ಹಬ್ಬದ ಸಂಭ್ರಮಕ್ಕಾಗಿ ಟಿವಿಎಸ್‌ನಿಂದ ಸ್ಪೋರ್ಟ್ ಸ್ಪೆಷಲ್ ಎಡಿಷನ್ ಬಿಡುಗಡೆ
ದೇಶಾದ್ಯಂತ ದೀಪಾವಳಿ ಸಂಭ್ರಮಕ್ಕಾಗಿ ಭರ್ಜರಿ ತಯಾರಿಗಳು ನಡೆಯುತ್ತಿದ್ದು, ಬಹುತೇಕ ವಾಹನ ಖರೀದಿದಾರರು ದೀಪಾವಳಿ ಸಂದರ್ಭದಲ್ಲೇ ವಾಹನ ಖರೀದಿ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಿರುವಾಗ ವಾಹನ ಉತ್ಪಾದನಾ ಸಂಸ್ಥೆಗಳು ತಮ್ಮ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸಲು ಸ್ಪೆಷಲ್ ಎಡಿಷನ್‌ಗಳನ್ನು ಹೊರತರುತ್ತಿವೆ.

ಟಿವಿಎಸ್ ಮೋಟಾರ್ಸ್ ಸಂಸ್ಥೆಯು ಸಹ ತಮ್ಮ ಜನಪ್ರಿಯ ಬೈಕ್ ಸ್ಪೋರ್ಟ್ ಮಾದರಿಯ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ್ದು, ಹೊರಭಾಗದಲ್ಲಿ ಕೆಲವು ವಿಶೇಷ ಗ್ರಾಫಿಕ್ಸ್ ಸೌಲಭ್ಯವನ್ನು ಹೊಂದಿರುವ ಹೊಸ ಬೈಕಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 40,088ಕ್ಕೆ ದರ ನಿಗದಿ ಮಾಡಲಾಗಿದೆ.

ಸ್ಪೋರ್ಟ್ ಸ್ಪೆಷಲ್ ಎಡಿಷನ್ ಬೈಕ್‌ಗಳಲ್ಲಿ ಕಿಕ್ ಸ್ಟಾರ್ಟ್, ಎಲೆಕ್ಟ್ರಿಕ್ ಸ್ಟಾರ್ಟ್ ಮತ್ತು ಅಲಾಯ್ ವೀಲ್ಹ್‌ಗಳನ್ನು ಆಯ್ಕೆ ರೂಪದಲ್ಲಿ ನೀಡಲಾಗುತ್ತಿದ್ದು, ಪ್ರಮುಖ ಎರಡು ಹೊಸ ಬಣ್ಣದೊಂದಿಗೆ ಸ್ಪೆಷಲ್ ಎಡಿಷನ್ ಪರಿಚಯಿಸಲಾಗಿದೆ.

ಗ್ರಾಹಕರ ಬೇಡಿಕೆಯಂತೆ ಹೊಸ ಬೈಕ್ ಮಾದರಿಯಲ್ಲಿ ಬ್ಲ್ಯಾಕ್ ಜೊತೆ ಸಿಲ್ವರ್ ಡಿಕಾಲ್ಸ್ ಮತ್ತು ಬ್ಲ್ಯಾಕ್ ಜೊತೆ ಬ್ಲ್ಯೂ-ಸ್ವಿಲರ್ ಡಿಕಾಲ್ಸ್ ಬಣ್ಣದ ಆಯ್ಕೆ ನೀಡಲಾಗಿದ್ದು, ಇನ್ನುಳಿದಂತೆ ಬೈಕಿನ ತಾಂತ್ರಿಕ ಅಂಶಗಳಲ್ಲಿ ಯಾವುದೇ ಬದಲಾವಣೆ ತಂದಿಲ್ಲ.

ಆದ್ರೆ ಈ ಹಿಂದಿನ ಸ್ಪೋರ್ಟ್ ಬೈಕ್ ಮಾದರಿಗಿಂತ ಸ್ಪೆಷಲ್ ಎಡಿಷನ್ ಬೈಕಿನಲ್ಲಿ ಸೀಟಿನ ಉದ್ದಳತೆಯನ್ನು ತುಸು ಹೆಚ್ಚಿಸಲಾಗಿದ್ದು, ಇದು ಹಿಂಬದಿಯಲ್ಲಿ ಕುಳಿತುಕೊಳ್ಳುವ ಸವಾರರಿಗೆ ಸಾಕಷ್ಟು ಅನುಕೂಲಕರ ಎನ್ನಬಹುದು.

