Just In
- 1 hr ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 2 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 4 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 4 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- News ಲೋಕಸಭಾ ಚುನಾವಣೆ 2024: ಈ ಆರು ಜಿಲ್ಲೆಗಳಲ್ಲಿ ಬಹುತೇಕ ಶೂನ್ಯ ಮತದಾನ; ಕಾರಣವೇನು?
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Movies Puttakkana Makkalu:ಸ್ನೇಹಾ ಕೈ ಸೇರಿಯೇ ಬಿಡ್ತು ವಿಚ್ಛೇದನದ ಪೇಪರ್; ಮುಂದೇನು?
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತನ್ನೆಲ್ಲಾ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್
ಬಜಾಜ್ ಆಟೋ ಇಂಡಿಯಾ ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ಎಲ್ಲಾ ಬೈಕುಗಳ ಬೆಲೆಯನ್ನು ಏರಿಸಿದೆ. ಪಲ್ಸರ್, ಅವೆಂಜರ್ ಹಾಗೂ ಡೊಮಿನಾರ್ 400 ಸೇರಿದಂತೆ ಎಲ್ಲಾ ಸರಣಿಯ ಬೈಕುಗಳ ಬೆಲೆಯನ್ನು ಏರಿಕೆ ಮಾಡಲಾಗಿದೆ.
ಪಲ್ಸರ್ ಸರಣಿಯಲ್ಲಿ ಕ್ಲಾಸಿಕ್ 150, ಪಲ್ಸರ್ 150 ನಿಯಾನ್, 160 ಎನ್ಎಸ್, 200 ಎನ್ಎಸ್ ಹಾಗೂ 220 ಎಫ್ ಸೇರಿದಂತೆ ಹಲವು ಬೈಕುಗಳಿದ್ದು, ಇವುಗಳ ಬೆಲೆಯನ್ನು ರೂ.4,000ದವರೆಗೆ ಏರಿಕೆ ಮಾಡಲಾಗಿದೆ.
ಅವೆಂಜರ್ ಸರಣಿಯಲ್ಲಿ ಸ್ಟ್ರೀಟ್ 160, ಕ್ರೂಸ್ ಹಾಗೂ ಸ್ಟ್ರೀಟ್ 220 ಬೈಕುಗಳಿವೆ. ಇವುಗಳ ಬೆಲೆಯನ್ನು ರೂ.1,000ದವರೆಗೆ ಏರಿಸಲಾಗಿದೆ. ಬಜಾಜ್ ಎಲ್ಲಾ ಬೈಕುಗಳಿಗಿಂತ ಡೊಮಿನಾರ್ ಬೈಕಿನ ಬೆಲೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಮಾಡಿದೆ.
ಮಾದರಿ | ಹಳೆ ದರ | ಹೊಸ ದರ |
ಬಜಾಜ್ ಪಲ್ಸರ್ 150 ಕ್ಲಾಸಿಕ್ ಮತ್ತು ನಿಯಾನ್ | ರೂ.71,200 | ರೂ.75,200 |
ಬಜಾಜ್ ಪಲ್ಸರ್ 150 (ಸಿಂಗಲ್ ಡಿಸ್ಕ್) | ರೂ.84,960 | ರೂ.85,958 |
ಬಜಾಜ್ ಪಲ್ಸರ್ 150 (ಟ್ವಿನ್ ಡಿಸ್ಕ್) | ರೂ.88,838 | ರೂ.89,837 |
ಬಜಾಜ್ ಪಲ್ಸರ್ ಎನ್ಎಸ್160 | ರೂ.93,094 | ರೂ.94,195 |
ಬಜಾಜ್ ಪಲ್ಸರ್ 180 ಎಫ್ | ರೂ.95,290 | ರೂ.96,390 |
ಬಜಾಜ್ ಪಲ್ಸರ್ 220 ಎಫ್ | ರೂ.107,028 | ರೂ.108,327 |
ಬಜಾಜ್ ಪಲ್ಸರ್ ಎನ್ಎಸ್200 | ರೂ.113,056 | ರೂ.114,355 |
ಬಜಾಜ್ ಕಂಪನಿಯು ಡೊಮಿನಾರ್ 400 ಬೈಕಿನ ಬೆಲೆಯನ್ನು ರೂ.10,000ದವರೆಗೆ ಹೆಚ್ಚಿಸಿದೆ. ಈ ವರ್ಷದ ಆರಂಭದಲ್ಲಿ ಈ ಬೈಕ್ ಅನ್ನು ಬಿಡುಗಡೆಗೊಳಿಸಿದ ನಂತರ ಎರಡನೇ ಬಾರಿಗೆ ಈ ಬೈಕಿನ ಬೆಲೆಯನ್ನು ಹೆಚ್ಚಿಸಲಾಗುತ್ತಿದೆ.
