ಇತಿಹಾಸದ ಪುಟ ಸೇರಲಿದೆ ಜನಪ್ರಿಯ ಸುಜುಕಿ ಹಯಾಬುಸಾ ಸೂಪರ್‍‍ಬೈಕ್

ಭಾರತೀಯ ಸೂಪರ್‍‍ಬೈಕ್ ಪ್ರಿಯರ ಮೆಚ್ಚಿನ ಬೈಕ್ ಆದ ಸುಜುಕಿ ಹಯಾಬುಸಾ ಇತಿಹಾಸ ಪುಟ ಸೇರಲಿವೆ. ಬಿ‍ಎಸ್-6 ಮಾಲಿನ್ಯ ನಿಯಮ ಮುಂದಿನ ತಿಂಗಳು ಜಾರಿಯಾಗುವುದರಿಂದ ಜನಪ್ರಿಯ ಹಯಾಬುಸಾ ಸೂಪರ್‍‍ಬೈಕನ್ನು ಸುಜುಕಿ ಮೋಟರ್ ಸೈಕಲ್ ಇಂಡಿಯಾ ಕಂಪನಿಯು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಇತಿಹಾಸದ ಪುಟ ಸೇರಲಿದೆ ಜನಪ್ರಿಯ ಸುಜುಕಿ ಹಯಾಬುಸಾ ಸೂಪರ್‍‍ಬೈಕ್

ಸುಜುಕಿ ಮೋಟರ್ ಸೈಕಲ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ 2020ರ ಹಯಾಬುಸಾ ಬೈಕ್ ಅನ್ನು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. 2020ರ ಸುಜುಕಿ ಹಯಾಬುಸಾ ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.13.75 ಲಕ್ಷಗಳಾಗಿದೆ. ಹಯಾಬುಸಾ ಸೂಪರ್‍‍ಬೈಕ್ ಅನ್ನು ಎರಡು ಹೊಸ ಬಣ್ಣಗಳ ಆಯ್ಕೆಗಳೊಂದಿಗೆ ಬಿಡುಗಡೆಗೊಳಿಸಲಾಗಿತ್ತು. ಈ ಬೈಕ್ ಮೆಟಾಲಿಕ್ ಥಂಡರ್ ಗ್ರೇ ಮತ್ತು ಕ್ಯಾಂಡಿ ಡೇರಿಂಗ್ ರೆಡ್ ಬಣ್ಣಗಳಗಿದೆ.

ಇತಿಹಾಸದ ಪುಟ ಸೇರಲಿದೆ ಜನಪ್ರಿಯ ಸುಜುಕಿ ಹಯಾಬುಸಾ ಸೂಪರ್‍‍ಬೈಕ್

ಹಯಾಬುಸಾ ಬೈಕಿನಲ್ಲಿ ನವೀಕರಿಸಿದ ಗ್ರಾಫಿಕ್ಸ್ ಮತ್ತು ಮುಂಭಾಗದಲ್ಲಿ ಹೊಸ ಬ್ರೇಕ್ ಕ್ಯಾಲಿಪರ್‍ ಅನ್ನು ಹೊಂದಿದೆ. 2020ರ ಹಯಾಬುಸಾ ಸೂಪರ್‍‍ಬೈಕಿನಲ್ಲಿ ಇನ್ನೂ ಉಳಿದ ಯಾವುದೇ ನವೀಕರಣಗಳನ್ನು ಮಾಡಿರಲಿಲ್ಲ. ಇದು ಹಯಾಬುಸಾ ಸೂಪರ್‍‍ಬೈಕ್ ಪ್ರಿಯರಿಗೆ ನಿರಾಸೆ ಮೂಡಿಸಿತು.

ಇತಿಹಾಸದ ಪುಟ ಸೇರಲಿದೆ ಜನಪ್ರಿಯ ಸುಜುಕಿ ಹಯಾಬುಸಾ ಸೂಪರ್‍‍ಬೈಕ್

ಸುಜುಕಿ ಹಯಾಬುಸಾ ಬೈಕಿನಲ್ಲಿ ಬಿಎಸ್-4 ಎಂಜಿನ್ ಅನ್ನು ಹೊಂದಿದೆ. 2020ರ ಸುಜುಕಿ ಹಯಾಬುಸಾ ಬೈಕ್ ಪ್ರಸ್ತುತ ಮಾರುಕಟ್ಟೆಯಲ್ಲ ಮಾರಾಟವಾಗುತ್ತಿರುವ ಕೊನೆಯ ಪುನರಾವರ್ತನೆ ಮಾದರಿಯಾಗಿದೆ. ಹಯಾಬುಸಾ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವ ತನಕ ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಇತಿಹಾಸದ ಪುಟ ಸೇರಲಿದೆ ಜನಪ್ರಿಯ ಸುಜುಕಿ ಹಯಾಬುಸಾ ಸೂಪರ್‍‍ಬೈಕ್

