150 ಸಿಸಿ ಸ್ಕೂಟರ್ ಬಿಡುಗಡೆಯ ಸುಳಿವು ನೀಡಿದ ಟಿವಿಎಸ್ ಮೋಟಾರ್ಸ್
ಈ ಹಿಂದೆ 2016ರ ಆಟೋ ಎಕ್ಸ್‌ಪೋದಲ್ಲಿ ಎನ್‌ಟಾರ್ಕ್ 210 ಕಾನ್ಸೆಪ್ಟ್ ಮಾದರಿಯಲ್ಲೇ ಹೊಸ ಸ್ಕೂಟರ್ ಮಾದರಿಯನ್ನು ಸಿದ್ದಗೊಳಿಸುವ ಬಗ್ಗೆ ಟಿವಿಎಸ್ ಚಿಂತನೆ ನಡೆಸಿದ್ದು, ಕಮ್ಯುಟರ್ ಬೈಕ್ ಪ್ರಿಯರನ್ನು ಸೆಳೆಯುವ ಸಲುವಾಗಿ 150ಸಿಸಿ ಎಂಜಿನ್ ಸ್ಕೂಟರ್ ಅನ್ನು ಹೊರತರುವ ಯೋಜನೆ ರೂಪಿಸಲಾಗುತ್ತಿದೆ.

ಈ ಹಿಂದೆ 2016ರ ಆಟೋ ಎಕ್ಸ್‌ಪೋದಲ್ಲಿ ಎನ್‌ಟಾರ್ಕ್ 210 ಕಾನ್ಸೆಪ್ಟ್ ಮಾದರಿಯಲ್ಲೇ ಹೊಸ ಸ್ಕೂಟರ್ ಮಾದರಿಯನ್ನು ಸಿದ್ದಗೊಳಿಸುವ ಬಗ್ಗೆ ಟಿವಿಎಸ್ ಚಿಂತನೆ ನಡೆಸಿದ್ದು, ಕಮ್ಯುಟರ್ ಬೈಕ್ ಪ್ರಿಯರನ್ನು ಸೆಳೆಯುವ ಸಲುವಾಗಿ 150ಸಿಸಿ ಎಂಜಿನ್ ಸ್ಕೂಟರ್ ಅನ್ನು ಹೊರತರುವ ಯೋಜನೆ ರೂಪಿಸಲಾಗುತ್ತಿದೆ.

ಇನ್ನು ಕಳೆದ ಫೆಬ್ರುವರಿಯಲ್ಲಿ ಎನ್‌ಟಾರ್ಕ್ 125 ಸ್ಕೂಟರ್ ಹೊಸ ಸ್ಕೂಟರ್ ಮಾದರಿಯನ್ನು ಬಿಡುಗಡೆಗೊಳಿಸಿ ಭರ್ಜರಿಯಾಗಿ ಮಾರಾಟ ಪ್ರಮಾಣ ದಾಖಸಿರುವ ಟಿವಿಎಸ್, ಎನ್‌ಟಾರ್ಕ್ ಸರಣಿಯಲ್ಲಿಯೇ ಮುಂದುವರಿದ ಭಾಗವಾಗಿ ಎನ್‌ಟಾರ್ಕ್ 150 ಸಿದ್ದಗೊಳಿಸಲಿದೆ ಎನ್ನಲಾಗಿದೆ.

ಒಂದು ವೇಳೆ ಟಿವಿಎಸ್ ಉದ್ದೇಶಿತ ಎನ್‌ಟಾರ್ಕ್ 150 ಸ್ಕೂಟರ್‌ಗಳು ಮಾರುಕಟ್ಟೆಗೆ ಬಂದಿದ್ದೇ ಆದಲ್ಲಿ ಎಪ್ರಿಲಿಯಾ ಎಸ್ಆರ್ 150 ಸ್ಕೂಟರ್‌ಗಳಿಗೆ ತ್ರೀವ ಪೈಪೋಟಿ ನೀಡಲಿದ್ದು, ಪರ್ಫಾಮೆನ್ಸ್ ಪ್ರಿಯರಿಗಾಗಿ ಈ ಹೊಸ ಸ್ಕೂಟರ್ ಸಿದ್ದಗೊಳಿಸಲಾಗುತ್ತಿದೆಯೆಂತೆ.

