ಬಿಡುಗಡೆಗೊಂಡ ಹೊಸ ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್..
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಸುಜುಕಿಯು ಭಾರತದಲ್ಲಿ ತನ್ನ ಹೊಸ ಜಿಎಸ್ಎಕ್ಸ್-ಎಸ್750 750ಸಿಸಿ ಪರ್ಫಾರ್ಮೆನ್ಸ್ ಬೈಕ್ ಅನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 7.45 ಲಕ್ಷಕ್ಕೆ ನಿಗದಿಪಡಿಸಲಾಗಿದೆ.
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಸುಜುಕಿಯು ಭಾರತದಲ್ಲಿ ತನ್ನ ಹೊಸ ಜಿಎಸ್ಎಕ್ಸ್-ಎಸ್750 750ಸಿಸಿ ಪರ್ಫಾರ್ಮೆನ್ಸ್ ಬೈಕ್ ಅನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 7.45 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಹೊಸ ಜಿಎಸ್ಎಕ್ಸ್-ಎಸ್750 ಮೊದಲ ಬಾರಿಗೆ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋನಲ್ಲಿ ಅನಾವರಣಗೊಂಡಿದ್ದು, ಭಾರತಕ್ಕೆ ಕಂಪ್ಲೀಟ್ಲಿ ಕ್ನೋಕ್ಡ್ ಡೌನ್ ಯುನಿಟ್ ಪ್ಲಾಟ್‍ಫಾರ್ಮ್ ರೂಪದಲ್ಲಿ ಪರಿಚಯಿಸುವ ಬಗ್ಗೆ ಸುಳಿವು ನೀಡಿತ್ತು.

ಜಿಎಸ್ಎಕ್ಸ್-ಎಸ್750 ಬೈಕ್ 749ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 110-ಬಿಹೆಚ್‍ಪಿ ಮತ್ತು 81-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬೈಕಿನ ವೈಶಿಷ್ಟ್ಯತೆಗಳು
ಬಿಡುಗಡೆಗೊಂಡ ಹೊಸ ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್ ಸಂಪೂರ್ಣ ಡಿಜಿಟಲ್ ಎಲ್‍ಸಿಡಿ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಕಡಿಮೆ ಆರ್‍ಪಿಎಮ್ ಅಸಿಸ್ಟ್, ಈಝಿ ಸ್ಟಾರ್ಟ್ ಸಿಸ್ಟಂ ಮತ್ತು 3 ಲೆವೆಲ್ ಟ್ರಾಕ್ಷನ್ ಕಂಟ್ರೋಲ್ ಅನ್ನು ಪಡೆದುಕೊಂಡಿದೆ.

ಬೈಕ್ ಸವಾರರ ಸುರಕ್ಷತೆಗಾಗಿ ಮುಂಭಾಗದಲ್ಲಿ 310ಎಂಎಂ ಡ್ಯುಯಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 240ಎಂಎಂ ಡಿಸ್ಕ್ ಬ್ರೇಕಿಂಗ್ ಸಿಸ್ಟಂಗಳನ್ನು ಅಳವಡಿಸಲಾಗಿದ್ದು, ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಆಯ್ಕೆಯಾಗಿ ಪಡೆದುಕೊಂಡಿದೆ.

ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್‍ನ ಅಂತರಾಷ್ಟ್ರೀಯ ನೆಕೆಡ್ ಸ್ಟ್ರೀಟ್ ಫೈಟರ್ ಗ್ರೇ ಮತ್ತು ಬ್ಲೂ ಹಾಗು ಗ್ರೇ ಮತ್ತು ರೆಡ್ ಬಣ್ಣಗಳಲ್ಲಿ ದೊರೆಯುತ್ತಿದ್ದು, ಭಾರತದ ಮಾರುಕಟ್ಟೆಗೂ ಕೂಡಾ ಇದೇ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಸುಜುಕಿಯ ಜಿಎಸ್ಎಕ್ಸ್-ಎಸ್750 ಬೈಕ್‌ಗಳು ಈ ಹಿಂದಿನ ಜಿಎಸ್ಎಕ್ಸ್-ಎಸ್1000 ಬೈಕಿನ ವಿನ್ಯಾಸಗಳ ಹೋಲಿಕೆ ಇದ್ದು, ಸಿಂಗಲ್ ಹೆಡ್ ಲ್ಯಾಂಪ್ ನೊಂದಿಗೆ ಶಾರ್ಪ್ ಫ್ರಂಟ್ ಎಂಡ್, ಶಕ್ತಿಶಾಲಿ ಫ್ಯುಯಲ್ ಟ್ಯಾಂಕ್ ಮತ್ತು ವಿಭಜಿತ ಆಸನ (split seat)ಸೆಟಪ್ ಬೈಕಿಗೆ ಸ್ಪೋರ್ಟಿ ನೋಟವನ್ನು ನೀಡಿದೆ.

ಇನ್ನು ಈ ಬೈಕ್ ಸುಜುಕಿಯ ವಿಶೇಷವಾದ ಅಡ್ವಾನ್ಸ್ಡ್ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಹೊಂದಿದ್ದರು ಈ ಬೈಕಿನಲ್ಲಿ ಯಾವುದೇ ಎಲೆಕ್ಟ್ರಿಕ್ ಸಹಾಯಕಗಳನ್ನು ಹೊಂದಿಲ್ಲ ಎಂಬುವುದು ಖಚಿತವಾಗಿದೆ.

ಬಿಡುಗಡೆಗೊಂಡ ಹೊಸ ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್‌ಗಳು ಮಾರಕಟ್ಟೆಯಲ್ಲಿ ಈಗಾಗಲೆ ಲಭ್ಯವಿರುವ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್, ಯಮಹ ಎಂಟಿ-09, ಕವಾಸಕಿ ಜೆಡ್900 ಮತ್ತು ಬರಲಿರುವ ಡುಕಾಟಿ ಮಾನ್ಸ್ಟರ್ 821 ಬೈಕ್‍ಗಳಿಗೆ ಪೈಪೋಟಿಯನ್ನು ನೀಡಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..
ಪ್ರಪಂಚದಲ್ಲಿ ಅತಿ ಹೆಚ್ಚು ದೂರ ಪ್ರಯಾಣಿಸುವ ವಿಮಾನಗಳು ಯಾವವು?
ಇಲ್ಲಿ ಇದ್ದವರಿಗೆ ಒಂದು ಕಾನೂನು.. ಇಲ್ಲದವರಿಗೆ ಇನ್ನೊಂದು ಕಾನೂನು..


Click it and Unblock the Notifications