ಸುಜುಕಿ ಹಯಾಬುಸಾ ಬೈಕಿನಲ್ಲಿ ಕಾರ್ನರಿಂಗ್ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ವ್ಹೀಲಿ ಮಿಟಿಗೇಷನ್ ಮುಂತಾದ ಸುಧಾರಿತ ಎಲೆಕ್ಟ್ರಾನಿಕ್ ಸಿಸ್ಟಂಗಳಿಗಾಗಿ ಇನ್‍‍ಹರ್ಶಿಯಲ್ ಮೇಶರ್‍‍ಮೆಂಟ್ ಯೂನಿಟ್(ಐಎಂಯು) ಅಳವಡಿಸಲಾಗಿದೆ.

ಇತಿಹಾಸದ ಪುಟ ಸೇರಲಿದೆ ಜನಪ್ರಿಯ ಸುಜುಕಿ ಹಯಾಬುಸಾ ಸೂಪರ್‍‍ಬೈಕ್

ಸುಜುಕಿ ಹಯಾಬುಸಾ ಬೈಕಿನಲ್ಲಿ 1,340 ಸಿಸಿಯ ಇನ್ ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 197 ಬಿ‍‍ಹೆಚ್‍‍ಪಿ ಪವರ್ ಹಾಗೂ 155 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 299 ಕಿ.ಮೀ ಆಗಿರಲಿದೆ.

ಇತಿಹಾಸದ ಪುಟ ಸೇರಲಿದೆ ಜನಪ್ರಿಯ ಸುಜುಕಿ ಹಯಾಬುಸಾ ಸೂಪರ್‍‍ಬೈಕ್

ಭಾರತದ ಸ್ಥಳೀಯವಾಗಿ ಅಭಿವೃದ್ದಿಪಡಿಸಿದ ಸುಜುಕಿಯಿಂದ ಬಂದ ಮೊದಲ ಸೂಪರ್‍‍ಬೈಕ್‍‍ಗಳಲ್ಲಿ ಹಯಾಬುಸಾ ಕೂಡ ಒಂದಾಗಿದೆ. ಸುಜುಕಿ ಹಯಾಬುಸಾ ಸೂಪರ್‍‍ಬೈಕಿನ ಸ್ಥಳೀಯವಾಗಿ ಅಭಿವೃದ್ದಿಪಡಿಸುವುದನ್ನು 2017ರಲ್ಲಿ ಆರಂಭಿಸಿದರು.

ಇತಿಹಾಸದ ಪುಟ ಸೇರಲಿದೆ ಜನಪ್ರಿಯ ಸುಜುಕಿ ಹಯಾಬುಸಾ ಸೂಪರ್‍‍ಬೈಕ್

ಹಯಾಬುಸಾ ದೇಶಿಯ ಮಾರುಕಟ್ಟೆಯಲ್ಲಿ ಸೂಪರ್‍‍ಬೈಕ್ ಪ್ರಿಯರ ಮೆಚ್ಚಿನ ಆಯ್ಕೆಯಾಗಿತ್ತು. ಇದೀಗ ಸುಜುಕಿ ಕಂಪನಿಯು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಹೊಸ ಹಯಾಬುಸಾ ಉತ್ಪಾದನೆಯಲ್ಲಿ ನಿರತರಾಗಿದ್ದಾರೆ.

ಇತಿಹಾಸದ ಪುಟ ಸೇರಲಿದೆ ಜನಪ್ರಿಯ ಸುಜುಕಿ ಹಯಾಬುಸಾ ಸೂಪರ್‍‍ಬೈಕ್

2020ರ ಸುಜುಕಿ ಹಯಾಬುಸಾ ದೇಶಿಯ ಮಾರುಕಟ್ಟೆಯಲ್ಲಿರುವ ಹಿಂದಿನ ಮಾದರಿಯ ಪುನರಾರ್ವತನೆಯಾಗಿದೆ. ಮಾರುಕಟ್ಟೆಯಲ್ಲಿರುವ ಹಯಾಬುಸಾವನ್ನು ಸ್ಥಗಿತಗೊಳಿಸಿರುವುದರಿಂದ ಸುಜುಕಿ ಮೋಟರ್ ಸೈಕಲ್ ಹೊಸ ತಲೆಮಾರಿನ ಹಯಾಬುಸಾ ಬೈಕನ್ನು ಅಭಿವೃದ್ದಿಪಡಿಸಬಹುದು ಎಂಬ ವರದಿಗಳು ಪ್ರಕಟವಾಗಿದೆ.

Most Read Articles

Kannada
English summary
Suzuki Hayabusa permanently discontinued in India. Read in Kannada.
Story first published: Friday, March 13, 2020, 11:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X