ಅನಾವರಣಗೊಂಡ ಝಿರೋ ಡಿಎಸ್ಆರ್‍‍ನ ಹೊಸ ಎಲೆಕ್ಟ್ರಿಕ್ ಬೈಕ್..

Written By: Rahul TS

ಎಲೆಕ್ಟ್ರಿಕ್ ಬೈಕುಗಳ ಬೇಡಿಕೆ ಹೆಚ್ಚಾಗುತ್ತಿದ್ದು, ಝಿರೋ ಡಿಎಸ್ಆರ್‍ ತನ್ನ ಹೊಸ ಬ್ಲಾಕ್ ಫಾರೆಸ್ಟ್ ಆವೃತ್ತಿಯನ್ನು ಅನಾವರಣಗೊಳಿಸಿದೆ. ಸದ್ಯಕ್ಕೆ ಈ ಬೈಕ್ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಮಾತ್ರ ಈ ಬೈಕ್ ಲಭ್ಯವಿರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅನಾವರಣಗೊಂಡ ಝಿರೋ ಡಿಎಸ್ಆರ್‍‍ನ ಹೊಸ ಎಲೆಕ್ಟ್ರಿಕ್ ಬೈಕ್..

ಡಿಎಸ್ಆರ್ ಬ್ಲಾಕ್ ಫಾರೆಸ್ಟ್ ಬೇರೆ ಎಲೆಕ್ಟ್ರಿಕ್ ಬೈಕುಗಳಿಗಿಂತ ವಿಭಿನ್ನವಾಗಿ ಧೀರ್ಘಕಾಲದ ಪ್ರಯಾಣದ ರೈಡಿಂಗ್ ಅನುಭೂತಿಯನ್ನು ಹೆಚ್ಚಿಸಲಾಗಿದೆ ಎನ್ನಲಾಗಿದ್ದು, ನಗರದ ಪ್ರದೇಶದಲ್ಲಿ 250 ಕಿಲೋಮೀಟರ್ ಹಾಗು ದೀರ್ಘಕಾಲದ ಪ್ರಯಾಣದ ಸಮಯದಲ್ಲಿ 120 ಕಿಲೋಮೀಟರ್ ಚಲಿಸಬಲ್ಲವು ಎಂದು ಸಂಸ್ಥೆಯು ಹೇಳಿಕೊಂಡಿದೆ.

ಅನಾವರಣಗೊಂಡ ಝಿರೋ ಡಿಎಸ್ಆರ್‍‍ನ ಹೊಸ ಎಲೆಕ್ಟ್ರಿಕ್ ಬೈಕ್..

ಹಲವು ವರ್ಷದಿಂದ ನಮ್ಮ ಗ್ರಾಹಕರು ಇಂತಹದೊಂದು ಬೈಕ್ ಮಾದರಿಯನ್ನು ತಯಾರಿಸಲು ಕೇಳಿಕೊಂಡಿದ್ದು, ಅವರ ಬೇಡಿಕೆಯಂತೆಯೇ ನಾವು ಇದನ್ನು ತಯಾರುಮಾಡಲಾಗಿದೆ. ಅನಾವರಣಾಗೊಳಿಸಿದ ಈ ಬೈಕ್ ಹೊಸದಾಗಿ ದೀರ್ಘಕಾಲಿನ ಹಾಗು ಫನ್ ರೈಡಿಂಗ್ ಪ್ರಿಯರಿಗೆ ಹೊಸ ಅನುಭವವನ್ನು ನೀಡಲಿದೆ ಎಂದು ಝೀರೊ ಮೋಟರ್‍‍ಸೈಕಲ್ ವ್ಯವಸ್ಥೊಪಕ ನಿರ್ದೇಶಕರು ಹೇಳಿಕೊಂಡಿದ್ದಾರೆ.

ಅನಾವರಣಗೊಂಡ ಝಿರೋ ಡಿಎಸ್ಆರ್‍‍ನ ಹೊಸ ಎಲೆಕ್ಟ್ರಿಕ್ ಬೈಕ್..

ಝಿರೋ ಡಿಎಸ್ಆರ್ ಬ್ಲಾಕ್ ಫಾರೆಸ್ಟ್ ಬೈಕ್ ಒಂದು ಗಂಟೆಯ ಸಮಯದಲ್ಲಿ 150 ಕಿಲೋಮೀಟರ್ ಚಲಿಸಬಲ್ಲಷ್ಟು ಫಾಸ್ಟ್ ಚಾರ್ಜ್ ಆಗಬಲ್ಲ ತಂತ್ರಜ್ಞಾನವುಳ್ಳ ಚಾರ್ಜ್ ಟ್ಯಾಂಕ್ ಅನ್ನು ಪಡೆದಿದ್ದು, ಗ್ರಾಹಕರು ಯುರೋಪ್ ದೇಶಗಳಲ್ಲಿನ ಲೆವೆಲ್ 2 ಚಾರ್ಜ್ ಸ್ಟೇಷನ್‍‍ಗಳಲ್ಲಿ ಚಾರ್ಜ್ ಮಾಡಿಕೊಳ್ಳಬಹುದಾಗಿ ತಿಳಿಸಿದೆ.

