ಸದ್ದಿಲ್ಲದೆ ಬಿಡುಗಡೆಗೊಂಡ ಪಿಯಾಜಿಯೊ ವೆಸ್ಪಾ ನೊಟ್ಟೆ 125 ಸ್ಕೂಟರ್..

ಇಟಾಲಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಪಿಯಾಜಿಯೊ ಸದ್ದಿಲ್ಲದೆ ತಮ್ಮ ವೆಸ್ಪಾ ನೊಟ್ಟೆ 125 ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

By Rahul Ts

ಇಟಾಲಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಪಿಯಾಜಿಯೊ ಸದ್ದಿಲ್ಲದೆ ತಮ್ಮ ವೆಸ್ಪಾ ನೊಟ್ಟೆ 125 ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 70,285 ಸಾವಿರಕ್ಕೆ ಬೆಲೆಯನ್ನು ನಿಗದಿಪಡಿಸಲಾಗಿದೆ.

ಸದ್ದಿಲ್ಲದೆ ಬಿಡುಗಡೆಗೊಂಡ ಪಿಯಾಜಿಯೊ ವೆಸ್ಪಾ ನೊಟ್ಟೆ 125 ಸ್ಕೂಟರ್..

ಬಿಡುಗಡೆಗೊಂಡ ಪಿಯಾಜಿಯೊ ವೆಸ್ಪಾ ನೊಟ್ಟೆ 125 ಸ್ಕೂಟರ್ ಅನ್ನು ಮೊದಲಬಾರಿಗೆ ಇದೇ ಫೆಬ್ರವರಿಯಲ್ಲಿ ನಡೆದ ದೆಹಲಿಯ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶಿಸಲಾಗಿದ್ದು, ಈ ಸ್ಕೂಟರ್ ವೆಸ್ಪಾ ಎಲ್ಎಕ್ಸ್ 125 ಸ್ಕೂಟರ್ ಅನ್ನು ಆಧರಿಸಲಾಗಿದೆ.

ಸದ್ದಿಲ್ಲದೆ ಬಿಡುಗಡೆಗೊಂಡ ಪಿಯಾಜಿಯೊ ವೆಸ್ಪಾ ನೊಟ್ಟೆ 125 ಸ್ಕೂಟರ್..

ಸ್ಕೂಟರ್‍‍ನ ಕ್ರೋಮ್ ಭಾಗಗಳನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಭಾರತೀಯ ರಸ್ತೆಗಳಿಗೆ ತಕ್ಕ ಹಾಗೆ ವಿನ್ಯಾಸವನ್ನು ಮಾಡಲಾಗಿದೆ. ಆದರೆ ವಿದೇಶದ ಮಾರುಕಟ್ಟೆಯಲ್ಲಿ ಈ ಸ್ಕೂಟರ್ ಅನ್ನು ವೆಸ್ಪಾ ಜಿಟಿಎಸ್ ನೊಟ್ಟೆ ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದು, ಬೇರೆ ವಿನ್ಯಾಸದಲ್ಲಿ ಮಾರಾಟವಾಗುತ್ತಿದೆ.

ಸದ್ದಿಲ್ಲದೆ ಬಿಡುಗಡೆಗೊಂಡ ಪಿಯಾಜಿಯೊ ವೆಸ್ಪಾ ನೊಟ್ಟೆ 125 ಸ್ಕೂಟರ್..

ನೊಟ್ಟೆ ಎಂದರೆ ಇಟಲಿಯ ಭಾಷೆಯಲ್ಲಿ 'ರಾತ್ರಿ' ಎಂದರ್ಥ, ಹೆಸರಿಗೆ ತಕ್ಕ ಹಾಗೆಯೆ ಸಂಸ್ಥೆಯು ಈ ಸ್ಕೂಟರ್‍‍ನ ವಿನ್ಯಾಸವನ್ನು ಸಂಪೂರ್ಣವಾಗಿ ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಆಕ್ರಮಣಕಾರಿ ಮತ್ತು ಅತ್ಯಾಧುನಿಕ ಲುಕ್ ಅನ್ನು ಹೊಂದಿದೆ.

ಸದ್ದಿಲ್ಲದೆ ಬಿಡುಗಡೆಗೊಂಡ ಪಿಯಾಜಿಯೊ ವೆಸ್ಪಾ ನೊಟ್ಟೆ 125 ಸ್ಕೂಟರ್..

ವೆಸ್ಪಾ ನೊಟ್ಟೆ 125 ಸ್ಕೂಟರ್ 1770ಎಮ್ಎಮ್ ಉದ್ದ, 690ಎಮ್ಎಮ್ ಅಗಲ, 1140ಎಮ್ಎಮ್ ಎತ್ತರವನ್ನು ಪಡೆದಿದ್ದು, ಮುಂಭಾಗದಲ್ಲಿ ವೆಂಟಿಲೇಟೆಡ್ ಡಿಸ್ಕ್ ಬ್ರೇಕ್ ಅನ್ನು ಪಡೆದುಕೊಂಡಿದೆ. ಮತ್ತು ಮುಂಭಾಗದಲ್ಲಿ ಸಿಂಗಲ್ ಸೈಡ್ ಆರ್ಮ್ ಸಸ್ಪೆಂಷನ್, ಹೈಡ್ರಾಲಿಕ್ ರಿಯರ್ ಸಸ್ಪೆಂಷನ್, ಟ್ಯೂಬ್‍‍ಲೆಸ್ ಟೈರ್ ಎಂಬ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಸದ್ದಿಲ್ಲದೆ ಬಿಡುಗಡೆಗೊಂಡ ಪಿಯಾಜಿಯೊ ವೆಸ್ಪಾ ನೊಟ್ಟೆ 125 ಸ್ಕೂಟರ್..

ಇದಲ್ಲದೆ ಡಿಜಿಟಲ್ ಮಾಡರ್ನ್ ಡಿಜಿಟಲ್ ಅನಾಲಾಗ್ ಕಂಸೋಲ್, 3 ಸ್ಪೋಕ್ ಸ್ಟೈಲಿಷ್ ಅಲಾಯ್ ವ್ಹೀಲ್ಸ್, ಆಟೊ ಇಗ್ನಿಷನ್, ಲೋ ಸ್ಪೀಡ್ ಬ್ಯಾಲೆನ್ಸ್ ಮತ್ತು ಹೈ ಸ್ಪೀಡ್ ಸ್ಟೆಬಿಲಿಟಿ ಫೀಚರ್‍‍‍ಗಳನ್ನು ಪದೆದುಕೊಂಡಿದೆ.

ಸದ್ದಿಲ್ಲದೆ ಬಿಡುಗಡೆಗೊಂಡ ಪಿಯಾಜಿಯೊ ವೆಸ್ಪಾ ನೊಟ್ಟೆ 125 ಸ್ಕೂಟರ್..

ಎಂಜಿನ್ ಸಾಮರ್ಥ್ಯ

ಹೊಸ ವೆಸ್ಪಾ ನೊಟ್ಟೆ 125 ಸ್ಕೂಟರ್ 125ಸಿಸಿ, ಸಿಂಗಲ್ ಸಿಲೆಂಡರ್, 3 ವೇಲ್ವ್, ಏರ್ ಕೂಲ್ಡ್ ಎಂಜಿನ್ ಸಹಾಯದಿಂದ 9.5 ಬಿಹೆಚ್‍‍ಪಿ ಮತ್ತು 9.9ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಎಂಜಿನ್ ಅನ್ನು ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಸದ್ದಿಲ್ಲದೆ ಬಿಡುಗಡೆಗೊಂಡ ಪಿಯಾಜಿಯೊ ವೆಸ್ಪಾ ನೊಟ್ಟೆ 125 ಸ್ಕೂಟರ್..

ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ವೆಸ್ಪಾ ನೊಟ್ಟೆ 125 ಸ್ಕೂಟರ್‍‍ನ ಖರೀದಿಗಾಗಿ ರೂ. 2000 ಸಾವಿರದ ಬುಕ್ಕಿಂಗ್ ಮೊತ್ತವನ್ನು ಪಾವತಿಸಬೇಕಾಗಿದ್ದು, ಇಲ್ಲವಾದಲ್ಲಿ ಸ್ಟಾಕ್‍‍ನ ಅನುಸಾರವಾಗಿ ಸ್ಥಳದಲ್ಲಿಯೆ ಡೀಲರ್‍‍ಗಳು ವಾಹನವನ್ನು ಡೆಲಿವರಿ ಮಾಡುತ್ತಾರೆ. ಕೇವಲ ಕಪ್ಪು ಬಣ್ಣದಲ್ಲಿ ಮಾತ್ರ ಈ ಸ್ಕೂಟರ್‍ ಖರೀದಿಗೆ ಲಭ್ಯವಿರಲಿದೆ.

ಸದ್ದಿಲ್ಲದೆ ಬಿಡುಗಡೆಗೊಂಡ ಪಿಯಾಜಿಯೊ ವೆಸ್ಪಾ ನೊಟ್ಟೆ 125 ಸ್ಕೂಟರ್..

ಹೊಸದಾಗಿ ಬಿಡುಗಡೆಗೊಂಡ ವೆಸ್ಪಾ ಎಲ್ಎಕ್ಸ್ 125 ಸ್ಕೂಟರ್‍‍ನ ನೊಟ್ಟೆ (night) ಎಡಿಷನ್ ಸ್ಕೂಟರ್ ಈಗಾಗಲೆ ಮಾರುಕಟ್ಟೆಯಲ್ಲಿ ಲಭ್ಯವಿರುವ 125 ಸರಣಿಯ ಸ್ಕೂಟರ್‍‍ಗಳಾದ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ ಮತ್ತು ಹೋಂಡಾ ಆಕ್ಟೀವಾ 125 ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Wednesday, July 25, 2018, 15:26 [IST]
English summary
New Vespa notte 125 premium scooter launched in India.
Read more on piaggio vespa new launches
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+