ಭಾರತದಲ್ಲಿ ಬಿಡುಗಡೆಯಾಯ್ತು 2020ರ ಸುಜುಕಿ ಹಯಾಬುಸಾ ಸೂಪರ್‍‍ಬೈಕ್

ಸುಜುಕಿ ಮೋಟರ್ ಸೈಕಲ್ಸ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ 2020ರ ಹಯಾಬುಸಾ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಹೊಸ 2020ರ ಸುಜುಕಿ ಹಯಾಬುಸಾ ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.13.75 ಲಕ್ಷಗಳಾಗಿದೆ.

ಭಾರತದಲ್ಲಿ ಬಿಡುಗಡೆಯಾಯ್ತು 2020ರ ಸುಜುಕಿ ಹಯಾಬುಸಾ ಸೂಪರ್‍‍ಬೈಕ್

ಹೊಸ ಹಯಾಬುಸಾ ಸೂಪರ್‍‍ಬೈಕ್ ಅನ್ನು ಎರಡು ಹೊಸ ಬಣ್ಣಗಳ ಆಯ್ಕೆಗಳೊಂದಿಗೆ ಬಿಡುಗಡೆಗೊಳಿಸಲಾಗಿದೆ. ಈ ಬೈಕ್ ಮೆಟಾಲಿಕ್ ಥಂಡರ್ ಗ್ರೇ ಮತ್ತು ಕ್ಯಾಂಡಿ ಡೇರಿಂಗ್ ರೆಡ್ ಬಣ್ಣಗಳಗಿದೆ. ಹೊಸ ಹಯಾಬುಸಾ ನವೀಕರಿಸಿದ ಗ್ರಾಫಿಕ್ಸ್ ಮತ್ತು ಮುಂಭಾಗದಲ್ಲಿ ಹೊಸ ಬ್ರೇಕ್ ಕ್ಯಾಲಿಪರ್‍ ಅನ್ನು ಹೊಂದಿರಲಿದೆ. ಹೊಸ ಹಯಾಬುಸಾ ಸೂಪರ್‍‍ಬೈಕಿನಲ್ಲಿ ಇನ್ನೂ ಉಳಿದ ಯಾವುದೇ ನವೀಕರಣಗಳನ್ನು ಮಾಡಲಾಗಿಲ್ಲ. ಇದು ಹಯಾಬುಸಾ ಸೂಪರ್‍‍ಬೈಕ್ ಪ್ರಿಯರಿಗೆ ನಿರಾಸೆಯಾಗಿದೆ.

ಭಾರತದಲ್ಲಿ ಬಿಡುಗಡೆಯಾಯ್ತು 2020ರ ಸುಜುಕಿ ಹಯಾಬುಸಾ ಸೂಪರ್‍‍ಬೈಕ್

ಹೊಸ ಸುಜುಕಿ ಹಯಾಬುಸಾ ಬಿಎಸ್-4 ಎಂಜಿನ್ ಅನ್ನು ಹೊಂದಿರುವ ಬೈಕ್ ಆಗಿದೆ. 2020ರ ಸುಜುಕಿ ಹಯಾಬುಸಾ ಬೈಕ್ ಪ್ರಸ್ತುತ ಮಾರುಕಟ್ಟೆಯಲ್ಲ ಮಾರಾಟವಾಗುತ್ತಿರುವ ಕೊನೆಯ ಪುನರಾವರ್ತನೆ ಮಾದರಿಯಾಗಿದೆ. ಹೊಸ ಹಯಾಬುಸಾ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವ ತನಕ ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಭಾರತದಲ್ಲಿ ಬಿಡುಗಡೆಯಾಯ್ತು 2020ರ ಸುಜುಕಿ ಹಯಾಬುಸಾ ಸೂಪರ್‍‍ಬೈಕ್

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾದ, ಎಂಡಿ, ಕೊಯಿಚಿರೊ ಹಿರಾವ್ ಅವರು ಮಾತನಾಡಿ, ಸುಜುಕಿ ಹಯಾಬುಸಾ ಈಗ ಎರಡೂ ದಶಕಗಳಿಗಿಂತಲೂ ಹೆಚ್ಚು ಕಾಲ ವಿಶ್ವಾದಾದ್ಯಂತಹ ಬೈಕು ಪ್ರಿಯರ ಮೆಚ್ಚಿನ ಬೈಕ್ ಆಗಿತ್ತು. ಸುಜುಕಿ ಹಯಾಬುಸಾ ಹೆಚ್ಚು ಪವರ್‍‍ಫುಲ್ ಬೈಕ್ ಆಗಿದೆ. ಇದು ಭಾರತದಲ್ಲಿ ಈ ಬೈಕಿಗೆ ಹಲವಾರು ಅಭಿಮಾನಿಗಳನ್ನು ಹೊಂದಿದೆ. ಇದಲ್ಲದೆ ಸುಜುಕಿ ಮೋಟಾರ್‍‍ಸೈಕಲ್ ಇಂಡಿಯಾದ ಈ ಬೈಕ್ 'ಮೇಡ್ ಇನ್ ಇಂಡಿಯಾ ಬಿಗ್ ಬೈಕ್ ಆಗಿದೆ ಎಂದು ಹೇಳಿದರು.