ಅನಾವರಣಗೊಂಡ ಝಿರೋ ಡಿಎಸ್ಆರ್‍‍ನ ಹೊಸ ಎಲೆಕ್ಟ್ರಿಕ್ ಬೈಕ್..

ಇನ್ನು ಈ ಹೊಸ ಬೈಕ್‍ನ 14.4 ಕಿಲೋವ್ಯಾಟ್ಸ್ ಬ್ಯಾಟರಿ 146ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಕ್ಲಚ್ ಅಥವಾ ಶಿಫ್ಟಿಂಗ್ ಪವರ್‍‍ಟ್ರೈನ್ ಇಲ್ಲವೇ zಇರೋ ಸಂಸ್ಥೆಯ ಡೈರೆಕ್ಟ್ ಡ್ರೈವ್ ಝೆಡ್ ಫೋರ್ಸ್ ಪವರ್‍‍ಟ್ರೈನ್ ಆಯ್ಕೆ ಮಾಡಬಹುದು.

ಅನಾವರಣಗೊಂಡ ಝಿರೋ ಡಿಎಸ್ಆರ್‍‍ನ ಹೊಸ ಎಲೆಕ್ಟ್ರಿಕ್ ಬೈಕ್..

ಹೆಚ್ಚುವರಿಯಾಗಿ, ವೈವಿಧ್ಯಮಯ ಶ್ರೇಣಿಯ ಸವಾರರ ಅಗತ್ಯತೆಗಳು ಮತ್ತು ಅನುಭವದ ಹಂತಗಳ ಪ್ರಕಾರ ಝೀರೊನ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಕಾರ್ಯಕ್ಷಮತೆಯನ್ನು ಕಸ್ಟಮೈಸ್ ಮಾಡಬಹುದಾಗಿದ್ದು, ಬೈಕ್‍‍ಗೆ ಹಲವು ಬಿಡಿಭಾಗಗಳನ್ನು ಆಯ್ಕೆಯಾಗಿ ನೀಡಲಿವೆ.

-ಚಾರ್ಜ್ ಟ್ಯಾಂಕ್

-ಬ್ಲಾಕ್ ಅಲ್ಯುಮಿನಿಯಂ ಟಾಪ್ ಮತ್ತು ಸೈಡ್ ಪನ್ನಿಯರ್ಸ್

- ಟೂರಿಂಗ್ ವಿಂಡ್‍‍ಸ್ಕ್ರೀನ್

- ಟೂರಿಂಗ್ ಸೀಟ್

-ಡ್ಯುಯಲ್ ಸ್ಪೋರ್ಟ್ ಡ್ರಾಪ್ ಬಾರ್ಸ್

-ಎಲ್ಇಡಿ ಆಕ್ಸಿಲರಿ ಲೈಟ್ಸ್ (ಆಫ್ ರೋಡ್ ಬಳಕೆಗೆ ಮಾತ್ರ)

- ಹೆಡ್‍‍ಲೈಟ್ ಪ್ರೊಟೆಕ್ಟರ್ (ಆಫ್ ರೋಡ್ ಬಳಕೆಗೆ ಮಾತ್ರ)

ಅನಾವರಣಗೊಂಡ ಝಿರೋ ಡಿಎಸ್ಆರ್‍‍ನ ಹೊಸ ಎಲೆಕ್ಟ್ರಿಕ್ ಬೈಕ್..

ಸಂಸ್ಥೆಯು ಝಿರೋ ಡಿಎಸ್ಆರ್ ಬೈಕಿನ ಬೆಲೆಯ ಬಗ್ಗೆ ಯಾವುದೇ ರೀತಿಯಾದ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲವಾದರೂ, ಇದೇ ವರ್ಷದ ಎಪ್ರಿಲ್‍‍ನಲ್ಲಿ ಯೂರೋಪಿನ ಡೀಲರ್‍‍ಗಳನ್ನು ತಲುಪಲಿದೆ ಎನ್ನಲಾಗಿದೆ.

ಅನಾವರಣಗೊಂಡ ಝಿರೋ ಡಿಎಸ್ಆರ್‍‍ನ ಹೊಸ ಎಲೆಕ್ಟ್ರಿಕ್ ಬೈಕ್..

ಯೂರೋಪ್ ಬಿಟ್ಟು ಬೇರಾವ ದೇಶಗಳಲ್ಲಿಯು ಮಾರಾಟ ಮಾಡುವ ಮಾಹಿತಿಯು ತಿಳಿದುಬಂದಿಲ್ಲವಾದರೂ, ಭಾರತದಲ್ಲಿ ಇಂತಹ ಎಲೆಕ್ಟ್ರಿಕ್ ಬೈಕ್‍‍ಗಳ ಅಗತ್ಯತೆಯು ಹೆಚ್ಚಿದ್ದು, ಭಾರತ ಮಾರುಕಟ್ಟೆಯಲ್ಲಿಯೂ ಕೂಡ ಈ ಬೈಕ್ ಅನ್ನು ಪರಿಚಯಿಸಬೇಕೆಂಬ ಅಪೇಕ್ಷೆಯಿದೆ.

English summary
Zero DSR Black Forest Edition Electric Touring Bike Unveiled: Riding Range, Specs And Features.
Story first published: Monday, March 5, 2018, 13:21 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark