ಬೈಕ್ ಪ್ರಿಯರಿಗಾಗಿ ಹೊಸ ನಮೂನೆಯ ಕ್ರ್ಯಾಶ್ ಗಾರ್ಡ್‌ಗಳನ್ನ ಪರಿಚಯಿಸಿದ ರಾಯಲ್ ಎನ್‌ಫೀಲ್ಡ್

ಬೈಕ್ ಪ್ರಿಯರಿಗಾಗಿ ಹೊಸ ನಮೂನೆಯ ಕ್ರ್ಯಾಶ್ ಗಾರ್ಡ್‌ಗಳನ್ನ ಪರಿಚಯಿಸಿದ ರಾಯಲ್ ಎನ್‌ಫೀಲ್ಡ್

By Praveen Sannamani

ಭಾರತದ ಜನಪ್ರಿಯ ಬೈಕ್ ಉತ್ಪಾದನಾ ಸಂಸ್ಥೆಯಾದ ರಾಯಲ್ ಎನ್‌ಫೀಲ್ಡ್ ಈಗಾಗಲೇ ಹಲವು ಬಗೆಯ ಬೈಕ್ ಆವೃತ್ತಿಗಳನ್ನು ಪರಿಚಯಿಸಿ ಯಶಸ್ವಿಯಾಗಿದ್ದು, ಕಾಲಕ್ಕೆ ತಕ್ಕಂತೆ ಗ್ರಾಹಕರಿಗೆ ಅಭಿರುಚಿಗೆ ತಕ್ಕಂತೆ ಬೈಕ್ ವಿನ್ಯಾಸಗಳಲ್ಲಿ ಹಲವಾರು ಬದಲಾವಣೆಗಳನ್ನು ತಂದಿದೆ. ಇದೀಗ ಬೈಕ್‌ಗಳ ರಕ್ಷಣೆಗಾಗಿ ಹಾಕಲಾಗುವ ವಿವಿಧ ನಮೂನೆ ಕ್ರ್ಯಾಶ್ ಗಾರ್ಡ್‌ಗಳನ್ನು ಪರಿಚಯಿಸಿದೆ.

ಬೈಕ್ ಪ್ರಿಯರಿಗಾಗಿ ಹೊಸ ನಮೂನೆಯ ಕ್ರ್ಯಾಶ್ ಗಾರ್ಡ್‌ಗಳನ್ನ ಪರಿಚಯಿಸಿದ ರಾಯಲ್ ಎನ್‌ಫೀಲ್ಡ್

ಬೈಕ್‌ಗಳನ್ನು ಅಪಘಾತಗಳ ಸಂದರ್ಭದಲ್ಲಿ ಎಂಜಿನ್ ವಿಭಾಗವನ್ನು ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಕ್ರ್ಯಾಶ್ ಗಾರ್ಡ್ ಬಳಕೆ ಮಾಡುವುದು ಆಟೋ ಉದ್ಯಮದಲ್ಲಿ ಒಂದು ಜನಪ್ರಿಯ ಬಿಡಿಭಾಗವಾಗಿದೆ. ಅದರಲ್ಲೂ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಆಕರ್ಷಣೆ ಹೆಚ್ಚಿಸುವಲ್ಲಿ ಇವುಗಳು ಪ್ರಮುಖ ಪಾತ್ರವಹಿಸುತ್ತಿದ್ದು, ಕ್ರ್ಯಾಶ್ ಗಾರ್ಡ್‌ಗಳು ಕೇವಲ ಬೈಕ್ ರಕ್ಷಣೆಗೆ ಅಷ್ಟೇ ಅಲ್ಲದೇ ಕ್ಲಾಸಿಕ್ ಬೈಕ್ ಪ್ರಿಯರಿಗೆ ಅನ್ನೊಂದು ಕ್ರೇಜ್ ಆಗಿ ಪರಿಣಮಿಸಿದೆ ಎನ್ನಬಹುದು.

