ಕಫೆ ರೇಸರ್ ವಿನ್ಯಾಸ ಪಡೆದ ಯಮಹಾ ಎಫ್‌ಝೆಡ್ ಮಾಡಿಫೈ..
ಅದೆಷ್ಟೋ ಅಗ್ಗದ ಬೆಲೆಯ ಬೈಕ್‌ಗಳೇ ಮಾಡಿಫೈಗೊಳ್ಳುವ ಮೂಲಕ ಮೂಲ ಬೈಕ್‌ಗಳ ವಿನ್ಯಾಸವನ್ನೇ ಹಿಂದಿಕ್ಕುವಷ್ಟು ಆಕರ್ಷಣೆ ಪಡೆದುಕೊಂಡಿಕೊಳ್ಳುತ್ತಿರುವ ಇದೀಗ ಸಾಮಾನ್ಯವಾಗುತ್ತಿದೆ.
ದುಬಾರಿ ಬೆಲೆಯ ಬೈಕ್ ಖರೀದಿಸಲು ಸಾಧ್ಯವಾಗದ್ರೂ ಮಾಡಿಫೈ ತಂತ್ರಜ್ಞಾನ ಅಂತದೊಂದು ಕೊರತೆ ನಿಗಿಸುತ್ತಿದೆ ಎಂದ್ರೆ ತಪ್ಪಾಗುವುದಿಲ್ಲ. ಯಾಕೇಂದ್ರೆ ಅದೆಷ್ಟೋ ಅಗ್ಗದ ಬೆಲೆಯ ಬೈಕ್‌ಗಳೇ ಮಾಡಿಫೈಗೊಳ್ಳುವ ಮೂಲಕ ಮೂಲ ಬೈಕ್‌ಗಳ ವಿನ್ಯಾಸವನ್ನೇ ಹಿಂದಿಕ್ಕುವಷ್ಟು ಆಕರ್ಷಣೆ ಪಡೆದುಕೊಂಡಿಕೊಳ್ಳುತ್ತಿರುವ ಇದೀಗ ಸಾಮಾನ್ಯವಾಗುತ್ತಿದೆ.

ಇದೇ ನಿಟ್ಟಿನಲ್ಲಿ ಬೆಂಗಳೂರಿನ ಜನಪ್ರಿಯ "ಗೇರ್ ಗೇರ್ ಮೋಟಾರ್‌ಸೈಕಲ್" ಎನ್ನುವ ಮಾಡಿಫೈ ಸಂಸ್ಥೆಯೊಂದು ಯಮಹಾ ಎಫ್‌ಝೆಡ್ ಬೈಕ್ ಎಂಜಿನ್ ಬಳಕೆ ಮಾಡಿಕೊಂಡು ಕಫೆ ರೇಸರ್ ಬೈಕ್ ಮಾಡಿಫೈ ಮಾಡಲಾಗಿದ್ದು, ಮಾಡಿಫೈ ಬೈಕ್ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ. ಹಾಗಾದ್ರೆ ಮಾಡಿಫೈಗೊಂಡಿರುವ ಬೈಕಿನ ಪ್ರಮುಖ ಆಕರ್ಷಣೆ ಏನು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಎಫ್‌ಝೆಡ್ ಎಂಜಿನ್ ಹೊರತುಪಡಿಸಿ ಬೈಕಿನ ವಿನ್ಯಾಸದಲ್ಲಿ ಸಂಪೂರ್ಣ ಬದಲಾವಣೆ ತರಲಾಗಿದ್ದು, ಬೈಕಿನ ನಿಳನೋಟವು ಮಾಡಿಫೈ ಪ್ರಿಯರ ಮೊದಲ ನೋಟದಲ್ಲೇ ಆಕರ್ಷಣೆ ಮಾಡಬಲ್ಲದು.

ಗೇರ್ ಗೇರ್ ಮೋಟಾರ್ ಸೈಕಲ್ ಸಂಸ್ಥೆಯು ಈ ವಿಶಿಷ್ಟ ಯಮಹಾ ಎಫ್‌ಝೆಡ್ ಸ್ಕ್ರಾಂಬ್ಲರ್ ಮೋಟಾರ್ ಸೈಕಲ್ ಅನ್ನು ಅದರ ಮೂಲ ವಿನ್ಯಾಸಕ್ಕೆ ಮೀರಿ ಬದಲಾವಣೆ ತಂದಿದ್ದು, ಯಮಹಾ ಆರ್ಎಕ್ಸ್ 100 ನಂತಯೇ ಹೊರಮೈ ಆಕೃತಿ ಪಡೆದಿದೆ.

