ಉಚಿತ ಹೆಲ್ಮೆಟ್‍ ವಿತರಿಸಿದ ರ್‍ಯಾಪಿಡೊ

ಬೆಂಗಳೂರು ಮೂಲದ ಬೈಕ್ ಟ್ಯಾಕ್ಸಿ ಸೇವಾ ಸಂಸ್ಥೆ ರ್‍ಯಾಪಿಡೊ, ಸಂಚಾರ ಮತ್ತು ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು, ವಿಜಯವಾಡದಲ್ಲಿ ಬುಧವಾರ ಶಿಬಿರ ಹಮ್ಮಿಕೊಂಡಿತ್ತು. ಈ ಜಾಗೃತಿ ಶಿಬಿರಕ್ಕೆ ವಿಜಯವಾಡ ನಗರ ಪೊಲೀಸ್ ಬೆಂಬಲ ನೀಡಿತ್ತು. ಈ ಕಾರ್ಯಕ್ರಮದಲ್ಲಿ ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್‍‍ಗಳನ್ನು ಉಚಿತವಾಗಿ ವಿತರಿಸಲಾಯಿತು.

ಉಚಿತ ಹೆಲ್ಮೆಟ್‍ ವಿತರಿಸಿದ ರ್‍ಯಾಪಿಡೊ

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಿ‍‍ಸಿ‍‍ಪಿ ಶಂಕರ್ ರೆಡ್ಡಿ ರವರು ಬೈಕ್ ಚಾಲನೆ ಮಾಡುವ ವೇಳೆಯಲ್ಲಿ ಹೆಲ್ಮೆಟ್‍‍ಗಳನ್ನು ಧರಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದರು. ಇದಾದ ನಂತರ ದ್ವಿಚಕ್ರ ವಾಹನ ಸವಾರರ ಜೊತೆ ಮಾತನಾಡಿದ ಡಿ‍‍ಸಿಪಿ ರವರು ಹೆಲ್ಮೆಟ್‍‍ಗಳನ್ನು ಉಚಿತವಾಗಿ ವಿತರಿಸಿದರು. ರ್‍ಯಾಪಿಡೊದ ವಿಜಯವಾಡ ಘಟಕದ ಸಿಟಿ ಮ್ಯಾನೇಜರ್ ಎಂವಿ ಪ್ರಸಾದ್ ರವರು ಮಾತನಾಡಿ, ಈ ಶಿಬಿರದ ಮುಖ್ಯ ಉದ್ದೇಶವು ಜನರಿಗೆ ಸಂಚಾರಿ ನಿಯಮಗಳ ಮಹತ್ವ ತಿಳಿಸಿ, ಅವುಗಳ ಬಗ್ಗೆ ಅರಿವು ಮೂಡಿಸಿ, ದ್ವಿಚಕ್ರ ವಾಹನ ಚಾಲನೆ ವೇಳೆ ಹೆಲ್ಮೆಟ್ ಧರಿಸುವಂತೆ ಮಾಡುವುದಾಗಿದೆ ಎಂದು ತಿಳಿಸಿದರು.

ಉಚಿತ ಹೆಲ್ಮೆಟ್‍ ವಿತರಿಸಿದ ರ್‍ಯಾಪಿಡೊ

ಹೆಲ್ಮೆಟ್ ಗಳನ್ನು ಧರಿಸುವುದನ್ನು ಖಚಿತ ಪಡಿಸಿಕೊಳ್ಳಲು, ರ್‍ಯಾಪಿಡೊ ಕಂಪನಿಯು ಸವಾರಿಯ (ರೈಡ್) ವೇಳೆಯಲ್ಲಿ ಪ್ರಯಾಣಿಕರಿಗೆ ಹೆಲ್ಮೆಟ್ ನೀಡದೇ ಇದ್ದಲ್ಲಿ, ಉಚಿತ ಸವಾರಿ ಮಾಡಿಸಲಾಗುವ ಯೋಜನೆ ಹಮ್ಮಿಕೊಂಡಿದೆ ಎಂದು ಹೇಳಿದರು.

ಉಚಿತ ಹೆಲ್ಮೆಟ್‍ ವಿತರಿಸಿದ ರ್‍ಯಾಪಿಡೊ

ರ್‍ಯಾಪಿಡೊ ಟ್ಯಾಕ್ಸಿ ಸೇವೆಯನ್ನು ಒದಗಿಸುವ ಬೆಂಗಳೂರು ಮೂಲದ ಕಂಪನಿಯಾಗಿದೆ. ಈ ಕಂಪನಿಯನ್ನು 2015ರಲ್ಲಿ ಐಐಟಿಯ ಮೂವರು ಹಳೆ ವಿದ್ಯಾರ್ಥಿಗಳಾದ ಅರವಿಂದ್ ಸಂಕಾ, ಪವನ್ ಗುಂಟುಪಲ್ಲಿ ಮತ್ತು ಎಸ್‍ಆರ್ ಹೃಷಿಕೇಶ್ ರವರುಗಳು ಸ್ಥಾಪಿಸಿದರು.

ಉಚಿತ ಹೆಲ್ಮೆಟ್‍ ವಿತರಿಸಿದ ರ್‍ಯಾಪಿಡೊ

ರ್‍ಯಾಪಿಡೊ ಕಂಪನಿಯ ಪ್ರಕಾರ ಕಂಪನಿಯಲ್ಲಿ 15,000 ನೊಂದಾಯಿಸಲ್ಪಟ್ಟ ಸವಾರರಿದ್ದು, ದಿನಕ್ಕೆ ಸರಾಸರಿ 30,000 ಸವಾರಿಗಳನ್ನು ಮಾಡಲಾಗುತ್ತದೆ. ರ್‍ಯಾಪಿಡೊ ಆ‍ಪ್ ನಿಂದ ಗ್ರಾಹಕರು ಸವಾರಿಯನ್ನು ಬುಕ್ ಮಾಡಿದಾಗ, ಕ್ಯಾಪ್ಟನ್ ಅಂದರೆ ಚಾಲಕನು ಗ್ರಾಹಕನಿರುವ ಸ್ಥಳಕ್ಕೆ ಬರುತ್ತಾನೆ. ಒಂದು ಸವಾರಿಗೆ ಕನಿಷ್ಟ ರೂ.15 ನಿಗದಿಪಡಿಸಲಾಗಿದ್ದು, ರೂ.3 ಅನ್ನು ಪ್ರತಿ ಕಿ.ಮೀಗೆ ನಿಗದಿಪಡಿಸಲಾಗಿದೆ. ಚಾಲಕನು (ಕ್ಯಾಪ್ಟನ್) ರ್‍ಯಾಪಿಡೊ ಕ್ಯಾಪ್ಟನ್ ಆಪ್‍‍ನಲ್ಲಿ ನೊಂದಾಯಿಸಿ ಕೊಂಡ ನಂತರ ಸಂಬಂಧ ಪಟ್ಟ ದಾಖಲೆಗಳನ್ನು ಸಲ್ಲಿಸಿ ದೃಢಿಕರಿಸಿಕೊಳ್ಳಬೇಕು.

ಉಚಿತ ಹೆಲ್ಮೆಟ್‍ ವಿತರಿಸಿದ ರ್‍ಯಾಪಿಡೊ

ನಂತರ ತಮ್ಮ ಬಳಿಯಿರುವ, 2010ರ ನಂತರ ನೋಂದಣಿಯಾಗಿರುವ ಬೈಕ್, ಸ್ಕೂಟರ್ ಅಥವಾ ಇ-ಬೈಕುಗಳನ್ನು ಉಪಯೋಗಿಸಿಕೊಂಡು ಗ್ರಾಹಕರಿಗೆ ಸವಾರಿ ನೀಡಬಹುದು. 2010ಕ್ಕಿಂತ ಮುಂಚಿತವಾಗಿ ನೋಂದಣಿಯಾಗಿರುವ ವಾಹನಗಳನ್ನು ಉಪಯೋಗಿಸುವಂತಿಲ್ಲ.

MOST READ: ವಾಹನ ತಪಾಸಣೆ ವೇಳೆ ಪೊಲೀಸ್ ಮೇಲೆಯೇ ಸ್ಕೂಟರ್ ಹರಿಸಿದ ಭೂಪ !!

ಉಚಿತ ಹೆಲ್ಮೆಟ್‍ ವಿತರಿಸಿದ ರ್‍ಯಾಪಿಡೊ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ರಸ್ತೆ ಸುರಕ್ಷತೆಗೆ ಹೆಚ್ಚು ಒತ್ತು ನೀಡುವ ದೇಶದಲ್ಲಿ ಕಂಪನಿಯೊಂದು ಈ ರೀತಿಯಾಗಿ ಮಾರ್ಕೆಟಿಂಗ್ ಮಾಡುವುದು ಒಳ್ಳೆಯ ಯೋಜನೆಯಾಗಿದೆ. ರಸ್ತೆ ಸುರಕ್ಷತೆಯ ಬಗ್ಗೆ ಭಾರತದ ದ್ವಿ ಚಕ್ರ ವಾಹನ ಸವಾರರು, ಹೆಲ್ಮೆಟ್ ಧರಿಸಿದರೆ ಕೂದಲು ಉದುರುತ್ತದೆ ಹಾಗೂ ಸರಿಯಾಗಿ ಕಾಣುವುದಿಲ್ಲವೆಂಬ ಕ್ಷುಲಕ ಕಾರಣಗಳನ್ನು ನೀಡಿ ನಿರ್ಲಕ್ಷ್ಯವಹಿಸಿದ್ದಾರೆ.

ಉಚಿತ ಹೆಲ್ಮೆಟ್‍ ವಿತರಿಸಿದ ರ್‍ಯಾಪಿಡೊ

ಮುಂಬೈ ನಂತಹ ಹೆಚ್ಚು ಟ್ರಾಫಿಕ್ ಇರುವ ನಗರಗಳಲ್ಲಿ ಸ್ಥಳೀಯ ಪೊಲೀಸರು ಟ್ರಾಫಿಕ್ ನಿಯಂತ್ರಿಸುವ ಕೆಲಸದಲ್ಲಿ ನಿರತರಾಗಿದ್ದು, ಅವರಿಗೆ ಹೆಲ್ಮೆಟ್ ನಿಯಮಗಳನ್ನು ಜಾರಿಗೊಳಿಸಲು ಸಮಯವಿರುವುದಿಲ್ಲ. ಪುಣೆಯಲ್ಲಿ ಪೊಲೀಸರಿಗೆ ಸಮಯವಿದ್ದರೂ, ಹೆಲ್ಮೆಟ್ ನಿಯಮಗಳಿಗೆ ಪೊಲೀಸರೇ ವಿರೋಧ ವ್ಯಕ್ತಪಡಿಸುತ್ತಾರೆ.

ಉಚಿತ ಹೆಲ್ಮೆಟ್‍ ವಿತರಿಸಿದ ರ್‍ಯಾಪಿಡೊ

ಈ ನಿಟ್ಟಿನಲ್ಲಿ ರ್‍ಯಾಪಿಡೊ ನಡೆಸುತ್ತಿರುವ ಕಾರ್ಯ ಶ್ಲಾಘನೀಯ, ಆದರೆ ಜನರು ಹೆಲ್ಮೆಟ್‍‍ಗಳನ್ನು ಬಳಸುವರೇ ಅಥವಾ ಮನೆಯಲ್ಲಿ ಶೋ ಪೀಸ್ ನಂತೆ ಇಡುತ್ತಾರೆಯೇ ಎಂಬುದನ್ನು ಕಾಲವೇ ನಿರ್ಧರಿಸಬೇಕು.

More from DriveSpark

Article Published On: Thursday, May 16, 2019, 16:32 [IST]
English summary
Bike Taxi Aggregator Rapido Distributes Free Helmets — Is It A Waste Of Marketing Budgets? - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+