ಐಎಸ್ಐ ಗುರುತಿಲ್ಲದ ಹೆಲ್ಮೆಟ್‍ ಮಾರಾಟಕ್ಕೆ ಸದ್ಯದಲ್ಲೇ ಬ್ರೇಕ್..

Written By: Rahul TS

ಐಎಸ್ಐ ಗುರುತು ಇಲ್ಲದಿರುವ ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸುವ ವಾಹನ ಸವಾರರಿಗೆ ಶಾಕ್ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರವು, ಉತ್ತಮ ಹೆಲ್ಮೆಟ್‌ಗಳನ್ನು ಖರೀದಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಹೊಸ ನಿಯಮ ಒಂದನ್ನು ಜಾರಿಗೆ ತರಲು ಮುಂದಾಗಿದೆ.

ಐಎಸ್ಐ ಗುರುತಿಲ್ಲದ ಹೆಲ್ಮೆಟ್‍ ಮಾರಾಟಕ್ಕೆ ಸದ್ಯದಲ್ಲೇ ಬ್ರೇಕ್..

ಮುಂಬರುವ ದಿನಗಳಲ್ಲಿ ಭಾರತ ಸರ್ಕಾರವು ದ್ವಿಚಕ್ರವಾಹನಗಳ ಐಎಸ್‍ಐ ಗುರುತು ಇಲ್ಲದಿರುವ ಹೆಲ್ಮೆಟ್‍‍ಗಳ ಮಾರಾಟವನ್ನೇ ಸದ್ಯದಲ್ಲೇ ಬ್ಯಾನ್ ಮಾಡಲಿದ್ದು, ನಂತರ ವರ್ಷಾಂತ್ಯಕ್ಕೆ ಐಎಸ್ಐ ಗುರುತು ಇಲ್ಲದಿರುವ ಹೆಲ್ಮೆಟ್‍ಗಳನ್ನು ಬ್ಯಾನ್ ಮಾಡಲು ನಿರ್ಧರಿಸಿದೆ.

ಐಎಸ್ಐ ಗುರುತಿಲ್ಲದ ಹೆಲ್ಮೆಟ್‍ ಮಾರಾಟಕ್ಕೆ ಸದ್ಯದಲ್ಲೇ ಬ್ರೇಕ್..

ಐಎಸ್ಐ ಅಸೋಸಿಯೆಶನ್ ಕೇಂದ್ರ ಸರ್ಕಾರದ ಮನವಿಯನ್ನು ಸ್ವೀಕರಿಸಿದ್ದು, ಭಾರತದಲ್ಲಿ non-ISI ಹೆಲ್ಮೆಟ್‍‍ಗಳ ಮಾರಾಟವನ್ನು ಹಾಗು ಬಳಕೆಯನ್ನು ರದ್ದುಗೊಳಿಸಲು ಮುಂದಾಗಿವೆ. ಇದರ ಜೊತೆ ಹೆದ್ದಾರಿ ಚಾಲಕರಿಗೆ ಸುಖದ್ ಯಾತ್ರೆ ಆ್ಯಪ್ ಹಾಗು ಎಮರ್ಜನ್ಸಿ ಹೆಲ್ಪ್ ಲೈನ್ ನಂಬರ್ ಅನ್ನು ಬಿಡುಗಡೆಗೊಳಿಸಿದ್ದಾರೆ.

ಐಎಸ್ಐ ಗುರುತಿಲ್ಲದ ಹೆಲ್ಮೆಟ್‍ ಮಾರಾಟಕ್ಕೆ ಸದ್ಯದಲ್ಲೇ ಬ್ರೇಕ್..

ಭಾರತದಲ್ಲಿ ಶೇಕಡ 75ರಿಂದ 80ರಷ್ಟು ದ್ವಿಚಕ್ರ ವಾಹನ ಚಾಲಕರು ನಾನ್-ಐಎಸ್ಐ ಹೆಲ್ಮೆಟ್‍‍ಗಳನ್ನು ಬಳಸುತ್ತಿದ್ದು, ಇದರಿಂದಾಗಿ ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಸುಪ್ರೀಂ ಕೋರ್ಟ್ ಗೆ 6 ತಿಂಗಳು ಒಳಗಾಗಿ ನಾನ್-ಐಎಸ್ಐ ಹೆಲ್ಮೆಟ್ ಗಳನ್ನು ರದ್ದುಗೊಳಿಸಲು ಅವಕಾಶ ನೀಡುವಂತೆ ಮನವಿ ಮಾಡಿದೆ.

