ಹೊಸ ಕಾರು ಖರೀದಿ ಸಂಭ್ರಮದಲ್ಲಿ ಅಪ್ಪ ಕೊಡಿಸಿದ ಗಿಫ್ಟ್ ನೆನೆದ ನಟ ಧನಂಜಯ್..!

ಸದ್ಯ ಚಂದನವನದಲ್ಲಿ ಯಶಸ್ವಿ ಹೆಜ್ಜೆಯಿಡುತ್ತಿರುವ ನಟ ಧನಂಜಯ್ ಅವರು ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೇ ಪರಭಾಷೆ ಚಿತ್ರಗಳಲ್ಲೂ ತಮ್ಮದೆ ಛಾಪು ಮೂಡಿಸುತ್ತಿದ್ದಾರೆ. ಡಾಲಿ ಪಾತ್ರದ ಮೂಲಕ ಹೊಸ ಟ್ರೆಂಡ್ ಸೃಷ್ಠಿಸಿರುವ ಧನಂಜಯ್ ಅವರ ಮನೆಗೆ ಸದ್ಯ ಹೊಸ ಅತಿಥಿಯೊಂದು ಆಗಮನವಾಗಿದೆ.

ಹೊಸ ಕಾರು ಖರೀದಿ ಸಂಭ್ರಮದಲ್ಲಿ ಅಪ್ಪ ಕೊಡಿಸಿದ ಗಿಫ್ಟ್ ನೆನೆದ ನಟ ಧನಂಜಯ್..!

ಡೈರೆಕ್ಟರ್ಸ್ ಸ್ಪೆಷಲ್ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ನಟ ಧನಂಜಯ್ ಲುಕ್ ಇದೀಗ ಸಿಕ್ಕಾಪಟ್ಟೆ ಬದಲಾಗಿದೆ. ಸ್ಯಾಂಡಲ್ ವುಡ್‌ ಮತ್ತು ಟಾಲಿವುಡ್ ನಲ್ಲೂ ಮಿಂಚುತ್ತಿರುವ ಧನಂಜಯ್ ಇದೀಗ ದುಬಾರಿ ಕಾರು ಒಂದನ್ನು ಖರೀದಿಸಿದ್ದಾರೆ. ಕೆಂಪು ಬಣ್ಣದ ರೇಂಜ್ ರೋವರ್ ಇವೋಕ್ ಖರೀದಿ ಮಾಡಿರುವ ಧನಂಜಯ್, ಹೊಸ ಕಾರನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಂಡಿದ್ದಾರೆ.

ಹೊಸ ಕಾರು ಖರೀದಿ ಸಂಭ್ರಮದಲ್ಲಿ ಅಪ್ಪ ಕೊಡಿಸಿದ ಗಿಫ್ಟ್ ನೆನೆದ ನಟ ಧನಂಜಯ್..!

ಹೊಸ ರೇಂಜ್ ರೋವರ್ ಇವೋಕ್ ಕಾರಿಗೆ KA 05 TS 8241 ನೋಂದಣಿ ನಂಬರ್ ನೀಡಲಾಗಿದ್ದು, ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಹೊಸ ಕಾರಿಗೆ ಧನಂಜಯ್ ಪೂಜೆ ಮಾಡಿಸಿದ್ದಾರೆ. ಈ ವೇಳೆ ಹೊಸ ಅತಿಥಿ ಸಂಭ್ರಮದಲ್ಲಿದ್ದ ಧನಂಜಯ್ ಅವರು ಅಪ್ಪ ಕೊಡಿಸಿದ್ದ ಟಿವಿಎಸ್ ಎಕ್ಸ್ಎಲ್ ಸೂಪರ್ ಬೈಕ್ ಅನ್ನು ಮಾತ್ರ ಮರೆತಿರಲಿಲ್ಲ.

ಹೊಸ ಕಾರು ಖರೀದಿ ಸಂಭ್ರಮದಲ್ಲಿ ಅಪ್ಪ ಕೊಡಿಸಿದ ಗಿಫ್ಟ್ ನೆನೆದ ನಟ ಧನಂಜಯ್..!

ಅಪ್ಪನ ಗಿಫ್ಟ್ ನೆನೆದ ಡಾಲಿ..!

ಹೌದು, ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಸಾಕಷ್ಟು ಕಷ್ಟಪಟ್ಟಿರುವ ಧನಂಜಯ್‌ಗೆ ಅಪ್ಪನ ಪ್ರೀತಿಯ ಗಿಫ್ಟ್ ಟಿವಿಎಸ್ ಎಕ್ಸ್ಎಲ್ ಮರೆಯರು ಸಾಧ್ಯವೇ ಇಲ್ಲ. ಅದೇ ಕಾರಣಕ್ಕೆ ದುಬಾರಿ ಬೆಲೆಯ ರೇಂಜ್ ರೋವರ್ ಕಾರು ಬಂದ್ರು ಕೂಡಾ ತನ್ನ ಹಳೆಯ ಬೈಕಿನ ಮೇಲಿನ ಸವಾರಿಯನ್ನು ಮರೆತಿಲ್ಲ.

