ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾಗಲಿದೆ ಆರ್‌ಇ ಪ್ರತಿಸ್ಪರ್ಧಿ ಬೆನೆಲ್ಲಿ ಇಂಪೀರಿಯಲ್ 400
ಬೆನೆಲ್ಲಿ ಇಂಡಿಯಾ ಸಂಸ್ಥೆಯು ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಮತ್ತು ಜಾವಾ ಬೈಕ್‍ಗಳಿಗೆ ಪೈಪೋಟಿಯಾಗಿ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಬೈಕ್ ಮಾದರಿಯೊಂದನ್ನು ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಹೊಸ ಬೈಕ್ ಮಾದರಿಯನ್ನು ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ರೆಟ್ರೋ ಸ್ಟೈಲ್ ಮಾದರಿಯ ಹೊಸ ಇಂಪೀರಿಯಲ್ 400 ಬೈಕ್ ಮಾದರಿಯನ್ನು ಮೊದಲ ಬಾರಿಗೆ 2017ರ ಮಿಲಾನ್ ಇಐಸಿಎಮ್ಎ ಆಟೋ ಮೇಳದಲ್ಲಿ ಪ್ರದರ್ಶನಗೊಳಿಸಿದ್ದ ಬೆನೆಲ್ಲಿ ಸಂಸ್ಥೆಯು ಇದೀಗ ಭಾರತದಲ್ಲಿ ಬಿಡುಗಡೆಗಾಗಿ ಮಾರುಕಟ್ಟೆ ಅಧ್ಯಯನ ನಡೆಸುತ್ತಿದ್ದು, ಹೊಸ ಬೈಕ್ ಮಾರಾಟಕ್ಕಾಗಿ ಮಹಾವೀರ್ ಗ್ರೂಪ್ ಜೊತೆ ಒಪ್ಪಂದ ಮಾಡಿಕೊಂಡು ಮಾರಾಟ ಮಾಡುವ ಯೋಜನೆಯಲ್ಲಿದೆ. ಹೀಗಾಗಿ ಹೊಸ ಬೈಕ್ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ರೋಡ್ ಟೆಸ್ಟಿಂಗ್ ನಡೆಸುತ್ತಿದ್ದು, ಕ್ಲಾಸಿಕ್ ಬೈಕ್ ಮಾರಾಟ ಹೊಸ ಸಂಚಲನ ಕಾರಣವಾಗಲಿದೆ.

ಹೊಸ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ರೆಟ್ರೊ ಹಾಗೂ ಹೊಸ ಶೈಲಿಯ ಟ್ವಿನ್ ಪವರ್ ಕ್ಲಸ್ಟರ್ ಅನ್ನು ಪಡೆದಿರಲಿದ್ದು, ರೋಡ್ ಟೆಸ್ಟಿಂಗ್ ವೇಳೆ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್, ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್ ಮತ್ತು ಡಬಲ್ ಕ್ರೆಡಲ್ ಸ್ಟೀಲ್ ಫ್ರೇಮ್ ಅನ್ನು ಪಡೆದುಕೊಂಡಿರುವುದು ಖಚಿತವಾಗಿದೆ.

ಹಾಗೆಯೇ ಪ್ರಯಾಣಿಕರ ಸುರಕ್ಷತೆಗಾಗಿ ಬೆನೆಲ್ಲಿ ಇಂಪೀರಿಯಲ್ 400 ಬೈಕ್‍ನಲ್ಲಿ ಎರಡು ಬದಿ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಅಳವಡಿಸಲಾಗಿದ್ದು, ಡ್ಯುಯಲ್ ಚಾನೆಲ್ ಎಬಿಎಸ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಇದರಿಂದ ರೈಡರ್‌ಗಳಿಗೆ ಗರಿಷ್ಠ ಸುರಕ್ಷತೆ ಸಿಗಲಿದ್ದು, ಮುಂಬರುವ ದಿನಗಳಲ್ಲಿ ಜಾರಿಗೆ ಬರಲಿರುವ ಬಿಎಸ್-6 ವೈಶಿಷ್ಟ್ಯತೆಯ ಎಂಜಿನ್ ಕೂಡಾ ಹೊಂದಿರಲಿದೆ.

ಮತ್ತೊಂದು ಆಕರ್ಷಣೆ ಅಂದ್ರೆ, ಇಂಪೀರಿಯಲ್ 400 ಬೈಕ್‌ಗಳು ಗ್ರಾಹಕರ ಬೇಡಿಕೆಯೆಂತೆ ಸಾಮಾನ್ಯ ಆವೃತ್ತಿಯ ಜೊತೆಗೆ ಸ್ಪೋರ್ಟ್ ಆವೃತ್ತಿಯು ಕೂಡಾ ಖರೀದಿಗೆ ಲಭ್ಯವಿರಲಿದೆ ಎನ್ನಲಾಗಿದ್ದು, ದಿನಬಳಕೆಗಾಗಿ ಸಾಮಾನ್ಯ ಆವೃತ್ತಿಯನ್ನು ಮತ್ತು ಅಡ್ವೆಂಚರ್ ಉದ್ದೇಶಗಳಿಗಾಗಿ ಸ್ಪೋರ್ಟ್ ಆವೃತ್ತಿಯನ್ನು ಖರೀದಿ ಮಾಡಬಹುದಾಗಿದೆ.

ಎಂಜಿನ್ ಸಾಮರ್ಥ್ಯ
ಸಾಮಾನ್ಯ ಮಾದರಿಯ ಇಂಪೀರಿಯಲ್ 400 ಮಾದರಿಯು 346ಸಿಸಿ ಎಂಜಿನ್‌ನೊಂದಿಗೆ 19.8-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದಿಸಿದ್ದಲ್ಲಿ, ಸ್ಪೋರ್ಟ್ ಇಂಪೀರಿಯಲ್ 400 ಮಾದರಿಯು 373-ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 20.7-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಇನ್ನು ರಾಯಲ್ ಎನ್‌ಫೀಲ್ಡ್ 350 ಬೈಕ್‌ಗಳಿಂತಲೂ ತೂಕದಲ್ಲಿ ತುಸು ಭಾರ ಎನ್ನಿಸುವ ಇಂಪೀರಿಯಲ್ 400 ಬೈಕ್‌ಗಳು 200 ಕೆ.ಜಿ ಭಾರ ಹೊಂದಿದ್ದು, 12-ಲೀಟರ್ ಸಾಮರ್ಥ್ಯದ ಫ್ಯುಲ್ ಟ್ಯಾಂಕ್ ಜೊತೆ ಪ್ರತಿ ಲೀಟರ್‌ಗೆ 35 ಕಿ.ಮಿ ಮೈಲೇಜ್ ಹಿಂದಿರುಗಿಸಲಿವೆ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಬೈಕ್ ಬಿಡುಗಡೆಯ ಅವಧಿ ಮತ್ತು ಬೆಲೆಗಳು(ಅಂದಾಜು)
ಬೆನೆಲ್ಲಿ ಇಂಪೀರಿಯಲ್ 400 ಬೈಕ್‌ಗಳು ಭಾರತದಲ್ಲೇ ಸಂಪೂರ್ಣವಾಗಿ ನಿರ್ಮಾಣವಾಗುವುದರಿಂದ ಬೆಲೆ ನಿಯಂತ್ರಣಕ್ಕೂ ಸಹಕಾರಿಯಾಗಿದ್ದು, ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್‌ಗಳ ಬೆಲೆ ಮಾದರಿಯಲ್ಲೇ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.1.50 ಲಕ್ಷದಿಂದ ರೂ. 1.70 ಲಕ್ಷ ಬೆಲೆ ಹೊಂದಿರಬಹುದು ಎನ್ನಲಾಗಿದೆ.
MOST READ: ಕಡಿಮೆ ಬೆಲೆಯ ಅಡ್ವೆಂಚರ್ ಬೈಕ್ ಬಿಡುಗಡೆ ಮಾಡಲಿದೆ ಸುಜುಕಿ

ಹೀಗಾಗಿ ಹೊಸ ಇಂಪೀರಿಯಲ್ ಬೈಕ್‌ಗಳು ಸಂಪೂರ್ಣವಾಗಿ ರಾಯಲ್ ಎನ್‌ಫೀಲ್ಡ್ ಮತ್ತು ಜಾವಾ ಬೈಕ್‌ಗಳಿಗೆ ಪೈಪೋಟಿ ನೀಡಲು ಸಜ್ಜಾಗುತ್ತಿದ್ದು, 2020ರ ಏಪ್ರಿಲ್ 1ರಿಂದ ಜಾರಿಗೆ ಬರುತ್ತಿರುವ ಬಿಎಸ್-6 ನಿಯಮ ಜಾರಿ ನಂತರವಷ್ಟೇ ಇಂಪೀರಿಯಲ್ 400 ಬೈಕ್ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದೆ.
MOST READ: ಗ್ರಾಹಕರಿಗೆ ಉಟ ಕೊಡುವ ಧಾವಂತವಲ್ಲಿ ಈ ಡೆಲಿವರಿ ಬಾಯ್ ಮಾಡಿದ ತಪ್ಪುಗಳು ಎಷ್ಟು ಗೊತ್ತಾ?

ಇದರೊಂದಿಗೆ ಬೆನೆಲ್ಲಿ ಸಂಸ್ಥೆಯು ಪ್ರೀಮಿಯಂ ಉತ್ಪನ್ನಗಳನ್ನು ಇಷ್ಟಪಡುವ ಗ್ರಾಹಕರಿಗಾಗಿ 250 ಸಿಸಿ ಸಾಮಾರ್ಥ್ಯದ ಸ್ಪೋರ್ಟಿ ಬೈಕ್ ಮತ್ತು150 ಸಿಸಿ ಸಾಮಾರ್ಥ್ಯ ಸ್ಕೂಟರ್ ಮಾದರಿಗಳನ್ನು ಸಹ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಮುಂಬರುವ 2 ವರ್ಷಗಳ ಅವಧಿಯಲ್ಲಿ ಹೊಸ ಬದಲಾವಣೆಯೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಅಧಿಕ ಮಟ್ಟದ ಮಾರಾಟ ನೀರಿಕ್ಷೆ ಹೊಂದಿದೆ.
Source:ET Auto


Click it and Unblock the Notifications