ಐಎಸ್ಐ ಗುರುತಿಲ್ಲದ ಹೆಲ್ಮೆಟ್‍ ಮಾರಾಟಕ್ಕೆ ಸದ್ಯದಲ್ಲೇ ಬ್ರೇಕ್..

ಹೀಗಾಗಿ ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಒಪ್ಪಿದ್ದಲ್ಲಿ, ಮಾರುಕಟ್ಟೆಯಲ್ಲಿನ ನಾನ್-ಐಎಸ್ಐ ಹೆಲ್ಮೆಟ್‍ಗಳಿಗೆ ಸಂಪೂರ್ಣ ಬ್ರೇಕ್ ಬೀಳಲಿದೆ. ಅಲ್ಲದೇ ನಾನ್ ಐಎಸ್ಐ ಹೆಲ್ಮೆಟ್ ಮಾರಾಟ ಮಾಡುವುದಾಗಲಿ ಅಥವಾ ಬಳಕೆ ಮಾಡುವುದನ್ನು ನಿಲ್ಲಿಸಲಾಗುತ್ತದೆ.

ಐಎಸ್ಐ ಗುರುತಿಲ್ಲದ ಹೆಲ್ಮೆಟ್‍ ಮಾರಾಟಕ್ಕೆ ಸದ್ಯದಲ್ಲೇ ಬ್ರೇಕ್..

ದ್ವಿಚಕ್ರ ವಾಹನ ಚಲಾಯಿಸುವ ವೆಳೆಯಲ್ಲಿ ನಮ್ಮ ಅನುಕೂಲಕ್ಕಾಗಿ ಹಾಗು ನಮ್ಮ ರಕ್ಷಣೆಗಾಗಿ ಹೆಲ್ಮೆಟ್‍ ಅನ್ನು ಧರಿಸಬೇಕಾಗಿದ್ದು, ಈಗ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಹಲವಾರು ಹೆಲ್ಮೆಟ್‍‍ಗಳು ಕಳಪೆ ಗುಣಮಟ್ಟವನ್ನು ಹೊಂದಿರುವ ಉತ್ಪನ್ನಗಳಾಗಿವೆ.

ಐಎಸ್ಐ ಗುರುತಿಲ್ಲದ ಹೆಲ್ಮೆಟ್‍ ಮಾರಾಟಕ್ಕೆ ಸದ್ಯದಲ್ಲೇ ಬ್ರೇಕ್..

ಭಾರತವು ಒಂದು ದೊಡ್ಡ ದೇಶವಾಗಿದ್ದು ಪ್ರತಿ ವರ್ಷ ಸುಮಾರು 90 ಮಿಲಿಯನ್ ಹೆಲ್ಮೆಟ್ ಗಳ ತಯಾರಿಕೆಗೆ ಬೇಡಿಕೆ ಬರುತ್ತಿದ್ದು, ವಾಹನ ಸವಾರರು ಮಾತ್ರ ನಾನ್-ಐಎಸ್ಐ ಹೆಲ್ಮೆಟ್‌ಗಳನ್ನೆ ಹೆಚ್ಚಾಗಿ ಆಯ್ಕೆ ಮಾಡುತ್ತಿದ್ದಾರೆ.

ಐಎಸ್ಐ ಗುರುತಿಲ್ಲದ ಹೆಲ್ಮೆಟ್‍ ಮಾರಾಟಕ್ಕೆ ಸದ್ಯದಲ್ಲೇ ಬ್ರೇಕ್..

ಇದರಿಂದಾಗಿ ಕೇಂದ್ರ ಸರ್ಕಾರವು ಈ ನಿಯಮನವನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದು, ನಾನ್ ಐಎಸ್ಐ ಹೆಲ್ಮೆಟ್ ಗಳನ್ನು ಸಂಪೂರ್ಣವಾಗಿ ತಡೆಗಟ್ಟಬೇಕೆಂಬ ಆಲೋಚನೆಯಲಿದೆ.

Read more on helmet traffic rules
English summary
Sale Of Non-ISI Helmets To Be Banned In India.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark