ಟಿವಿಎಸ್‌ನಿಂದ ಸ್ಟಾರ್ ಸಿಟಿ ಪ್ಲಸ್ ಡ್ಯುಯಲ್ ಟೋನ್ ವೆರಿಯೆಂಟ್ ಬಿಡುಗಡೆ
ಟಿವಿಎಸ್ ಸಂಸ್ಥೆಯು ತನ್ನ ಜನಪ್ರಿಯ ಸ್ಟಾರ್ ಸಿಟಿ ಪ್ಲಸ್ ಡ್ಯುಯಲ್ ಟೋನ್ ವೆರಿಯೆಂಟ್ ಬಿಡುಗಡೆಗೊಳಿಸಿದ್ದು, ಗ್ರಾಹಕರ ಆಕರ್ಷಣೆಗಾಗಿ ವಿನೂತನ ಡ್ಯುಯಲ್ ಟೋನ್ ಬಣ್ಣದ ಆಯ್ಕೆಯನ್ನು ನೀಡಿರುವುದು ಬೈಕ್ ಖರೀದಿ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

ಟಿವಿಎಸ್ ಬಿಡುಗಡೆಗೊಳಿಸಿರುವ ಹೊಚ್ಚ ಹೊಸ ಸ್ಟಾರ್ ಸಿಟಿ ಪ್ಲಸ್ ಡ್ಯುಯಲ್ ಟೋನ್ ವೆರಿಯೆಂಟ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 52,907ಕ್ಕೆ ನಿಗದಿಪಡಿಸಲಾಗಿದ್ದು, ಡ್ಯುಯಲ್ ಟೋನ್ ಕಲರ್ ಹೊರತುಪಡಿಸಿ ಯಾವುದೇ ರೀತಿಯ ತಾಂತ್ರಿಕ ಅಂಶಗಳನ್ನು ಬದಲಾವಣೆ ಮಾಡಲಾಗಿಲ್ಲ.

ಹೊಸ ಬಣ್ಣದ ಆಯ್ಕೆ!
ಸದ್ಯ ಲಭ್ಯವಿರುವ ಸಿಂಗಲ್ ಟೋನ್ ಬಣ್ಣಗಳ ಆಯ್ಕೆಯೊಂದಿಗೆ ಗ್ರೇ-ಬ್ಲ್ಯಾಕ್ ಡ್ಯುಯಲ್ ಟೋನ್ ಹೊಂದಿರುವ ಸ್ಟಾರ್ ಸಿಟಿ ಪ್ಲಸ್ ಬೈಕ್‌ಗಳು, 110ಸಿಸಿ ಬೈಕ್ ವಿಭಾಗದಲ್ಲಿ ಹೊಸ ಸುರಕ್ಷಾ ತಂತ್ರಜ್ಞಾನ ಹೊಂದಿರುವುದು ಇದೀಗ ಪ್ರಮುಖ ಆಕರ್ಷಣೆಯಾಗಿದೆ.

ಎಸ್‌ಟಿಬಿ ತಂತ್ರಜ್ಞಾನ ಪಡೆದ ಸ್ಟಾರ್ ಸಿಟಿ!
ಸದ್ಯ ಮಾರುಕಟ್ಟೆಯಲ್ಲಿ ವಾಹನಗಳಿಗೆ ಗರಿಷ್ಠ ಸುರಕ್ಷಾ ಸೌಲಭ್ಯ ನೀಡಲು ಹೊಸ ಪ್ರಯೋಗಗಳನ್ನು ನಡೆಸಲಾಗುತ್ತಿದ್ದು, ಟಿವಿಎಸ್ ಸಂಸ್ಥೆಯು ಸಹ ಸ್ಟಾರ್ ಸಿಟಿ ಪ್ಲಸ್ ಡ್ಯುಯಲ್ ಟೋನ್ ವೆರಿಯೆಂಟ್‌ಗಳಲ್ಲಿ ಸಿಂಕ್ರೊನೈಸ್ಡ್ ಬ್ರೇಕಿಂಗ್ ಟೆಕ್ನಾಲಜಿ (ಎಸ್‌ಟಿಬಿ) ಒದಗಿಸಿದೆ.

ಎಸ್‌ಟಿಬಿ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಬೈಕ್‌ಗಳಲ್ಲಿ ಬ್ರೇಕಿಂಗ್ ವಿಭಾಗವು ಮತ್ತಷ್ಟು ಸುಧಾರಣೆಯಾಗಲಿದ್ದು, ಬೈಕ್ ಸವಾರರಿಗೆ ಗರಿಷ್ಠ ಸುರಕ್ಷೆ ಸಿಗಲಿದೆ ಎನ್ನಬಹುದು. ಕಾರಣ, ಎಸ್‌ಟಿಬಿ ತಂತ್ರಜ್ಞಾನದಿಂದ ಎರಡು ಬದಿಯ ಬ್ರೇಕ್ ಮೇಲೂ ಒಂದೇ ಬದಿಯ ಹ್ಯಾಂಡಲ್ ಮೂಲಕಲೇ ನಿಯಂತ್ರಣ ಸಾಧಿಸಬಹುದು.

