ಸ್ಕೂಟರ್ ಚಾರ್ಜಿಂಗ್ ಅನ್ನು ಮತ್ತಷ್ಟು ಸುಲಭಗೊಳಿಸಲಿದೆ ಅಥೆರ್ ಡಾಟ್
ಅಥೆರ್ ಎನರ್ಜಿ ತನ್ನ ಎಲೆಕ್ಟ್ರಿಕ್ ಸ್ಕೂಟರಿಗಾಗಿ ಹೊಸ ಹೋಂ ಚಾರ್ಜಿಂಗ್ ಪಾಯಿಂಟ್ ಅನ್ನು ಬಿಡುಗಡೆಗೊಳಿಸಿದೆ. ಈ ಚಾರ್ಜಿಂಗ್ ಪಾಯಿಂಟ್‍ಗೆ ಅಥೆರ್ ಡಾಟ್ ಎಂದು ಹೆಸರಿಡಲಾಗಿದೆ. ಅಥೆರ್ ಡಾಟ್, ಅಥೆರ್ ಗ್ರಿಡ್‌ನ ಸಣ್ಣ ಹಾಗೂ ಕಡಿಮೆ ಪವರಿನ ಆವೃತ್ತಿಯಾಗಿದೆ.

ಮನೆಯಲ್ಲಿಯೇ ಅಥೆರ್ ಸ್ಕೂಟರ್ ಅನ್ನು ಚಾರ್ಜ್ ಮಾಡ ಬಯಸುವವರಿಗಾಗಿ ಈ ಚಾರ್ಜಿಂಗ್ ಪಾಯಿಂಟ್ ಅನ್ನು ವಿನ್ಯಾಸಗೊಳಿಸಲಾಗಿದೆ. ಹೊಸ ಚಾರ್ಜರ್ ಅನ್ನು ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಅಥೆರ್ 450 ಸ್ಕೂಟರ್‍ನೊಂದಿಗೆ ಮಾರಾಟ ಮಾಡಲಾಗುವುದು. ಎಲೆಕ್ಟ್ರಿಕ್ ವಾಹನಗಳು ಆಟೋಮೊಬೈಲ್ ಉದ್ಯಮದಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರಲಿವೆ. ದೇಶಿಯ ಮಾರುಕಟ್ಟೆಗೆ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹನಗಳು ಲಗ್ಗೆ ಇಡುತ್ತಿವೆ.

ಸದ್ಯಕ್ಕಂತೂ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯು ಕುಸಿತ ಕಾಣುವ ಸಾಧ್ಯತೆಗಳಿಲ್ಲ. ದಿನ ಕಳೆದಂತೆ ಎಲೆಕ್ಟ್ರಿಕ್ ವಾಹನಗಳ ತಯಾರಕರು ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುತ್ತಿದ್ದಾರೆ. ಅಥೆರ್ ಎನರ್ಜಿ, ಎಲೆಕ್ಟ್ರಿಕ್ ವಾಹನಗಳ ಸೆಗ್‍ಮೆಂಟಿನಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ.

ಅಥೆರ್ 450 ಸ್ಕೂಟರ್ ಅನ್ನು ಬಿಡುಗಡೆಗೊಳಿಸಿ, ಎಲೆಕ್ಟ್ರಿಕ್ ವಾಹನಗಳು ಕೇವಲ ಪ್ಲಾಸ್ಟಿಕ್ ಮಾತ್ರವೇ ಅಲ್ಲ ಹಾಗೂ ನಿಧಾನವಾಗಿ ಚಲಿಸುವುದಿಲ್ಲ ಎಂದು ಅಥೆರ್ ಕಂಪನಿಯು ಭಾರತೀಯರಿಗೆ ತೋರಿಸಿದೆ. ಅಥೆರ್ 450 ಎಲೆಕ್ಟ್ರಿಕ್ ಸ್ಕೂಟರ್, ರೇಂಜ್, ಪರ್ಫಾಮೆನ್ಸ್ ಹಾಗೂ ವಿನ್ಯಾಸದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.

ಬೆಂಗಳೂರು ಹಾಗೂ ಚೆನ್ನೈ ನಗರಗಳಲ್ಲಿ ಮಾತ್ರ ಮಾರಾಟಮಾಡುತ್ತಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಅಥೆರ್ 450 ಎಲೆಕ್ಟ್ರಿಕ್ ಸ್ಕೂಟರ್ ಸ್ಥಗಿತಗೊಂಡಂತೆ ಕಾಣುತ್ತಿಲ್ಲ. ಅಥೆರ್ ಎನರ್ಜಿ, ಅಪ್ಲಿಕೇಶನ್ ಹಾಗೂ ಆನ್-ಬೋರ್ಡ್ ಕನೆಕ್ಟಿವಿಟಿ ಮೂಲಕ ಬಳಕೆದಾರರ ಡೇಟಾ ಹಾಗೂ ನಡುವಳಿಕೆಯನ್ನು ಸಂಗ್ರಹಿಸುತ್ತದೆ.

ಅಥೆರ್ ಪ್ರಕಾರ, ಬೆಂಗಳೂರಿನಲ್ಲಿ ಹೆಚ್ಚಿನ ಬಳಕೆದಾರರು ತಮ್ಮ ಅಥೆರ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ರಾತ್ರಿಯಿಡೀ ಚಾರ್ಜ್ ಮಾಡುತ್ತಾರೆ. ಈ ಕಾರಣಕ್ಕಾಗಿಯೇ ಅಥೆರ್ ಡಾಟ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಅಥೆರ್ ಡಾಟ್ ಅನ್ನು ಗ್ರಾಹಕರ ಮನೆಯಲ್ಲಿ ಅಳವಡಿಸಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.

