ರಾತ್ರಿ ವೇಳೆ ಹೈವೇ ಡ್ರೈವಿಂಗ್ ಮಾಡುವ ಮುನ್ನ ಇರಲಿ ಎಚ್ಚರ...

Written By:

ಕೆಲವರಿಗೆ ರಾತ್ರಿ ವೇಳೆಯಲ್ಲಿ ಕಾರು ಚಲಾಯಿಸುವುದೆಂದರೆ ತುಂಬಾನೇ ಇಷ್ಟ. ಹಾಗೊಂದು ವೇಳೆ ನಿಮ್ಮಲ್ಲು ನೈಟ್ ರೈಡಿಂಗ್ ಹವ್ಯಾಸವಿದ್ದಲ್ಲಿ ಈ ಸ್ಟೋರಿಯನ್ನು ಒಮ್ಮೆ ಓದಲೇಬೇಕು. ಜೊತೆಗೆ ಸುರಕ್ಷಾ ದೃಷ್ಟಿಕೋನದಲ್ಲೂ ರಾತ್ರಿ ಸಮಯದಲ್ಲಿನ ಡ್ರೈವಿಂಗ್ ಉತ್ತಮವಲ್ಲ. ಹೀಗಾಗಿ ಇಂದಿನ ಈ ಲೇಖನದಲ್ಲಿ ಆಸಕ್ತಿದಾಯಕ ವಿಚಾರವೊಂದನ್ನು ಹೇಳಲಿದ್ದೇವೆ.

ರಾತ್ರಿ ವೇಳೆ ಹೈವೇ ಡ್ರೈವಿಂಗ್ ಮಾಡುವ ಮುನ್ನ ಇರಲಿ ಎಚ್ಚರ...

ಹೈವೇನಲ್ಲಿ ಇತ್ತೀಚೆಗೆ ಸಾಕಷ್ಟು ಅಹಿತರ ಘಟನೆಗಳು ಸಂಭವಿಸುತ್ತಿರುವುದನ್ನು ನಾವೆಲ್ಲಾ ಕೇಳಿಯೇ ಇರುತ್ತವೆ. ಅದರಲ್ಲೂ ಡ್ರಾಪ್ ನೇಪದಲ್ಲಿ ದರೋಡೆ ಪ್ರಕರಣಗಳು ಹೆಚ್ಚುತ್ತಿದ್ದು, ಮೊನ್ನೆ ಕೂಡಾ ಇಂತದ್ದೇ ಘಟನೆ ನಡೆದಿರುವುದು ವಕೀಲರೊಬ್ಬರಿಗೆ ಅಘಾತ ಉಂಟುಮಾಡಿದೆ.

Recommended Video - Watch Now!
2018 ನೆಕ್ಸಾನ್ ಎಎಂಟಿ | Tata Nexon AMT Details & Specifications - DriveSpark
ರಾತ್ರಿ ವೇಳೆ ಹೈವೇ ಡ್ರೈವಿಂಗ್ ಮಾಡುವ ಮುನ್ನ ಇರಲಿ ಎಚ್ಚರ...

ವೃತ್ತಿಯಲ್ಲಿ ವಕೀಲರಾಗಿರುವ ಚೆನ್ನೈ ಮೂಲದ ಶಿವಸುಬ್ರಮಣ್ಯನ್ ಎಂಬುವರು ತಮ್ಮ ಕಾರಿನಲ್ಲಿ ಕಳೆದ 2 ದಿನಗಳ ಹಿಂದೆ ತಡರಾತ್ರಿ ತಂಬರಾಮ್ ಬಳಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಬಾಲಕನೊಬ್ಬ ಹೆದ್ದಾರಿ ಪಕ್ಕದಲ್ಲಿ ನಿಂತು ಡ್ರಾಪ್ ಕೇಳಿದ್ದಾನೆ.

ರಾತ್ರಿ ವೇಳೆ ಹೈವೇ ಡ್ರೈವಿಂಗ್ ಮಾಡುವ ಮುನ್ನ ಇರಲಿ ಎಚ್ಚರ...

ಪಾಪಾ ಬಾಲಕ ಡ್ರಾಪ್ ಕೇಳುತ್ತಿದ್ದಾನೆ ಎಂದುಕೊಂಡು ಕಾರು ನಿಲ್ಲಿಸಿದ್ದಾರೆ. ಆದ್ರೆ ಶಿವಸುಬ್ರಮಣ್ಯನ್ ಕಾರು ನಿಲ್ಲಿಸಿದ್ದೇ ತಪ್ಪಾಗಿ ಹೋಗಿದೆ. ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತುಕೊಳ್ಳು ಎಂದು ಹೇಳುವಷ್ಟರಲ್ಲೇ ವಕೀಲನ ಸುತ್ತ ಸುಮಾರು 10ಕ್ಕೂ ಹೆಚ್ಚು ದರೋಡೆಕೋರರು ಸುತ್ತುವರಿದಿದ್ದಾರೆ.

