ಬಿಎಸ್-6 ನಿಯಮ ಜಾರಿಗೂ ಮುನ್ನವೇ ಮಾರಾಟವಾಗಿದೆ ಬಿಎಸ್-4 ಹಯಾಬುಸಾ ಬೈಕ್
ಭಾರತೀಯ ಸೂಪರ್‍ಬೈಕ್ ಪ್ರಿಯರ ಮೆಚ್ಚಿನ ಬೈಕ್‍ಗಳಲ್ಲಿ ಸುಜುಕಿ ಹಯಾಬುಸಾ ಕೂಡ ಒಂದಾಗಿದೆ.ಬಿಎಸ್-6 ಮಾಲಿನ್ಯ ನಿಯಮ ಮುಂದಿನ ತಿಂಗಳು ಜಾರಿಯಾಗುವುದರಿಂದ ಜನಪ್ರಿಯ ಹಯಾಬುಸಾ ಸೂಪರ್‍ಬೈಕನ್ನು ಸುಜುಕಿ ಮೋಟರ್ ಸೈಕಲ್ ಇಂಡಿಯಾ ಕಂಪನಿಯು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಇದೀಗ ಭಾರತೀಯ ಮಾರುಕಟ್ಟೆಯಲ್ಲಿನ ಡೀಲರ್‍ಗಳ ಬಳಿ ಇದ್ದ ಬಿಎಸ್-4 ಸುಜುಕಿ ಹಯಬುಸಾ ಬೈಕಿನ ಎಲ್ಲಾ ಯುನಿಟ್‍ಗಳು ಮಾರಾಟವಾಗಿವೆ. ಸುಜುಕಿ ಮೋಟರ್ ಸೈಕಲ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ 2020ರ ಹಯಾಬುಸಾ ಬೈಕ್ ಅನ್ನು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. 2020ರ ಸುಜುಕಿ ಹಯಾಬುಸಾ ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.13.75 ಲಕ್ಷಗಳಾಗಿತ್ತು. ಹಯಾಬುಸಾ ಸೂಪರ್‍ಬೈಕ್ ಅನ್ನು ಎರಡು ಹೊಸ ಬಣ್ಣಗಳ ಆಯ್ಕೆಗಳೊಂದಿಗೆ ಬಿಡುಗಡೆಗೊಳಿಸಲಾಗಿತ್ತು.

ಹಯಾಬುಸಾ ಬೈಕಿನಲ್ಲಿ ನವೀಕರಿಸಿದ ಗ್ರಾಫಿಕ್ಸ್ ಮತ್ತು ಮುಂಭಾಗದಲ್ಲಿ ಹೊಸ ಬ್ರೇಕ್ ಕ್ಯಾಲಿಪರ್ ಅನ್ನು ಹೊಂದಿದೆ. 2020ರ ಹಯಾಬುಸಾ ಸೂಪರ್‍ಬೈಕಿನಲ್ಲಿ ಇನ್ನೂ ಉಳಿದ ಯಾವುದೇ ನವೀಕರಣಗಳನ್ನು ಮಾಡಿರಲಿಲ್ಲ. ಇದು ಹಯಾಬುಸಾ ಸೂಪರ್‍ಬೈಕ್ ಪ್ರಿಯರಿಗೆ ನಿರಾಸೆ ಮೂಡಿಸಿತು.

ಸುಜುಕಿ ಹಯಾಬುಸಾ ಬೈಕಿನಲ್ಲಿ ಬಿಎಸ್-4 ಎಂಜಿನ್ ಅನ್ನು ಹೊಂದಿದೆ. 2020ರ ಸುಜುಕಿ ಹಯಾಬುಸಾ ಬೈಕ್ ಪ್ರಸ್ತುತ ಮಾರುಕಟ್ಟೆಯಲ್ಲ ಮಾರಾಟವಾಗುತ್ತಿರುವ ಕೊನೆಯ ಪುನರಾವರ್ತನೆ ಮಾದರಿಯಾಗಿದೆ. ಹಯಾಬುಸಾ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವ ತನಕ ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಸುಜುಕಿ ಹಯಾಬುಸಾ ಬೈಕಿನಲ್ಲಿ ಕಾರ್ನರಿಂಗ್ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ವ್ಹೀಲಿ ಮಿಟಿಗೇಷನ್ ಮುಂತಾದ ಸುಧಾರಿತ ಎಲೆಕ್ಟ್ರಾನಿಕ್ ಸಿಸ್ಟಂಗಳಿಗಾಗಿ ಇನ್‍ಹರ್ಶಿಯಲ್ ಮೇಶರ್‍ಮೆಂಟ್ ಯೂನಿಟ್(ಐಎಂಯು) ಅಳವಡಿಸಲಾಗಿದೆ.

ಸುಜುಕಿ ಹಯಾಬುಸಾ ಬೈಕಿನಲ್ಲಿ 1,340 ಸಿಸಿಯ ಇನ್ ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 197 ಬಿಹೆಚ್‍ಪಿ ಪವರ್ ಹಾಗೂ 155 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 299 ಕಿ.ಮೀ ಆಗಿದೆ.

ಭಾರತದ ಸ್ಥಳೀಯವಾಗಿ ಅಭಿವೃದ್ದಿಪಡಿಸಿದ ಸುಜುಕಿಯಿಂದ ಬಂದ ಮೊದಲ ಸೂಪರ್‍ಬೈಕ್‍ಗಳಲ್ಲಿ ಹಯಾಬುಸಾ ಕೂಡ ಒಂದಾಗಿದೆ. ಸುಜುಕಿ ಹಯಾಬುಸಾ ಸೂಪರ್‍ಬೈಕಿನ ಸ್ಥಳೀಯವಾಗಿ ಅಭಿವೃದ್ದಿಪಡಿಸುವುದನ್ನು 2017ರಲ್ಲಿ ಆರಂಭಿಸಿದರು.

ಹಯಾಬುಸಾ ದೇಶಿಯ ಮಾರುಕಟ್ಟೆಯಲ್ಲಿ ಸೂಪರ್‍ಬೈಕ್ ಪ್ರಿಯರ ಮೆಚ್ಚಿನ ಆಯ್ಕೆಯಾಗಿತ್ತು. ಧೂಮ್ ಸೇರಿದಂತೆ ಹಲವಾರು ಜನಪ್ರಿಯ ಬಾಲಿವುಡ್ ಚಲನಚಿತ್ರಗಳಲ್ಲಿ ಈ ಹಯಾಬುಸಾ ಬೈಕನ್ನು ಬಳಸಲಾಗಿದೆ. ಸುಜುಕಿ ಕಂಪನಿಯು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಹೊಸ ಹಯಾಬುಸಾ ಉತ್ಪಾದನೆಯಲ್ಲಿ ನಿರತರಾಗಿದ್ದಾರೆ

2020ರ ಸುಜುಕಿ ಹಯಾಬುಸಾ ದೇಶಿಯ ಮಾರುಕಟ್ಟೆಯಲ್ಲಿರುವ ಹಿಂದಿನ ಮಾದರಿಯ ಪುನರಾರ್ವತನೆಯಾಗಿದೆ. ಮಾರುಕಟ್ಟೆಯಲ್ಲಿರುವ ಹಯಾಬುಸಾವನ್ನು ಸ್ಥಗಿತಗೊಳಿಸಿರುವುದರಿಂದ ಸುಜುಕಿ ಮೋಟರ್ ಸೈಕಲ್ ಹೊಸ ತಲೆಮಾರಿನ ಹಯಾಬುಸಾ ಬೈಕನ್ನು ಅಭಿವೃದ್ದಿಪಡಿಸಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications








