2018ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಮೈಲೇಜ್ ಪ್ರೇರಿತ ಟಾಪ್ 5 ಸ್ಕೂಟರ್‌ಗಳಿವು..!

2018ರ ಅವಧಿಯಲ್ಲಿ ಭಾರತೀಯ ಆಟೋ ಉದ್ಯಮವು ಹಲವು ಬದಲಾವಣೆಗಳೊಂದಿಗೆ ಹೊಸತನಕ್ಕೆ ನಾಂದಿಹಾಡಿದ್ದು, ಹತ್ತಾರು ಹೊಸ ಹೊಸ ವಾಹನಗಳ ಬಿಡುಗಡೆಗೆ ಸಾಕ್ಷಿಯಾಗಿದೆ. ಹೀಗಾಗಿ ಗ್ರಾಹಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿಯಾಗಿರುವ ಟಾಪ್ 5 ಸ್ಕೂಟರ್‌ಗಳ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

2018ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಮೈಲೇಜ್ ಪ್ರೇರಿತ ಟಾಪ್ 5 ಸ್ಕೂಟರ್‌ಗಳಿವು..!

ಕಳೆದ ಒಂದು ದಶಕ ಅವಧಿಯಲ್ಲಿ ಭಾರತೀಯ ಆಟೋ ಉದ್ಯಮವು ಮಹತ್ವದ ಬದಲಾವಣೆಗಳನ್ನು ಸಾಧಿಸಿದ್ದು, ಜಗತ್ತಿನ ಪ್ರಮುಖ ಆಟೋ ಉತ್ಪಾದಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. ಹೀಗಾಗಿ ಗರಿಷ್ಠ ಮಾರಾಟ ಗುರಿಯಾಗಿಸಿಕೊಂಡಿರುವ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ಅನೇಕ ಸ್ಕೂಟರ್‌ ಮಾದರಿಯನ್ನು ಪರಿಚಯಿಸಿದ್ದು, ಈ ಪೈಕಿ ಟಾಪ್ 10 ಸ್ಕೂಟರ್‌ಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

2018ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಮೈಲೇಜ್ ಪ್ರೇರಿತ ಟಾಪ್ 5 ಸ್ಕೂಟರ್‌ಗಳಿವು..!

01.ಹೋಂಡಾ ಆಕ್ಟಿವಾ 5ಜಿ

ಹೋಂಡಾ ಸಂಸ್ಥೆಯು ಇದೇ ವರ್ಷ ಫೆಬ್ರುವರಿ ತಿಂಗಳಿನಲ್ಲಿ ಆಕ್ಟೀವಾ 5ಜಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ಮಾದರಿಗಳಲ್ಲಿ ಹೋಂಡಾ ಆಕ್ಟಿವಾ 5ಜಿ ಸ್ಕೂಟರ್‌ಗಳನ್ನು ಅಭಿವೃದ್ಧಿ ಮಾಡಲಾಗಿರುವುದು ಸ್ಕೂಟರ್ ಮಾರಾಟಕ್ಕೆ ಮತ್ತಷ್ಟು ಪೂರಕವಾಗಿದೆ.

2018ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಮೈಲೇಜ್ ಪ್ರೇರಿತ ಟಾಪ್ 5 ಸ್ಕೂಟರ್‌ಗಳಿವು..!

ದೆಹಲಿ ಎಕ್ಸ್‌ಶೋರಂ ಪ್ರಕಾರ ಆಕ್ಟಿವಾ 5ಜಿ ಎಸ್‌ಟಿಡಿ ಆವೃತ್ತಿಯು ರೂ.53,019 ಬೆಲೆ ಪಡೆದುಕೊಂಡಿದ್ದಲ್ಲಿ ಆಕ್ಟಿವಾ 5ಜಿ ಡಿಎಲ್‌ಎಕ್ಸ್ ಮಾದರಿಯು ರೂ.54,884ಕ್ಕೆ ಮಾರಾಟವಾಗುತ್ತಿದೆ. ಜೊತೆಗೆ 5.3 ಲೀಟರ್ ಇಂಧನ ಟ್ಯಾಂಕ್, 130 ಎಂಎಂ ಡ್ರಮ್ ಬ್ರೇಕ್, ಕೊಂಬಿ ಬ್ರೇಕ್ ಸಿಸ್ಟಂ, ನ್ಯೂ ಕ್ರೋಮ್ ಹೈಲೆಟ್ಸ್, ಮೆಟಲ್ ಮಫ್ಲರ್ ಪ್ರೋಜೆಕ್ಟರ್ ಮತ್ತು ಸಾಂಪ್ರದಾಯಿಕ ಬಣ್ಣಗಳೊಂದಿಗೆ ಹೊಸ ರೂಪದಲ್ಲಿ ಅಭಿವೃದ್ಧಿಪಡಿಸಲಾದ 5 ಪ್ರಮುಖ ಬಣ್ಣಗಳಲ್ಲಿ ಲಭ್ಯವಿವೆ.