ಹೊಸ ತಲೆಮಾರಿನ ಡೊಮಿನಾರ್ ಬೈಕ್ ಅನ್ನು ಬಿಡುಗಡೆಗೊಳಿಸಿದಾಗ ಬೈಕಿನ ಬೆಲೆಯು ರೂ.1.74 ಲಕ್ಷಗಳಾಗಿತ್ತು. ನಂತರ ಈ ಬೈಕಿನ ಬೆಲೆಯನ್ನು ರೂ.6,000ದಷ್ಟು ಏರಿಸಲಾಯಿತು. ಈಗ ಮತ್ತೊಮ್ಮೆ ರೂ.10,000 ಏರಿಸಲಾಗಿದೆ.
ಬೆಲೆ ಏರಿಕೆಯ ನಂತರ ಈ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1.90 ಲಕ್ಷಗಳಾಗಿದೆ. ಬೆಲೆ ಏರಿಕೆಯ ಹೊರತಾಗಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಬಜಾಜ್ ಕಂಪನಿಯ ಎಲ್ಲಾ ಬೈಕುಗಳ ಮೇಲಿನ ಬೆಲೆ ಏರಿಕೆಯು ತಕ್ಷಣದಿಂದಲೇ ದೇಶಾದ್ಯಂತ ಜಾರಿಗೆ ಬರಲಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್
ಎಂಟ್ರಿ ಲೆವೆಲ್ನ ಪಲ್ಸರ್ 125 ಬೈಕಿನ ಬೆಲೆಯನ್ನು ಏರಿಕೆ ಮಾಡಲಾಗಿಲ್ಲ. ಬಜಾಜ್ ಕಂಪನಿಯು ಪಲ್ಸರ್ 125 ಬೈಕ್ ಅನ್ನು ಇತ್ತೀಚಿಗಷ್ಟೇ ಬಿಡುಗಡೆಗೊಳಿಸಿತ್ತು. ಈ ಬೈಕಿನಲ್ಲಿ ಪಲ್ಸರ್ 150 ಬೈಕಿನಲ್ಲಿರುವಂತಹ ಸ್ಟೈಲ್ ಹಾಗೂ ವಿನ್ಯಾಸಗಳನ್ನು ಅಳವಡಿಸಲಾಗಿದೆ.
MOST READ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?
ಹೊಸ ಬಜಾಜ್ ಪಲ್ಸರ್ 125 ಬೈಕಿನಲ್ಲಿ 124 ಸಿಸಿಯ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 11.8 ಬಿಹೆಚ್ಪಿ ಪವರ್ ಹಾಗೂ 11 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ನಲ್ಲಿ 5 ಸ್ಪೀಡಿನ ಗೇರ್ಬಾಕ್ಸ್ ಅಳವಡಿಸಲಾಗಿದೆ. ಪಲ್ಸರ್ 125 ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.66,618ಗಳಾಗಿದೆ.
MOST READ: ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!
ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಬಜಾಜ್ ದೇಶಿಯ ಮಾರುಕಟ್ಟೆಯಲ್ಲಿರುವ ಜನಪ್ರಿಯ ಕಂಪನಿಗಳಲ್ಲಿ ಒಂದಾಗಿದೆ. ಪಲ್ಸರ್ ಸರಣಿಯ ಬೈಕುಗಳು ಹೆಚ್ಚು ಮಾರಾಟವಾಗುವ ಬೈಕುಗಳಾಗಿವೆ. ಪಲ್ಸರ್ ಸರಣಿಯ ಬೈಕುಗಳು ಸ್ಪೋರ್ಟಿ ಡಿಸೈನ್, ಉತ್ತಮವಾದ ಪರ್ಫಾಮೆನ್ಸ್ ಹಾಗೂ ಒಳ್ಳೆಯ ಮೈಲೇಜ್ ಅನ್ನು ತಮ್ಮ ಗ್ರಾಹಕರಿಗೆ ನೀಡುತ್ತವೆ. ಡೊಮಿನಾರ್ 400 ಬೈಕುಗಳು ಬಜಾಜ್ ಕಂಪನಿಯ ಪ್ರಮುಖ ಬೈಕುಗಳಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಕೆಟಿಎಂ 390 ಬೈಕಿಗೆ ಪೈಪೋಟಿ ನೀಡುತ್ತವೆ.