ಬೈಕ್ ಸವಾರಿ ವೇಳೆ ತಲೆಯನ್ನು ತಂಪಾಗಿಡಲಿದೆ ಈ ಎ‍‍ಸಿ ಹೆಲ್ಮೆಟ್

ಹೊಸ ಮೋಟಾರ್ ವಾಹನ ಕಾಯ್ದೆಯನ್ನು ಸೆಪ್ಟೆಂಬರ್ 1ರಿಂದ ಜಾರಿಗೊಳಿಸಲಾಗಿದೆ. ಈ ಕಾಯ್ದೆಯನ್ವಯ ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಚಲಾಯಿಸಿದರೆ ರೂ.1,000 ದಂಡ ವಿಧಿಸಲಾಗುತ್ತದೆ. ಈ ಮೊದಲು ಈ ನಿಯಮ ಉಲ್ಲಂಘನೆಗಾಗಿ ರೂ.100 ದಂಡ ವಿಧಿಸಲಾಗುತ್ತಿತ್ತು.

ಬೈಕ್ ಸವಾರಿ ವೇಳೆ ತಲೆಯನ್ನು ತಂಪಾಗಿಡಲಿದೆ ಈ ಎ‍‍ಸಿ ಹೆಲ್ಮೆಟ್

ಅಪಘಾತವಾದರೆ ಮೊದಲು ತಲೆಗೆ ಪೆಟ್ಟು ಬಿದ್ದು ಜೀವ ಹೋಗುವ ಸಾಧ್ಯತೆಗಳಿರುವುದರಿಂದ ಈ ನಿಯಮವು ಉತ್ತಮವಾದುದೆಂದು ಹೇಳಬಹುದು. ಆದರೆ ಉಷ್ಣ ಹವಾಗುಣವನ್ನು ಹೊಂದಿರುವ ಭಾರತದ ಬಹುತೇಕ ರಾಜ್ಯಗಳಲ್ಲಿ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸುವುದು ತ್ರಾಸದಾಯಕ ಸಂಗತಿಯಾಗಿದೆ. ಬಿಸಿಲಿನಲ್ಲಿ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸುವುದರಿಂದ ತುರಿಕೆ ಸೇರಿದಂತೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ.

ಈ ಸಮಸ್ಯೆಗಳಿಗೆ ಪರಿಹಾರ ನೀಡುವ ಸಲುವಾಗಿ ಬೆಂಗಳೂರಿನ ಸಂದೀಪ್ ದಹಿಯಾ ಎಂಬ ಮೆಕಾನಿಕಲ್ ಎಂಜಿನಿಯರ್ ಒಬ್ಬರು, ಪೋರ್ಟಬಲ್ ಏರ್ ಕಂಡೀಷನರ್ ಹೊಂದಿರುವ ಹೆಲ್ಮೆಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಹೆಲ್ಮೆಟ್ ಹೇಗೆ ಕಾರ್ಯಾಚರಿಸುತ್ತದೆ ಎಂಬುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಬೈಕ್ ಸವಾರಿ ವೇಳೆ ತಲೆಯನ್ನು ತಂಪಾಗಿಡಲಿದೆ ಈ ಎ‍‍ಸಿ ಹೆಲ್ಮೆಟ್

ಈ ವೀಡಿಯೊದಲ್ಲಿ ಕಾಣುವ ಪೋರ್ಟಬಲ್ ಏರ್ ಕಂಡೀಷನರ್ ಬಿಸಿಲಿನ ದಿನಗಳಲ್ಲಿಯೂ ಸಹ ನಿಮ್ಮನ್ನು ತಂಪಾಗಿಡುತ್ತದೆ. ಏರ್ ಕಂಡೀಷನರ್ ಆಗಿರುವುದರಿಂದ ಬೇಸಿಗೆಯಲ್ಲಿ ತಂಪಾಗಿದ್ದರೆ, ಚಳಿಗಾಲದಲ್ಲಿ ಬೆಚ್ಚಗಿರುತ್ತದೆ. ಮುಖ್ಯವಾದ ಎಸಿ ಮಾಡ್ಯೂಲ್ ಅನ್ನು ಸಣ್ಣ ಕ್ಯಾರಿ ಬ್ಯಾಗ್‌ನಂತೆ ಹಿಂಭಾಗದಲ್ಲಿ ಸಾಗಿಸಬಹುದು.

ಬೈಕ್ ಸವಾರಿ ವೇಳೆ ತಲೆಯನ್ನು ತಂಪಾಗಿಡಲಿದೆ ಈ ಎ‍‍ಸಿ ಹೆಲ್ಮೆಟ್

ಇದರ ತೂಕವು ಸುಮಾರು 1.7 ಕೆಜಿಯಷ್ಟಿದೆ. ಈ ಡಿವೈಸಿಗೆ ವಾತಾನುಕೂಲ ಎಂದು ಹೆಸರಿಡಲಾಗಿದೆ. ಹಿಂದಿಯಲ್ಲಿ ಎಸಿಗೆ ವಾತಾನುಕೂಲ ಎಂದು ಕರೆಯಲಾಗುತ್ತದೆ. ಈ ಎಸಿಯು ವಿಶಿಷ್ಟವಾಗಿದೆ. ಭಾರತದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲಿದೆ. ಸಂದೀಪ್‍‍ರವರ ಪ್ರಕಾರ, ಈ ಉಪಕರಣವು ಹೆಲ್ಮೆಟ್‍‍ನ ಒಳಗೆ ಸುಮಾರು 10-12 ಡಿಗ್ರಿಗಳಷ್ಟು ತಾಪಮಾನ ವ್ಯತ್ಯಾಸವನ್ನುಂಟು ಮಾಡುತ್ತದೆ.

ಬೈಕ್ ಸವಾರಿ ವೇಳೆ ತಲೆಯನ್ನು ತಂಪಾಗಿಡಲಿದೆ ಈ ಎ‍‍ಸಿ ಹೆಲ್ಮೆಟ್

ಟೈಮ್ಸ್ ಆಫ್ ಇಂಡಿಯಾ ವರದಿಗಳ ಪ್ರಕಾರ, ಸಂದೀಪ್ ದಹಿಯಾರವರು ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಗ್ರಾಹಕ ಸ್ನೇಹಿ ವಸ್ತುಗಳನ್ನು ತಯಾರಿಸುವ ಹವ್ಯಾಸವನ್ನು ಹೊಂದಿದ್ದಾರೆ. ಈ ಹವಾನಿಯಂತ್ರಿತ ಹೆಲ್ಮೆಟ್ ಅನ್ನು ತಮ್ಮ ಆರ್‍‍ಟಿ ನಗರದಲ್ಲಿರುವ ಮನೆಯ ಗ್ಯಾರೇಜ್ ಕಂ ವರ್ಕ್‍‍ಶಾಪ್‍‍ನಲ್ಲಿ ಅಭಿವೃದ್ದಿಪಡಿಸಿದರು.

ಬೈಕ್ ಸವಾರಿ ವೇಳೆ ತಲೆಯನ್ನು ತಂಪಾಗಿಡಲಿದೆ ಈ ಎ‍‍ಸಿ ಹೆಲ್ಮೆಟ್

ಈ ಹೆಲ್ಮೆಟ್ ಅನ್ನು ಅಭಿವೃದ್ಧಿಪಡಿಸುವ ಮೊದಲು ನಾಲ್ಕುವರೆ ವರ್ಷದ ಅವಧಿಯಲ್ಲಿ ಸಂದೀಪ್‍‍ರವರು ಎಂಟು ವಿವಿಧ ಮಾದರಿಯ ಹೆಲ್ಮೆಟ್‍‍ಗಳನ್ನು ತಯಾರಿಸಿದ್ದರು. ಕಡೆಗೆ ನಾಲ್ಕೂವರೆ ವರ್ಷಗಳ ಸುದೀರ್ಘ ಅವಧಿಯ ನಂತರ ವಾತಾನುಕೂಲವನ್ನು ಅಭಿವೃದ್ಧಿಪಡಿಸಿದರು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬೈಕ್ ಸವಾರಿ ವೇಳೆ ತಲೆಯನ್ನು ತಂಪಾಗಿಡಲಿದೆ ಈ ಎ‍‍ಸಿ ಹೆಲ್ಮೆಟ್

ವಾತಾನುಕೂಲವು, ಬೈಕಿನ ಬ್ಯಾಟರಿಯಿಂದ ಸರಬರಾಜಾಗುವ 12 ವೋಲ್ಟ್ ಡಿಸಿ ಪವರ್‍‍ನಿಂದ ಕಾರ್ಯನಿರ್ವಹಿಸುತ್ತದೆ. ಕೂಲಿಂಗ್‍‍ಗಾಗಿ ಬೇರೆ ಯಾವುದೇ ಹೊರಗಿನ ಶಕ್ತಿಯ ಅವಶ್ಯಕತೆಯಿಲ್ಲ. ಬೈಕಿನ ಬ್ಯಾಟರಿಗೆ ವೈಯರಿನಿಂದ ಕನೆಕ್ಷನ್ ನೀಡಲಾಗಿದೆ. ವಾತಾನುಕೂಲವನ್ನು ಸ್ಟಾರ್ಟ್ ಮಾಡಲು ಕೇಬಲ್ ಅನ್ನು ಬ್ಯಾಟರಿಯ ಕೇಬಲ್‌ಗೆ ಕನೆಕ್ಟ್ ಮಾಡಲಾಗಿದೆ.

MOST READ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ಬೈಕ್ ಸವಾರಿ ವೇಳೆ ತಲೆಯನ್ನು ತಂಪಾಗಿಡಲಿದೆ ಈ ಎ‍‍ಸಿ ಹೆಲ್ಮೆಟ್

ವಾತಾನುಕೂಲವು ಕೂಲಿಂಗ್ ಹಾಗೂ ತಾಪಮಾನ ಮೋಡ್‍‍ಗಳನ್ನು ಹೊಂದಿದೆ. ಸ್ವಿಚ್‌ನ ಫ್ಲಿಕ್ ಮೂಲಕ ಮೋಡ್‍‍ಗಳನ್ನು ಬದಲಿಸಿಕೊಳ್ಳಬಹುದು. ಇದರಲ್ಲಿರುವ ರಿಮೋಟ್ ಸ್ವಿಚ್‌ನಲ್ಲಿ ಟೆಂಪರೆಚರ್ ಬಗೆಗಿನ ಮಾಹಿತಿಯನ್ನು ಪಡೆಯಬಹುದು. ಇದರಿಂದ ಒಳಗಿರುವ ಗಾಳಿಯು ಹೊರಹೋಗುತ್ತಿದೆ ಎಂಬುದು ಸವಾರನಿಗೆ ತಿಳಿಯಲಿದೆ.

MOST READ: ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!

ಬೈಕ್ ಸವಾರಿ ವೇಳೆ ತಲೆಯನ್ನು ತಂಪಾಗಿಡಲಿದೆ ಈ ಎ‍‍ಸಿ ಹೆಲ್ಮೆಟ್

ವಾತಾನುಕೂಲವನ್ನು ಅಭಿವೃದ್ಧಿಪಡಿಸಿದ ಕಾರಣಗಳ ಬಗ್ಗೆ ಕೇಳಿದಾಗ ಮಾತನಾಡಿದ ಸಂದೀಪ್‍‍ರವರು, ದ್ವಿಚಕ್ರ ವಾಹನ ಸವಾರರು ತಮ್ಮ ಹೆಲ್ಮೆಟ್‌ಗಳನ್ನು ತೆಗೆದು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕಾಯುವ ದೃಶ್ಯವೇ ನನ್ನನ್ನು ವಾತಾನುಕೂಲ ಅಭಿವೃದ್ಧಿಪಡಿಸಲು ಪ್ರೇರೇಪಿಸಿತು. ನಾನೂ ಕೂಡ ಬೈಕ್ ಸವಾರನೇ ಆಗಿದ್ದೇನೆ.

ಬೈಕ್ ಸವಾರಿ ವೇಳೆ ತಲೆಯನ್ನು ತಂಪಾಗಿಡಲಿದೆ ಈ ಎ‍‍ಸಿ ಹೆಲ್ಮೆಟ್

ಹೆಲ್ಮೆಟ್ ಜೀವರಕ್ಷಕವೇ ಆದರೂ, ಹೆಲ್ಮೆಟ್‌ನಲ್ಲಿರುವ ಗ್ಲಾಸ್ ಅನ್ನು ಮುಚ್ಚಿದಾಗ, ಗಾಳಿಯಾಡುವುದಿಲ್ಲ. ಇದರಿಂದಾಗಿ ಉಸಿರುಗಟ್ಟಿದಂತಾಗುತ್ತದೆ. ಆದ ಕಾರಣ ನಾನು ಗ್ರಾಹಕ ಸ್ನೇಹಿಯಾದ ಹೆಲ್ಮೆಟ್‌ ತಯಾರಿಸಲು ನಿರ್ಧರಿಸಿದೆ ಎಂದು ಹೇಳಿದರು.