ಬೈಕ್ ಪ್ರಿಯರಿಗಾಗಿ ಹೊಸ ನಮೂನೆಯ ಕ್ರ್ಯಾಶ್ ಗಾರ್ಡ್‌ಗಳನ್ನ ಪರಿಚಯಿಸಿದ ರಾಯಲ್ ಎನ್‌ಫೀಲ್ಡ್

ಇದೇ ಕಾರಣಕ್ಕೆ ಮೊದಲ ಬಾರಿಗೆ ವಿವಿಧ ನಮೂನೆಯ ಕ್ರ್ಯಾಶ್ ಗಾರ್ಡ್‌ಗಳನ್ನು ಪರಿಚಯಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು, 32ಎಂಎಂ ಸ್ಟೀಲ್ ಬಳಕೆಯಿಂದ ಸಿದ್ದಗೊಳಿಸಿರುವ 7 ವಿಶೇಷ ಕ್ರ್ಯಾಶ್ ಗಾರ್ಡ್ ಮಾದರಿಯನ್ನು ಅನಾವರಣಗೊಳಿಸಿದೆ. ಹೀಗಾಗಿ ಬೈಕ್ ಸವಾರರಿಗೆ ಅನುಕೂಲಕವಾಗುವ ಉದ್ದೇಶ ಪ್ರತಿಯೊಂದು ಮಾದರಿಯ ಸಂಪೂರ್ಣ ವಿವರಣೆ ಮತ್ತು ಬೆಲೆ ವಿವರಗಳ ಬಗ್ಗೆ ಇಲ್ಲಿ ಚರ್ಚಿಸಿದ್ದೇವೆ.

ಬೈಕ್ ಪ್ರಿಯರಿಗಾಗಿ ಹೊಸ ನಮೂನೆಯ ಕ್ರ್ಯಾಶ್ ಗಾರ್ಡ್‌ಗಳನ್ನ ಪರಿಚಯಿಸಿದ ರಾಯಲ್ ಎನ್‌ಫೀಲ್ಡ್

ಏರ್ ಫೈ ಕ್ರ್ಯಾಶ್ ಗಾರ್ಡ್

ಪ್ರಾಯಶಃ ಇದು ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ಗಳಲ್ಲಿ ಲಭ್ಯವಿರುವ ಸಾಮಾನ್ಯ ಕ್ರ್ಯಾಶ್ ಗಾರ್ಡ್ ಮಾದರಿಯಾಗಿದೆ. ಮೂರು ಸ್ಲಾಟ್ ಹೊಂದಿರುವ ಇದ ವಿನ್ಯಾಸಗಳು ಆರ್‌ಇ ಬುಲೆಟ್ ಬೈಕ್‌ಗಳಲ್ಲಿ ಹೊಸ ಲುಕ್ ನೀಡಿದ್ದು, ಇದು ರಾಯಲ್ ಎನ್‌ಫೀಲ್ಡ್‌ನ ಕ್ರ್ಯಾಶ್ ಗಾರ್ಡ್‌ಗಳಲ್ಲಿನ ಹಳೆಯ ವಿನ್ಯಾಸಗಳಲ್ಲಿ ಒಂದಾಗಿದೆ.

ಬೈಕ್ ಪ್ರಿಯರಿಗಾಗಿ ಹೊಸ ನಮೂನೆಯ ಕ್ರ್ಯಾಶ್ ಗಾರ್ಡ್‌ಗಳನ್ನ ಪರಿಚಯಿಸಿದ ರಾಯಲ್ ಎನ್‌ಫೀಲ್ಡ್

ಏರ್ ಫೈ ಹೆವಿ ಕ್ರ್ಯಾಶ್ ಗಾರ್ಡ್

ಸಾಮಾನ್ಯ ಏರ್ ಫೈ ಕ್ರ್ಯಾಶ್ ಗಾರ್ಡ್‌ಗಳಿಂತ ಹೆವಿ ಕ್ರ್ಯಾಶ್ ಗಾರ್ಡ್‌ಗಳು ತುಸು ಹೆಚ್ಚಿನ ಬಿಗಿತ ಹೊಂದಿರುವ ಮಾದರಿಯಾಗಿದ್ದು,ಬ್ಲ್ಯಾಕ್ ಮಿಡ್ ಸ್ಟೀಲ್ ಬಣ್ಣದ ವಿನ್ಯಾಸವನ್ನು ಪಡೆದುಕೊಂಡಿವೆ. ಇವು ಅಪಘಾತಗಳಲ್ಲಿ ಮತ್ತು ಬ್ಯಾಲೆನ್ಸ್ ತಪ್ಪಿ ಬಿದ್ದಾಗ ಬೈಕ್ ಸವಾರರನ್ನು ರಕ್ಷಿಸುವಲ್ಲಿ ಸಾಕಷ್ಟು ಸಹಕಾರಿಯಾಗಿವೆ.

