ಹೊಸ ಬಣ್ಣದಲ್ಲಿ ಬಿಡುಗಡೆಗೆ ಸಜ್ಜಾದ ಆರ್‌ಇ ಇಂಟರ್‌ಸೆಪ್ಟರ್ 650 & ಕಾಂಟಿನೆಂಟಲ್ ಜಿಟಿ 650

ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಮೋಟರ್ ಸೈಕಲ್‌ಗಳನ್ನು ಅಭಿವೃದ್ಧಿಗೊಳಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸದ್ಯ ಬಿಡುಗಡೆಗಾಗಿ ಎದುರು ನೋಡುತ್ತಿದ್ದು, ಈ ಮಧ್ಯೆ ಹೊಸ ಬೈಕ್‌ಗಳು ಹೊಸ ಬಣ್ಣಗಳಲ್ಲಿ ಕಾಣಿಸಿಕೊಂಡಿವೆ.

By Praveen Sannamani

ದೇಶಿಯ ಮಾರುಕಟ್ಟೆಗಾಗಿ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಮೋಟರ್ ಸೈಕಲ್‌ಗಳನ್ನು ಅಭಿವೃದ್ಧಿಗೊಳಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸದ್ಯ ಬಿಡುಗಡೆಗಾಗಿ ಎದುರು ನೋಡುತ್ತಿದ್ದು, ಈ ಮಧ್ಯೆ ಹೊಸ ಬೈಕ್‌ಗಳು ಮತ್ತೇರಡು ಹೊಸ ಬಣ್ಣಗಳಲ್ಲಿ ಕಾಣಿಸಿಕೊಂಡಿವೆ.

ಹೊಸ ಬಣ್ಣದಲ್ಲಿ ಬಿಡುಗಡೆಗೆ ಸಜ್ಜಾದ ಆರ್‌ಇ ಇಂಟರ್‌ಸೆಪ್ಟರ್ 650 & ಕಾಂಟಿನೆಂಟಲ್ ಜಿಟಿ 650

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳು ಡೀಲರ್ಸ್ ಯಾರ್ಡ್‌ಗಳಲ್ಲಿ ಕಾಣಿಸಿಕೊಂಡಿದ್ದು, ಹೊಸ ಬೈಕ್‌ಗಳನ್ನು ಡ್ಯುಯಲ್ ಟೋನ್ ಬಣ್ಣದೊಂದಿಗೆ ಪ್ರಿಮಿಯಂ ಟಚ್ ನೀಡಲಾಗಿದೆ. ಹೀಗಾಗಿ ಇದೇ ಮಾದರಿಗಳು ಭಾರತದಲ್ಲೂ ಕೂಡಾ ಬಿಡುಗಡೆಯಾಗಲಿವೆ ಎನ್ನಲಾಗುತ್ತಿದೆ.

ಹೊಸ ಬಣ್ಣದಲ್ಲಿ ಬಿಡುಗಡೆಗೆ ಸಜ್ಜಾದ ಆರ್‌ಇ ಇಂಟರ್‌ಸೆಪ್ಟರ್ 650 & ಕಾಂಟಿನೆಂಟಲ್ ಜಿಟಿ 650

ರೆಡ್ ಆ್ಯಂಡ್ ವೈಟ್ ಡ್ಯುಯಲ್ ಟೋನ್ ಬಣ್ಣಗಳಲ್ಲಿ ಅಭಿವೃದ್ಧಿಯಾಗಿರುವ ಇಂಟರ್‌ಸೆಪ್ಟರ್ 650 ಮತ್ತು ಸ್ಟೋರ್ಟಿ ಬ್ಲ್ಯಾಕ್ ಬಣ್ಣದಲ್ಲಿ ಸಿದ್ದವಾಗಿರುವ ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳು ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಿಯರಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿವೆ.