ಮೈಲೇಜ್: ಪ್ರತಿಲೀಟರ್‌ಗೆ 45ಕಿ.ಮಿ

2018ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಮೈಲೇಜ್ ಪ್ರೇರಿತ ಟಾಪ್ 5 ಸ್ಕೂಟರ್‌ಗಳಿವು..!

02. ಸುಜುಕಿ ಬರ್ಗಮನ್ ಸ್ಟ್ರೀಟ್

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳುವ ಮೂಲಕ ಸ್ಕೂಟರ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ್ದ ಸುಜುಕಿ ಹೊಸ ಪ್ರೀಮಿಯಂ ಸ್ಕೂಟರ್ ಬರ್ಗಮನ್ ಸ್ಟ್ರೀಟ್ ಬೆಂಗಳೂರು ಎಕ್ಸ್‌ಶೋರಂ ಪ್ರಕಾರ ರೂ.70,105ಕ್ಕೆ ಮಾರಾಟವಾಗುತ್ತಿದೆ.

2018ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಮೈಲೇಜ್ ಪ್ರೇರಿತ ಟಾಪ್ 5 ಸ್ಕೂಟರ್‌ಗಳಿವು..!

ಸುಜುಕಿ ಸಂಸ್ಥೆಯು ಬಿಡುಗಡೆ ಮಾಡಿರುವ ಬರ್ಗಮನ್ ಸ್ಟ್ರೀಟ್ ಸ್ಕೂಟರ್ ಮಾದರಿಯು 124ಸಿಸಿ ಎಂಜಿನ್‌ನೊಂದಿಗೆ ಪ್ರೀಮಿಯಂ ಸೌಲಭ್ಯಗಳು ಮತ್ತು ಅತ್ಯುತ್ತಮ ಚಾಲನಾ ಸೌಲಭ್ಯಗಳನ್ನು ಪಡೆದುಕೊಂಡಿರುವುದು ಯುವಕನ ಪಾಲಿನ ಹಾಟ್ ಫೆವರಿಟ್ ಆಗಲಿದೆ.

ಮೈಲೇಜ್- ಪ್ರತಿಲೀಟರ್‌ಗೆ 53.5ಕಿ.ಮಿ

2018ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಮೈಲೇಜ್ ಪ್ರೇರಿತ ಟಾಪ್ 5 ಸ್ಕೂಟರ್‌ಗಳಿವು..!

03. ಟಿವಿಎಸ್ ಎನ್‌ಟಾರ್ಕ್ 125

ಟಿವಿಎಸ್ ಎನ್‌ಟಾರ್ಕ್ 125 ಮಾದರಿಯನ್ನು ಯುವ ಜನತೆಯನ್ನು ಗುರಿಯಾಗಿಸಿ ಅಭಿವೃದ್ಧಿಗೊಳಿಸಲಾಗಿದ್ದು, ಆರಾಮದಾಯಕ ಸ್ಕೂಟರ್ ಚಾಲನೆಗಾಗಿ ಸುಲಭ ಮತ್ತು ಸುರಕ್ಷಾ ಸಾಧಾನಗಳನ್ನು ನೀಡಲಾಗಿದೆ. ಹೆಸರಲ್ಲೇ ಸೂಚಿಸಿರುವಂತೆ ಆಕ್ರಮಣಕಾರಿ ಕ್ರೀಡಾ ವಿನ್ಯಾಸ ಪಡೆದುಕೊಂಡಿದ್ದು, ಇದರ ವಿನ್ಯಾಸವನ್ನು ಯುದ್ಧ ವಿಮಾನಗಳಿಂದ ಸ್ಫೂರ್ತಿ ಪಡೆದು ಹಾಗೂ ಟಿವಿಎಸ್ ರೇಸಿಂಗ್ ತಂಡದ ನೆರವಿನೊಂದಿಗೆ ರಚಿಸಲಾಗಿದೆ.