ಬೆಲೆಗಳು: ರೂ.3400

ಬೈಕ್ ಪ್ರಿಯರಿಗಾಗಿ ಹೊಸ ನಮೂನೆಯ ಕ್ರ್ಯಾಶ್ ಗಾರ್ಡ್‌ಗಳನ್ನ ಪರಿಚಯಿಸಿದ ರಾಯಲ್ ಎನ್‌ಫೀಲ್ಡ್

ಆಕ್ಟಾಗನ್ ಕ್ರ್ಯಾಶ್ ಗಾರ್ಡ್

ಹೆಸರೇ ಸೂಚಿಸುವಂತೆ, ಏರ್‌ ಫೈ ಕ್ರ್ಯಾಶ್ ಗಾರ್ಡ್‌ಗಳಿಗೆ ಹೋಲಿಸಿದರೇ ಎಂಟು ಬದಿಯಲ್ಲಿಯಲ್ಲೂ ಸೂಕ್ಷ್ಮ ವಿನ್ಯಾಸ ಹೊಂದಿರುವ ಆಕ್ಟಾಗನ್ ಕ್ರ್ಯಾಶ್ ಗಾರ್ಡ್‌ಗಳು ಹಗುರ ಮತ್ತು ಹೆಚ್ಚು ಸಾಂದ್ರವಾಗಿದ್ದು, ಇವುಗಳ ಸಹ ಅಪಘಾತದ ಸಂದರ್ಭದಲ್ಲಿ ಗರಿಷ್ಠ ಸುರಕ್ಷೆ ಸುರಕ್ಷೆ ನೀಡಬಲ್ಲವು.

ಬೈಕ್ ಪ್ರಿಯರಿಗಾಗಿ ಹೊಸ ನಮೂನೆಯ ಕ್ರ್ಯಾಶ್ ಗಾರ್ಡ್‌ಗಳನ್ನ ಪರಿಚಯಿಸಿದ ರಾಯಲ್ ಎನ್‌ಫೀಲ್ಡ್

ಆಕ್ಟಾಗನ್ ಬ್ಲ್ಯಾಕ್ ಮಿಡ್ ಸ್ಟೀಲ್

ಸಾಮಾನ್ಯ ಆಕ್ಟಾಗನ್ ಕ್ರ್ಯಾಶ್ ಗಾರ್ಡ್‌ಗಳಿಂತ ಹೆಚ್ಚಿನ ಗುಣಮಟ್ಟದ ಕ್ರ್ಯಾಶ್ ಗಾರ್ಡ್ ಖರೀದಿ ಬಯಸಿದ್ದಲ್ಲಿ ಆಕ್ಟಾಗನ್ ಬ್ಲ್ಯಾಕ್ ಮಿಡ್ ಸ್ಟೀಲ್ ಮಾದರಿಯು ಉತ್ತಮವಾಗಿದ್ದು, ಕ್ಲಾಸಿಕ್ ಲುಕ್ ಹೊಂದಿರುವ ಆಕ್ಟಾಗನ್ ಬ್ಲ್ಯಾಕ್ ಮಿಡ್ ಸ್ಟೀಲ್‌ಗಳು ಸಾಮಾನ್ಯ ಕ್ರ್ಯಾಶ್ ಗಾರ್ಡ್‌ಗಳಿಂತ ತುಸು ತೆಳ್ಳನೆಯ ವಿನ್ಯಾಸವಿದ್ದರೂ ಹೆಚ್ಚು ಬಲಿಷ್ಠತೆ ಪಡೆದಿವೆ.

ಬೆಲೆಗಳು: ರೂ. 2300

ಬೈಕ್ ಪ್ರಿಯರಿಗಾಗಿ ಹೊಸ ನಮೂನೆಯ ಕ್ರ್ಯಾಶ್ ಗಾರ್ಡ್‌ಗಳನ್ನ ಪರಿಚಯಿಸಿದ ರಾಯಲ್ ಎನ್‌ಫೀಲ್ಡ್

ಟ್ರೆಪೆಜಿಯಂ ಕ್ರ್ಯಾಶ್ ಗಾರ್ಡ್‌ಗಳು

ಟ್ರೆಪೆಜಿಯಂ ಕ್ರ್ಯಾಶ್ ಗಾರ್ಡ್‌ಗಳು ವಿವಿಧ ಮಾದರಿಯ ಮೋಟಾರ್ ರ್ಸೈಕಲ್‌ಗಳಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯ ರೀತಿಯ ಕ್ರ್ಯಾಶ್ ಗಾರ್ಡ್ ಮಾದರಿಯಾಗಿದ್ದು, ಬೈಕ್ ಸವಾರರ ಮೊಣಕಾಲಿಗೆ ಉತ್ತಮ ರಕ್ಷಣೆ ನೀಡುವಂತೆ ವಿನ್ಯಾಸ ಮಾಡಲಾಗಿದೆ.