ಹೊಸ ಬಣ್ಣದಲ್ಲಿ ಬಿಡುಗಡೆಗೆ ಸಜ್ಜಾದ ಆರ್‌ಇ ಇಂಟರ್‌ಸೆಪ್ಟರ್ 650 & ಕಾಂಟಿನೆಂಟಲ್ ಜಿಟಿ 650

ಇದಲ್ಲದೇ 2017ರ ರೈಡರ್ ಮೆನಿಯಾ ಕಾರ್ಯಕ್ರಮದಲ್ಲಿ ಅನಾವರಣಗೊಂಡಿದ್ದ ರಾಯಲ್ ಎನ್‌ಫೀಲ್ಡ್ ಹೊಸ ಮೋಟಾರ್ ಸೈಕಲ್‌ಗಳು ಕ್ರೋಮ್ ಬಣ್ಣದ ಯೋಜನೆಗಳನ್ನು ಹೊಂದಿದ್ದು, ರೆಟ್ರೊ ಕ್ಲಾಸಿಕ್ ಯುಗದ ಬೈಕುಗಳನ್ನು ನೆನಪಿಸುತ್ತವೆ.

ಹೊಸ ಬಣ್ಣದಲ್ಲಿ ಬಿಡುಗಡೆಗೆ ಸಜ್ಜಾದ ಆರ್‌ಇ ಇಂಟರ್‌ಸೆಪ್ಟರ್ 650 & ಕಾಂಟಿನೆಂಟಲ್ ಜಿಟಿ 650

ಕಳೆದ ಕೆಲದಿನಗಳ ಹಿಂದಷ್ಟೇ ಚೆನ್ನೈ ಹೊರವಲಯದಲ್ಲೂ ಕೂಡಾ ಇಂಟರ್‌ಸೆಪ್ಟರ್ 650 & ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳನ್ನು ಸ್ಪಾಟ್ ಟೆಸ್ಟಿಂಗ್ ನಡೆಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಮುಂಬರುವ ಜೂನ್ ಆರಂಭದಲ್ಲಿ ಮಾರುಕಟ್ಟೆಗೆ ಪರಿಚಯಿಸುವ ಇರಾದೆಯಲ್ಲಿದೆ. ಜೊತೆಗೆ ಆಸಕ್ತ ಗ್ರಾಹಕರಿಂದ ಈಗಾಗಲೇ ಮುಂಗಡ ಪಡೆದು ಬುಕ್ಕಿಂಗ್ ಕೂಡಾ ಪಡೆಯಲಾಗುತ್ತಿದೆ.

ಹೊಸ ಬಣ್ಣದಲ್ಲಿ ಬಿಡುಗಡೆಗೆ ಸಜ್ಜಾದ ಆರ್‌ಇ ಇಂಟರ್‌ಸೆಪ್ಟರ್ 650 & ಕಾಂಟಿನೆಂಟಲ್ ಜಿಟಿ 650

ಇನ್ನು ರಾಯಲ್ ಎನ್‌ಫೀಲ್ಡ್ ಅನಾವರಣಗೊಳಿಸಲಿರುವ ಹೊಸ ಬೈಕ್‌ಗಳು 647 ಸಿಸಿ ಪ್ಯಾರಲಲ್ ಏರ್/ ಆಯಿಲ್ ಎಂಜಿನ್ ಆಯ್ಕೆ ಪಡೆಯಲಿವೆ. ಸ್ಟ್ಯಾಂಡರ್ಡ್ ಸ್ಲಿಪ್ಪರ್ ಕ್ಲಚ್‌ನೊಂದಿಗೆ 47 ಬಿಎಚ್‌ಪಿ ಮತ್ತು 52 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ ಹಾಗು 6-ಸ್ಪೀಡ್ ಗೇರ್‌ಬಾಕ್ಸ್ ಸಂಯೋಜಿತವಾಗಿದೆ.