ರಾತ್ರಿ ವೇಳೆ ಹೈವೇ ಡ್ರೈವಿಂಗ್ ಮಾಡುವ ಮುನ್ನ ಇರಲಿ ಎಚ್ಚರ...

ಶಿವಸುಬ್ರಮಣ್ಯನ್ ಕೈಯಲ್ಲಿ ಬಂಗಾರದ ಕಡಗ, ಒಂದು ಚೈನ್ ಮತ್ತು ಲ್ಯಾಪ್‌ಟಾಪ್ ಸೇರಿದಂತೆ ಕಾರಿನಲ್ಲಿದ್ದ ಬೆಲೆಬಾಳುವ ಕೆಲ ವಸ್ತುಗಳನ್ನು ದೋಚಿದ್ದಲ್ಲದೇ ಚಾಕುವಿನಿಂದ ಇರಿದು ಕೊಲ್ಲುವ ಬೆದರಿಕೆ ಹಾಕಿದ್ದಾರೆ.

ರಾತ್ರಿ ವೇಳೆ ಹೈವೇ ಡ್ರೈವಿಂಗ್ ಮಾಡುವ ಮುನ್ನ ಇರಲಿ ಎಚ್ಚರ...

ಪ್ರಾಣಭಯದಿಂದಲೇ ದರೋಡೆಕೋರರು ಕೇಳಿದ ಎಲ್ಲಾ ವಸ್ತುಗಳನ್ನು ಕೊಟ್ಟು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಹೀಗಾಗಿ ಹೆದ್ದಾರಿ ಬಳಿ ನಿಂತು ಡ್ರಾಪ್ ಕೇಳುವವರ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕಲ್ಲದೇ, ಎಲ್ಲಂದಲ್ಲೇ ಕಾರುಗಳನ್ನು ಪಾರ್ಕ್ ಮಾಡುವುದು ಕೂಡಾ ಅಹಿತಕರ ಘಟನೆಗಳಿಗೆ ಎಡೆಮಾಡಿಕೊಟ್ಟಂತಾಗುತ್ತದೆ.

ರಾತ್ರಿ ವೇಳೆ ಹೈವೇ ಡ್ರೈವಿಂಗ್ ಮಾಡುವ ಮುನ್ನ ಇರಲಿ ಎಚ್ಚರ...

ಕಾರಿಗೆ ರಾತ್ರಿ ಮೊಟ್ಟೆ ಬೀಳುತ್ತೆ..!!

ರಾತ್ರಿ ಸಮಯದಲ್ಲಿ ಕಾರನ್ನೊಡಿಸುತ್ತಿರುವಾಗ ಕಾರಿನ ಮುಂಭಾಗಕ್ಕೆ ಆಕಸ್ಮಾತ್ ಮೊಟ್ಟೆ ಅಭಿಷೇಕವಾದ್ದಲ್ಲಿ ಯಾವುದೇ ಕಾರಣಕ್ಕೂ ಗಾಡಿ ನಿಲ್ಲುಸುವ ಗೋಜಿಗೆ ಹೋಗದಿರಿ. ಅದಕ್ಕೂ ಮುಖ್ಯವಾಗಿ ಕಾರಿನ ವೈಪರ್ ಆನ್ ಮಾಡುವ ಪ್ರಯತ್ನಕ್ಕೆ ಮುಂದಾಗದಿರಿ.

ರಾತ್ರಿ ವೇಳೆ ಹೈವೇ ಡ್ರೈವಿಂಗ್ ಮಾಡುವ ಮುನ್ನ ಇರಲಿ ಎಚ್ಚರ...

ಮೇಲೆ ತಿಳಿಸಿದಂತೆ ರಾತ್ರಿ ಪ್ರಯಾಣ ಮಾಡುತ್ತಿರುವಾಗ ಆಕಾಸ್ಮತ್ ಮೊಟ್ಟೆಗಳ ದಾಳಿ ನಡೆದರೆ ವೈಪರ್ ಆನ್ ಮಾಡದಿರಿ. ನೀರು ಚಿಮುಕಿಸಿ ಅದನ್ನು ತೊಳೆಯುವ ಪ್ರಯತ್ನಕ್ಕೆ ಮುಂದಾಗದಿರಿ. ಈ ರೀತಿ ಮಾಡುವುದರಿಂದ ದರೋಡೆಕೋರರ ಉದ್ದೇಶ ಸುಲಭವಾಗಿ ಈಡೇರಲಿದೆ.