ಇದಲ್ಲದೇ ಮಾರುಕಟ್ಟೆಯಲ್ಲಿ ವಾಹನಗಳಿಗೆ ಗರಿಷ್ಠ ಸುರಕ್ಷಾ ಸೌಲಭ್ಯ ನೀಡಲು ಹೊಸ ಪ್ರಯೋಗಗಳನ್ನು ನಡೆಸಲಾಗುತ್ತಿದ್ದು, ಟಿವಿಎಸ್ ಸಂಸ್ಥೆಯು ಸಹ ಸ್ಟಾರ್ ಸಿಟಿ ಹಾಗೂ ಸ್ಪೋರ್ಟ್ ಬೈಕ್‌ಗಳಲ್ಲಿ ಡ್ರಕ್ ಬ್ರೇಕ್ ಬದಲಾಗಿ ಸಿಂಕ್ರೊನೈಸ್ಡ್ ಬ್ರೇಕಿಂಗ್ ಟೆಕ್ನಾಲಜಿ (ಎಸ್‌ಟಿಬಿ) ಒದಗಿಸಲಾಗುತ್ತಿದೆ.

ಎಸ್‌ಟಿಬಿ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಬೈಕ್‌ಗಳಲ್ಲಿ ಬ್ರೇಕಿಂಗ್ ವಿಭಾಗವು ಮತ್ತಷ್ಟು ಸುಧಾರಣೆಯಾಗಲಿದ್ದು, ಬೈಕ್ ಸವಾರರಿಗೆ ಗರಿಷ್ಠ ಸುರಕ್ಷೆ ಸಿಗಲಿದೆ ಎನ್ನಬಹುದು. ಕಾರಣ, ಎಸ್‌ಟಿಬಿ ತಂತ್ರಜ್ಞಾನದಿಂದ ಎರಡು ಬದಿಯ ಬ್ರೇಕ್ ಮೇಲೂ ಒಂದೇ ಬದಿಯ ಹ್ಯಾಂಡಲ್ ಮೂಲಕಲೇ ನಿಯಂತ್ರಣ ಸಾಧಿಸಬಹುದು.

ಎಂಜಿನ್ ಸಾಮರ್ಥ್ಯ
99.7ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಸ್ಪೋರ್ಟ್ ಬೈಕ್‌ಗಳು, 4-ಸ್ಪೀಡ್ ಗೇರ್‌ಬಾಕ್ಸ್ ಸಹಾಯದೊಂದಿಗೆ 7.3-ಬಿಎಚ್‌ಪಿ ಮತ್ತು 7.5-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು. ಜೊತೆಗೆ ಉತ್ತಮ ಇಂಧನ ದಕ್ಷತೆ ಹೊಂದಿರುವುದು ಸಹ ಮತ್ತಷ್ಟು ಮೈಲೇಜ್ ಹೆಚ್ಚಳಕ್ಕೆ ಕಾರಣವಾಗಿದೆ.
MOST READ: ವಾಹನ ಸವಾರರೇ ಇತ್ತ ಗಮನಿಸಿ- ಬಿಎಸ್-4 ವಾಹನಗಳ ನಿಷೇಧಕ್ಕೆ ದಿನಗಣನೆ ಶುರು..!

ಇನ್ನು ಹೊಸ ಬೈಕಿನಲ್ಲಿ 3ಡಿ ಮಾದರಿಯ ಲೊಗೊ, ಸ್ಪೋರ್ಟಿ ಡಿಜಿಟಲ್ ಇನ್‌ಸ್ಟುಮೆಂಟ್ ಕ್ಲಸ್ಟರ್ ಸಹ ಗ್ರಾಹಕರನ್ನು ಸೆಳೆಯುವ ಪ್ರಮುಖ ಲಕ್ಷಣವಾಗಿದ್ದು, ಅದಕ್ಕೂ ಮುಖ್ಯವಾಗಿ 100ಸಿಸಿ ಬೈಕ್ ವಿಭಾದಲ್ಲಿ ಮೊದಲ ಬಾರಿಗೆ ಸಿಂಕ್ರೊನೈಸ್ಡ್ ಬ್ರೇಕಿಂಗ್ ಟೆಕ್ನಾಲಜಿ (ಎಸ್‌ಟಿಬಿ) ಹೊಂದಿರುವುದು ಸಹ ಸ್ಪೋರ್ಟ್ ಸ್ಪೆಷಲ್ ಎಡಿಷನ್ ಆಯ್ಕೆ ಮೌಲ್ಯ ಹೆಚ್ಚಿಸಿದೆ.
ಹೊಸದಾಗಿ ಬಿಡುಗಡೆಯಾದ ಹೀರೋ ಡೆಸ್ಟಿನಿ 125 ಸ್ಕೂಟರ್ ಫೋಟೋ ಗ್ಯಾಲರಿ..!


Click it and Unblock the Notifications