ಬಹುನೀರಿಕ್ಷಿತ ಎಪ್ರಿಲಿಯಾ ಸ್ಟ್ರೋಮ್ 125 ಸ್ಕೂಟರ್ ಬಿಡುಗಡೆ
ದೇಶಿಯ ಮಾರುಕಟ್ಟೆಯಲ್ಲಿ 125ಸಿಸಿ ಸಾಮರ್ಥ್ಯದ ಸ್ಕೂಟರ್ ಆವೃತ್ತಿಗಳಿಗೆ ವಿಶೇಷ ಬೇಡಿಕೆಯಿದ್ದು, ಎಪ್ರಿಲಿಯಾ ಸಂಸ್ಥೆಯು ಸಂಸ್ಥೆಯು ಇದೇ ಮೊದಲ ಬಾರಿಗೆ 125ಸಿಸಿ ಸಾಮರ್ಥ್ಯದ ಸ್ಟ್ರೋಮ್ ಆಟೋಮ್ಯಾಟಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಎಪ್ರಿಲಿಯಾ ಸಂಸ್ಥೆಯು ಸದ್ಯ 150ಸಿಸಿ ಸಾಮರ್ಥ್ಯದ ಎಸ್ಆರ್ 150 ಎನ್ನುವ ಸ್ಕೂಟರ್ ಮಾದರಿಯನ್ನು ಮಾರಾಟ ಮಾಡುತ್ತಿದ್ದು, ಕಳೆದ 2018ರ ದೆಹಲಿ ಆಟೋ ಮೇಳದಲ್ಲಿ ಪ್ರದರ್ಶನ ಮಾಡಲಾಗಿದ್ದ ಸ್ಟ್ರೋಮ್ 125 ಸ್ಕೂಟರ್ ಅನ್ನು ಇದೀಗ ಬಿಡುಗಡೆ ಮಾಡಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಸ್ಕೂಟರ್ ರೂ. 65,000 ಬೆಲೆ ಪಡೆದುಕೊಂಡಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇತರೆ 125ಸಿಸಿ ಸ್ಕೂಟರ್ ಮಾದರಿಗಳಿಂತಲೂ ಉತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ.

ಸ್ಟ್ರೋಮ್ 125 ಸ್ಕೂಟರ್ ಮಾದರಿಯು ಬಹುತೇಕ ಎಸ್ಆರ್ 150 ಮಾದರಿಯಲ್ಲೇ ಅಭಿವೃದ್ಧಿಗೊಂಡಿದ್ದು, ಬೆಲೆ ತಗ್ಗಿಸುವ ಉದ್ದೇಶದಿಂದ ಕೆಲವು ತಾಂತ್ರಿಕ ಸೌಲಭ್ಯಗಳನ್ನು ಕಡಿತಗೊಳಿಸಿದ್ದರೂ ಸಹ ಉತ್ತಮ ಆಕರ್ಷಣೆ ಪಡೆದುಕೊಂಡಿದೆ.

ಹೊಸ ಸ್ಕೂಟರ್‌ನಲ್ಲಿ 12-ಇಂಚಿನ ಚಕ್ರಗಳನ್ನು ಬಳಸಲಾಗಿದ್ದು, ಸ್ಪೋರ್ಟಿ ಮಾದರಿಯ ಆಫ್-ರೋಡ್ ಟೈರ್‌ಗಳು ಹೊಸ ಸ್ಕೂಟರ್ ಗಮನಸೆಳೆಯುತ್ತವೆ. ಹಾಗೆಯೇ ಆಟೋ ಮೇಳದಲ್ಲಿ ಪ್ರದರ್ಶನ ಮಾಡಲಾಗಿದ್ದ ಆವೃತ್ತಿಯಲ್ಲಿ ಬಹುತೇಕ ಸೌಲಭ್ಯಗಳು ಮಾರಾಟ ಆವೃತ್ತಿಯಲ್ಲೂ ಬಳಕೆ ಮಾಡಲಾಗಿದೆ.

