ಅಥೆರ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಅತ್ಯುತ್ತಮ ವಾರಂಟಿ ಘೋಷಣೆ

ಉತ್ತಮ ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ಸ್ಕೂಟರ್‌ಗಳು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ಅಥೆರ್ ಎನರ್ಜಿ ಸಂಸ್ಥೆಯು ತನ್ನ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ಗರಿಷ್ಠ ಮಟ್ಟದ ವಾರಂಟಿ ಘೋಷಿಸಿದ್ದು, ಇತರೆ ಯಾವುದೇ ಬೈಕ್ ಉತ್ಪಾದನಾ ಸಂಸ್ಥೆಗಳು ನೀಡದ ವಾರಂಟಿಯನ್ನು ಅಥೆರ್ ಸಂಸ್ಥೆಯು ತನ್ನ ನೆಚ್ಚಿನ ಗ್ರಾಹಕರಿಗೆ ಘೋಷಣೆ ಮಾಡಿದೆ.

ಅಥೆರ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಅತ್ಯುತ್ತಮ ವಾರಂಟಿ ಘೋಷಣೆ

ಕಳೆದ ವಾರವಷ್ಟೇ ಕೇಂದ್ರ ಸರ್ಕಾರದ ಫೇಮ್ 2 ಯೋಜನೆ ಅಡಿ ಸಬ್ಸಡಿಯನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಅಥೆರ್ ಎನರ್ಜಿ ಸಂಸ್ಥೆಯು ಇದೀಗ ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ್ದು, ಹೈ ಎಂಡ್ ಮಾದರಿಯಾದ ಎಸ್ 450 ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಗರಿಷ್ಠ ಮೂರು ವರ್ಷಗಳ ಕಾಲ ವಾರಂಟಿ ಘೋಷಣೆ ಮಾಡಿದೆ.

ಅಥೆರ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಅತ್ಯುತ್ತಮ ವಾರಂಟಿ ಘೋಷಣೆ

ಇದು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಸಾಕಷ್ಟು ಅನುಕೂಲಕರವಾಗಲಿದ್ದು, ಬ್ಯಾಟರಿ ಮೇಲೆ ವಾರಂಟಿ ನೀಡಿರುವುದು ಮತ್ತಷ್ಟು ಗ್ರಾಹಕರ ಸೆಳೆಯುವಲ್ಲಿ ಈ ಹೊಸ ಯೋಜನೆ ಸಾಕಷ್ಟು ಸಹಕಾರಿಯಾಗಲಿದೆ.

ಅಥೆರ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಅತ್ಯುತ್ತಮ ವಾರಂಟಿ ಘೋಷಣೆ

ಇನ್ನು ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಂಸ್ಥೆಗಳ ಜೊತೆಗೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೂ ಬಂಪರ್ ಆಫರ್ ನೀಡುತ್ತಿದೆ. ಇದರಲ್ಲಿ ಅಥೆರ್ ಎನರ್ಜಿ ಸಂಸ್ಥೆಯು ಫೇಮ್ 2 ಯೋಜನೆ ಅಡಿ ಸಬ್ಸಡಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಇದರಿಂದ ಗ್ರಾಹಕರಿಗೆ ಕಡಿಮೆ ದರದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಲಭ್ಯವಾಗಲಿವೆ.

ಅಥೆರ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಅತ್ಯುತ್ತಮ ವಾರಂಟಿ ಘೋಷಣೆ

ಫೇಮ್ 2 ಸಬ್ಸಡಿ ಪಡೆದುಕೊಂಡ ನಂತರ ಅಥೆರ್ ಸ್ಕೂಟರ್‌ಗಳ ಬೆಲೆಯು ಎಸ್ 340 ಮಾದರಿಗೆ ರೂ. 1.13 ಲಕ್ಷ ಮತ್ತು ರೂ. 1.24 ಲಕ್ಷ ನಿಗದಿ ಮಾಡಲಾಗಿದ್ದು, ಉತ್ತಮ ಮೈಲೇಜ್ ನೀಡಬಲ್ಲ ಲೀಥಿಯಂ ಅಯಾನ್ ಬ್ಯಾಟರಿ ಸೌಲಭ್ಯ ಹೊಂದಿರುವುದು ಸಬ್ಸಡಿ ಯೋಜನೆಗೆ ಅರ್ಹವಾಗಲು ಪ್ರಮುಖ ಕಾರಣವಾಗಿದೆ.