ಭಾರತದಲ್ಲಿ ಬಿಡುಗಡೆಯಾಯ್ತು 2020ರ ಸುಜುಕಿ ಹಯಾಬುಸಾ ಸೂಪರ್‍‍ಬೈಕ್

ಹೊಸ ಸುಜುಕಿ ಹಯಾಬುಸಾ ಬೈಕಿನಲ್ಲಿ ಕಾರ್ನರಿಂಗ್ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ವ್ಹೀಲಿ ಮಿಟಿಗೇಷನ್ ಮುಂತಾದ ಸುಧಾರಿತ ಎಲೆಕ್ಟ್ರಾನಿಕ್ ವ್ಯವಸ್ಥೆಗಳಿಗಾಗಿ ಇನ್‍‍ಹರ್ಶಿಯಲ್ ಮೇಶರ್‍‍ಮೆಂಟ್ ಯೂನಿಟ್(ಐಎಂಯು) ಅಳವಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಯ್ತು 2020ರ ಸುಜುಕಿ ಹಯಾಬುಸಾ ಸೂಪರ್‍‍ಬೈಕ್

ಹೊಸ ಸುಜುಕಿ ಹಯಾಬುಸಾ ಬೈಕಿನಲ್ಲಿ 1,340 ಸಿಸಿಯ ಇನ್ ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಇರಲಿದ್ದು, ಈ ಎಂಜಿನ್ 197 ಬಿ‍‍ಹೆಚ್‍‍ಪಿ ಪವರ್ ಹಾಗೂ 155 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 299 ಕಿ.ಮೀ ಆಗಿರಲಿದೆ.

ಭಾರತದಲ್ಲಿ ಬಿಡುಗಡೆಯಾಯ್ತು 2020ರ ಸುಜುಕಿ ಹಯಾಬುಸಾ ಸೂಪರ್‍‍ಬೈಕ್

ಭಾರತದ ಸ್ಥಳೀಯವಾಗಿ ಅಭಿವೃದ್ದಿಪಡಿಸಿದ ಸುಜುಕಿಯಿಂದ ಬಂದ ಮೊದಲ ಸೂಪರ್‍‍ಬೈಕ್‍‍ಗಳಲ್ಲಿ ಹಯಾಬುಸಾ ಕೂಡ ಒಂದಾಗಿದೆ. ಸುಜುಕಿ ಹಯಾಬುಸಾ ಸೂಪರ್‍‍ಬೈಕಿನ ಸ್ಥಳೀಯವಾಗಿ ಅಭಿವೃದ್ದಿಪಡಿಸುವುದನ್ನು 2017ರಲ್ಲಿ ಆರಂಭಿಸಿದರು. ವರ್ಷದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಭಾರತದಲ್ಲಿ ಬಿಡುಗಡೆಯಾಯ್ತು 2020ರ ಸುಜುಕಿ ಹಯಾಬುಸಾ ಸೂಪರ್‍‍ಬೈಕ್

ಮುಂಬರುವ ವರ್ಷಗಳಲ್ಲಿ ಸುಜುಕಿ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಎಲ್ಲಾ ಹೊಸ ಹಯಾಬುಸಾ ಉತ್ಪಾದನೆಯಲ್ಲಿ ನಿರತರಾಗಿದ್ದಾರೆ. ಹೊಸ ಹಯಾಬುಸಾ ಬಿಎಸ್-6 ಎಂಜಿನ್ ಹಾಗೂ ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ. ಈ ಹೊಸ ಬೈಕ್ 2021ರಲ್ಲಿ ಅನಾವರಣವಾಗುವ ನಿರೀಕ್ಷೆಯಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಭಾರತದಲ್ಲಿ ಬಿಡುಗಡೆಯಾಯ್ತು 2020ರ ಸುಜುಕಿ ಹಯಾಬುಸಾ ಸೂಪರ್‍‍ಬೈಕ್

2020ರ ಸುಜುಕಿ ಹಯಾಬುಸಾ ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬೈಕಿನ ಪುನರಾರ್ವತನೆ ಮಾದರಿಯಾಗಿದೆ. ಬಿಎಸ್-6 ಮಾಲಿನ್ಯ ನಿಯಮವು ಕೇಂದ್ರ ಸರ್ಕಾರ ಮುಂದಿನ ವರ್ಷದ ಏಪ್ರಿಲ್ ತಿಂಗಳಲ್ಲಿ ಜಾರಿಗೊಳಿಸಲಿದೆ. ಬಿಎಸ್-6 ನಿಯಮ ಜಾರಿಯಾಗುವವರೆಗೆ ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ.

More from DriveSpark

Article Published On: Saturday, December 14, 2019, 8:45 [IST]
English summary
New (2020) Suzuki Hayabusa Launched In India: Priced At Rs 13.75 Lakh - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+