ಎಂಜಿನ್ ಸಾಮರ್ಥ್ಯ
ಸ್ಟ್ರೋಮ್ 125 ಸ್ಕೂಟರ್ ಮಾದರಿಯ 124.9 ಸಿಸಿ ಏರ್ ಕೂಲ್ಡ್, ತ್ರಿ ವೆಲ್ವೆ, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 9.5-ಬಿಎಚ್‌ಪಿ ಮತ್ತು 9.8-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ 125ಸಿಸಿ ಬೈಕ್‌ಗಳಲ್ಲೇ ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ಮಾದರಿಯಾಗಿದೆ.

ಲಭ್ಯವಿರುವ ಬಣ್ಣಗಳು
ಗ್ರಾಹಕರ ಬೇಡಿಕೆಯೆಂತೆ ಹೊಸ ಸ್ಟ್ರೋಮ್ ಸ್ಕೂಟರ್‌ಗಳು ರೆಡ್, ಯೆಲ್ಲೊ ಮತ್ತು ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಆಕರ್ಷಕ ಗ್ರಾಫಿರ್ಕ್ಸ್ ಡಿಸೈನ್‌ಗಳು ಸ್ಕೂಟರ್ ಬಲಿಷ್ಠತೆ ಮೆರಗು ತಂದಿದೆ ಎನ್ನಬಹುದು.

ಇನ್ನು ಸೀಟ್ ಅಂಡರ್ ಸ್ಟೋರೇಜ್ ಕೂಡಾ ಎಸ್ಆರ್ 125 ಮಾದರಿಯಲ್ಲಿದ್ದು, ಏಪ್ರಿಲ್ 1 ರಿಂದ ಕಡ್ಡಾಯವಾಗಿ ಜಾರಿಗೆ ಬಂದಿರುವ ಹೊಸ ಬ್ರೇಕಿಂಗ್ ನಿಯಮಗಳಿಗೆ ಅನುಗುಣವಾಗಿ ಸ್ಟ್ರೋಮ್ ಸ್ಕೂಟರ್ ಸಿಬಿಎಸ್(ಕಾಂಬಿ ಬ್ರೇಕಿಂಗ್ ಸಿಸ್ಟಂ) ಪಡೆದುಕೊಂಡಿರುವುದು ಬಹುತೇಕ ಖಚಿತವಾಗಿದೆ.
MOST READ: ಪದೇ ಪದೇ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಮಾಲೀಕರಿಗೆ ಸ್ಪೆಷಲ್ ನೋಟಿಸ್..!

ಬುಕ್ಕಿಂಗ್ ಆರಂಭ
ದೇಶಾದ್ಯಂತ ಪಿಯಾಜಿಯೊ ಸ್ಕೂಟರ್ ಮಾರಾಟ ಮಳಿಗೆಗಳಲ್ಲಿ ಸ್ಟ್ರೋಮ್ 125 ಸ್ಕೂಟರ್‌ಗಳು ಮುಂದಿನ ವಾರದಿಂದ ಖರೀದಿ ಲಭ್ಯವಿರಲಿದ್ದು, ರೂ.1 ಸಾವಿರ ಮುಂಗಡ ಪಾವತಿಸಿ ಹೊಸ ಸ್ಕೂಟರ್‌ಗಾಗಿ ಇದೀಗ ಬುಕ್ಕಿಂಗ್ ಮಾಡಬಹುದಾಗಿದೆ.

ಈ ಮೂಲಕ ಹೊಸ ಸ್ಕೂಟರ್ ಮಾದರಿಯು ಮಾರುಕಟ್ಟೆಯಲ್ಲಿರುವ ಟಿವಿಎಸ್ ಎನ್‌ಟಾರ್ಕ್ 125 ಮತ್ತು ಹೋಂಡಾ ಗ್ರಾಜಿಯಾ ಸ್ಕೂಟರ್‌ಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಿದ್ದು, ಪ್ರೀಮಿಯಂ ಸೌಲಭ್ಯಗಳು ಗ್ರಾಹಕರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ.


Click it and Unblock the Notifications








