ನವೆಂಬರ್ ತಿಂಗಳ ಟಾಪ್ 10 ಬೈಕ್ ಮಾರಾಟ ಪ್ರಮಾಣದಲ್ಲಿ ಹೀರೋ ಮತ್ತೆ ಮೇಲುಗೈ

ವಾಹನಗಳ ಬೆಲೆ ಏರಿಕೆಯ ನಡುವೆಯು ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಬೈಕ್ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದ್ದು, ನವೆಂಬರ್ ಅವಧಿಯಲ್ಲಿ ಹೀರೋ ಸಂಸ್ಥೆಯು ಮತ್ತೆ ಮುನ್ನಡೆ ಕಾಯ್ದುಕೊಂಡಿದೆ.

ನವೆಂಬರ್ ತಿಂಗಳ ಟಾಪ್ 10 ಬೈಕ್ ಮಾರಾಟ ಪ್ರಮಾಣದಲ್ಲಿ ಹೀರೋ ಮತ್ತೆ ಮೇಲುಗೈ

ಬೈಕ್ ಮಾರಾಟ ವಿಭಾಗದಲ್ಲಿ ಸದ್ಯ ಹೋಂಡಾ ಮತ್ತು ಹೀರೋ ನಡುವೆ ಭಾರೀ ಪೈಪೋಟಿ ಇದ್ದು, ನವೆಂಬರ್ ತಿಂಗಳ ಟಾಪ್ 10ರ ಪಟ್ಟಿಯಲ್ಲಿ 4 ಸ್ಥಾನಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಹೀರೋ ಸಂಸ್ಥೆಯು ಈ ವರ್ಷದಲ್ಲಿ ಗರಿಷ್ಠ ಪ್ರಮಾಣದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಹಾಗಾದ್ರೆ ಟಾಪ್ 10ರ ಪಟ್ಟಿಯಲ್ಲಿರುವ ಪ್ರಮುಖ ಬೈಕ್ ಮಾರಾಟ ಪ್ರಮಾಣ ಎಷ್ಟು ಎಂದು ತಿಳಿಯಲು ಮುಂದೆ ಓದಿ.

ನವೆಂಬರ್ ತಿಂಗಳ ಟಾಪ್ 10 ಬೈಕ್ ಮಾರಾಟ ಪ್ರಮಾಣದಲ್ಲಿ ಹೀರೋ ಮತ್ತೆ ಮೇಲುಗೈ

01. ಹೀರೋ ಸ್ಪೈಂಡರ್

ಕಳೆದ 1 ವರ್ಷದಿಂದ ಒಂದೇ ಪ್ರಮಾಣದ ಬೇಡಿಕೆಯನ್ನು ಕಾಯ್ದುಕೊಂಡಿರುವ ಸ್ಪೈಂಡರ್ ಬೈಕ್ ಮಾರಾಟದಲ್ಲಿ ಯಾವುದೇ ಬದಲಾವಣೆ ಇಲ್ಲವಾದ್ರೂ ನವೆಂಬರ್ ಅವಧಿಯಲ್ಲಿ 2,25,536 ಬೈಕ್‌ಗಳನ್ನು ಮಾರಾಟ ಮಾಡಿ ಮೊದಲ ಸ್ಥಾನ ತನ್ನದಾಗಿಸಿಕೊಂಡಿದೆ.

ನವೆಂಬರ್ ತಿಂಗಳ ಟಾಪ್ 10 ಬೈಕ್ ಮಾರಾಟ ಪ್ರಮಾಣದಲ್ಲಿ ಹೀರೋ ಮತ್ತೆ ಮೇಲುಗೈ

02. ಹೀರೋ ಹೆಚ್ಎಫ್ ಡಿಲಕ್ಸ್

ಹೀರೋ ಮೋಟೊಕಾರ್ಪ್ ಸಂಸ್ಥೆಯ ಜನಪ್ರಿಯ ಬೈಕ್ ಎಂದೇ ಕರೆಯಲ್ಪಡುವ ಎಚ್ಎಫ್ ಡಿಲಕ್ಸ್ ಮಾದರಿಯು ನವೆಂಬರ್ ಅವಧಿಯಲ್ಲಿ ಬರೋಬ್ಬರಿ 1,68,839 ಬೈಕ್‌ಗಳನ್ನು ಮಾರಾಟವಾಗುವ ಮೂಲಕ ಟಾಪ್ 2ನೇ ಸ್ಥಾನಕ್ಕೆರಿದೆ.