ಜೊತೆಗೆ RX 100 ಬೈಕಿನ ಇಂಧನ ಟ್ಯಾಂಕ್ ಮತ್ತು ಕಸ್ಟಮ್ ಫ್ಲಾಟ್ ಸೀಟ್ನೊಂದಿಗೆ ಪ್ರಾರಂಭಿಸಿ ಕಸ್ಟಮ್ ಘಟಕಗಳನ್ನು ಇರಿಸುವ ಕಲ್ಪನೆಯನ್ನು ಪಡೆಯಲು ಈ ಮೋಟಾರ್ಸೈಕಲ್ ಸಂಪೂರ್ಣವಾಗಿ ವಿಭಿನ್ನ ವಿನ್ಯಾಸ ಹೊಂದಿದ್ದು, ಎಲ್ಇಡಿ ಸ್ಟ್ರಿಪ್ ಅನ್ನು ಆಸನ ಅಂತ್ಯದಲ್ಲಿ ಇರಿಸಲಾಗುತ್ತದೆ. ಜೊತೆಗೆ ಬ್ರೇಕ್‌ಗಳನ್ನು ಸ್ಟಾಕ್ ಯಮಹಾ ಎಫ್‌ಝೆಡ್‌ನಂತೆಯೇ ಇರಿಸಲಾಗಿದೆ.

ಇನ್ನು ಉದ್ದನೆ ಆಕೃತಿಯಂತೆ ವಿಸ್ತರಿಸಿರುವ ಬ್ಲ್ಯಾಕ್ ಗ್ರಾಫಿಕ್ಸ್ ಸೀಟುಗಳು ಸಹ ಆಕರ್ಷಣೆಯಾಗಿದ್ದು, ಹ್ಯಾಲೋಜೆನ್ ಫ್ರಂಟ್ ರೌಂಡ್ ಹೆಡ್ಲೈಟ್ ಅನ್ನು ಬಳಸಿಕೊಳ್ಳಲಾಗಿದೆ. ಮತ್ತು ಮುಂಭಾಗ ಮತ್ತು ಹಿಂಭಾಗದ ಕೊನೆಯಲ್ಲಿ ಎರಡೂ ಕಡೆಗೂ ಸ್ಟಾಕ್ ಸಸ್ಷೆಪನ್ ಇರಿಸಿಕೊಳ್ಳಲಾಗಿದೆ.

ಕೊನೆಯದಾಗಿ ಬೈಕ್ ರೈಡ್‌ಗೆ ಸಹಕಾರಿಯಾಗುವಂತೆ ಹ್ಯಾಂಡಲ್ ಬಾರ್ ಕೂಡಾ ಬದಲಾವಣೆ ಮಾಡಲಾಗಿದ್ದು, ಮಿರರ್ ವಿನ್ಯಾಸ ವಿಶೇಷ ಎನ್ನಿಸದೇ ಇರಲಾರದು. ಇನ್ನೊಂದು ಪ್ರಮುಖ ಮಾಡಿಫೈ ಲಕ್ಷಣ ಅಂದ್ರೆ ಸ್ಪೋಕ್ ಅಲಾಯ್ ಚಕ್ರದೊಂದಿಗೆ ಬಹುಬಳಕೆಯ ಟೈರ್ ಬಳಕೆ ಮಾಡಿರುವುದು ಬೈಕಿನ ಗ್ರೌಂಡ್ ಕ್ಲಿಯೆರೆನ್ಸ್ ಹೆಚ್ಚಿಸಿದೆ.

ಹೀಗಾಗಿ "ಗೇರ್ ಗೇರ್ ಮೋಟಾರ್‌ಸೈಕಲ್" ಸಂಸ್ಥೆಯು ಸಿದ್ದಪಡಿಸಿರುವ ಈ ಮಾಡಿಫೈ ಬೈಕಿಗೆ ಭಾರೀ ಬೇಡಿಕೆ ಸೃಷ್ಠಿಯಾಗಿದ್ದು, ಆಸಕ್ತ ಗ್ರಾಹಕರು ಬೆಂಗಳೂರಿನ ಇಂದಿರಾನಗರದಲ್ಲಿರುವ "ಗೇರ್ ಗೇರ್ ಮೋಟಾರ್‌ಸೈಕಲ್" ಸಂಸ್ಥೆಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ 098868 94644 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು
100 ಸಿಸಿ ಬೈಕ್ ಎಂಜಿನ್‌ನಲ್ಲಿ ದುಬಾರಿ ಬೆಲೆಯ ಲಂಬೋರ್ಗಿನಿ ಕಾರು ನಿರ್ಮಾಣ ಮಾಡಿದ ರೈತ...!!
ಬಿಡುಗಡೆಯಾಗಲಿರುವ ವಿನೂತನ 7 ಸೀಟರ್ ವ್ಯಾಗನರ್ ಬೆಲೆ ಎಷ್ಟು ಗೊತ್ತಾ?


Click it and Unblock the Notifications