ರಾತ್ರಿ ವೇಳೆ ಹೈವೇ ಡ್ರೈವಿಂಗ್ ಮಾಡುವ ಮುನ್ನ ಇರಲಿ ಎಚ್ಚರ...

ಮೊಟ್ಟೆಯ ಲೋಳೆ, ಹಳದಿ ಹಾಗೂ ನೀರು ಮಿಶ್ರಣವಾಗಿ ಕಾರಿನ ವೈಂಡ್ ಸ್ಕ್ರೀನ್ ಶೇಕಡಾ 92.5 ಮುಸುಕಿದಂತಾಗುತ್ತದೆ. ಶುಭ್ರವಾಗಿದ್ದ ಕನ್ನಡಿ ಕೆಲವೇ ಕ್ಷಣಗಳಲ್ಲಿ ಬಿಳಿ ಪೇಂಟ್ ಬಳಿದಂತಾಗುತ್ತದೆ. ಮೊಟ್ಟೆ ನೀರಿನೊಂದಿಗೆ ಮಿಶ್ರಣವಾದರೆ ಶೇಕಡಾ 92.5ರಷ್ಟು ನಿಮ್ಮ ದೃಷ್ಟಿ ಸಾಮರ್ಥ್ಯವನ್ನು ಕಡಿಮೆ ಮಾಡಲಿದೆ.

ರಾತ್ರಿ ವೇಳೆ ಹೈವೇ ಡ್ರೈವಿಂಗ್ ಮಾಡುವ ಮುನ್ನ ಇರಲಿ ಎಚ್ಚರ...

ದರೋಡೆಕೋರರ ಉದ್ದೇಶ ಈಡೇರುವುದು

ಈ ಸಂದರ್ಭದಲ್ಲಿ ಕಾರು ನಿಲ್ಲಿಸಬೇಕಾಗಿರುವುದು ಅನಿವಾರ್ಯವಾಗುತ್ತದೆ. ತಕ್ಷಣ ಕಾರ್ಯಪ್ರವೃತರಾಗುವ ಕಳ್ಳರು ನಿಮ್ಮನ್ನು ಸುತ್ತುವರಿದು ನಿಮ್ಮಲ್ಲಿದ್ದ ಅಮೂಲ್ಯ ವಸ್ತುಗಳನ್ನೆಲ್ಲ ದೋಚುವ ಸಾಧ್ಯತೆಯಿದೆ.

ರಾತ್ರಿ ವೇಳೆ ಹೈವೇ ಡ್ರೈವಿಂಗ್ ಮಾಡುವ ಮುನ್ನ ಇರಲಿ ಎಚ್ಚರ...

ಗ್ಯಾಂಗ್ ದರೋಡೆ

ಪ್ರಸ್ತುತ ಮೊಟ್ಟೆಯೆಸೆದು ದರೋಡೆ ಮಾಡುವ ಪ್ರಕ್ರಿಯೆ ಬಲು ಜೋರಾಗಿ ನಡೆಯುತ್ತಿದೆ. ಗುಂಪು ಗುಂಪಾಗಿ ಆಗಮಿಸುವ ಕಳ್ಳರ ತಡ ಸುಲಭದಲ್ಲಿ ನಿಮ್ಮನ್ನು ಮೋಸ ಮಾಡಬಲ್ಲರು.

ರಾತ್ರಿ ವೇಳೆ ಹೈವೇ ಡ್ರೈವಿಂಗ್ ಮಾಡುವ ಮುನ್ನ ಇರಲಿ ಎಚ್ಚರ...

ಹಾಗಾಗಿ ಎಚ್ಚರ ವಹಿಸಿರಿ! ರಾತ್ರಿ ಪಯಣದ ವೇಳೆ ಆಕಸ್ಮಾತ್ ಮೊಟ್ಟೆ ಎಸೆತ ಉಂಟಾದ್ದಲ್ಲಿ ತಕ್ಷಣ ಕಾರು ನಿಲ್ಲಿಸದಿರಿ. ಹಾಗೆಯೇ ವೈಪರ್ ಆನ್ ಮಾಡುವ ಸಾಹಸಕ್ಕೆ ಮುಂದಾಗದಿರಿ. ಇಲ್ಲದಿದ್ದರೆ ಯೋಗರಾಜ್ ಭಟ್ಟರ ಹಾಡಿನಂತೆ "ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಿಸಬೇಡಿ" ಎಚ್ಚರವಿರಲಿ! ಹ್ಯಾಪಿ ಡ್ರೈವಿಂಗ್!

English summary
Be Careful Giving Lift To Unknown Persons in Highway.
Story first published: Saturday, March 3, 2018, 18:26 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark