ಕಾಂಟಿನೆಂಟಲ್ ಜಿಟಿ ಬೈಕ್ ಮಾರಾಟವನ್ನು ಬಂದ್ ಮಾಡಲಿದೆಯಂತೆ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸದ್ಯದಲ್ಲೇ ತನ್ನ ಜನಪ್ರಿಯ ಕಾಂಟಿನೆಂಟಲ್ ಜಿಟಿ ಆವೃತ್ತಿಯ ಮಾರಾಟವನ್ನು ನಿಲ್ಲಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಬೈಕ್ ಮಾದರಿಗಳತ್ತ ಗಮನಹರಿಸುತ್ತಿದೆ.

By Praveen

ಕ್ಲಾಸಿಕ್ ಬೈಕ್‌ಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸದ್ಯದಲ್ಲೇ ತನ್ನ ಜನಪ್ರಿಯ ಕಾಂಟಿನೆಂಟಲ್ ಜಿಟಿ ಆವೃತ್ತಿಯ ಮಾರಾಟವನ್ನು ನಿಲ್ಲಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಬೈಕ್ ಮಾದರಿಗಳತ್ತ ಗಮನಹರಿಸುತ್ತಿದೆ.

ಕಾಂಟಿನೆಂಟಲ್ ಜಿಟಿ ಬೈಕ್ ಮಾರಾಟವನ್ನು ಬಂದ್ ಮಾಡಲಿದೆಯಂತೆ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಅಂದ್ರೆನೇ ಹಾಗೆ. ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸದ್ಯದಲ್ಲೇ ಮತ್ತಷ್ಟು ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸುವ ತವಕದಲ್ಲಿದ್ದು, ಈ ಹಿನ್ನೆಲೆ ತನ್ನ ಹಳೆಯ ಬೈಕ್ ಆವೃತ್ತಿಯಾದ ಕಾಂಟಿನೆಂಟಲ್ ಜಿಟಿ ಉತ್ಪಾದನೆ ಮತ್ತು ಮಾರಾಟಕ್ಕೆ ಗುಡ್ ಬೈ ಹೇಳುತ್ತಿದೆ.

Recommended Video

Shocking Car Accident That Happened In Karunagappally, Kerala
ಕಾಂಟಿನೆಂಟಲ್ ಜಿಟಿ ಬೈಕ್ ಮಾರಾಟವನ್ನು ಬಂದ್ ಮಾಡಲಿದೆಯಂತೆ ರಾಯಲ್ ಎನ್‌ಫೀಲ್ಡ್

ಆದ್ರೆ ಇದೇ ವೇಳೆ ಕಾಂಟಿನೆಂಟಲ್ ಜಿಟಿ ಪ್ರಿಯರಿಗೆ ಡಬಲ್ ಧಮಾಕಾ ನೀಡುತ್ತಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು 650 ಟ್ವಿನ್ ಬೈಕ್‌ಗಳನ್ನು ಹೊರತರುತ್ತಿದ್ದು, ಪ್ರಸಕ್ತ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಾಂಟಿನೆಂಟಲ್ ಜಿಟಿ 650 ಮತ್ತು ಇಂಟರ್‌ಸೆಪ್ಟರ್ 650 ಎನ್ನುವ ಹೊಸ ಬೈಕ್‌ಗಳನ್ನು ಪರಿಚಯಿಸುತ್ತಿದೆ.

ಕಾಂಟಿನೆಂಟಲ್ ಜಿಟಿ ಬೈಕ್ ಮಾರಾಟವನ್ನು ಬಂದ್ ಮಾಡಲಿದೆಯಂತೆ ರಾಯಲ್ ಎನ್‌ಫೀಲ್ಡ್

ಹೀಗಾಗಿ ಈ ಹಿಂದಿನ ಕಾಂಟಿನೆಂಟಲ್ ಜಿಟಿ ಮಾದರಿಯ ಮಾರಾಟ ಪ್ರಕ್ರಿಯೆಯನ್ನು ಮುಂಬರುವ ಫೆಬ್ರುವರಿ ಮೊದಲ ವಾರದಿಂದಲೇ ಸ್ಥಗಿತಗೊಳಿಸಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಡ್ರೈವ್ ಸ್ಪಾರ್ಕ್ ತಂಡಕ್ಕೆ ರಾಯಲ್ ಎನ್‌ಫೀಲ್ಡ್ ಡಿಲರ್ಸ್‌ಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಕಾಂಟಿನೆಂಟಲ್ ಜಿಟಿ ಬೈಕ್ ಮಾರಾಟವನ್ನು ಬಂದ್ ಮಾಡಲಿದೆಯಂತೆ ರಾಯಲ್ ಎನ್‌ಫೀಲ್ಡ್

ಇನ್ನು ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಮೋಟರ್ ಸೈಕಲ್‌ಗಳನ್ನು ಈ ಹಿಂದೆ 2017ರ ರೈಡರ್ ಮೆನಿಯಾ ಕಾರ್ಯಕ್ರಮದಲ್ಲಿ ಪ್ರದರ್ಶನಗೊಳಿಸಿದ್ದ ರಾಯಲ್ ಎನ್‌ಫೀಲ್ಡ್ ಇದೀಗ ತನ್ನ ನೆಚ್ಚಿನ ಗ್ರಾಹಕರಿಗಾಗಿ ಮತ್ತಷ್ಟು ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ಕಾಂಟಿನೆಂಟಲ್ ಜಿಟಿ ಬೈಕ್ ಮಾರಾಟವನ್ನು ಬಂದ್ ಮಾಡಲಿದೆಯಂತೆ ರಾಯಲ್ ಎನ್‌ಫೀಲ್ಡ್

ಇದಲ್ಲದೇ 2017ರ ರೈಡರ್ ಮೆನಿಯಾ ಕಾರ್ಯಕ್ರಮದಲ್ಲಿ ಅನಾವರಣಗೊಂಡಿದ್ದ ರಾಯಲ್ ಎನ್‌ಫೀಲ್ಡ್ ಹೊಸ ಮೋಟಾರ್ ಸೈಕಲ್‌ಗಳು ಕ್ರೋಮ್ ಬಣ್ಣದ ಯೋಜನೆಗಳನ್ನು ಹೊಂದಿದ್ದು, ರೆಟ್ರೊ ಕ್ಲಾಸಿಕ್ ಯುಗದ ಬೈಕುಗಳನ್ನು ನೆನಪಿಸುತ್ತವೆ.

Trending On DriveSpark Kannada:

ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

ಹಾಫ್ ಹೆಲ್ಮೆಟ್ ವಿರುದ್ಧ ಭರ್ಜರಿ ಕಾರ್ಯಚರಣೆ- ಬೈಕ್ ಸವಾರರಿಗೆ ಬಿಗ್ ಶಾಕ್...

ಮಾರ್ಚ್‌ನಲ್ಲಿ ಬಿಡುಗಡೆಯಾಗಲಿರುವ 2018ರ ಮಾರುತಿ ಸುಜುಕಿ ಸ್ವಿಫ್ಟ್ ಬೆಲೆ ಎಷ್ಟು ಗೊತ್ತಾ?

ಕಾಂಟಿನೆಂಟಲ್ ಜಿಟಿ ಬೈಕ್ ಮಾರಾಟವನ್ನು ಬಂದ್ ಮಾಡಲಿದೆಯಂತೆ ರಾಯಲ್ ಎನ್‌ಫೀಲ್ಡ್

ಜೊತೆಗೆ ಕೈಗೆಟುಕುವ ಬೆಲೆಯಲ್ಲಿ ಮಧ್ಯಮ ಗಾತ್ರದ ಎಂಜಿನ್ ಹೊಂದಿರುವ ಮೋಟಾರ್‌ಸೈಕಲ್ ಬಿಡುಗಡೆಗೊಳಿಸುವ ಮುಖ್ಯ ಕಲ್ಪನೆಯನ್ನು ಕಂಪನಿ ಹೊಂದಿದ್ದು, ಮಧ್ಯಮ ವರ್ಗದ ಗ್ರಾಹಕರು ಸಹ ಹೊಸ ಬೈಕ್ ಖರೀದಿಯತ್ತ ಮುಖ ಮಾಡಬಹುದು.

ಕಾಂಟಿನೆಂಟಲ್ ಜಿಟಿ ಬೈಕ್ ಮಾರಾಟವನ್ನು ಬಂದ್ ಮಾಡಲಿದೆಯಂತೆ ರಾಯಲ್ ಎನ್‌ಫೀಲ್ಡ್

ಇದಕ್ಕೆ ಕಾರಣ ರೈಡರ್ ಮೆನಿಯಾ ಕಾರ್ಯಕ್ರಮದಲ್ಲಿ ಹೊಸ ಬೈಕ್‌ಗಳನ್ನು ಅನಾವರಣಗೊಳಿಸಿ ಮಾತನಾಡಿದ್ದ ರಾಯಲ್ ಎನ್‌ಫೀಲ್ಡ್ ಸಿಇಒ ಸಿಡ್ ಲಾಲ್ ಅವರು "ಜಗತ್ತಿನಾದ್ಯಂತ ಇರುವಂತಹ ಹೊರಸೂಸುವಿಕೆಯ ಮಾನದಂಡಗಳ ಗುಣಮಟ್ಟ ಮತ್ತು ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಈ ಬೈಕುಗಳನ್ನು ಅಭಿವೃದ್ಧಿಪಡಿಸಲಾಗಿದೆ" ಎಂದಿದ್ದರು.

ಕಾಂಟಿನೆಂಟಲ್ ಜಿಟಿ ಬೈಕ್ ಮಾರಾಟವನ್ನು ಬಂದ್ ಮಾಡಲಿದೆಯಂತೆ ರಾಯಲ್ ಎನ್‌ಫೀಲ್ಡ್

ಹೀಗಾಗಿ ರಾಯಲ್ ಎನ್‌ಫೀಲ್ಡ್ ಅನಾವರಣಗೊಳಿಸಿರುವ ಹೊಸ ಬೈಕ್‌ಗಳು 650 ಸಿಸಿ ಪ್ಯಾರಲಲ್ ಏರ್/ ಆಯಿಲ್ ಎಂಜಿನ್ ಆಯ್ಕೆ ಪಡೆಯಲಿವೆ. ಈ ಎಂಜಿನ್, 46.3 ಬಿಎಚ್‌ಪಿ ಮತ್ತು 52 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ ಹಾಗು 6-ಸ್ಪೀಡ್ ಗೇರ್‌ಬಾಕ್ಸ್ ಸಂಯೋಜಿತವಾಗಿದೆ.

ಕಾಂಟಿನೆಂಟಲ್ ಜಿಟಿ ಬೈಕ್ ಮಾರಾಟವನ್ನು ಬಂದ್ ಮಾಡಲಿದೆಯಂತೆ ರಾಯಲ್ ಎನ್‌ಫೀಲ್ಡ್

ಈ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಅವಳಿ ಮೋಟರ್ ಸೈಕಲ್‌ಗಳು ಸಾಕಷ್ಟು ಭರವಸೆ ಹುಟ್ಟುಹಾಕಿದ್ದು, ಭವಿಷ್ಯದಲ್ಲಿ ಹೊಸ ಬೈಕ್‍‌ಗಳು ಗ್ರಾಹಕರನ್ನು ಯಾವ ರೀತಿ ಸೆಳೆಯುತ್ತವೆ ಎಂಬುವುದನ್ನು ಕಾಯ್ದು ನೋಡಬೇಕಿದೆ.

Trending On DriveSpark Kannada:

2017ರಲ್ಲಿ ಸಾಮಾಜಿಕ ಜಾಣತಾಣಗಳಲ್ಲಿ ಅತಿಹೆಚ್ಚು ಸದ್ದು ಮಾಡಿದ ಟಾಪ್ 10 ಬೈಕ್‌ಗಳು...

ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್...

Trending DriveSpark YouTube Videos

Subscribe To DriveSpark Kannada YouTube Channel - Click Here

Article Published On: Thursday, January 4, 2018, 13:44 [IST]
English summary
Read in Kannada about Royal Enfield Continental GT Discontinued In India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+