ಮೂಲಗಳ ಪ್ರಕಾರ ಟಿವಿಎಸ್ ಸಂಸ್ಥೆಯು ಬಿಡುಗಡೆ ಮಾಡುವ ಹೊಸ ಸ್ಕೂಟರ್ ಮಾದರಿಯು ಎನ್‌ಟಾರ್ಕ್ 150 ಇಲ್ಲವೇ ಬದಲಿ ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಬಹುದಾಗಿದ್ದು, ಹೊಸ ಸ್ಕೂಟರ್ ಬಗೆಗೆ ಟಿವಿಎಸ್ ಇದುವರೆಗೆ ಯಾವುದೇ ರೀತಿಯ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಹೀಗಿದ್ದರೂ ಕೆಲವು ಕಡೆಗಳಲ್ಲಿ ಟಿವಿಎಸ್ ನಿರ್ಮಿತ ಕೆಲವು ಹೊಸ ಸ್ಕೂಟರ್‌ಗಳು ತಮಿಳುನಾಡಿದ ಹೊಸೂರು ಬಳಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವ ಬಗ್ಗೆ ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದು, ಇವುಗಳಲ್ಲಿ 150ಸಿಸಿ ಸ್ಕೂಟರ್‌ಗಳು ಇರಬಹುದೆಂದು ಅಂದಾಜಿಸಲಾಗಿದೆ.

ಇನ್ನೊಂದು ಆಯಾಮಾದಲ್ಲಿ ಚರ್ಚಿಸುವುದಾದರೇ, ಸದ್ಯ ಮಾರುಕಟ್ಟೆಯಲ್ಲಿ ಹೋಂಡಾ ಗ್ರಾಜಿಯಾ ಸ್ಕೂಟರ್‌ಗಳನ್ನು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹಿಂದಿಕ್ಕಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಎನ್‌ಟಾರ್ಕ್ 125 ಸ್ಕೂಟರ್‌ಗಳ ಜನಪ್ರಿಯತೆಯಲ್ಲೇ ಎನ್‌ಟಾರ್ಕ್ 150 ಮಾದರಿಯನ್ನು ಸೇರಿಸುವುದರ ಬಗ್ಗೆಯು ಟಿವಿಎಸ್ ಚಿಂತನೆ ಮಾಡದೇ ಇರಲಾರದು.

ಒಟ್ಟಿನಲ್ಲಿ ಎನ್‌ಟಾರ್ಕ್ 150 ಸ್ಕೂಟರ್ ಮಾರುಕಟ್ಟೆಗೆ ಲಗ್ಗೆಯಿಡುವ ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಟಿವಿಎಸ್ ಹೊಸ ಸ್ಕೂಟರ್‌ಗಳು ಬೆಲೆಯಲ್ಲಿ ತುಸು ದುಬಾರಿ ಎನ್ನಿಸಿದರೂ ಪರ್ಫಾಮೆನ್ಸ್ ಉದ್ದೇಶಿತ ಗ್ರಾಹಕರ ಹಾಟ್ ಫೇವರಿಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸದ್ಯ ಪ್ರತಿ ಬೈಕ್ ಮಾದರಿಯಲ್ಲೂ ಸ್ಪೋರ್ಟಿ ವರ್ಷನ್‌ಗಳ ಹೊರತರುತ್ತಿರುವ ಟಿವಿಎಸ್ ಸಂಸ್ಥೆಯು ಕಳೆದ ತಿಂಗಳ ಹಿಂದಷ್ಟೇ ಅಪಾಚೆ ಸರಣಿಗಳಲ್ಲಿ ಅಮೂಲಾಗ್ರವಾಗಿ ಬದಲಾವಣೆ ತಂದಿದೆ. ಹೀಗಾಗಿ ಎನ್‌ಟಾರ್ಕ್ 150 ಸ್ಕೂಟರ್ ಸಹ 2019ರ ಆರಂಭ ಬಿಡುಗಡೆಯಾಗುವ ನೀರಿಕ್ಷೆಗಳಿವೆ.


Click it and Unblock the Notifications








