TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಈತ ಮಾಡಿದ ತಪ್ಪಿಗೆ 18 ತಿಂಗಳ ಕಾಲ ಕಾರ್ ಚಲಾಯಿಸುವ ಹಾಗಿಲ್ಲ..!!
ಕೆಲ ದೇಶಗಳಲ್ಲಿನ ಕಠಿಣ ಕಾನೂನು ಕ್ರಮಗಳೇ ಹಾಗೆ. ಯುನೈಟೆಡ್ ಕಿಂಗ್‍ಡಮ್‍ನಲ್ಲಿ ಭಾರತದ ಮೂಲದ ವ್ಯಕ್ತಿಯೊಬ್ಬ ಬೇಜವಾಬ್ದಾರಿಯಿಂದ ಕಾರು ಚಾಲನೆ ಮಾಡಿದ್ದಕ್ಕೆ ಭಾರೀ ಪ್ರಮಾಣದ ದಂಡ ಹಾಕಿಸಿಕೊಂಡಿರುವುದಲ್ಲದೇ ಕಾರು ಚಾಲನೆ ಮಾಡುವ ಅವಕಾಶವನ್ನು ಕಳೆದುಕೊಂಡಿದ್ದಾನೆ.
ಹೌದು... ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಭಾವೇಶ್ ಪಟೇಲ್ ಎನ್ನುವರು ಬೇಜವಾಬ್ದಾರಿ ಕಾರು ಚಾಲನೆ ಮಾಡಿದ್ದಕ್ಕೆ 18 ತಿಂಗಳ ಕಾಲ ಡ್ರೈವಿಂಗ್ ಮಾಡದಂತೆ ನಿಷೇಧ ಹಾಕಿರುವುದಲ್ಲದೇ ಭಾರೀ ಪ್ರಮಾಣ ದಂಡವನ್ನು ಕೂಡಾ ವಸೂಲಿ ಮಾಡಲಾಗಿದೆ. ಹಾಗಾದ್ರೆ ಭಾವೇಶ್ ಪಟೇಲ್ ಮಾಡಿದ ತಪ್ಪಾದ್ರೂ ಏನು ಅಂತೀರಾ ಇಲ್ಲಿದೆ ನೋಡಿ..
ಉದ್ಯಮಿಯಾಗಿರುವ ಭಾವೇಶ್ ಪಟೇಲ್ ಕಳೆದ ವಾರವಷ್ಟೇ ದುಬಾರಿ ಬೆಲೆಯ ಟೆಸ್ಲಾ ಎಸ್60 ಕಾರನ್ನು ಖರೀದಿಸಿದ್ದು, ಬ್ರಿಟಿಷ್ ಹೆದ್ದಾರಿಯಲ್ಲಿ ಕಾರು ಚಾಲನೆ ಮಾಡುತ್ತಿರುವಾಗ ಕಾರನ್ನು ಆಟೋ ಪೈಲೇಟ್ ಮೋಡ್‍ಗೆ ಹಾಕಿ ಪ್ಯಾಸೆಂಜರ್ ಸೀಟ್ನಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದನಂತೆ.
ಅರೇ! ಆಟೋ ಪೈಲೇಟ್ ಮೂಡ್ ಬಳಕೆ ಮಾಡುವುದಕ್ಕೂ ಇವನು ಪ್ಯಾಸೆಂಜರ್ ಸೀಟ್ನಲ್ಲಿ ಕುಳಿತು ವಿಶ್ರಾಂತಿ ಪಡೆದುಕೊಳ್ಳುವುದಕ್ಕೂ ಏನ್ ಸಂಬಂಧ ಅಂತೀರಾ? ಹೌದು.. ಕಾರು ಚಾಲನೆಯಲ್ಲಿ ಇದ್ದಾಗಲೇ ಇವನು ಆಟೋ ಪೈಲೇಟ್ ಮೂಡ್ ಬಳಕೆ ಮಾಡಿದ್ದಲೇ ಪ್ಯಾಸೆಂಜರ್ ಸೀಟ್ ಕುಳಿತಿದ್ದು ಕಾನೂನು ಪ್ರಕಾರ ಅದು ತಪ್ಪು.
ಇದೊಂದು ಅಪಾಯಕಾರಿ ಚಾಲನೆ ಎಂಬವುದು ಗೊತ್ತಿದ್ದರೂ ಭಾವೇಶ್ ಪಟೇಲ್ ಈ ರೀತಿ ಮಾಡಿರುವುದರ ಬಗ್ಗೆ ಅಲ್ಲಿನ ಟ್ರಾಫಿಕ್ ಪೊಲೀಸರು ಕಠಿಣ ಕ್ರಮ ಕೈಗೊಂಡಿರುವುದಲ್ಲದೇ 100 ಗಂಟೆಗಳ ಕಾಲ ಪಾವತಿಸದ ಕೆಲಸ ಹಾಗೂ ರೂ.1.60 ಲಕ್ಷ ದಂಡ ವಸೂಲಿ ಮಾಡಿದೆ.
ಇದಲ್ಲದೇ ಭಾವೇಶ್ ಪಟೇಲ್ ಬ್ರಿಟಿಷ್ ರಸ್ತೆಗಳಲ್ಲಿ ತನ್ನ ಟೆಸ್ಲಾ ಕಾರಿನಲ್ಲಿ ಆಟೋ ಪೈಲೆಟ್ ಮೋಡ್ ಅನ್ನು ಚಲಿತಗೊಳಿಸಿ ಪ್ಯಾಸೆಂಜರ್ ಸೀಟ್‍ನಲ್ಲಿ ತನ್ನ ತಲೆಯ ಹಿಂದೆ ಕೈ ಹಾಕಿಕೊಂಡು ಕಾರಿನಲ್ಲಿ ಪ್ರಯಾಣಿಸುತ್ತಿರುವ ದೃಶ್ಯ ಹೆದ್ದಾರಿಯಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಈ ಕುರಿತು ಪೊಲೀಸರು ಪಟೇಲ್‍ನನ್ನು ಪ್ರಶ್ನಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಹೀಗಾಗಿ ಭಾವೇಶ್‌ನನ್ನು ಬಂಧಿಸಿ ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು. ಈ ವೇಳೆ ಸಾಕ್ಷಿಗಳನ್ನು ಪರಿಶೀಲನೆ ಮಾಡಿದ ಕೋರ್ಟ್, ಅಪಾಯಕಾರಿ ಚಾಲನೆ ಮಾಡಿದ ಭಾವೇಶ್‌ಗೆ ನಿಗದಿತ ಅವಧಿಗೆ ಡ್ರೈವಿಂಗ್‌ನಿಂದ ನಿಷೇಧ ಮತ್ತು ರೂ. 1.60 ಲಕ್ಷ ದಂಡ ವಸೂಲಿ ಮಾಡುವಂತೆ ಆದೇಶ ನೀಡಿದೆ.
ಜೊತೆಗೆ ಈ ಪ್ರಕರಣವು ಎಲ್ಲಾ ಆಟೋ ಪೈಲೆಟ್ ಆಯ್ಕೆಯನ್ನು ಪಡೆದಿರುವ ಕಾರು ಮಾಲೀಕರಿಗೆ ಇದು ಉದಾಹರಣೆಯಾಗಬೇಕು ಎಂದಿರುವ ಕೋರ್ಟ್, ಡ್ರೈವಿಂಗ್ ಸೀಟ್‍ನಲ್ಲಿ ಸಮರ್ಥ ವಾಹನ ಚಾಲಕರಿಗೆ ಬದಲಾಗಿ ರಸ್ತೆಗೆ ಸೂಕ್ತವಾಗಿ ಪ್ರತಿಕ್ರಿಯಿಸಲು ಅವರು ಯಾವುದೇ ರೀತಿಯಲ್ಲಿ ಅರ್ಹರಲ್ಲ ಎಂದು ಕೂಡ ಹೇಳಿದೆ.
ಇನ್ನು ಟೆಸ್ಲಾ ಸಂಸ್ಥೆಯ ಇಂಜಿನಿಯರ್‍ಗಳು ಕಾರಿನಲ್ಲಿ ಅಳವಡಿಸಲಾಗಿರುವ ಆಟೋ ಪೈಲೆಟ್ ಪಂಕ್ಷನ್, ಟ್ರಾಫಿಕ್ ಅವೇರ್ ಕ್ರೂಸ್ ಕಂಟ್ರೋಲ್ ಮತ್ತು ಆಟೋ ಸಿರ್ ಎಂಬ ಆಯ್ಕೆಗಳನ್ನು ತುರ್ತು ಸಂದರ್ಭಗಳಲ್ಲಿ ಡ್ರೈವರ್‍ಗಳಿಗೆ ಅಸ್ಸಿಸ್ಟ್ ಮಾಡುವ ಉದ್ದೇಶದಿಂದ ಅಳವಡಿಸಲಾಗಿದೆ ಹೊರತು ಅದನ್ನು ದುರ್ಬಳಕೆ ಮಾಡಿಕೊಳ್ಳಲು ಅಲ್ಲ ಎಂದಿದ್ದಾರೆ.
ಈ ಸ್ಟೋರಿಯ ಕುರಿತಾದ ವಿಡೀಯೊ ಇಲ್ಲಿದೆ ನೋಡಿ..