ಅಥೆರ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಅತ್ಯುತ್ತಮ ವಾರಂಟಿ ಘೋಷಣೆ

ಈ ಹಿಂದೆ ಫೇಮ್ ಯೋಜನೆಯ ಮೊದಲ ಹಂತವನ್ನು ಪರಿಚಯಿಸಿದ್ದ ವೇಳೆ ಎಲ್ಲಾ ಮಾದರಿಯ ಎಲೆಕ್ಟ್ರಿಕ್ ವಾಹನಗಳಿಗೂ ಸಬ್ಸಡಿ ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರವು ಈ ಬಾರಿ 2ನೇ ಹಂತದ ಯೋಜನೆಯನ್ನು ಪರಿಚಯಿಸುವ ಕೆಲವು ಬದಲಾವಣೆಗಳನ್ನು ತಂದಿದೆ.

ಅಥೆರ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಅತ್ಯುತ್ತಮ ವಾರಂಟಿ ಘೋಷಣೆ

ಫೇಮ್ 2 ಯೋಜನೆ ಅಡಿ ಸಬ್ಸಡಿ ಪಡೆದುಕೊಳ್ಳಲು ಕಡ್ಡಾಯವಾಗಿ ಲೀಥಿಯಂ ಅಯಾನ್ ಬ್ಯಾಟರಿ ಹೊಂದಿರುವ ಎಲೆಕ್ಟ್ರಿಕ್ ವಾಹನ ಮಾದರಿಗಳಿಗೆ ಮಾತ್ರವೇ ಸಬ್ಸಡಿ ಎಂದಿರುವ ಕೇಂದ್ರ ಸರ್ಕಾರವು 2019-21ರ ಅವಧಿಗೆ ಬರೋಬ್ಬರಿ 10 ಸಾವಿರ ಕೋಟಿ ಬಿಡುಗಡೆ ಮಾಡಿದ್ದು, ಈ ಮೂಲಕ ಎಲೆಕ್ಟ್ರಿಕ್ ವಾಹನ ಅಭಿವೃದ್ಧಿ ಮತ್ತು ಮಾರಾಟದ ಜೊತೆ ಚಾರ್ಜಿಂಗ್ ಸ್ಟೆಷನ್‌ಗಳನ್ನು ಹೆಚ್ಚಿಸುವುದು ಈ ಯೋಜನೆ ಮೂಲ ಉದ್ದೇಶವಾಗಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಅಥೆರ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಅತ್ಯುತ್ತಮ ವಾರಂಟಿ ಘೋಷಣೆ

ಈ ಹಿನ್ನೆಲೆ ಆಟೋ ಉತ್ಪಾದನಾ ಸಂಸ್ಥೆಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿದ್ದು, ಚಾರ್ಜಿಂಗ್ ಸ್ಟೆಷನ್ ನಿರ್ಮಾಣ ಕಾರ್ಯ ಜೋರಾಗಿದೆ. ಅಥೆರ್ ಎನರ್ಜಿ ಕೂಡಾ ಈ ನಿಟ್ಟಿನಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಕೇಂದ್ರ ಸರ್ಕಾರದ ಸಬ್ಸಡಿ ಯೋಜನೆಯನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಲು ಮುಂದಾಗಿದೆ.

ಅಥೆರ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಅತ್ಯುತ್ತಮ ವಾರಂಟಿ ಘೋಷಣೆ

ಅಥೆರ್ ಸಂಸ್ಥೆಯು ವರ್ಷಾಂತ್ಯಕ್ಕೆ 200 ಚಾರ್ಜಿಂಗ್ ಸ್ಪೆಷನ್‌ಗಳನ್ನು ದೇಶದ ವಿವಿಧಡೆ ತೆರೆಯಲು ನಿರ್ಧರಿಸಿದ್ದು, ಹಾಗೆಯೇ 2022ರ ವೇಳೆಗೆ ಬರೋಬ್ಬರಿ 6,500 ಚಾರ್ಜಿಂಗ್ ಸ್ಟೆಷನ್‌ಗಳ ನಿರ್ಮಾಣ ಗುರಿ ಹೊಂದಿದೆ. ಇದಕ್ಕಾಗಿ ರೂ.130 ಕೋಟಿ ಮೀಸಲಿಟ್ಟಿರುವ ಅಥೆರ್ ಎನರ್ಜಿ ಸಂಸ್ಥೆಯು ಕೇಂದ್ರ ಸರ್ಕಾರದಿಂದ ಭಾರೀ ಪ್ರಮಾಣದ ಸಬ್ಸಡಿ ಪಡೆದುಕೊಳ್ಳಲಿದೆ.

Most Read Articles

Kannada
English summary
Ather 450 Electric Scooter’s Warranty Increases To 3 Years. Read in Kannada.
Story first published: Saturday, May 11, 2019, 20:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X