ಬೈಕ್ ಸವಾರಿ ವೇಳೆ ತಲೆಯನ್ನು ತಂಪಾಗಿಡಲಿದೆ ಈ ಎ‍‍ಸಿ ಹೆಲ್ಮೆಟ್

ಈ ಏರ್‍ ಕಂಡೀಷನ್ ಹೆಲ್ಮೆಟ್ ಎರಡು ಭಾಗಗಳನ್ನು ಹೊಂದಿದೆ. ಪ್ರಮುಖವಾದ ವಾತಾನುಕೂಲ ಯುನಿಟ್ ಸುಮಾರು 1.7 ಕೆ.ಜಿ ತೂಕವನ್ನು ಹೊಂದಿದೆ. ಇನ್ನುಳಿದಂತೆ ಇದರಲ್ಲಿರುವ ಮ್ಯಾನಿಫೋಲ್ಡ್ ಹೆಲ್ಮೆಟ್‍ನ ಒಳಗೆ ಗಾಳಿಯಾಡಲು ರಬ್ಬರ್ ಟ್ಯೂಬ್‍‍ಗಳನ್ನು ಹೊಂದಿದೆ.

ಬೈಕ್ ಸವಾರಿ ವೇಳೆ ತಲೆಯನ್ನು ತಂಪಾಗಿಡಲಿದೆ ಈ ಎ‍‍ಸಿ ಹೆಲ್ಮೆಟ್

ಬ್ಯಾಕ್ ಪ್ಯಾಕ್ ಯುನಿಟ್ ಅನ್ನು ಬೆನ್ನಿಗೆ ತಗುಲಿ ಹಾಕಿಕೊಳ್ಳಬಹುದು. ಧರಿಸಬಹುದಾದ ಯುನಿಟ್ ರಿವರ್ಸ್ ಥರ್ಮೊ ಕಪಲ್ ಅನ್ನು ಹೊಂದಿದೆ. ಇದರಲ್ಲಿರುವ ಹೀಟ್ ಎಕ್ಸ್ ಚೇಂಜರ್ ಏರ್ ಕೂಲ್ ಮಾಡಲಿದ್ದು, ಯಾವುದೇ ಐಸ್ ಆಗಲಿ ಅಥವಾ ನೀರಿನ ಅಗತ್ಯವಾಗಲಿ ಇಲ್ಲ.

ಬೈಕ್ ಸವಾರಿ ವೇಳೆ ತಲೆಯನ್ನು ತಂಪಾಗಿಡಲಿದೆ ಈ ಎ‍‍ಸಿ ಹೆಲ್ಮೆಟ್

ಹೀಟ್ ಎಕ್ಸ್ ಚೇಂಜರ್ ಸೆಮಿ ಕಂಡಕ್ಟರ್ ಅನ್ನು ಹೊಂದಿದ್ದು, ಟೆಂಪರೆಚರ್ ಅನ್ನು ಹೆಚ್ಚಿಸಲಿದೆ ಅಥವಾ ಕಡಿಮೆ ಮಾಡಲಿದೆ. ಹೆಲ್ಮೆಟ್ ಯಾವುದೆ ಪವರ್ ಸಪ್ಲೈ ಅನ್ನು ಹೊಂದಿಲ್ಲ. ಆದರೆ ರಬ್ಬರ್ ಟ್ಯೂಬ್ ರೂಪದಲ್ಲಿ ಏರ್ ಸರ್ಕ್ಯೂಲೇಟರ್‍‍ಗಳನ್ನು ಹೊಂದಿದೆ. ಈ ಹೆಲ್ಮೆಟ್ ಅನ್ನು ರಿಮೋಟ್ ರೀತಿಯ ಎಸಿ ಕಂಟ್ರೋಲ್ ಡಿವೈಸಿಗೆ ಕನೆಕ್ಟ್ ಮಾಡಲಾಗಿದೆ.

More from DriveSpark

Article Published On: Saturday, September 14, 2019, 14:05 [IST]
English summary
AC Helmet developed by Bangalorean - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+