ಹೊಸ ಬಣ್ಣದಲ್ಲಿ ಬಿಡುಗಡೆಗೆ ಸಜ್ಜಾದ ಆರ್‌ಇ ಇಂಟರ್‌ಸೆಪ್ಟರ್ 650 & ಕಾಂಟಿನೆಂಟಲ್ ಜಿಟಿ 650

ಹೀಗಾಗಿ ಹೊಸ ಬೈಕ್‌ಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಮುಂಭಾಗದಲ್ಲಿ ಟೆಲಿಸ್ಕೊಫಿಕ್ ಫೋರ್ಕ್ ಅಪ್, ಹಿಂಭಾಗದಲ್ಲಿ ಗ್ಯಾಸ್ ಚಾರ್ಜ್ಡ್ ಶಾಕ್ ಅಬ್ಜರ್ಸ್, ಎಬಿಎಸ್, ಎರಡು ಬದಿಯ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಒದಗಿಸಲಾಗಿದೆ. ಈ ಮೂಲಕ ಗಂಟೆಗೆ 170ಕಿಮಿ ಟಾಪ್ ಸ್ಪೀಡ್ ಪಡೆದುಕೊಂಡಿವೆ.

ಹೊಸ ಬಣ್ಣದಲ್ಲಿ ಬಿಡುಗಡೆಗೆ ಸಜ್ಜಾದ ಆರ್‌ಇ ಇಂಟರ್‌ಸೆಪ್ಟರ್ 650 & ಕಾಂಟಿನೆಂಟಲ್ ಜಿಟಿ 650

ಬೆಲೆ (ಎಕ್ಸ್‌ಶೋರಂ ಪ್ರಕಾರ)

ಬಿಡುಗಡೆಗೂ ಮುನ್ನವೇ ಭಾರೀ ನೀರಿಕ್ಷೆ ಹುಟ್ಟುಹಾಕಿರುವ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳು ಎಕ್ಸ್‌ಶೋರಂ ಪ್ರಕಾರ ರೂ.3 ಲಕ್ಷದಿಂದ ರೂ.3.25 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಹೊಸ ಬಣ್ಣದಲ್ಲಿ ಬಿಡುಗಡೆಗೆ ಸಜ್ಜಾದ ಆರ್‌ಇ ಇಂಟರ್‌ಸೆಪ್ಟರ್ 650 & ಕಾಂಟಿನೆಂಟಲ್ ಜಿಟಿ 650

ಒಟ್ಟಿನಲ್ಲಿ ಬಿಡುಗಡೆಗೂ ಮುನ್ನವೇ ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಅವಳಿ ಮೋಟಾರ್ ಸೈಕಲ್‌ಗಳು ಸಾಕಷ್ಟು ಭರವಸೆ ಹುಟ್ಟುಹಾಕಿದ್ದು, ಭವಿಷ್ಯದಲ್ಲಿ ಹೊಸ ಬೈಕ್‍‌ಗಳು ಗ್ರಾಹಕರನ್ನು ಯಾವ ರೀತಿ ಸೆಳೆಯುತ್ತವೆ ಎಂಬುವುದನ್ನು ಕಾಯ್ದು ನೋಡಬೇಕಿದೆ.

ಹೊಸ ಬಣ್ಣದಲ್ಲಿ ಬಿಡುಗಡೆಗೆ ಸಜ್ಜಾದ ಆರ್‌ಇ ಇಂಟರ್‌ಸೆಪ್ಟರ್ 650 & ಕಾಂಟಿನೆಂಟಲ್ ಜಿಟಿ 650

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ನಿಯಂತ್ರಣ ತಪ್ಪಿ 20 ಅಡಿ ಹಳ್ಳಕ್ಕೆ ಬಿದ್ದ ಟಾಟಾ ನೆಕ್ಸಾನ್- ಕಾರಿನಲ್ಲಿದ್ದವರಿಗೆ ಪರಿಸ್ಥಿತಿ ಏನಾಯ್ತು ಗೊತ್ತಾ?

ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್‌ ವಿಶೇಷತೆ ಏನು?

ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿ ಮಾಡೋದು ಲಾಭಕ್ಕಿಂತ ನಷ್ಟವೇ ಹೆಚ್ಚಂತೆ? ಇದು ನೀಜವೇ?

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಂದಲೇ ಟ್ರೋಲ್ ಆದ ಯುವಕ..

ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

Article Published On: Friday, April 27, 2018, 16:53 [IST]
English summary
Royal Enfield Interceptor 650 And Continental GT 650 Spotted In Two New Colours.
Read more on royal enfield
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+