ಹೊಸ ಕಾರು ಖರೀದಿ ಸಂಭ್ರಮದಲ್ಲಿ ಅಪ್ಪ ಕೊಡಿಸಿದ ಗಿಫ್ಟ್ ನೆನೆದ ನಟ ಧನಂಜಯ್..!

ಅಭಿಮಾನಿಗಳಿಗೆ ಕೃತಜ್ಞತೆ..!

ಹೊಸ ಕಾರು ಖರೀದಿಯ ಸಂಭ್ರಮದಲ್ಲಿರುವ ಧನಂಜಯ್ ತಮ್ಮ ಅಭಿಯಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಪ್ಪ ಕೊಡ್ಸಿದ್ದು ಟಿವಿಎಸ್ ಎಕ್ಸ್ಎಲ್ ಸೂಪರ್, ಹಾಗೆಯೇ ನೀವು ಕೊಟ್ಟಿದ್ದು ರೇಂಜ್ ರೋವರ್ ಅಂತಾ ತಮ್ಮ ಫೇಜ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಹೊಸ ಕಾರು ಖರೀದಿ ಸಂಭ್ರಮದಲ್ಲಿ ಅಪ್ಪ ಕೊಡಿಸಿದ ಗಿಫ್ಟ್ ನೆನೆದ ನಟ ಧನಂಜಯ್..!

ಜೊತೆಗೆ ನಿಮ್ಮ ಪ್ರೀತಿ ಸದಾ ಹೀಗೆ ಇರಲಿ ಎಂದು ಅಭಿಮಾನಿಗಳ ಅಭಿಮಾನವನ್ನು ನೆನೆದಿರುವ ಧನಂಜಯ್ ಅವರು, ಹೊಸ ಕಾರಿನೊಂದಿಗೆ ಅಪ್ಪನ ಕೊಡಿಸಿದ್ದ ಟಿವಿಎಸ್ ಎಕ್ಸ್ಎಲ್ ಬೈಕಿಗೂ ಪೂಜೆ ಮಾಡಿಸಿದ್ದು ಮತ್ತಷ್ಟು ವಿಶೇಷವಾಗಿತ್ತು.

ಹೊಸ ಕಾರು ಖರೀದಿ ಸಂಭ್ರಮದಲ್ಲಿ ಅಪ್ಪ ಕೊಡಿಸಿದ ಗಿಫ್ಟ್ ನೆನೆದ ನಟ ಧನಂಜಯ್..!

ಶುಭಾಷಯಗಳ ಮಾಹಾಪೂರ

ಹೊಸ ಕಾರು ಖರೀದಿಸಿ ಸಂಭ್ರಮದಲ್ಲಿರುವ ಧನಂಜಯ್‌ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದ್ದು, ಅಭಿಯಾನಗಳನ್ನು ನೆನೆದ ಡಾಲಿಗೆ ಸಾವಿರಾರು ಜನ ತಮ್ಮದೇ ರೀತಿಯಲ್ಲಿ ಶುಭಹಾರೈಸುತ್ತಿದ್ದಾರೆ.

ಹೊಸ ಕಾರು ಖರೀದಿ ಸಂಭ್ರಮದಲ್ಲಿ ಅಪ್ಪ ಕೊಡಿಸಿದ ಗಿಫ್ಟ್ ನೆನೆದ ನಟ ಧನಂಜಯ್..!

ಸದ್ಯ ಕನ್ನಡದಲ್ಲಿ ಯಜಮಾನ ಮತ್ತು ಪಾಪ್ ಕಾರ್ನ್ ಮಂಕಿ ಚಿತ್ರದಲ್ಲಿ ನಟಿಸುತ್ತಿರುವ ಧನಂಜಯ್, ಹೊಸ ಲುಕ್‌ನೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರ ಅಭಿಮಾನಿಗಳಲ್ಲಿ ಸಹಜವಾಗಿಯೇ ಕುತೂಹಲವಿದ್ದು, ಡಾಲಿ ಪಾತ್ರದ ನಂತರ ಮತ್ತೊಂದು ಹವಾ ಕ್ರಿಯೆಟ್ ಮಾಡುವ ತವಕದಲ್ಲಿದ್ದಾರೆ.

ಹೊಸ ಕಾರು ಖರೀದಿ ಸಂಭ್ರಮದಲ್ಲಿ ಅಪ್ಪ ಕೊಡಿಸಿದ ಗಿಫ್ಟ್ ನೆನೆದ ನಟ ಧನಂಜಯ್..!