ಇದು ಸರ್ಜ್ ಪ್ರೊಟೆಕ್ಷನ್ ಹೊಂದಿದ್ದು, ಮೈನ್ ಸ್ವಿಚ್‍ಗೆ ಪ್ಲಗ್ ಮಾಡಲಾಗುತ್ತದೆ. ಅಥೆರ್ ಡಾಟ್ ಅನ್ನು ಬಳಸಿ ಬೇರೆ ಎಲೆಕ್ಟ್ರಿಕ್ ಸ್ಕೂಟರ್‍ಗಳನ್ನು ಚಾರ್ಜ್ ಮಾಡಲು ಸಾಧ್ಯವಿಲ್ಲ. ಸದ್ಯಕ್ಕೆ ಅಥೆರ್ 450 ಸ್ಕೂಟರ್ ಅನ್ನು ಮಾತ್ರ ಚಾರ್ಜ್ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ.
MOST READ: ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ಇದು ಆಟೋಮ್ಯಾಟಿಕ್ ಕಟ್ ಆಫ್ ಹಾಗೂ ಅಪ್ಲಿಕೇಶನ್ ಇಂಟಿಗ್ರೇಷನ್ ಹೊಂದಿದೆ. ಇದರಿಂದಾಗಿ ಸ್ಕೂಟರ್ ಅನ್ನು ಪ್ಲಗ್ ಇನ್ ಮಾಡಿ, ಯಾವುದೇ ಚಿಂತೆಯಿಲ್ಲದೆ ರಾತ್ರಿಯಿಡೀ ಚಾರ್ಜ್ ಮಾಡಬಹುದು. ಚಾರ್ಜ್‍ನ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಅಥೆರ್ ಡಾಟ್, 4 ಗಂಟೆ 30 ನಿಮಿಷಗಳಲ್ಲಿ 80%ನಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

5 ಗಂಟೆ 15 ನಿಮಿಷಗಳಲ್ಲಿ, 0 -100%ನಷ್ಟು ಚಾರ್ಜ್ ಮಾಡಬಹುದು. ಅಥೆರ್ ಎನರ್ಜಿಯ ಪ್ರಕಾರ, ಅಥೆರ್ ಡಾಟ್ ಅನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದಾಗಿದೆ. ಯಾವುದೇ ಎಲೆಕ್ಟ್ರಿಷಿಯನ್ ಇದನ್ನು ಅಳವಡಿಸಬಹುದು. ಇದರಲ್ಲಿ ವಿವರವಾದ ಇನ್‍ಸ್ಟಾಲೇಷನ್ ಮ್ಯಾನುವಲ್ ಇರಲಿದೆ.
MOST READ: ಜೆಸಿಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಅಥೆರ್ 450 ಸ್ಕೂಟರ್ ಹೊಂದಿರುವವರು ಅಥೆರ್ ಡಾಟ್ ಅನ್ನು ರೂ.1,800 ನೀಡಿ ಖರೀದಿಸಬಹುದು. ಚೆನ್ನೈನಲ್ಲಿ ಅಥೆರ್ 450 ಸ್ಕೂಟರ್ ಖರೀದಿಸುವವರು, ಈ ಎಲೆಕ್ಟ್ರಿಕ್ ಸ್ಕೂಟರ್‍ನೊಂದಿಗೆ ಅಥೆರ್ ಡಾಟ್ ಅನ್ನು ಪಡೆಯಲಿದ್ದಾರೆ.

ಬೆಂಗಳೂರಿನಲ್ಲಿ, 2019ರ ಅಕ್ಟೋಬರ್ ನಂತರ ಅಥೆರ್ 450 ಸ್ಕೂಟರ್ ಖರೀದಿಸುವ ಪ್ರತಿಯೊಬ್ಬರಿಗೂ ಅಥೆರ್ ಡಾಟ್ ನೀಡಲಾಗುವುದು. ಅಥೆರ್ 450 ಸ್ಕೂಟರ್ ಅನ್ನು ಅಪ್‍ಡೇಟ್ ಮಾಡುವ ಸಲುವಾಗಿ ಕಂಪನಿಯು ಸ್ಕೂಟರಿನಲ್ಲಿದ್ದ ಆನ್‌ಬೋರ್ಡ್ ಚಾರ್ಜರ್ ತೆಗೆದುಹಾಕಿದೆ. ಇದರಿಂದಾಗಿ ಈ ಎಲೆಕ್ಟ್ರಿಕ್ ಸ್ಕೂಟರಿನ ತೂಕವು ಕಡಿಮೆಯಾಗಲಿದೆ. ಸ್ಟಾಬಿಲಿಟಿ ಹಾಗೂ ಹ್ಯಾಂಡ್ಲಿಂಗ್ ಸುಧಾರಿಸಲಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಅಥೆರ್ ಎನರ್ಜಿ, ಅಥೆರ್ 450 ಸ್ಕೂಟರ್ ಅನ್ನು ಬಿಡುಗಡೆಗೊಳಿಸಿ ಯಶಸ್ವಿಯಾಗಿದ್ದರೂ, ಸ್ಕೂಟರ್ ಅನ್ನು ಇನ್ನಷ್ಟು ಅಭಿವೃದ್ಧಿಪಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಅಥೆರ್ ಡಾಟ್ ಚಾರ್ಜಿಂಗ್ ಅನ್ನು ಮತ್ತಷ್ಟು ಸುಲಭವಾಗಿಸಲಿದೆ. ಅಥೆರ್ ಎನರ್ಜಿ ಎಲೆಕ್ಟ್ರಿಕ್ ಬೈಕ್ ಅನ್ನು ಅಭಿವೃದ್ಧಿಪಡಿಸುತ್ತಿದ್ದು, ಶೀಘ್ರದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.


Click it and Unblock the Notifications