ಬೈಕ್ ಪ್ರಿಯರಿಗಾಗಿ ಹೊಸ ನಮೂನೆಯ ಕ್ರ್ಯಾಶ್ ಗಾರ್ಡ್‌ಗಳನ್ನ ಪರಿಚಯಿಸಿದ ರಾಯಲ್ ಎನ್‌ಫೀಲ್ಡ್

ಟ್ರೆಪೆಜಿಯಂ ಬ್ಲ್ಯಾಕ್ ಮಿಡ್ ಸ್ಟೀಲ್

ಟ್ರೆಪೆಜಿಯಂಗಳಲ್ಲಿ ಬ್ಲ್ಯಾಕ್ ಮಿಡ್ ಸ್ಟೀಲ್‌ಗಳು ಹೆಚ್ಚು ಬಳಕೆಯಿದ್ದು, ಇವು ಸಾಂಪ್ರದಾಯಿಕವಾಗಿ ಕಪ್ಪು ಬಣ್ಣದಲ್ಲೇ ಕಾಣಸಿಗುತ್ತವೆ. ಆದ್ರೆ ಈ ಮೇಲೆ ಹೇಳಲಾದ ಏರ್ ಫೈ ಮತ್ತು ಆಕ್ಟಾಗನ್ ಕ್ರ್ಯಾಶ್ ಗಾರ್ಡ್‌ಗಳಂತೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಹೊಂದಾಣಿಕೆಯಾಗಲಾರದು.

ದರಗಳು: ರೂ.2100

ಬೈಕ್ ಪ್ರಿಯರಿಗಾಗಿ ಹೊಸ ನಮೂನೆಯ ಕ್ರ್ಯಾಶ್ ಗಾರ್ಡ್‌ಗಳನ್ನ ಪರಿಚಯಿಸಿದ ರಾಯಲ್ ಎನ್‌ಫೀಲ್ಡ್

ಸ್ಟ್ರೇಟ್ ಬಾರ್ ಕ್ರ್ಯಾಶ್ ಗಾರ್ಡ್

ಸ್ಟ್ರೇಟ್ ಬಾರ್ ಕ್ರ್ಯಾಶ್ ಗಾರ್ಡ್ ನೋಡಲು ಆಕರ್ಷಕ ಎನ್ನಿಸಿದರೂ ಏರ್‌ಫೈ ಮತ್ತು ಆಕ್ಟಾಗನ್ ರೀತಿಯಲ್ಲಿ ಗರಿಷ್ಠ ಪ್ರಮಾಣದ ಸುರಕ್ಷೆತೆ ನೀಡಲಾರವು. ಆದರೇ ಮೇಲೆ ತಿಳಿಸಲಾಗಿರುವ ಎಲ್ಲಾ ಕ್ರ್ಯಾಶ್ ಗಾರ್ಡ್‌ಗಳಿಂತಲೂ ಹೆಚ್ಚಿನ ಆಕರ್ಷಣೆಯನ್ನು ಹೊಂದಿದೆ ಎನ್ನಬಹುದು.

ಬೈಕ್ ಪ್ರಿಯರಿಗಾಗಿ ಹೊಸ ನಮೂನೆಯ ಕ್ರ್ಯಾಶ್ ಗಾರ್ಡ್‌ಗಳನ್ನ ಪರಿಚಯಿಸಿದ ರಾಯಲ್ ಎನ್‌ಫೀಲ್ಡ್

ಸ್ಟ್ರೇಟ್ ಬಾರ್ ಬ್ಲ್ಯಾಕ್ ಮಿಡ್ ಸ್ಟೀಲ್

ಸಾಮಾನ್ಯ ಸ್ಟ್ರೇಟ್ ಬಾರ್‌ಗಳಂತೆಯೇ ಬ್ಲ್ಯಾಕ್ ಮಿಡ್ ಸ್ಟ್ರೇಟ್ ಬಾರ್ ಸ್ಟೀಲ್‌ಗಳು ಸಹ ನೋಡಲು ಮಾತ್ರ ಆಕರ್ಷಣೆಯಾಗಿದ್ದು, ಕೆಲವೊಮ್ಮೆ ಲಾಂಗ್ ಬೈಕ್ ರೈಡಿಂಗ್ ಮಾಡುವಾಗ ಬೈಕ್‌ರ್ ಸಹ ಇದರ ಮೇಲೆ ಕಾಲಿಟ್ಟು ವಿಶ್ರಾಂತಿ ಸಹ ಪಡೆಯಬಹುದು.