ಇನ್ನು ಧನಂಜಯ್ ಅವರ ಕಾರಿನ ಬೆಲೆಯ ಬೆಂಗಳೂರಿನಲ್ಲಿ ಆರಂಭಿಕವಾಗಿ ರೂ.65 ಲಕ್ಷ ಆನ್‌ರೋಡ್ ಬೆಲೆಯನ್ನು ಹೊಂದಿದ್ದು, 2.0-ಲೀಟರ್(1999 ಸಿಸಿ) ಇಗ್ನೆನಿಯಂ ಡೀಸೆಲ್ ಎಂಜಿನ್ ಪಡೆದುಕೊಂಡಿದೆ. ಇದು ಸಾಮಾನ್ಯ ರಸ್ತೆಗಳಲ್ಲಿ ಅಷ್ಟೇ ಅಲ್ಲದೇ ಪರ್ಫಾಮೆನ್ಸ್ ಡ್ರೈವ್‌ನಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲದು.

MOST READ: ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ಹೊಸ ಕಾರು ಖರೀದಿ ಸಂಭ್ರಮದಲ್ಲಿ ಅಪ್ಪ ಕೊಡಿಸಿದ ಗಿಫ್ಟ್ ನೆನೆದ ನಟ ಧನಂಜಯ್..!

ಭಾರತೀಯ ಗ್ರಾಹಕನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ರೇಂಜ್ ರೋವರ್ ಸಂಸ್ಥೆಯು ಇದುವರೆಗೆ ವಿವಿಧ ಕಾರು ಮಾದರಿಗಳನ್ನು ಪರಿಚಯಿಸುವ ಮೂಲಕ ತನ್ನದೇ ಜನಪ್ರಿಯತೆ ಕಾಯ್ದುಕೊಂಡಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆ ಅನುಗುಣವಾಗಿ ಇವೋಕ್ ಎಡಿಷನ್ ಸಿದ್ಧಗೊಳಿಸಿದೆ.

ಹೊಸ ಕಾರು ಖರೀದಿ ಸಂಭ್ರಮದಲ್ಲಿ ಅಪ್ಪ ಕೊಡಿಸಿದ ಗಿಫ್ಟ್ ನೆನೆದ ನಟ ಧನಂಜಯ್..!

ಟಾಪ್ 10 ಶ್ರೇಷ್ಠ ಎಸ್‌ಯುವಿಗಳಲ್ಲಿ ಒಂದಾಗಿರುವ ರೇಂಜ್ ರೋವರ್ ಇವೋಕ್ ಕಾರು ಸದ್ಯ ಭಾರತದಲ್ಲಿ ಅತಿಹೆಚ್ಚು ಮಾರಾಟಗೊಳ್ಳುತ್ತಿರುವ ಐಷಾರಾಮಿ ಕಾರು ಮಾದರಿಯಾಗಿದ್ದು, ಅತ್ಯುತ್ತಮ ಚಾಲನಾ ಸೌಲಭ್ಯ ಮತ್ತು ಸುರಕ್ಷತೆಗೆ ಈ ಕಾರಿನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ.

MOST READ: ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

ಹೊಸ ಕಾರು ಖರೀದಿ ಸಂಭ್ರಮದಲ್ಲಿ ಅಪ್ಪ ಕೊಡಿಸಿದ ಗಿಫ್ಟ್ ನೆನೆದ ನಟ ಧನಂಜಯ್..!

ಇದೇ ಕಾರಣಕ್ಕೆ ಐಷಾರಾಮಿ ಎಸ್‌ಯುವಿ ಪ್ರಿಯರನ್ನು ಸೆಳೆಯಲು ಯಶಸ್ವಿಯಾಗಿರುವ ರೇಂಜ್ ರೋವರ್ ಇವೋಕ್, ಅತ್ಯಾಧುನಿಕ ಡ್ರೈವ್ ಟೆಕ್ನಾಲಜಿ ಸೌಲಭ್ಯದೊಂದಿಗೆ ಆಲ್ ವೀಲ್ಹ್ ಡ್ರೈವ್, 9 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಿಟ್ಟಿಕೊಂಡಿದೆ.

ಹೊಸ ಕಾರು ಖರೀದಿ ಸಂಭ್ರಮದಲ್ಲಿ ಅಪ್ಪ ಕೊಡಿಸಿದ ಗಿಫ್ಟ್ ನೆನೆದ ನಟ ಧನಂಜಯ್..!

ಈ ಮೂಲಕ 237-ಬಿಎಚ್‌ಪಿ ಮತ್ತು 340-ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ರೇಂಜ್ ರೋವರ್ ಇವೋಕ್ ಕಾರುಗಳು ಪ್ರತಿ ಗಂಟೆಗೆ 217ಕಿ.ಮಿ ಟಾಪ್ ಸ್ಪೀಡ್ ಪಡೆದುಕೊಂಡಿದ್ದು, ಕೇವಲ 8 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮಿ ವೇಗ ಪಡೆದುಕೊಳ್ಳುತ್ತವೆ.

More from DriveSpark

Article Published On: Tuesday, December 25, 2018, 14:33 [IST]
English summary
kannada actor dhananjay bought new range rover evoque. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+