2018ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಮೈಲೇಜ್ ಪ್ರೇರಿತ ಟಾಪ್ 5 ಸ್ಕೂಟರ್‌ಗಳಿವು..!

ಟಿವಿಎಸ್ ಎನ್‌ಟಾರ್ಕ್ 125ಸಿಸಿ ಸಿವಿಟಿಐ ಯುನಿಟ್ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಹೊಂದಿದ್ದು, 9.27 ಬಿಹೆಚ್ ಪಿ ಮತ್ತು 10.4ಎನ್ಎಂ ಟಾರ್ಕ್ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ.62,825 ಬೆಲೆ ಹೊಂದಿದೆ.

ಮೈಲೇಜ್- ಪ್ರತಿಲೀಟರ್‌ಗೆ 60ಕಿ.ಮಿ

2018ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಮೈಲೇಜ್ ಪ್ರೇರಿತ ಟಾಪ್ 5 ಸ್ಕೂಟರ್‌ಗಳಿವು..!

04.ಹೀರೋ ಡೆಸ್ಟನಿ 125

ಹೀರೋ ಸಂಸ್ಥೆಯು ತನ್ನ ಈ ಹಿಂದಿನ ಜನಪ್ರಿಯ ಡ್ಯುಯೆಟ್ ಸ್ಕೂಟರ್ ಮಾದರಿಯ ಮುಂದುವರಿದ ಭಾಗವಾಗಿ ಡೆಸ್ಟಿನಿ 125 ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಎಲ್ಎಕ್ಸ್ ವೆರಿಯೆಂಟ್‌ಗೆ ರೂ. 54,650 ಮತ್ತು ವಿಎಕ್ಸ್ ವೆರಿಯೆಂಟ್‌ಗೆ ರೂ. 57,500 ಬೆಲೆ ನಿಗದಿ ಮಾಡಲಾಗಿದೆ.

2018ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಮೈಲೇಜ್ ಪ್ರೇರಿತ ಟಾಪ್ 5 ಸ್ಕೂಟರ್‌ಗಳಿವು..!

ಹೊಸ ಸ್ಕೂಟರ್‌ನಲ್ಲಿ ಐ3ಎಸ್ (ಐಡಲ್ ಸ್ಟಾರ್ಟ್-ಸ್ಟಾಪ್ ಟೆಕ್ನಾಲಜಿ)ಯನ್ನು ಅಳವಡಿಸಲಾಗಿದ್ದು, 125 ಸಿಸಿ ಸಿಂಗಲ್ ಸಿಲಿಂಡರ್, ಎನರ್ಜಿ ಬೂಸ್ಟ್ ಎಂಜಿನ್ ಸಹಾಯದಿಂದ 8.7-ಬಿಹೆಚ್‍‍ಪಿ ಮತ್ತು 10.2-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಹಾಗೆಯೇ ಹೊಸ ಸ್ಕೂಟರ್ ಎಂಜಿನ್ ಅನ್ನು ವೇರಿಯೊಮೇಟಿಕ್ ಡ್ರೈವ್ ಆಟೋಮ್ಯಾಟಿಕ್ ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮೈಲೇಜ್- ಪ್ರತಿಲೀಟರ್‌ಗೆ 54ಕಿ.ಮಿ

MOST READ: ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

2018ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಮೈಲೇಜ್ ಪ್ರೇರಿತ ಟಾಪ್ 5 ಸ್ಕೂಟರ್‌ಗಳಿವು..!

06. ಒಕಿನಾವ ರಿಡ್ಜ್ ಪ್ಲಸ್

ದೇಶದ ಅತ್ಯಂತ ವೇಗದ ಎಲೆಕ್ಟ್ರಿಕ್‌ ಸ್ಕೂಟರ್‌ ಮಾದರಿಗಳ ನಿರ್ಮಾಣದಲ್ಲಿ ಜನಪ್ರಿಯತೆ ಸಾಧಿಸುತ್ತಿರುವ ಒಕಿನಾವ ಸಂಸ್ಥೆಯು ಪ್ರೈಸ್ ಸ್ಕೂಟರ್ ನಂತರ ಉತ್ತಮ ಮೈಲೇಜ್ ರೇಂಜ್ ಹೊಂದಿರುವ ರಿಡ್ಜ್ ಪ್ಲಸ್ ಎನ್ನುವ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ.

2018ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಮೈಲೇಜ್ ಪ್ರೇರಿತ ಟಾಪ್ 5 ಸ್ಕೂಟರ್‌ಗಳಿವು..!

ದೆಹಲಿ ಎಕ್ಸ್‌ಶೋರೂಂ ಪ್ರಕಾರ ರಿಡ್ಜ್ ಪ್ಲಸ್ ಸ್ಕೂಟರ್ ಬೆಲೆಯನ್ನು ರೂ. 68,988ಕ್ಕೆ ನಿಗದಿಗೊಳಿಸಲಾಗಿದ್ದು, ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದ್ದಲ್ಲಿ 120 ಕಿ.ಮಿ ಮೈಲೇಜ್ ಹಿಂದಿರುಗಿಸುತ್ತವೆ.

MOST READ: ವಾಹನ ಸವಾರರೇ ಎಚ್ಚರ- ಪೆಟ್ರೋಲ್ ಬಂಕ್‌ಗಳಲ್ಲಿ ಹೇಗೆ ನಡೆಯುತ್ತೆ ನೋಡಿ ಹಗಲು ದರೋಡೆ..!

2018ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಮೈಲೇಜ್ ಪ್ರೇರಿತ ಟಾಪ್ 5 ಸ್ಕೂಟರ್‌ಗಳಿವು..!

05.ಎಪ್ರಿಲಿಯಾ ಎಸ್‌ಆರ್ 125

ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್‌ ಮಾದರಿಯು 124.49ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದೊಂದಿಗೆ 9.46 ಬಿಹೆಚ್‍ಪಿ ಹಾಗು 9.9ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.69,759ಕ್ಕೆ ಬೆಲೆ ಹೊಂದುವ ಮೂಲಕ 125ಸಿಸಿ ಸರಣಿಯ ಸ್ಕೂಟರ್‍‍ಗಳಲ್ಲಿ ತುಸು ದುಬಾರಿ ಮಾದರಿಯಾಗಿದೆ.

2018ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಮೈಲೇಜ್ ಪ್ರೇರಿತ ಟಾಪ್ 5 ಸ್ಕೂಟರ್‌ಗಳಿವು..!

ಎಪ್ರಿಲಿಯಾ ಎಸ್ಆರ್ 125 ಸ್ಪೋರ್ಟಿ ಸ್ಕೂಟರ್ ಆದ ಕಾರಣದಿಂದ ಹೆಚ್ಚು ಮೈಲೇಜ್ ಅನ್ನು ನೀಡಲು ಸಾಧ್ಯವಿಲ್ಲದಿದ್ದರೂ 6.5 ಲೀಟರ್ ಫ್ಯುಯಲ್ ಟ್ಯಾಂಕ್ ಹೊಂದಿದ್ದು, ಈ ಸ್ಕೂಟರ್ ಪ್ರತೀ ಲೀಟರ್‍‍ಗೆ 37 ಕಿಲೋಮೀಟರ್ ಮೈಲೇಜ್‍ ಅನ್ನು ನೀಡುತ್ತದೆ. ಆದ್ರೆ ಪರ್ಫಾಮೆನ್ಸ್ ಪ್ರಿಯರನ್ನು ಹೆಚ್ಚು ಆಕರ್ಷಣೆ ಮಾಡುತ್ತಿದೆ.

More from DriveSpark

Article Published On: Saturday, December 22, 2018, 17:58 [IST]
English summary
top 5 best scooter in india 2018. Read in kannada. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+