ದರಗಳು: ರೂ.1,200ಕ್ಕಿಂತಲೂ ಅಧಿಕ

ಬೈಕ್ ಪ್ರಿಯರಿಗಾಗಿ ಹೊಸ ನಮೂನೆಯ ಕ್ರ್ಯಾಶ್ ಗಾರ್ಡ್‌ಗಳನ್ನ ಪರಿಚಯಿಸಿದ ರಾಯಲ್ ಎನ್‌ಫೀಲ್ಡ್

ಒಟ್ಟಿನಲ್ಲಿ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಅನಾವರಣ ಮಾಡಿರುವ ಕ್ರ್ಯಾಶ್ ಗಾರ್ಡ್ ಆಕ್ಸೆರಿಸ್‌ಗಳು ಮಾರುಕಟ್ಟೆಯಲ್ಲಿರುವ ಇತರೆ ಮಾದರಿಯ ಕ್ರ್ಯಾಶ್ ಗಾರ್ಡ್‌ಗಳಿಂತ ಉತ್ತಮವಾಗಿದ್ದು, ಖರೀದಿ ಮಾಡುವ ಬಿಡಿಭಾಗಗಳ ಆಧಾರ ಮೇಲೆ ವಾರಂಟಿ ಸಹ ದೊರೆಯಲಿದೆ.

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಅನಾವರಣ ಮಾಡಿರುವ ಕ್ರ್ಯಾಶ್ ಗಾರ್ಡ್‌ಗಳು ವಿಡಿಯೋ ಇಲ್ಲಿದೆ ವೀಕ್ಷಿಸಿ. ಇದರಲ್ಲಿ ನಿಮಗೆ ಇಷ್ಟವಾದ ಮಾದರಿಯನ್ನು ಆಯ್ಕೆ ಮಾಡುವ ಮುನ್ನ ನಿಮ್ಮ ಹತ್ತಿರ ಅಧಿಕೃತ ಡೀಲರ್ಸ್ ಬಳಿ ಲಭ್ಯತೆಗೆ ಖಚಿತಪಡಿಸಿಕೊಳ್ಳಿ...

ಬೈಕ್ ಪ್ರಿಯರಿಗಾಗಿ ಹೊಸ ನಮೂನೆಯ ಕ್ರ್ಯಾಶ್ ಗಾರ್ಡ್‌ಗಳನ್ನ ಪರಿಚಯಿಸಿದ ರಾಯಲ್ ಎನ್‌ಫೀಲ್ಡ್

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಇದು ಆರ್‌ಇ ಬುಲೆಟ್‌ ಅಲ್ಲಾ ಕಣ್ರೀ 100ಸಿಸಿ ರಾಯಲ್ ಇಂಡಿಯನ್ ಬೈಕ್...

ಅಪಘಾತಕ್ಕೀಡಾದ ಕ್ಯಾಮ್ರಿ ಕಾರನ್ನೇ ಪ್ರದರ್ಶನಕ್ಕಿಟ್ಟ ಟೊಯೊಟಾ ಡೀಲರ್ಸ್

ಅಪಘಾತದಲ್ಲಿ ಮೃತಪಟ್ಟವರ ಪರಿಹಾರದ ಮೊತ್ತವನ್ನ 10 ಪಟ್ಟು ಹೆಚ್ಚಳ ಮಾಡಿದ ಕೇಂದ್ರ ಸರ್ಕಾರ...

ಪ್ರತಿ ಚಾರ್ಜ್‌ಗೆ 547 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು....

ಬಡ ವಿದ್ಯಾರ್ಥಿ ತಯಾರಿಸಿದ ಡ್ರೈವರ್ ಲೆಸ್ ಟ್ರ್ಯಾಕ್ಟರ್ ಹೇಗಿದೆ ನೋಡಿ..

Most Read Articles

Kannada
Read more on royal enfield
English summary
Royal Enfield Crash Guards: The Latest Crash Guards For The Royal Enfield Bullet Shown In New Video.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X