಯ್ಕೆಯಾಗಿರುವ ಡ್ರೀಮ್ ಯುಗಾ ಬೈಕ್‌ಗಳು ಸಹ ವಿನೂತನ ಗ್ರಾಫಿಕ್ಸ್ , ನ್ಯೂ ಡಿಜಿಟಲ್ ಅನಲಾಗ್ ಇನ್‌ಸ್ಟ್ರೂಮೆಂಟಲ್ ಕ್ಲಸ್ಟರ್, ಹೊಸ ವಿನ್ಯಾಸದ ರಿಯಲ್ ವ್ಯೂ ಮಿರರ್‌ಗಳು ಮತ್ತು HET ಟೈರ್ ಮಾದರಿಗಳನ್ನು ಪಡೆದಿವೆ.

ಜೊತೆಗೆ ಡ್ರಿಮ್ ಬೈಕ್‌ಗಳು 110 ಸಿಸಿ ಏರ್‌ಕೂಲ್ಡ್ ಎಂಜಿನ್ ಹೊಂದಿದ್ದು, 4-ಸ್ಪೀಡ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ 8.25 ಬಿಎಚ್‌ಪಿ ಮತ್ತು 8.63 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಲಭ್ಯವಿರುವ ಬಣ್ಣಗಳು ಮತ್ತು ಬ್ರೇಕಿಂಗ್ ಸಿಸ್ಟಂ
ಈ ಹಿಂದಿನ 5 ಪ್ರಮುಖ ಬಣ್ಣಗಳೊಂದಿಗೆ ಹೊಸದಾಗಿ ಬ್ಲ್ಯಾಕ್ ಮತ್ತು ಸನ್‌ಸೆಟ್ ಬ್ರೌನ್ ಮೆಟಾಲಿಕ್ ಬಣ್ಣಗಳಲ್ಲಿ ಲಭ್ಯವಾಗಿದ್ದು, ಡ್ರೀಮ್ ಯುಗಾ ಬೈಕ್‌ಗಳನ್ನು ಕೇವಲ ಡಿಸ್ಕ್ ಬ್ರೇಕ್ ವೆರಿಯೆಂಟ್‌ಗಳಲ್ಲಿ ಮಾತ್ರ ಖರೀದಿಸಬಹುದಾಗಿದೆ.


Click it and Unblock the Notifications