ಇದು 110ಸಿಸಿ ಬೈಕ್ ಪರಿಚಯಿಸಲಾದ ಹೊಸ ಬ್ರೇಕಿಂಗ್ ಸಿಸ್ಟಂ ಮಾದರಿಯಾಗಿದ್ದು, ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿರುವ ಸ್ಟಾರ್ ಸಿಟಿ ಬೈಕ್‌ಗಳು 2018ರ ಜೆ ಡಿ ಪವರ್ ಕಸ್ಟಮರ್ ಸರ್ವೇಯಲ್ಲಿ ನಂ.1 ಎಕಾನಮಿ ಬೈಕ್ ಮಾದರಿಯಾಗಿ ಹೊರಹೊಮ್ಮಿದೆ.

ಇದರೊಂದಿಗೆ ಇದೀಗ ಮತ್ತಷ್ಟು ಹೊಸ ಬದಲಾವಣೆ ಹೊಂದಿರುವ ಸ್ಟಾರ್ ಸಿಟಿ ಪ್ಲಸ್ ಡ್ಯುಯಲ್ ಟೋನ್ ವೆರಿಯೆಂಟ್‌ಗಳು ಗ್ರಾಹಕರ ಸೆಳೆಯಲು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಈ ಹಿಂದೆ ಇದೇ ಬೈಕ್‌ಗಳು ಅಲಾಯ್ ವೀಲ್ಹ್ ಜೊತೆಗೆ ಬ್ಲ್ಯಾಕ್ ಥೀಮ್‌ನೊಂದಿಗೆ ಬಿಡುಗಡೆಯಾಗಿದ್ದವು.

ಎಂಜಿನ್ ಸಾಮರ್ಥ್ಯ
109-ಸಿಸಿ ಇಕೊಥ್ರಸ್ಟ್ ಏರ್ ಕೂಲ್ಡ್ ಎಂಜಿನ್ ಹೊಂದಿರುವ ಸ್ಟಾರ್ ಸಿಟಿ ಪ್ಲಸ್ ಬೈಕ್‌ಗಳು 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 8.3-ಬಿಎಚ್‌ಪಿ ಮತ್ತು 8.7-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿವೆ. ಈ ಮೂಲಕ ಲೀಟರ್‌ಗೆ 80ರಿಂದ 85 ಕಿ.ಮೀ ಇಂಧನ ದಕ್ಷತೆಯನ್ನು ನೀಡುತ್ತದೆ.

ಜೊತೆಗೆ ಟಿವಿಎಸ್ ಕಂಪನಿಯ ಈ ಭರವಸೆಯ ಬೈಕ್ ಆಟೋ ಹೆಡ್‌ಲ್ಯಾಂಪ್ ಆನ್(ಎಎಚ್ಒ), ಡಿಜಿ-ಅನಾಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೊಂದಿಸಬಹುದಾದ ಹಿಂಭಾಗದ ರಿಯರ್ ಶಾಕ್ ಅಬ್ಸರ್ಬ್‌ಗಳು, ಟ್ಯೂಬ್‌ಲೆಸ್ ಟೈರುಗಳು ಮತ್ತು ಹನಿಕಾಂಬ್ ವಿನ್ಯಾಸ ಪಡೆದ ಸೈಡ್ ಪ್ಯಾನೆಲ್‍ಗಳನ್ನು ಒಳಗೊಂಡಿದೆ.

ಹೀಗಾಗಿ ಈ ಹೊಸ ಬೈಕ್ ಮಾರುಕಟ್ಟೆಯಲ್ಲಿರುವ ಯಮಹಾ ಸಲಾಟೊ ಆರ್‌ಎಕ್ಸ್, ಹೋಂಡಾ ಡ್ರಿಮ್ ಯುಗಾ ಮತ್ತು ಬಜಾಜ್ ಡಿಸ್ಕವರ್ 110 ಬೈಕ್‌ಗಳಿಗೆ ತ್ರೀವ ಪೈಪೋಟಿ ನೀಡಲಿದ್ದು, ಬೈಕ್ ಮಾರಾಟದಲ್ಲಿ ಯಾವ ಮಟ್ಟದ ದಾಖಲೆ ಪಡೆದುಕೊಳ್ಳಲಿದೆ ಎನ್ನುವುದು ಮುಂಬರುವ ದಿನಗಳಲ್ಲಿ ಸ್ಪಷ್ಟವಾಗಲಿದೆ.
ಟಿವಿಎಸ್ ಸಂಸ್ಥೆಯು ಕಳೆದ ತಿಂಗಳು ಬಿಡುಗಡೆ ಮಾಡಿರುವ ರೆಡಿಯಾನ್ ಬೈಕ್‌ಗಳು ಸದ್ಯ ಕಮ್ಯೂಟರ್ ಬೈಕ್ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.48,400 ಬೆಲೆಯೊಂದಿಗೆ ಖರೀದಿ ಲಭ್ಯವಿವೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಫೋಟೋ ಗ್ಯಾಲರಿ ನೋಡಿ.


Click it and Unblock the Notifications