ನವೆಂಬರ್ ತಿಂಗಳ ಟಾಪ್ 10 ಬೈಕ್ ಮಾರಾಟ ಪ್ರಮಾಣದಲ್ಲಿ ಹೀರೋ ಮತ್ತೆ ಮೇಲುಗೈ

03. ಹೀರೋ ಪ್ಯಾಷನ್

ಸೆಪ್ಟೆಂಬರ್ ಅವಧಿಯಲ್ಲಿ ಹೀರೊ ಮೊಟೊಕಾರ್ಪ್ ಸಂಸ್ಥೆಯು 74,396 ಪ್ಯಾಷನ್ ಬೈಕ್‌ಗಳನ್ನ ಮಾರಾಟ ಮಾಡಿದ್ದು, ಹೀರೋ ಪ್ಯಾಶನ್ ಬೈಕ್‌ಗಳು 97ಸಿಸಿ ಎಂಜಿನ್‌ನೊಂದಿಗೆ ಪ್ರೊ, ಪ್ರೋ110 ಮತ್ತು 109ಸಿಸಿ ಎಂಜಿನ್ ಸಾಮರ್ಥ್ಯದ ಎಕ್ಸ್ ಪ್ರೊ ಎಂಬ ಮೂರು ಬಗೆಗಳಲ್ಲಿ ಖರೀದಿಗೆ ಲಭ್ಯವಿವೆ.

ನವೆಂಬರ್ ತಿಂಗಳ ಟಾಪ್ 10 ಬೈಕ್ ಮಾರಾಟ ಪ್ರಮಾಣದಲ್ಲಿ ಹೀರೋ ಮತ್ತೆ ಮೇಲುಗೈ

04. ಹೋಂಡಾ ಸಿಬಿ ಶೈನ್

ಭಾರತದಲ್ಲಿ ಅಷ್ಟೇ ಅಲ್ಲದೆ ವಿಶ್ವದಾದ್ಯಂತ ತನ್ನ ಮಾರಾಟದಲ್ಲಿ ದಾಖಲೆ ಬರೆದಿರುವ 125 ಸಿಸಿ ಸಿಬಿ ಶೈನ್ ಬೈಕ್‌ಗಳು ನವೆಂಬರ್ ಅವಧಿಯಲ್ಲಿ 70,803 ಬೈಕ್‌ಗಳನ್ನು ಮಾರಾಟ ಮಾಡಿದ್ದು, ಇದು 125ಸಿಸಿ ವಿಭಾಗದಲ್ಲಿ ಮಾರಾಟವಾದ ಗರಿಷ್ಠ ಬೈಕ್ ಮಾದರಿಯಾಗಿದೆ.

ನವೆಂಬರ್ ತಿಂಗಳ ಟಾಪ್ 10 ಬೈಕ್ ಮಾರಾಟ ಪ್ರಮಾಣದಲ್ಲಿ ಹೀರೋ ಮತ್ತೆ ಮೇಲುಗೈ

05. ಬಜಾಜ್ ಪಲ್ಸರ್

ಯುವ ಸಮುದಾಯ ಹಾಟ್ ಫೆವರಿಟ್ ಎಂದೇ ಜನಪ್ರಿಯವಾಗಿರುವ ಬಜಾಜ್ ಪಲ್ಸರ್ ಸರಣಿ ಬೈಕ್‌ಗಳು ಭಾರತದಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿದ್ದು, ಇದರಲ್ಲಿ ಪಲ್ಸರ್ 150 ಬೈಕ್‌ಗಳಿಗೆ ಭಾರೀ ಬೇಡಿಕೆಯಿದೆ. ಹೀಗಾಗಿಯೇ ಕಳೆದ ನವೆಂಬರ್ ಅವಧಿಯಲ್ಲಿ ಬಜಾಜ್ ಸಂಸ್ಥೆಯು 69,579 ಪಲ್ಸರ್ ಬೈಕ್‌ಗಳನ್ನು ಮಾರಾಟ ಮಾಡಿದೆ.

ನವೆಂಬರ್ ತಿಂಗಳ ಟಾಪ್ 10 ಬೈಕ್ ಮಾರಾಟ ಪ್ರಮಾಣದಲ್ಲಿ ಹೀರೋ ಮತ್ತೆ ಮೇಲುಗೈ

06. ಹೀರೋ ಗ್ಲ್ಯಾಮರ್

ನವೆಂಬರ್ ಅವಧಿಯಲ್ಲಿ ಬರೋಬ್ಬರಿ 63,416 ಹೀರೋ ಗ್ಲ್ಯಾಮರ್ ಬೈಕ್‌ಗಳು ಮಾರಾಟಗೊಂಡಿದ್ದು, ಕಳೆದ ಎರಡು ತಿಂಗಳಿನಿಂದ ಬಜಾಜ್ ಸಿಟಿ 100 ಬೈಕ್ ಮಾರಾಟಕ್ಕಿಂತ ಕಡಿಮೆ ಮಾರಾಟ ಕಂಡಿದ್ದ ಗ್ಲ್ಯಾಮರ್ ಈ ಬಾರಿ ಏರಿಕೆ ಕಂಡಿದೆ.

