ಆಟೋ ಎಕ್ಸ್ ಪೋ 2018: ಸುಜುಕಿ ಬರ್ಗಮನ್ ಸ್ಟ್ರೀಟ್ ಸ್ಕೂಟರ್ ಬೆಲೆ, ಬಿಡುಗಡೆ ಮಾಹಿತಿ ಬಹಿರಂಗ
ಸುಜುಕಿ ಇಂಡಿಯಾ ಮೋಟಾರ್ ಸೈಕಲ್ ವಿಭಾಗವು ವಿನೂತನ ಶೈಲಿಯ ಬರ್ಗಮನ್ ಸ್ಪ್ರೀಟ್ ಸ್ಕೂಟರ್ ಪರಿಚಯಿಸುವ ಬಗ್ಗೆ 'ಆಟೋ ಎಕ್ಸ್ ಪೋ 2018'ರಲ್ಲಿ ಮಾಹಿತಿ ಬಹಿರಂಗಗೊಳಿಸಿದೆ.
ದೇಶಿಯ ಮಾರುಕಟ್ಟೆಯಲ್ಲಿ ಪ್ರಿಮಿಯಂ ಸ್ಕೂಟರ್ ಮಾದರಿಗಳಿಗೆ ವಿಶೇಷ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಇದೇ ಕಾರಣಕ್ಕೆ ಹೊಸ ಯೋಜನೆ ಒಂದನ್ನು ರೂಪಿಸಿರುವ ಸುಜುಕಿ ಇಂಡಿಯಾ ಮೋಟಾರ್ ಸೈಕಲ್ ವಿಭಾಗವು ವಿನೂತನ ಶೈಲಿಯ ಬರ್ಗಮನ್ ಸ್ಪ್ರೀಟ್ ಸ್ಕೂಟರ್ ಪರಿಚಯಿಸುವ ಬಗ್ಗೆ 'ಆಟೋ ಎಕ್ಸ್ ಪೋ 2018'ರಲ್ಲಿ ಮಾಹಿತಿ ಬಹಿರಂಗಗೊಳಿಸಿದೆ.

ಈ ಹಿಂದೆ 150 ಸಿಸಿ ಸಾಮರ್ಥ್ಯದ ಇನ್‌ಟ್ರುಡರ್ 150 ಕ್ರೂಸರ್ ಬೈಕ್ ಪರಿಚಯಿಸಿದ್ದ ಸುಜುಕಿ ಇಂಡಿಯಾ ಮೋಟಾರ್ ಸೈಕಲ್ ವಿಭಾಗವು ಇದೀಗ ಎಪ್ರಿಲಿಯಾ 125 ಮತ್ತು ವೆಸ್ಪಾ 150 ಮಾದರಿಗಳನ್ನು ಹೋಲುವ ಬರ್ಗಮನ್ ಸ್ಟ್ರೀಟ್ ಎನ್ನುವ ಹೊಸ ನಮೂನೆಯ ಪ್ರಿಮಿಯಂ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ.
Recommended Video


ಅಂದಹಾಗೆ ಸುಜುಕಿ ಸಂಸ್ಥೆಯು ಪರಿಚಯಿಸುತ್ತಿರುವ ಬರ್ಗಮನ್ ಸ್ಟ್ರೀಟ್ ಪ್ರಿಮಿಯಂ ಸ್ಕೂಟರ್‌ಗಳು ಈಗಾಗಲೇ ಕೆಲವು ಮುಂದುವರಿದ ಕೆಲ ರಾಷ್ಟ್ರಗಳಲ್ಲಿ ಮಾರಾಟವಾಗುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 200ಸಿಸಿ, 250ಸಿಸಿ, 450ಸಿಸಿ ಮತ್ತು 600ಸಿಸಿ ಸಾಮರ್ಥ್ಯದ ಬುರ್ಗಮನ್ ಸ್ಟ್ರೀಟ್ ಸ್ಕೂಟರ್‌ಗಳು ಲಭ್ಯವಿವೆ.

ಆದರೆ ಭಾರತದಲ್ಲಿ ಬಿಡುಗಡೆಗಾಗಿ ಸಿದ್ಧಗೊಳಿಸಲಾಗಿರುವ ಬರ್ಗಮನ್ ಸ್ಟ್ರೀಟ್ ಸ್ಕೂಟರ್‌ಗಳು ಕೇವಲ 125ಸಿಸಿ ಆವೃತ್ತಿಗಳು ಮಾತ್ರ ಲಭ್ಯವಾಗಲಿದ್ದು, ಪ್ರಸ್ತುತ ಆಕ್ಸೆಸ್ 125ಗಿಂತಲೂ ಹೆಚ್ಚಿನ ಗುಣಮಟ್ಟದ ವೈಶಿಷ್ಟ್ಯತೆಗಳನ್ನು ಪಡೆದುಕೊಳ್ಳಲಿದೆ.

ಪೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟ್ರುಮೆಂಟ್, ಟೆಲಿ ಸ್ಕೊಪಿಕ್ ಫೋರ್ಕ್, ಮುಂಭಾಗದ ಚಕ್ರದಲ್ಲಿ ಡಿಸ್ಕ್ ಬ್ರೇಕ್, ಮಲ್ಟಿ ಫಂಕ್ಷನ್ ಕೀ ಸ್ಲಾಟ್, ದೊಡ್ಡದಾದ ರೈಡರ್ ಸೀಟ್, 12ವಿ ಚಾರ್ಜಿಂಗ್ ಪಾಯಿಂಟ್, ಟ್ಯೂಬ್ ಟೈರ್ಸ್ ಮತ್ತು ಎಲ್‌ಇಡಿ ಟೈಲ್ ಲ್ಯಾಂಪ್ ಹೊಂದಿರಲಿದೆ.

ಹೀಗಾಗಿ ಸುಜುಕಿ ಪರಿಚಯಿಸುತ್ತಿರುವ ಬರ್ಗಮನ್ ಸ್ಟ್ರೀಟ್ ಹೊಸ ಸ್ಕೂಟರ್‌ಗಳು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಸೃಷ್ಠಿಸುವ ತವಕದಲ್ಲಿದ್ದು, ಹೊಸ ಸ್ಕೂಟರ್ ಬೆಲೆಗಳು ಕೂಡಾ ಇತರೆ ಸ್ಕೂಟರ್‌ಗಳಿಗೆ ಟಕ್ಕರ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬೆಲೆ (ಅಂದಾಜು)
ಬರ್ಗಮನ್ ಸ್ಟ್ರೀಟ್ ಸ್ಕೂಟರ್‌ಗಳ ಬೆಲೆಯು ರೂ.60 ಸಾವಿರದಿಂದ ರೂ.65 ಸಾವಿರ ಇರಬಹುದೆಂದು ಅಂದಾಜಿಸಲಾಗಿದ್ದು, ಬಿಡುಗಡೆ ನಂತರವಷ್ಟೇ ನಿಖರ ಮಾಹಿತಿ ದೊರೆಯಲಿದೆ.

ಬಿಡುಗಡೆ ಯಾವಾಗ?
ಸುಜುಕಿ ಸಂಸ್ಥೆಯು ಹೊಸ ಸ್ಕೂಟರ್ ಮಾದರಿಗಳನ್ನು ಏಪ್ರಿಲ್ ಅಥವಾ ಮೇ ಅಂತ್ಯಕ್ಕೆ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿದ್ದು, ಪ್ರಿಮಿಯಂ ಸ್ಕೂಟರ್ ಆವೃತ್ತಿಗಳಲ್ಲೇ ಈ ಸ್ಕೂಟರ್ ಮಾದರಿಯು ವಿಶೇಷ ಗುಣಲಕ್ಷಣಗಳನ್ನು ಹೊಂದಿರಲಿದೆ.

ಇತರೆ ಸ್ಕೂಟರ್‌ಗಳಿಂತ ಹೇಗೆ ಭಿನ್ನ?
ಹೌದು.. ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ನಮೂನೆಯ 125 ಸಿಸಿ ಸಾಮರ್ಥ್ಯದ ಸ್ಕೂಟರ್ ಮಾದರಿಗಳಿದ್ದು, ಬರ್ಗಮನ್ ಸ್ಟ್ರೀಟ್ ಇತರೆ ಮಾದರಿಗಳಿಂತ ಸಾಕಷ್ಟು ವಿಭಿನ್ನವಾಗಿದೆ. ಇದಕ್ಕೆ ಕಾರಣ ಈ ಹಿಂದೆ ಬಿಡುಗಡೆಯಾಗಿದ್ದ ಇನ್‌ಟ್ರುಡರ್ 150 ಮಾದರಿಯಲ್ಲೇ ಕ್ರೂಸರ್ ವೈಶಿಷ್ಟ್ಯತೆಯನ್ನು ಸಹ ಪಡೆದುಕೊಂಡಿದೆ.
Trending On DriveSpark Kannada:
ಟೊಯೊಟಾ ಪರಿಚಯಿಸಲಿದೆ 7 ಸೀಟರ್ ಲಗ್ಷುರಿ ಎಂಪಿವಿ ಅಲ್ಫಾರ್ಡ್ ವ್ಯಾನ್...
100 ಸಿಸಿ ಬೈಕ್ ಎಂಜಿನ್‌ನಲ್ಲಿ ದುಬಾರಿ ಬೆಲೆಯ ಲಂಬೋರ್ಗಿನಿ ಕಾರು ನಿರ್ಮಾಣ ಮಾಡಿದ ರೈತ...!!


Click it and Unblock the Notifications