ನವೆಂಬರ್ ತಿಂಗಳ ಟಾಪ್ 10 ಬೈಕ್ ಮಾರಾಟ ಪ್ರಮಾಣದಲ್ಲಿ ಹೀರೋ ಮತ್ತೆ ಮೇಲುಗೈ

07. ಬಜಾಜ್ ಪ್ಲಾಟಿನಾ

ಪ್ರತಿ ಲೀಟರ್‌ಗೆ 80 ಕೀ.ಮೀ. ಮೈಲೇಜ್ ನೀಡಬಲ್ಲ ಸಾಮರ್ಥ್ಯ ಹೊಂದಿರುವ ಬಜಾಜ್ ಪ್ಲಾಟಿನಾ ಬೈಕ್ ಈ ಬಾರಿ ಗ್ರಾಹಕರ ಆಕರ್ಷಣೆಯಾಗಿದ್ದು, ಬಹುದಿನಗಳ ನಂತರ ನವೆಂಬರ್ ಅವಧಿಯಲ್ಲಿ 62,555 ಬೈಕ್ ಮಾರಾಟದೊಂದಿಗೆ 7ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

MOST READ: ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

ನವೆಂಬರ್ ತಿಂಗಳ ಟಾಪ್ 10 ಬೈಕ್ ಮಾರಾಟ ಪ್ರಮಾಣದಲ್ಲಿ ಹೀರೋ ಮತ್ತೆ ಮೇಲುಗೈ

08. ಬಜಾಜಾ ಸಿಟಿ

ಹೊಸ ವಿನ್ಯಾಸಗಳೊಂದಿಗೆ ಸಿದ್ಧಗೊಂಡಿರುವ ಸಿಟಿ 100 ಬೈಕ್ ಒಟ್ಟು 3 ವಿವಿಧ ನಮೂನೆಗಳಲ್ಲಿ ಖರೀದಿಗೆ ಲಭ್ಯವಿದ್ದು, ಗ್ರಾಹಕರ ಆಕರ್ಷಣೆಗೆ ಕಾರಣವಾಗಿರುವುದಲ್ಲದೆ ನವೆಂಬರ್ ಅವಧಿಯಲ್ಲಿ 56,864 ಬೈಕ್‌ಗಳು ಮಾರಾಟಗೊಂಡಿವೆ.

ನವೆಂಬರ್ ತಿಂಗಳ ಟಾಪ್ 10 ಬೈಕ್ ಮಾರಾಟ ಪ್ರಮಾಣದಲ್ಲಿ ಹೀರೋ ಮತ್ತೆ ಮೇಲುಗೈ

09. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ಪ್ರೀಮಿಯಂ ಸೌಲಭ್ಯ ಪ್ರೇರಿತ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದರೂ ಸಹ ಜಾವಾ ಬಿಡುಗಡೆ ನಂತರ ಮಾರಾಟದಲ್ಲಿ ತುಸು ಹಿನ್ನಡೆಯಾಗಿದೆ. ಅಕ್ಟೋಬರ್ ಅವಧಿಯಲ್ಲಿ 46,148 ಕ್ಲಾಸಿಕ್ 350 ಬೈಕ್‌ಗಳನ್ನು ಮಾರಾಟ ಮಾಡಿದ್ದ ಆರ್‌ಇ ಸಂಸ್ಥೆಯು ನವೆಂಬರ್‌ನಲ್ಲಿ 39,025 ಬೈಕ್‌ಗಳನ್ನು ಮಾತ್ರ ಮಾರಾಟ ಮಾಡಿದೆ.

MOST READ: ಹೊಸ ಕಾರು ಖರೀದಿ ಸಂಭ್ರಮದಲ್ಲಿ ಅಪ್ಪ ಕೊಡಿಸಿದ ಗಿಫ್ಟ್ ನೆನೆದ ನಟ ಧನಂಜಯ್..!

ನವೆಂಬರ್ ತಿಂಗಳ ಟಾಪ್ 10 ಬೈಕ್ ಮಾರಾಟ ಪ್ರಮಾಣದಲ್ಲಿ ಹೀರೋ ಮತ್ತೆ ಮೇಲುಗೈ

10. ಟಿವಿಎಸ್ ಅಪಾಚೆ

ಯವಕನ ನೆಚ್ಚಿನ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿರುವ ಟಿವಿಎಸ್ ಅಪಾಚೆ ಸರಣಿ ಸಹ ಈ ಬಾರಿ ಉತ್ತಮ ಮಾರಾಟ ದಾಖಲಿಸಿದ್ದು, ಪಲ್ಸರ್ ಸರಣಿ ಬೈಕ್‌ಗಳೊಂದಿಗೆ ಪೈಪೋಟಿ ನಡೆಸುವ ಮೂಲಕ ನವೆಂಬರ್ ಅವಧಿಯಲ್ಲಿ 29,947 ಬೈಕ್‌ಗಳನ್ನು ಮಾರಾಟ ಮಾಡಿದೆ.

Most Read Articles

Kannada
English summary
The list of top-selling bikes in India of 2018 November has been released. Read in Kannada.
Story first published: Tuesday, December 25, 2018, 19:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X